ಅವನನ್ನು ಕರೆದು ಪ್ರಾರ್ಥಿಸುವುದೇ ನಿಜವಾದ ಪ್ರಾರ್ಥನೆ. ಅವರು ಅವನನ್ನು ಬಿಟ್ಟು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತಾರೋ ಅವರು ಅವರ ಪ್ರಾರ್ಥನೆಗೆ ಸ್ವಲ್ಪವೂ ಉತ್ತರ ನೀಡುವುದಿಲ್ಲ. ಅವರ (ಪ್ರಾರ್ಥಿಸುವವರ) ಸ್ಥಿತಿಯು ತನ್ನ ಎರಡು ಕೈಗಳನ್ನು ದೂರದಿಂದ ನೀರಿನ ಕಡೆಗೆ ಚಾಚಿ ಅದು ತನ್ನ ಬಾಯಿಗೆ ತಲುಪಬೇಕೆಂದು ಅದರೊಡನೆ ಕೇಳುವವನಂತೆ. ಅದು ಅವನ ಬಾಯಿಗೆ ತಲುಪುವುದಿಲ್ಲ. ಸತ್ಯನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೆ ಇನ್ನೇನೂ ಅಲ್ಲ.[1]
[1] ಅಲ್ಲಾಹನನ್ನು ಬಿಟ್ಟು ಇತರ ದೇವರುಗಳನ್ನು ಕರೆದು ಪ್ರಾರ್ಥಿಸುವವರ ಸ್ಥಿತಿಯು ನೀರಿನ ಕಡೆಗೆ ತನ್ನ ಎರಡು ಕೈಗಳನ್ನು ಚಾಚಿ ಅದು ತನ್ನ ಬಾಯಿಗೆ ಬರಬೇಕೆಂದು ಬೇಡಿಕೊಳ್ಳುವವನಂತೆ. ನೀರಿಗೆ ಈತನ ಬೇಡಿಕೆಯೇನೆಂದು ತಿಳಿದಿಲ್ಲ. ಅವನು ತನ್ನೊಡನೆ ಬಾಯಿಗೆ ತಲುಪಬೇಕೆಂದು ಬೇಡುತ್ತಿದ್ದಾನೆಂದೂ ಅದಕ್ಕೆ ತಿಳಿದಿಲ್ಲ. ಅವನ ಬಾಯಿಗೆ ತಲುಪುವ ಶಕ್ತಿಯೂ ಅದಕ್ಕಿಲ್ಲ. ಅದೇ ರೀತಿ ಇವರು ಕರೆದು ಪ್ರಾರ್ಥಿಸುತ್ತಿರುವ ದೇವರುಗಳಿಗೂ ಇವರು ತಮ್ಮನ್ನು ಕರೆದು ಪ್ರಾರ್ಥಿಸುತ್ತಿದ್ದಾರೆಂದು ತಿಳಿದಿಲ್ಲ. ಅವರ ಬೇಡಿಕೆಯೇನೆಂದೂ ತಿಳಿದಿಲ್ಲ. ಆ ಬೇಡಿಕೆಯನ್ನು ಈಡೇರಿಸಿಕೊಡುವ ಶಕ್ತಿಯೂ ಅವರಿಗಿಲ್ಲ.
ಕೇಳಿರಿ: “ಭೂಮ್ಯಾಕಾಶಗಳ ಪರಿಪಾಲಕ ಯಾರು?” ಹೇಳಿರಿ: “ಅಲ್ಲಾಹು.” ಕೇಳಿರಿ: “ಆದರೂ ನೀವು ಅವನನ್ನು ಬಿಟ್ಟು ಸ್ವಯಂ ಉಪಕಾರ ಅಥವಾ ತೊಂದರೆ ಮಾಡಲು ಕೂಡ ಸಾಧ್ಯವಿಲ್ಲದವರನ್ನು ರಕ್ಷಕರಾಗಿ ಸ್ವೀಕರಿಸಿದ್ದೀರಾ?” ಕೇಳಿರಿ: “ಕಣ್ಣು ಕಾಣದವನು ಮತ್ತು ಕಣ್ಣು ಕಾಣುವವನು ಸಮಾನರಾಗಲು ಸಾಧ್ಯವೇ? ಅಂಧಕಾರಗಳು ಮತ್ತು ಬೆಳಕು ಸಮಾನವಾಗಲು ಸಾಧ್ಯವೇ? ಇವರು ಅಲ್ಲಾಹನೊಂದಿಗೆ ಸಹಭಾಗಿಗಳಾಗಿ ಮಾಡಿದ ಆ ದೇವರುಗಳು ಕೂಡ ಅಲ್ಲಾಹು ಸೃಷ್ಟಿಸುವಂತೆಯೇ ಸೃಷ್ಟಿಸಿ, ಇವರಿಗೆ (ಎರಡೂ ಕಡೆಯ) ಸೃಷ್ಟಿಗಳು ಪರಸ್ಪರ ಸಮಾನವಾಗಿ ಕಾಣುತ್ತಿದೆಯೇ?”[1] ಹೇಳಿರಿ: “ಅಲ್ಲಾಹನೇ ಎಲ್ಲಾ ಸೃಷ್ಟಿಗಳ ಸೃಷ್ಟಿಕರ್ತ. ಅವನು ಏಕೈಕನು ಮತ್ತು ಮಹಾ ಶಕ್ತಿಶಾಲಿಯಾಗಿದ್ದಾನೆ.”
[1] ಸೃಷ್ಟಿಕರ್ತನು ಏಕೈಕ ದೇವನಾದ ಅಲ್ಲಾಹು ಮಾತ್ರ. ಇದನ್ನು ಬಹುದೇವವಿಶ್ವಾಸಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಒಂದು ವೇಳೆ ಅಲ್ಲಾಹನ ಹೊರತಾಗಿ ಬೇರೆ ಸೃಷ್ಟಿಕರ್ತನು ಇರುತ್ತಿದ್ದರೆ, ಇಬ್ಬರ ಸೃಷ್ಟಿಗಳು ಬೇರೆ ಬೇರೆಯಾಗಿಯೇ ಇರುತ್ತಿದ್ದವು. ಜಗತ್ತಿನಲ್ಲಿರುವ ಸೃಷ್ಟಿಗಳಲ್ಲಿ ಇಂತಹ ಯಾವುದೇ ವಿರೋಧಾಭಾಸ ನಮಗೆ ಕಂಡುಬರುವುದಿಲ್ಲವಾದ್ದರಿಂದ ಇಬ್ಬರು ಸೃಷ್ಟಿಕರ್ತರೂ ಸ್ವಲ್ಪವೂ ವ್ಯತ್ಯಾಸವಿಲ್ಲದೆ ಒಂದೇ ರೀತಿಯಲ್ಲಿ ಸೃಷ್ಟಿಸುತ್ತಿದ್ದಾರೆಂದು ಹೇಳಬೇಕಾಗುತ್ತದೆ. ಇದು ಅಸಂಭವ್ಯವಾಗಿದೆ.
ಅವನು ಆಕಾಶದಿಂದ ಮಳೆಯನ್ನು ಸುರಿಸಿದನು. ನಂತರ ಕಣಿವೆಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತುಂಬಿ ಹರಿದವು. ಆಗ ನೀರಿನ ಮೇಲಕ್ಕೆದ್ದು ಬರುವ ನೊರೆಗಳನ್ನು ಪ್ರವಾಹವು ಹೊತ್ತು ಹರಿಯುತ್ತದೆ. ಅವರು ಆಭರಣಗಳನ್ನು ಅಥವಾ ಉಪಕರಣಗಳನ್ನು ತಯಾರಿಸಲು ಬೆಂಕಿಗೆ ಹಾಕಿ ಕಾಯಿಸುವ ಲೋಹಗಳಿಂದಲೂ ಇದರಂತಹ ನೊರೆಗಳು ಬರುತ್ತವೆ. ಈ ರೀತಿಯಲ್ಲಿ ಅಲ್ಲಾಹು ಸತ್ಯ ಮತ್ತು ಅಸತ್ಯಕ್ಕೆ ಉದಾಹರಣೆ ಕೊಡುತ್ತಾನೆ. ನೊರೆಗಳು ಆರಿ ಮಾಯವಾಗುತ್ತವೆ. ಮನುಷ್ಯರಿಗೆ ಉಪಕಾರವಾಗುವ ವಿಷಯಗಳು ಭೂಮಿಯಲ್ಲಿ ಸ್ಥಿರವಾಗಿ ನಿಲ್ಲುತ್ತವೆ. ಈ ರೀತಿ ಅಲ್ಲಾಹು ಉದಾರಹಣೆಗಳನ್ನು ತಿಳಿಸುತ್ತಾನೆ.[1]
[1] ನೀರು ಹರಿಯುವಾಗ ಅದರ ಮೇಲೆ ನೊರೆಗಳು ಉಂಟಾಗುತ್ತವೆ. ಈ ನೊರೆಗಳು ಶಾಶ್ವತವಾಗಿ ಉಳಿಯುವುದಿಲ್ಲ. ಹಾಗೆಯೇ ಆಭರಣಗಳನ್ನು ತಯಾರಿಸಲು ಚಿನ್ನ-ಬೆಳ್ಳಿಗಳನ್ನು ಅಥವಾ ಉಪಕರಣಗಳನ್ನು ತಯಾರಿಸಲು ಹಿತ್ತಾಳೆ-ಕಂಚುಗಳನ್ನು ಕಾಯಿಸುವಾಗ ಅವುಗಳಿಂದಲೂ ನೊರೆಗಳು ಏಳುತ್ತವೆ. ಇವು ಕೂಡ ಶಾಶ್ವತವಾಗಿ ಉಳಿಯುವುದಿಲ್ಲ. ಇವುಗಳಿಂದ ಮನುಷ್ಯರಿಗೆ ಪ್ರಯೋಜನವೂ ಇಲ್ಲ. ಆದರೆ ನೀರು, ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು ಮೊದಲಾದವುಗಳು ಬಾಕಿಯುಳಿಯುತ್ತವೆ ಮತ್ತು ಅವರು ಮನುಷ್ಯರಿಗೆ ಪ್ರಯೋಜನಕಾರಿಯಾಗಿವೆ. ಅಸತ್ಯವು ನೊರೆಯಂತೆ, ಅದು ಶಾಶ್ವತವಾಗಿ ಉಳಿಯುವುದಿಲ್ಲ. ಸತ್ಯವು ನೀರು, ಚಿನ್ನ, ಬೆಳ್ಳಿ ಮುಂತಾದವುಗಳಂತೆ, ಅವು ಶಾಶ್ವತವಾಗಿ ಉಳಿಯುತ್ತವೆ ಮತ್ತು ಅವುಗಳಿಂದ ಮನುಷ್ಯರಿಗೆ ಪ್ರಯೋಜನಗಳಿವೆ.
ತಮ್ಮ ಪರಿಪಾಲಕನ (ಅಲ್ಲಾಹನ) ಕರೆಗೆ ಉತ್ತರ ನೀಡಿದವರಿಗೆ ಅತಿಶ್ರೇಷ್ಠ ಪ್ರತಿಫಲವಿದೆ. ಅವನ ಕರೆಗೆ ಉತ್ತರ ಕೊಡದವರು ಯಾರೋ—ಅವರ ವಶದಲ್ಲಿ ಭೂಮಿಯಲ್ಲಿರುವ ಎಲ್ಲವೂ ಮತ್ತು ಅದರೊಂದಿಗೆ ಅಷ್ಟೇ ಬೇರೆಯೂ ಇದ್ದರೂ ಅವರು (ತಮ್ಮ ರಕ್ಷಣೆಗಾಗಿ) ಅವೆಲ್ಲವನ್ನೂ ಪರಿಹಾರವಾಗಿ ನೀಡುತ್ತಿದ್ದರು! ಅವರಿಗೇ ಅತಿಕೆಟ್ಟ ವಿಚಾರಣೆಯಿರುವುದು. ಅವರ ವಾಸಸ್ಥಳವು ನರಕವಾಗಿದೆ. ಅದು ಬಹಳ ನಿಕೃಷ್ಟ ವಾಸ್ತವ್ಯವಾಗಿದೆ.
Contents of the translations can be downloaded and re-published, with the following terms and conditions:
1. No modification, addition, or deletion of the content.
2. Clearly referring to the publisher and the source (QuranEnc.com).
3. Mentioning the version number when re-publishing the translation.
4. Keeping the transcript information inside the document.
5. Notifying the source (QuranEnc.com) of any note on the translation.
6. Updating the translation according to the latest version issued from the source (QuranEnc.com).
7. Inappropriate advertisements must not be included when displaying translations of the meanings of the Noble Quran.
തിരയൽ ഫലങ്ങൾ:
API specs
Endpoints:
Sura translation
GET / https://quranenc.com/api/v1/translation/sura/{translation_key}/{sura_number} description: get the specified translation (by its translation_key) for the speicified sura (by its number)
Parameters: translation_key: (the key of the currently selected translation) sura_number: [1-114] (Sura number in the mosshaf which should be between 1 and 114)
Returns:
json object containing array of objects, each object contains the "sura", "aya", "translation" and "footnotes".
GET / https://quranenc.com/api/v1/translation/aya/{translation_key}/{sura_number}/{aya_number} description: get the specified translation (by its translation_key) for the speicified aya (by its number sura_number and aya_number)
Parameters: translation_key: (the key of the currently selected translation) sura_number: [1-114] (Sura number in the mosshaf which should be between 1 and 114) aya_number: [1-...] (Aya number in the sura)
Returns:
json object containing the "sura", "aya", "translation" and "footnotes".