Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: هود   آیت:
اِنْ نَّقُوْلُ اِلَّا اعْتَرٰىكَ بَعْضُ اٰلِهَتِنَا بِسُوْٓءٍ ؕ— قَالَ اِنِّیْۤ اُشْهِدُ اللّٰهَ وَاشْهَدُوْۤا اَنِّیْ بَرِیْٓءٌ مِّمَّا تُشْرِكُوْنَ ۟ۙ
ಆದರೆ ನಾವಂತೂ ಹೇಳುವುದಿಷ್ಟೇ; ನಮ್ಮ ದೇವರುಗಳ ಪೈಕಿ ಯಾರದೋ ಶಾಪ ನಿಮ್ಮ ಮೇಲೆ ಬಿದ್ದಿದೆ, ಹೂದ್‌ರವರು ಉತ್ತರಿಸಿದರು ನಾನು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತೇನೆ ಮತ್ತು ನೀವೂ ಸಹ ಸಾಕ್ಷಿಗಳಾಗಿರಿ; ಅಲ್ಲಾಹನ ಹೊರತು ನೀವು ನಿಶ್ಚಯಿಸುತ್ತಿರುವ ಎಲ್ಲಾ ಸಹಭಾಗಿ ದೇವರುಗಳಿಂದ ನಾನು ಸಂಬAಧ ಮುಕ್ತನಾಗಿದ್ದೇನೆ.
عربي تفسیرونه:
مِنْ دُوْنِهٖ فَكِیْدُوْنِیْ جَمِیْعًا ثُمَّ لَا تُنْظِرُوْنِ ۟
ಸರಿ ನೀವೆಲ್ಲರೂ ಸೇರಿ ನನ್ನ ವಿರುದ್ಧ ತಂತ್ರಗಳನ್ನು ಹೂಡಿರಿ ಮತ್ತು ನನಗೆ ಒಂದಿಷ್ಟು ಕಾಲಾವಕಾಶವನ್ನೂ ನೀಡಬೇಡಿರಿ.
عربي تفسیرونه:
اِنِّیْ تَوَكَّلْتُ عَلَی اللّٰهِ رَبِّیْ وَرَبِّكُمْ ؕ— مَا مِنْ دَآبَّةٍ اِلَّا هُوَ اٰخِذٌ بِنَاصِیَتِهَا ؕ— اِنَّ رَبِّیْ عَلٰی صِرَاطٍ مُّسْتَقِیْمٍ ۟
ನಾನು ನನ್ನ ಪ್ರಭುವೂ ನಿಮ್ಮ ಪ್ರಭುವೂ ಆದ ಅಲ್ಲಾಹನ ಮೇಲೆ ಭರವಸೆ ಇಟ್ಟಿದ್ದೇನೆ. ಪ್ರತಿಯೊಂದು ಜೀವಿಯ ಮುಂದಲೆ ಅವನ ಕೈಯಲ್ಲಿದೆ. ನಿಶ್ಚಯವಾಗಿಯೂ ನನ್ನ ಪ್ರಭು ಋಜುವಾದ ಮಾರ್ಗದಲ್ಲಿದ್ದಾನೆ.
عربي تفسیرونه:
فَاِنْ تَوَلَّوْا فَقَدْ اَبْلَغْتُكُمْ مَّاۤ اُرْسِلْتُ بِهٖۤ اِلَیْكُمْ ؕ— وَیَسْتَخْلِفُ رَبِّیْ قَوْمًا غَیْرَكُمْ ۚ— وَلَا تَضُرُّوْنَهٗ شَیْـًٔا ؕ— اِنَّ رَبِّیْ عَلٰی كُلِّ شَیْءٍ حَفِیْظٌ ۟
ಇನ್ನು ನೀವು ವಿಮುಖರಾಗುವುದಾದರೆ ನಾನು ಯಾವ ಸಂದೇಶವನ್ನು ಕೊಟ್ಟು ನಿಮ್ಮ ಬಳಿಗೆ ಕಳುಹಿಸಲ್ಪಟ್ಟಿರುವೆನೋ ಅದನ್ನು ನಿಮಗೆ ತಲುಪಿಸಿಕೊಟ್ಟಿರುವೆನು ಮತ್ತು ನನ್ನ ಪ್ರಭು ಇನ್ನೊಂದು ಜನಾಂಗವನ್ನು ನಿಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುವನು. ಮತ್ತು ನೀವು ಅವನಿಗೆ ಯಾವ ಹಾನಿಯನ್ನೂ ಉಂಟು ಮಾಡಲಾರಿರಿ. ಖಂಡಿತವಾಗಿಯೂ ನನ್ನ ಪ್ರಭುವು ಎಲ್ಲಾ ವಸ್ತುಗಳ ಮೇಲೆ ಸಂರಕ್ಷಕನಾಗಿರುತ್ತಾನೆ.
عربي تفسیرونه:
وَلَمَّا جَآءَ اَمْرُنَا نَجَّیْنَا هُوْدًا وَّالَّذِیْنَ اٰمَنُوْا مَعَهٗ بِرَحْمَةٍ مِّنَّا ۚ— وَنَجَّیْنٰهُمْ مِّنْ عَذَابٍ غَلِیْظٍ ۟
ಮತ್ತು ನಮ್ಮ ಆಜ್ಞೆಯು (ಯಾತನೆ) ಬಂದಾಗ ನಾವು ಹೂದ್‌ರನ್ನೂ ಅವರ ವಿಶ್ವಾಸಿ ಸಂಗಡಿಗರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ನಾವು ಅವರೆಲ್ಲರನ್ನು ಅತ್ತುö್ಯಗ್ರ ಯಾತನೆಯಿಂದ ಪಾರು ಗೊಳಿಸಿದೆವು.
عربي تفسیرونه:
وَتِلْكَ عَادٌ جَحَدُوْا بِاٰیٰتِ رَبِّهِمْ وَعَصَوْا رُسُلَهٗ وَاتَّبَعُوْۤا اَمْرَ كُلِّ جَبَّارٍ عَنِیْدٍ ۟
ಇದುವೇ ಆದ್ ಜನಾಂಗ. ಇವರು ತಮ್ಮ ಪ್ರಭುವಿನ ದೃಷ್ಟಾಂತಗಳನ್ನು ನಿರಾಕರಿಸಿದರು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸಿದರು ಹಾಗೂ ಹಠಮಾರಿಯಾದ ಪ್ರತಿಯೊಬ್ಬ ವಿರೋಧಿಯ ಆಜ್ಞೆಗಳನ್ನು ಅನುಸರಿಸಿದರು.
عربي تفسیرونه:
وَاُتْبِعُوْا فِیْ هٰذِهِ الدُّنْیَا لَعْنَةً وَّیَوْمَ الْقِیٰمَةِ ؕ— اَلَاۤ اِنَّ عَادًا كَفَرُوْا رَبَّهُمْ ؕ— اَلَا بُعْدًا لِّعَادٍ قَوْمِ هُوْدٍ ۟۠
ಕೊನೆಗೆ ಅವರನ್ನು ಇಹಲೋಕದಲ್ಲೂ ಪುನರುತ್ಥಾನದ ದಿನದಂದೂ ಶಾಪವು ಬೆನ್ನಟ್ಟುವಂತಾಯಿತು. ನೋಡಿರಿ ಆದ್ ಜನಾಂಗದವರು ತಮ್ಮ ಪ್ರಭುವನ್ನು ನಿರಾಕರಿಸಿದರು. ಎಚ್ಚರ! ಹೂದ್‌ರ ಜನಾಂಗವಾದ ಆದ್‌ಗೆ (ಕಾರುಣ್ಯದಿಂದ) ವಿದೂರತೆ ಇರಲಿ.
عربي تفسیرونه:
وَاِلٰی ثَمُوْدَ اَخَاهُمْ صٰلِحًا ۘ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— هُوَ اَنْشَاَكُمْ مِّنَ الْاَرْضِ وَاسْتَعْمَرَكُمْ فِیْهَا فَاسْتَغْفِرُوْهُ ثُمَّ تُوْبُوْۤا اِلَیْهِ ؕ— اِنَّ رَبِّیْ قَرِیْبٌ مُّجِیْبٌ ۟
ಸಮೂದ್ ಜನಾಂಗದೆಡೆಗೆ ನಾವು ಅವರ ಸಹೋದರ ಸ್ವಾಲಿಹ್‌ರವರನ್ನು ಕಳುಹಿಸಿದೆವು. ಅವರು ಹೇಳಿದರು. ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರಾವ ಆರಾಧ್ಯ ದೇವನಿಲ್ಲ. ಅವನೇ ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದನು ಮತ್ತು ಅವನೇ ಅದರಲ್ಲಿ ನಿಮ್ಮನ್ನು ನೆಲಗೊಳಿಸಿದನು ಆದ್ದರಿಂದ ನೀವು ಅವನಲ್ಲಿ ಕ್ಷಮೆಯಾಚಿಸಿರಿ. ಮತ್ತು ಅವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ನಿಸ್ಸಂಶಯವಾಗಿಯೂ ನನ್ನ ಪ್ರಭುವು ಸಾಮಿಪ್ಯಸ್ಥನೂ ಕರೆಗೆ ಓಗೊಡುವವನೂ ಆಗಿದ್ದಾನೆ.
عربي تفسیرونه:
قَالُوْا یٰصٰلِحُ قَدْ كُنْتَ فِیْنَا مَرْجُوًّا قَبْلَ هٰذَاۤ اَتَنْهٰىنَاۤ اَنْ نَّعْبُدَ مَا یَعْبُدُ اٰبَآؤُنَا وَاِنَّنَا لَفِیْ شَكٍّ مِّمَّا تَدْعُوْنَاۤ اِلَیْهِ مُرِیْبٍ ۟
ಅವರು ಹೇಳಿದರು: ಓ ಸ್ವಾಲಿಹ್ ನಾವು ಇದಕ್ಕೆ ಮೊದಲು ನಮ್ಮಲ್ಲಿ ನೀನು ಒಬ್ಬ ಆಶಾಪೂರ್ಣ ವ್ಯಕ್ತಿಯಾಗಿದ್ದೀರಿ. ನೀವೀಗ ನಮ್ಮನ್ನು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದ ಆರಾಧ್ಯರನ್ನು ಆರಾಧಿಸುವುದರಿಂದ ತಡೆಯುತ್ತಿರುವಿರಾ ? ಯಾವುದರ ಕಡೆಗೆ (ಏಕದೇವೋಪಾಸನೆ) ನೀವು ನಮ್ಮನ್ನು ಕರೆಯುತ್ತಿರುವಿರೋ ನಾವು ಅದರ ಕುರಿತು ಗಂಭೀರ ಸಂದೇಹದಲ್ಲಿದ್ದೇವೆ.
عربي تفسیرونه:
 
د معناګانو ژباړه سورت: هود
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول