Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: بقره   آیت:
اَلَّذِیْنَ یَاْكُلُوْنَ الرِّبٰوا لَا یَقُوْمُوْنَ اِلَّا كَمَا یَقُوْمُ الَّذِیْ یَتَخَبَّطُهُ الشَّیْطٰنُ مِنَ الْمَسِّ ؕ— ذٰلِكَ بِاَنَّهُمْ قَالُوْۤا اِنَّمَا الْبَیْعُ مِثْلُ الرِّبٰوا ۘ— وَاَحَلَّ اللّٰهُ الْبَیْعَ وَحَرَّمَ الرِّبٰوا ؕ— فَمَنْ جَآءَهٗ مَوْعِظَةٌ مِّنْ رَّبِّهٖ فَانْتَهٰی فَلَهٗ مَا سَلَفَ ؕ— وَاَمْرُهٗۤ اِلَی اللّٰهِ ؕ— وَمَنْ عَادَ فَاُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟
ಬಡ್ಡಿ ತಿನ್ನುವವರು ಶೈತಾನನು ಬಾಧಿಸಿ ಗರಬಡಿದು ಎದ್ದೇಳುವವನ ಹಾಗೆಯೇ (ಪುನರುತ್ಥಾನದ ದಿನ) ಎದ್ದೇಳುವರು. ಇದು (ಇದರ ಕಾರಣ ಅವರು) ವ್ಯಾಪಾರವು ಸಹ ಬಡ್ಡಿಯಂತೆಯೇ ಎಂದು ಹೇಳಿದುದರಿಂದಾಗಿದೆ. ವಸ್ತುತಃ ಅಲ್ಲಾಹನು ವ್ಯಾಪಾರವನ್ನು ಧರ್ಮ ಸಮ್ಮತಗೊಳಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷಿದ್ಧಗೊಳಿಸಿದ್ದಾನೆ. ಆದ್ದರಿಂದ ಯಾರು ತನ್ನ ಬಳಿಗೆ ಬಂದಿರುವ ಅಲ್ಲಾಹನ ಉಪದೇಶವನ್ನು ಕೇಳಿ (ಬಡ್ಡಿಯನ್ನು) ಸ್ಥಗಿತಗೊಳಿಸಿದರೆ ಅವನು ಮುಂಚೆ ಪಡೆದುದು ಅವನಿಗಿದೆ. ಅವನ ವಿಷಯವು ಅಲ್ಲಾಹನ ಕಡೆಯಿರುತ್ತದೆ. ಮತ್ತು ಯಾರು (ಬಡ್ಡಿಯೆಡೆಗೆ) ಮರಳುತ್ತಾನೋ ಅವನು ನರಕವಾಸಿಯಾಗಿದ್ದಾನೆ. ಅಂತಹವರು ಅದರಲ್ಲಿ ಶಾಶ್ವತವಾಗಿರುವವರು.
عربي تفسیرونه:
یَمْحَقُ اللّٰهُ الرِّبٰوا وَیُرْبِی الصَّدَقٰتِ ؕ— وَاللّٰهُ لَا یُحِبُّ كُلَّ كَفَّارٍ اَثِیْمٍ ۟
ಅಲ್ಲಾಹನು ಬಡ್ಡಿಯನ್ನು ಅಳಿಸುತ್ತಾನೆ ಮತ್ತು ದಾನ ಧರ್ಮವನ್ನು ಬೆಳೆಸುತ್ತಾನೆ ಮತ್ತು ಅಲ್ಲಾಹನು ಯಾವೊಬ್ಬ ಕೃತಘ್ನನನ್ನೂ, ಪಾಪಿಯನ್ನೂ ಮೆಚ್ಚುವುದಿಲ್ಲ.
عربي تفسیرونه:
اِنَّ الَّذِیْنَ اٰمَنُوْا وَعَمِلُوا الصّٰلِحٰتِ وَاَقَامُوا الصَّلٰوةَ وَاٰتَوُا الزَّكٰوةَ لَهُمْ اَجْرُهُمْ عِنْدَ رَبِّهِمْ ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟
ನಿಸ್ಸಂದೇಹವಾಗಿಯು ಯಾರು ಸತ್ಯವಿಶ್ವಾಸ ಹೊಂದಿ (ಪ್ರವಾದಿಚರ್ಯೆಯ ಪ್ರಕಾರ) ಸತ್ಕರ್ಮಗಳನ್ನು ಮಾಡುತ್ತಾರೋ, ನಮಾಝ್ ಸಂಸ್ಥಾಪಿಸುತ್ತಾರೋ ಮತ್ತು ಝಕಾತ್ ನೀಡುತ್ತಾರೋ ಅವರ ಪ್ರತಿಫಲವು ಅವರ ಪ್ರಭುವಿನ ಬಳಿ ಸುರಕ್ಷಿತವಾಗಿದೆ. ಅವರಿಗೆ ಯಾವುದೇ ಯಾತನೆಯ ಭಯವಿರುವುದಿಲ್ಲ. ಮತ್ತು ಇಹಲೋಕದಲ್ಲಿ ಸಿಗದಿರುವುದರ ಬಗ್ಗೆ ದುಖಿಃಸಬೇಕಾಗಿಯೂ ಇಲ್ಲ.
عربي تفسیرونه:
یٰۤاَیُّهَا الَّذِیْنَ اٰمَنُوا اتَّقُوا اللّٰهَ وَذَرُوْا مَا بَقِیَ مِنَ الرِّبٰۤوا اِنْ كُنْتُمْ مُّؤْمِنِیْنَ ۟
ಓ ಸತ್ಯವಿಶ್ವಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಬಾಕಿಯಿರುವ ಬಡ್ಡಿಯನ್ನು ಬಿಟ್ಟು ಬಿಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
عربي تفسیرونه:
فَاِنْ لَّمْ تَفْعَلُوْا فَاْذَنُوْا بِحَرْبٍ مِّنَ اللّٰهِ وَرَسُوْلِهٖ ۚ— وَاِنْ تُبْتُمْ فَلَكُمْ رُءُوْسُ اَمْوَالِكُمْ ۚ— لَا تَظْلِمُوْنَ وَلَا تُظْلَمُوْنَ ۟
ಮತ್ತು ನೀವು ಹಾಗೆ ಮಾಡುವುದಿಲ್ಲವೆಂದರೆ ಅಲ್ಲಾಹ್ ಮತ್ತು ಅವನ ಸಂದೇಶವಾಹಕರೊAದಿಗೆ ಸಮರಕ್ಕಾಗಿ ಸಿದ್ಧರಾಗಿರಿ. ಇನ್ನು ನೀವು ಪಶ್ಚಾತ್ತಾಪ ಪಟ್ಟು ಮರಳುವುದಾದರೆ ನಿಮ್ಮ ಮೂಲಧನವು ನಿಮ್ಮದೇ ಆಗಿದೆ. ನೀವು ಅನ್ಯಾಯವೆಸಗಬಾರದು ಮತ್ತು ನಿಮ್ಮ ಮೇಲೂ ಅನ್ಯಾಯವಾಗದಿರಲಿ.
عربي تفسیرونه:
وَاِنْ كَانَ ذُوْ عُسْرَةٍ فَنَظِرَةٌ اِلٰی مَیْسَرَةٍ ؕ— وَاَنْ تَصَدَّقُوْا خَیْرٌ لَّكُمْ اِنْ كُنْتُمْ تَعْلَمُوْنَ ۟
ಇನ್ನು (ಸಾಲಗಾರರ ಪೈಕಿ) ಯಾರಾದರೂ ಇಕ್ಕಟ್ಟಿನಲ್ಲಿದ್ದರೆ ಅವನಿಗೆ ಅನುಕೂಲವಾಗುವವರೆಗೆ ಸಮಯಾವಕಾಶ ನೀಡಬೇಕಾಗಿದೆ (ಪೀಡಿಸಬಾರದು). ನೀವು ದಾನವಾಗಿ ಬಿಟ್ಟುಬಿಡುವುದು ನಿಮಗೆ ಹೆಚ್ಚು ಉತ್ತಮವಾಗಿದೆ. ನೀವು ಅರಿಯುವವರಾಗಿದ್ದರೆ.
عربي تفسیرونه:
وَاتَّقُوْا یَوْمًا تُرْجَعُوْنَ فِیْهِ اِلَی اللّٰهِ ۫— ثُمَّ تُوَفّٰی كُلُّ نَفْسٍ مَّا كَسَبَتْ وَهُمْ لَا یُظْلَمُوْنَ ۟۠
ಮತ್ತು ನಿಮ್ಮನ್ನು ಅಲ್ಲಾಹನೆಡೆಗೆ ಮರಳಿಸಲಾಗುವ ಒಂದು ದಿನವನ್ನು ಭಯಪಟ್ಟುಕೊಳ್ಳಿರಿ. ತರುವಾಯ ಪ್ರತಿಯೊಬ್ಬನಿಗೂ ಅವನ ಕರ್ಮಗಳ ಪ್ರತಿಫಲವನ್ನು ಪರಿಪೂರ್ಣವಾಗಿ ನೀಡಲಾಗುವುದು ಮತ್ತು ಅವರಿಗೆ ಅನ್ಯಾಯವಾಗದು.
عربي تفسیرونه:
 
د معناګانو ژباړه سورت: بقره
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول