Check out the new design

വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ * - വിവർത്തനങ്ങളുടെ സൂചിക

PDF XML CSV Excel API
Please review the Terms and Policies

പരിഭാഷ അദ്ധ്യായം: ബഖറഃ   ആയത്ത്:
اَلَّذِیْنَ اٰتَیْنٰهُمُ الْكِتٰبَ یَعْرِفُوْنَهٗ كَمَا یَعْرِفُوْنَ اَبْنَآءَهُمْ ؕ— وَاِنَّ فَرِیْقًا مِّنْهُمْ لَیَكْتُمُوْنَ الْحَقَّ وَهُمْ یَعْلَمُوْنَ ۟ؔ
ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೆಯೋ ಅವರು ತಮ್ಮ ಮಕ್ಕಳನ್ನು ಗುರುತಿಸುವಂತೆಯೇ ಅವರನ್ನು (ಪ್ರವಾದಿಯನ್ನು) ಗುರುತಿಸುತ್ತಾರೆ. ನಿಶ್ಚಯವಾಗಿಯೂ ಅವರಲ್ಲೊಂದು ಗುಂಪು ಸತ್ಯವನ್ನು ತಿಳಿದೂ ಸಹ ಅದನ್ನು ಮುಚ್ಚಿಡುತ್ತಾರೆ.
അറബി ഖുർആൻ വിവരണങ്ങൾ:
اَلْحَقُّ مِنْ رَّبِّكَ فَلَا تَكُوْنَنَّ مِنَ الْمُمْتَرِیْنَ ۟۠
ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ಆದ್ದರಿಂದ ನೀವು ಸಂಶಯಪಡುವವರಲ್ಲಿ ಸೇರಲೇಬೇಡಿ.
അറബി ഖുർആൻ വിവരണങ്ങൾ:
وَلِكُلٍّ وِّجْهَةٌ هُوَ مُوَلِّیْهَا فَاسْتَبِقُوْا الْخَیْرٰتِ ؔؕ— اَیْنَ مَا تَكُوْنُوْا یَاْتِ بِكُمُ اللّٰهُ جَمِیْعًا ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟
ಪ್ರತಿಯೊಬ್ಬರೂ (ಪ್ರಾರ್ಥನೆಯ ವೇಳೆ) ಒಂದಲ್ಲ ಒಂದು ಕಡೆಗೆ ತಿರುಗುತ್ತಾರೆ. ನೀವು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ. ನೀವೆಲ್ಲೇ ಇದ್ದರೂ ಅಲ್ಲಾಹು ನಿಮ್ಮೆಲ್ಲರನ್ನೂ ತರುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
അറബി ഖുർആൻ വിവരണങ്ങൾ:
وَمِنْ حَیْثُ خَرَجْتَ فَوَلِّ وَجْهَكَ شَطْرَ الْمَسْجِدِ الْحَرَامِ ؕ— وَاِنَّهٗ لَلْحَقُّ مِنْ رَّبِّكَ ؕ— وَمَا اللّٰهُ بِغَافِلٍ عَمَّا تَعْمَلُوْنَ ۟
ನೀವು ಎಲ್ಲಿಂದ ಹೊರಟರೂ ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನ ಕಡೆಗೆ ತಿರುಗಿಸಿರಿ. ನಿಶ್ಚಯವಾಗಿಯೂ ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.
അറബി ഖുർആൻ വിവരണങ്ങൾ:
وَمِنْ حَیْثُ خَرَجْتَ فَوَلِّ وَجْهَكَ شَطْرَ الْمَسْجِدِ الْحَرَامِ ؕ— وَحَیْثُ مَا كُنْتُمْ فَوَلُّوْا وُجُوْهَكُمْ شَطْرَهٗ ۙ— لِئَلَّا یَكُوْنَ لِلنَّاسِ عَلَیْكُمْ حُجَّةٌ ۗ— اِلَّا الَّذِیْنَ ظَلَمُوْا مِنْهُمْ ۗ— فَلَا تَخْشَوْهُمْ وَاخْشَوْنِیْ ۗ— وَلِاُتِمَّ نِعْمَتِیْ عَلَیْكُمْ وَلَعَلَّكُمْ تَهْتَدُوْنَ ۟ۙۛ
ನೀವು ಎಲ್ಲಿಂದ ಹೊರಟರೂ ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನ ಕಡೆಗೆ ತಿರುಗಿಸಿರಿ. ನೀವು (ಮುಸ್ಲಿಮರು) ಎಲ್ಲೇ ಇದ್ದರೂ ನಿಮ್ಮ ಮುಖಗಳನ್ನು ಅದರ ಕಡೆಗೆ ತಿರುಗಿಸಿರಿ. ನಿಮ್ಮ ವಿರುದ್ಧ ಜನರಿಗೆ ಯಾವುದೇ ಸಾಕ್ಷ್ಯಾಧಾರ ಇಲ್ಲದಿರುವುದಕ್ಕಾಗಿ; ಆದರೆ ಅವರ ಪೈಕಿ ಅಕ್ರಮವೆಸಗಿದವರ ಹೊರತು. ನೀವು ಅವರನ್ನು ಭಯಪಡಬೇಡಿ; ನನ್ನನ್ನು ಭಯಪಡಿರಿ. ನಾನು ನನ್ನ ಅನುಗ್ರಹವನ್ನು ನಿಮಗೆ ಪೂರ್ಣಗೊಳಿಸುವುದಕ್ಕಾಗಿ ಮತ್ತು ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.
അറബി ഖുർആൻ വിവരണങ്ങൾ:
كَمَاۤ اَرْسَلْنَا فِیْكُمْ رَسُوْلًا مِّنْكُمْ یَتْلُوْا عَلَیْكُمْ اٰیٰتِنَا وَیُزَكِّیْكُمْ وَیُعَلِّمُكُمُ الْكِتٰبَ وَالْحِكْمَةَ وَیُعَلِّمُكُمْ مَّا لَمْ تَكُوْنُوْا تَعْلَمُوْنَ ۟ؕۛ
ನಾವು ನಿಮ್ಮಿಂದಲೇ ನಿಮಗೆ ಒಬ್ಬ ಸಂದೇಶವಾಹಕರನ್ನು ಕಳುಹಿಸಿದಂತೆ. ಅವರು ನಮ್ಮ ವಚನಗಳನ್ನು ನಿಮಗೆ ಓದಿಕೊಡುತ್ತಾರೆ, ನಿಮ್ಮನ್ನು ಶುದ್ಧೀಕರಿಸುತ್ತಾರೆ, ನಿಮಗೆ ಗ್ರಂಥವನ್ನು ಮತ್ತು ವಿವೇಕವನ್ನು ಕಲಿಸಿಕೊಡುತ್ತಾರೆ ಮತ್ತು ನಿಮಗೆ ತಿಳಿದಿರದ ವಿಷಯಗಳನ್ನು ಕಲಿಸಿಕೊಡುತ್ತಾರೆ.
അറബി ഖുർആൻ വിവരണങ്ങൾ:
فَاذْكُرُوْنِیْۤ اَذْكُرْكُمْ وَاشْكُرُوْا لِیْ وَلَا تَكْفُرُوْنِ ۟۠
ಆದ್ದರಿಂದ ನೀವು ನನ್ನನ್ನು ಸ್ಮರಿಸಿರಿ; ನಾನು ನಿಮ್ಮನ್ನು ಸ್ಮರಿಸುತ್ತೇನೆ. ನನಗೆ ಕೃತಜ್ಞರಾಗಿರಿ; ನನಗೆ ಕೃತಘ್ನರಾಗಬೇಡಿ.
അറബി ഖുർആൻ വിവരണങ്ങൾ:
یٰۤاَیُّهَا الَّذِیْنَ اٰمَنُوا اسْتَعِیْنُوْا بِالصَّبْرِ وَالصَّلٰوةِ ؕ— اِنَّ اللّٰهَ مَعَ الصّٰبِرِیْنَ ۟
ಓ ಸತ್ಯವಿಶ್ವಾಸಿಗಳೇ! ತಾಳ್ಮೆ ಮತ್ತು ನಮಾಝಿನ ಮೂಲಕ (ಅಲ್ಲಾಹನಲ್ಲಿ) ಸಹಾಯ ಬೇಡಿರಿ. ನಿಶ್ಚಯವಾಗಿಯೂ ಅಲ್ಲಾಹು ತಾಳ್ಮೆಯುಳ್ಳವರ ಜೊತೆಗಿದ್ದಾನೆ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ബഖറഃ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ - വിവർത്തനങ്ങളുടെ സൂചിക

മുഹമ്മദ് ഹംസ ബതൂർ വിവർത്തനം ചെയ്തിരിക്കുന്നു. റുവാദൂത്തർജമ മർകസിൻ്റെ മേൽ നോട്ടത്തിലാണ് ഇത് വികസിപ്പിച്ചെടുത്തത്.

അടക്കുക