Check out the new design

വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ * - വിവർത്തനങ്ങളുടെ സൂചിക

PDF XML CSV Excel API
Please review the Terms and Policies

പരിഭാഷ അദ്ധ്യായം: ന്നഹ്ൽ   ആയത്ത്:
وَتَحْمِلُ اَثْقَالَكُمْ اِلٰی بَلَدٍ لَّمْ تَكُوْنُوْا بٰلِغِیْهِ اِلَّا بِشِقِّ الْاَنْفُسِ ؕ— اِنَّ رَبَّكُمْ لَرَءُوْفٌ رَّحِیْمٌ ۟ۙ
ನೀವು ಬಹಳ ಕಷ್ಟದಿಂದಲೇ ಹೊರತು ತಲುಪಲು ಸಾಧ್ಯವಿಲ್ಲದಂತಹ ದೇಶಗಳಿಗೆ ಅವು ನಿಮ್ಮ ಭಾರಗಳನ್ನು ಹೊತ್ತು ಸಾಗುತ್ತವೆ. ನಿಜಕ್ಕೂ ನಿಮ್ಮ ಪರಿಪಾಲಕನು (ಅಲ್ಲಾಹು) ಸಹಾನುಭೂತಿಯುಳ್ಳವನು ಮತ್ತು ದಯೆ ತೋರುವವನಾಗಿದ್ದಾನೆ.
അറബി ഖുർആൻ വിവരണങ്ങൾ:
وَّالْخَیْلَ وَالْبِغَالَ وَالْحَمِیْرَ لِتَرْكَبُوْهَا وَزِیْنَةً ؕ— وَیَخْلُقُ مَا لَا تَعْلَمُوْنَ ۟
ಅವನು ಕುದುರೆಗಳನ್ನು, ಹೇಸರಗತ್ತೆಗಳನ್ನು ಮತ್ತು ಕತ್ತೆಗಳನ್ನು ಸೃಷ್ಟಿಸಿದನು. ನೀವು ಅವುಗಳ ಮೇಲೆ ಸವಾರಿ ಮಾಡುವುದಕ್ಕಾಗಿ ಮತ್ತು ನಿಮಗೊಂದು ಅಲಂಕಾರವಾಗಿ. ನೀವು ತಿಳಿಯದೇ ಇರುವುದನ್ನೂ ಅವನು ಸೃಷ್ಟಿಸುತ್ತಾನೆ.
അറബി ഖുർആൻ വിവരണങ്ങൾ:
وَعَلَی اللّٰهِ قَصْدُ السَّبِیْلِ وَمِنْهَا جَآىِٕرٌ ؕ— وَلَوْ شَآءَ لَهَدٰىكُمْ اَجْمَعِیْنَ ۟۠
ನೇರ ಮಾರ್ಗವನ್ನು ತೋರಿಸಿಕೊಡುವುದು ಅಲ್ಲಾಹನ ಹೊಣೆಯಾಗಿದೆ. ಅವುಗಳಲ್ಲಿ ಕೆಲವು ವಕ್ರ ಮಾರ್ಗಗಳಿವೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರಿಗೂ ಸನ್ಮಾರ್ಗ ತೋರಿಸುತ್ತಿದ್ದನು.
അറബി ഖുർആൻ വിവരണങ്ങൾ:
هُوَ الَّذِیْۤ اَنْزَلَ مِنَ السَّمَآءِ مَآءً لَّكُمْ مِّنْهُ شَرَابٌ وَّمِنْهُ شَجَرٌ فِیْهِ تُسِیْمُوْنَ ۟
ಅವನೇ ಆಕಾಶದಿಂದ ಮಳೆಯನ್ನು ಇಳಿಸಿದವನು. ಅದರಲ್ಲಿ ನಿಮಗೆ ಕುಡಿಯುವ ನೀರಿದೆ. ಅದರಿಂದ ಉಂಟಾದ ಹುಲ್ಲುಗಾವಲುಗಳಲ್ಲಿ ನೀವು ನಿಮ್ಮ ಜಾನುವಾರುಗಳನ್ನು ಮೇಯಿಸುತ್ತೀರಿ.
അറബി ഖുർആൻ വിവരണങ്ങൾ:
یُنْۢبِتُ لَكُمْ بِهِ الزَّرْعَ وَالزَّیْتُوْنَ وَالنَّخِیْلَ وَالْاَعْنَابَ وَمِنْ كُلِّ الثَّمَرٰتِ ؕ— اِنَّ فِیْ ذٰلِكَ لَاٰیَةً لِّقَوْمٍ یَّتَفَكَّرُوْنَ ۟
ಅವನು ಅದರ (ನೀರಿನ) ಮೂಲಕ ನಿಮಗೆ ಪೈರುಗಳನ್ನು, ಆಲಿವ್, ಖರ್ಜೂರ, ದ್ರಾಕ್ಷಿ ಮತ್ತು ಎಲ್ಲ ವಿಧದ ಹಣ್ಣು-ಹಂಪಲುಗಳನ್ನು ಬೆಳೆಸುತ್ತಾನೆ. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.
അറബി ഖുർആൻ വിവരണങ്ങൾ:
وَسَخَّرَ لَكُمُ الَّیْلَ وَالنَّهَارَ ۙ— وَالشَّمْسَ وَالْقَمَرَ ؕ— وَالنُّجُوْمُ مُسَخَّرٰتٌ بِاَمْرِهٖ ؕ— اِنَّ فِیْ ذٰلِكَ لَاٰیٰتٍ لِّقَوْمٍ یَّعْقِلُوْنَ ۟ۙ
ಅವನು ನಿಮಗೆ ರಾತ್ರಿ-ಹಗಲುಗಳನ್ನು ಮತ್ತು ಸೂರ್ಯ-ಚಂದ್ರರನ್ನು ನಿಯಂತ್ರಿಸಿಕೊಟ್ಟಿದ್ದಾನೆ. ನಕ್ಷತ್ರಗಳು ಅವನ ಆಜ್ಞೆಗೆ ವಿಧೇಯವಾಗಿವೆ. ನಿಶ್ಚಯವಾಗಿಯೂ ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.
അറബി ഖുർആൻ വിവരണങ്ങൾ:
وَمَا ذَرَاَ لَكُمْ فِی الْاَرْضِ مُخْتَلِفًا اَلْوَانُهٗ ؕ— اِنَّ فِیْ ذٰلِكَ لَاٰیَةً لِّقَوْمٍ یَّذَّكَّرُوْنَ ۟
ಅವನು ನಿಮಗಾಗಿ ಇನ್ನೂ ಅನೇಕ ರಂಗುರಂಗಿನ ವಸ್ತುಗಳನ್ನು ಭೂಮಿಯಲ್ಲಿ ಹಬ್ಬಿಸಿದ್ದಾನೆ. ನಿಶ್ಚಯವಾಗಿಯೂ ಉಪದೇಶ ಸ್ವೀಕರಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.
അറബി ഖുർആൻ വിവരണങ്ങൾ:
وَهُوَ الَّذِیْ سَخَّرَ الْبَحْرَ لِتَاْكُلُوْا مِنْهُ لَحْمًا طَرِیًّا وَّتَسْتَخْرِجُوْا مِنْهُ حِلْیَةً تَلْبَسُوْنَهَا ۚ— وَتَرَی الْفُلْكَ مَوَاخِرَ فِیْهِ وَلِتَبْتَغُوْا مِنْ فَضْلِهٖ وَلَعَلَّكُمْ تَشْكُرُوْنَ ۟
ಅವನೇ ನಿಮಗೆ ಕಡಲನ್ನು ನಿಯಂತ್ರಿಸಿಕೊಟ್ಟವನು. ಅದರಿಂದ ನೀವು ತಾಜಾ ಮಾಂಸವನ್ನು (ಮೀನು) ಸೇವಿಸುತ್ತೀರಿ ಮತ್ತು ನೀವು ಧರಿಸುವ ಆಭರಣಗಳನ್ನು ಹೊರತೆಗೆಯುತ್ತೀರಿ. ನಾವೆಗಳು ಅದರ ನೀರನ್ನು ಸೀಳುತ್ತಾ ಸಾಗುವುದನ್ನು ನೀವು ನೋಡುತ್ತೀರಿ. ನೀವು ಅವನ (ಅಲ್ಲಾಹನ) ಅನುಗ್ರಹವನ್ನು ಅರಸುವುದಕ್ಕಾಗಿ ಮತ್ತು ಕೃತಜ್ಞರಾಗುವುದಕ್ಕಾಗಿ (ಇವೆಲ್ಲವನ್ನೂ ನಿಯಂತ್ರಿಸಿಕೊಡಲಾಗಿದೆ).
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ന്നഹ്ൽ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ - വിവർത്തനങ്ങളുടെ സൂചിക

മുഹമ്മദ് ഹംസ ബതൂർ വിവർത്തനം ചെയ്തിരിക്കുന്നു. റുവാദൂത്തർജമ മർകസിൻ്റെ മേൽ നോട്ടത്തിലാണ് ഇത് വികസിപ്പിച്ചെടുത്തത്.

അടക്കുക