Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: دخان   آیت:
وَّاَنْ لَّا تَعْلُوْا عَلَی اللّٰهِ ؕ— اِنِّیْۤ اٰتِیْكُمْ بِسُلْطٰنٍ مُّبِیْنٍ ۟ۚ
ನೀವು ಅಲ್ಲಾಹನ ಮುಂದೆ ಧಿಕ್ಕಾರತೋರದಿರಿ. ನಾನು ನಿಮ್ಮ ಬಳಿ ಸುಸ್ಪಷ್ಟ ಪುರಾವೆಯೊಂದಿಗೆ ಬಂದಿರುವೆನು
عربي تفسیرونه:
وَاِنِّیْ عُذْتُ بِرَبِّیْ وَرَبِّكُمْ اَنْ تَرْجُمُوْنِ ۟ۚ
ನೀವು ನನ್ನನ್ನು ಕಲ್ಲೆಸೆದು ಕೊಲ್ಲುವುದರಿಂದ ನಾನು ನನ್ನ ಮತ್ತು ನಿಮ್ಮ ಪ್ರಭುವಿನಲ್ಲಿ ಅಭಯ ಪಡೆದಿದ್ದೇನೆ.
عربي تفسیرونه:
وَاِنْ لَّمْ تُؤْمِنُوْا لِیْ فَاعْتَزِلُوْنِ ۟
ನೀವು ನನ್ನಲ್ಲಿ ವಿಶ್ವಾಶವಿಡುವುದಿಲ್ಲವೆಂದಾದರೆ ನನ್ನಿಂದ ನೀವು ದೂರ ಸರಿಯಿರಿ.
عربي تفسیرونه:
فَدَعَا رَبَّهٗۤ اَنَّ هٰۤؤُلَآءِ قَوْمٌ مُّجْرِمُوْنَ ۟
ಕೊನೆಗೆ ಅವರು ತಮ್ಮ ಪ್ರಭುವಿನಲ್ಲಿ ಇವರು ಅಪರಾಧಿ ಜನಾಂಗವಾಗಿದ್ದಾರೆAದು ಪ್ರಾರ್ಥಿಸಿದರು.
عربي تفسیرونه:
فَاَسْرِ بِعِبَادِیْ لَیْلًا اِنَّكُمْ مُّتَّبَعُوْنَ ۟ۙ
(ಆಗ ಅಲ್ಲಾಹನು ಆದೇಶಿಸಿದನು) ಹಾಗಿದ್ದರೆ ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರಿಯಲ್ಲಿ ಹೊರಡಿರಿ. ಖಂಡಿತವಾಗಿಯು ನಿಮ್ಮನ್ನು ಹಿಂಬಾಲಿಸಲಾಗುವುದು.
عربي تفسیرونه:
وَاتْرُكِ الْبَحْرَ رَهْوًا ؕ— اِنَّهُمْ جُنْدٌ مُّغْرَقُوْنَ ۟
ಮತ್ತು ನೀವು ಸಮುದ್ರವನ್ನು ಶಾಂತಿಯುತವಾಗಿರಲು ಬಿಟ್ಟು ಬಿಡಿರಿ. ನಿಸ್ಸಂದೇಹವಾಗಿಯು ಅವರ ಸೈನ್ಯವನ್ನು ಮುಳುಗಿಸಲಾಗುವುದು.
عربي تفسیرونه:
كَمْ تَرَكُوْا مِنْ جَنّٰتٍ وَّعُیُوْنٍ ۟ۙ
ಅವರು ಅದೆಷ್ಟೋ ತೋಟಗಳನ್ನೂ, ಚಿಲುಮೆಗಳನ್ನೂ ಬಿಟ್ಟು ಹೋದರು.
عربي تفسیرونه:
وَّزُرُوْعٍ وَّمَقَامٍ كَرِیْمٍ ۟ۙ
ಕೃಷಿಯನ್ನೂ, ಉನ್ನತ ಗೃಹಗಳನ್ನೂ.
عربي تفسیرونه:
وَّنَعْمَةٍ كَانُوْا فِیْهَا فٰكِهِیْنَ ۟ۙ
ಮತ್ತು ಅವರು ಆನಂದಿಸುತ್ತಿದ್ದ ಆ ಸುಖಭೋಗ ಸಾಧನಗಳನ್ನು ಬಿಟ್ಟು ಹೋದರು.
عربي تفسیرونه:
كَذٰلِكَ ۫— وَاَوْرَثْنٰهَا قَوْمًا اٰخَرِیْنَ ۟
ಇದೇ ಪ್ರಕಾರವಾಯಿತು ಮತ್ತು ನಂತರ ನಾವು ಇತರ ಜನರನ್ನು ಅದರ ವಾರೀಸುದಾರರನ್ನಾಗಿ ಮಾಡಿದೆವು.
عربي تفسیرونه:
فَمَا بَكَتْ عَلَیْهِمُ السَّمَآءُ وَالْاَرْضُ وَمَا كَانُوْا مُنْظَرِیْنَ ۟۠
ಹಾಗೆಯೇ ಆಕಾಶವಾಗಲಿ, ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ ಮತ್ತು ಅವರಿಗೆ ಒಂದಿಷ್ಟೂ ಕಾಲಾವಕಾಶ ಲಭಿಸಲಿಲ್ಲ.
عربي تفسیرونه:
وَلَقَدْ نَجَّیْنَا بَنِیْۤ اِسْرَآءِیْلَ مِنَ الْعَذَابِ الْمُهِیْنِ ۟ۙ
ನಿಸ್ಸಂಶಯವಾಗಿಯೂ ನಾವು ಇಸ್ರಾಯೀಲ್ ಸಂತತಿಗಳನ್ನು ಅಪಮಾನಕರ ಶಿಕ್ಷೆಯಿಂದ ರಕ್ಷಿಸಿದೆವು.
عربي تفسیرونه:
مِنْ فِرْعَوْنَ ؕ— اِنَّهٗ كَانَ عَالِیًا مِّنَ الْمُسْرِفِیْنَ ۟
ಫಿರ್‌ಔನನಿಂದ ವಾಸ್ತವದಲ್ಲಿ ಅವನು ಅಹಂಕಾರಿಯು ಮತ್ತು ಹದ್ದುಮೀರಿ ದವರಲ್ಲಾಗಿದ್ದನು
عربي تفسیرونه:
وَلَقَدِ اخْتَرْنٰهُمْ عَلٰی عِلْمٍ عَلَی الْعٰلَمِیْنَ ۟ۚ
ನಾವು ಅವರನ್ನು (ಬನೀ ಇಸ್ರಾಯೀಲರನ್ನು) ಅರ್ಹರೆಂದು ಅರಿತು ಸರ್ವಲೋಕದವರ ಮೇಲೆ ಶ್ರೇಷ್ಠತೆಯನ್ನು ನೀಡಿದ್ದೆವು.
عربي تفسیرونه:
وَاٰتَیْنٰهُمْ مِّنَ الْاٰیٰتِ مَا فِیْهِ بَلٰٓؤٌا مُّبِیْنٌ ۟
ನಾವು ಅವರಿಗೆ ನೀಡಿದ ದೃಷ್ಟಾಂತಗಳಲ್ಲಿ ಸುಸ್ಪಷ್ಟವಾದ ಪರೀಕ್ಷೆಯಿತ್ತು.
عربي تفسیرونه:
اِنَّ هٰۤؤُلَآءِ لَیَقُوْلُوْنَ ۟ۙ
ನಿಶ್ಚಯವಾಗಿಯು ಇವರು ಹೇಳುತ್ತಾರೆ.
عربي تفسیرونه:
اِنْ هِیَ اِلَّا مَوْتَتُنَا الْاُوْلٰی وَمَا نَحْنُ بِمُنْشَرِیْنَ ۟
ನಮ್ಮ ಮೊದಲ ಬಾರಿಯ ಮರಣದ ಹೊರತು ಬೇರೇನಿಲ್ಲ ಮತ್ತು ನಮ್ಮನ್ನು ಪುನಃ ಎಬ್ಬಿಸಲಾಗುವುದಿಲ್ಲ.
عربي تفسیرونه:
فَاْتُوْا بِاٰبَآىِٕنَاۤ اِنْ كُنْتُمْ صٰدِقِیْنَ ۟
ನೀವು ಸತ್ಯವಂತರಾಗಿದ್ದರೆ ನಮ್ಮ ತಂದೆ ತಾತಂದಿರನ್ನು ಕರೆತನ್ನಿರಿ.
عربي تفسیرونه:
اَهُمْ خَیْرٌ اَمْ قَوْمُ تُبَّعٍ ۙ— وَّالَّذِیْنَ مِنْ قَبْلِهِمْ ؕ— اَهْلَكْنٰهُمْ ؗ— اِنَّهُمْ كَانُوْا مُجْرِمِیْنَ ۟
ಇವರು ಉತ್ತಮರೇ? ಅಥವಾ ತುಬ್ಬಾದ ಜನಾಂಗ ಮತ್ತು ಅವರಿಗಿಂತ ಮೊದಲಿದ್ದವರೇ? ನಾವು ಅವರೆಲ್ಲರನ್ನು ನಾಶಮಾಡಿದೆವು. ಖಂಡಿತವಾಗಿಯು ಅವರು ಅಪರಾಧಿಗಳಾಗಿದ್ದರು.
عربي تفسیرونه:
وَمَا خَلَقْنَا السَّمٰوٰتِ وَالْاَرْضَ وَمَا بَیْنَهُمَا لٰعِبِیْنَ ۟
ನಾವು ಆಕಾಶಗಳನ್ನೂ, ಭೂಮಿಯನ್ನೂ, ಅವುಗಳ ನಡುವೆಯಿರುವ ವಸ್ತುಗಳನ್ನೂ ಆಟವಿನೋದಕ್ಕಾಗಿ ಸೃಷ್ಟಿಸಿರುವುದಿಲ್ಲ.
عربي تفسیرونه:
مَا خَلَقْنٰهُمَاۤ اِلَّا بِالْحَقِّ وَلٰكِنَّ اَكْثَرَهُمْ لَا یَعْلَمُوْنَ ۟
ವಸ್ತುತಃ ನಾವು ಅವುಗಳನ್ನು ಉದ್ದೇಶಪೂರ್ವಕವಾಗಿ ಸತ್ಯದೊಂದಿಗೆ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
عربي تفسیرونه:
 
د معناګانو ژباړه سورت: دخان
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول