Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: اسراء   آیت:
اِلَّا رَحْمَةً مِّنْ رَّبِّكَ ؕ— اِنَّ فَضْلَهٗ كَانَ عَلَیْكَ كَبِیْرًا ۟
ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಜವಾಗಿಯೂ ನಿಮ್ಮ ಮೇಲೆ ಅವನ ಮಹಾ ಅನುಗ್ರಹವಿದೆ.
عربي تفسیرونه:
قُلْ لَّىِٕنِ اجْتَمَعَتِ الْاِنْسُ وَالْجِنُّ عَلٰۤی اَنْ یَّاْتُوْا بِمِثْلِ هٰذَا الْقُرْاٰنِ لَا یَاْتُوْنَ بِمِثْلِهٖ وَلَوْ كَانَ بَعْضُهُمْ لِبَعْضٍ ظَهِیْرًا ۟
ಹೇಳಿರಿ: ಸಕಲ ಮನುಷ್ಯರು ಮತ್ತು ಯಕ್ಷಗಳು ಒಟ್ಟು ಸೇರಿ ಈ ಕುರ್‌ಆನ್‌ನಂತಹದ್ದನ್ನು ತರಲು ಬಯಸಿದರೂ ಅವರು ಅದರಂತಹದ್ದನ್ನು ತರಲಾರರು. ಅವರು ಪರಸ್ಪರ ಸಹಾಯಕರಾದರೂ ಸರಿಯೇ.
عربي تفسیرونه:
وَلَقَدْ صَرَّفْنَا لِلنَّاسِ فِیْ هٰذَا الْقُرْاٰنِ مِنْ كُلِّ مَثَلٍ ؗ— فَاَبٰۤی اَكْثَرُ النَّاسِ اِلَّا كُفُوْرًا ۟
ನಾವು ಈ ಕುರ್‌ಆನಿನಲ್ಲಿ ಜನರಿಗಾಗಿ ವಿವಿಧ ರೀತಿಯ ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೇವೆ. ಆದರೆ ಅಧಿಕ ಜನರು ನಿಷೇಧವನ್ನು ಕೈಗೊಂಡರು.
عربي تفسیرونه:
وَقَالُوْا لَنْ نُّؤْمِنَ لَكَ حَتّٰی تَفْجُرَ لَنَا مِنَ الْاَرْضِ یَنْۢبُوْعًا ۟ۙ
ಅವರು ಹೇಳಿದರು: ನೀವು ನಮಗೆ ಭೂಮಿಯಿಂದ ಒಂದು ಚಿಲುಮೆಯನ್ನು ಹರಿಸುವ ತನಕ ನಾವೆಂದೂ ನಿಮ್ಮನ್ನು ನಂಬಲಾರೆವು.
عربي تفسیرونه:
اَوْ تَكُوْنَ لَكَ جَنَّةٌ مِّنْ نَّخِیْلٍ وَّعِنَبٍ فَتُفَجِّرَ الْاَنْهٰرَ خِلٰلَهَا تَفْجِیْرًا ۟ۙ
ಇಲ್ಲವೇ ನಿಮಗೇ ಖರ್ಜೂರ ಮತ್ತು ದ್ರಾಕ್ಷಿಯ ಯಾವುದಾದರೂ ತೊಟವಿದ್ದು ಅದರ ನಡುವೆ ನೀವು ತುಂಬಿದ ಕಾಲುವೆಗಳನ್ನು ಹರಿಸಿ ತೋರಿಸಬೇಕು.
عربي تفسیرونه:
اَوْ تُسْقِطَ السَّمَآءَ كَمَا زَعَمْتَ عَلَیْنَا كِسَفًا اَوْ تَاْتِیَ بِاللّٰهِ وَالْمَلٰٓىِٕكَةِ قَبِیْلًا ۟ۙ
ಅಥವಾ ನೀವು ಭಾವಿಸಿದಂತೆಯೇ ನಮ್ಮ ಮೇಲೆ ಆಕಾಶವನ್ನು ತುಂಡು ತುಂಡಾಗಿಸಿ ಬೀಳಿಸಬೇಕು. ಇಲ್ಲವೇ ನೀವು ಅಲ್ಲಾಹನನ್ನು ಮತ್ತು ಮಲಕ್‌ಗಳÀನ್ನು ನಮ್ಮ ಮುಖಾಮುಖಿ ತರಬೇಕು.
عربي تفسیرونه:
اَوْ یَكُوْنَ لَكَ بَیْتٌ مِّنْ زُخْرُفٍ اَوْ تَرْقٰی فِی السَّمَآءِ ؕ— وَلَنْ نُّؤْمِنَ لِرُقِیِّكَ حَتّٰی تُنَزِّلَ عَلَیْنَا كِتٰبًا نَّقْرَؤُهٗ ؕ— قُلْ سُبْحَانَ رَبِّیْ هَلْ كُنْتُ اِلَّا بَشَرًا رَّسُوْلًا ۟۠
ಅಥವಾ ನಿಮಗಾಗಿ ಚಿನ್ನದ ಮನೆಯೊಂದು ಉಂಟಾಗಲಿ. ಇಲ್ಲವೇ ನೀವು ಆಕಾಶಕ್ಕೆ ಏರಿ ಹೋಗಬೇಕು ಮತ್ತು ನೀವು ನಮ್ಮ ಮೇಲೆ ನಾವು ಓದುವಂತಹ ಒಂದು ಗ್ರಂಥವನ್ನು ಇಳಿಸಿ ತರುವವರೆಗೂ ನಾವು ನಿಮ್ಮ ಏರುವಿಕೆಯನ್ನು ಖಂಡಿತ ನಂಬಲಾರೆವು. ನೀವು ಹೇಳಿರಿ: ನನ್ನ ಪ್ರಭು ಅದೆಷ್ಟು ಪರಮ ಪಾವನನು! ನಾನು ಸಂದೇಶವಾಹಕನಾದ ಕೇವಲ ಒಬ್ಬ ಮನುಷ್ಯ ಮಾತ್ರ ಆಗಿದ್ದಾನೆ.
عربي تفسیرونه:
وَمَا مَنَعَ النَّاسَ اَنْ یُّؤْمِنُوْۤا اِذْ جَآءَهُمُ الْهُدٰۤی اِلَّاۤ اَنْ قَالُوْۤا اَبَعَثَ اللّٰهُ بَشَرًا رَّسُوْلًا ۟
ಜನರ ಬಳಿ ಸನ್ಮಾರ್ಗವು ತಲುಪಿದಾಗ ಅದರ ಮೇಲೆ ವಿಶ್ವಾಸವಿರಿಸದಂತೆ ತಡೆಯುತ್ತಿದ್ದುದು “ಅಲ್ಲಾಹನು ಒಬ್ಬ ಮನುಷ್ಯನನ್ನು ಸಂದೇಶವಾಹಕನಾಗಿ ಕಳುಹಿಸಿದ್ದಾನೆ? ಎಂಬ ಅವರ ಮಾತು ಮಾತ್ರವಾಗಿತ್ತು.
عربي تفسیرونه:
قُلْ لَّوْ كَانَ فِی الْاَرْضِ مَلٰٓىِٕكَةٌ یَّمْشُوْنَ مُطْمَىِٕنِّیْنَ لَنَزَّلْنَا عَلَیْهِمْ مِّنَ السَّمَآءِ مَلَكًا رَّسُوْلًا ۟
ಹೇಳಿರಿ: ಭೂಮಿಯ ಮೇಲೆ ಮಲಕ್‌ಗಳು ನೆಮ್ಮದಿಯಿಂದ ನೆಡೆದಾಡುತ್ತಿರುತ್ತಿದ್ದರೆ ನಾವು ಖಂಡಿತವಾಗಿಯೂ ಆಕಾಶದಿಂದ ಒಬ್ಬ ಮಲಕ್‌ನನ್ನೇ ಅವರ ಬಳಿ ಸಂದೇಶವಾಹಕನನ್ನಾಗಿ ಕಳುಹಿಸುತ್ತಿದ್ದೆವು,
عربي تفسیرونه:
قُلْ كَفٰی بِاللّٰهِ شَهِیْدًا بَیْنِیْ وَبَیْنَكُمْ ؕ— اِنَّهٗ كَانَ بِعِبَادِهٖ خَبِیْرًا بَصِیْرًا ۟
ಹೇಳಿರಿ ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಖಂಡಿವಾಗಿಯೂ ಅವನು ತನ್ನ ದಾಸರ ಬಗ್ಗೆ ಚೆನ್ನಾಗಿ ಅರಿವುಳ್ಳವನು, ಚೆನ್ನಾಗಿ ನೋಡುವವನು ಆಗಿರುವನು.
عربي تفسیرونه:
 
د معناګانو ژباړه سورت: اسراء
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول