Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: مائده   آیت:
وَمِنَ الَّذِیْنَ قَالُوْۤا اِنَّا نَصٰرٰۤی اَخَذْنَا مِیْثَاقَهُمْ فَنَسُوْا حَظًّا مِّمَّا ذُكِّرُوْا بِهٖ ۪— فَاَغْرَیْنَا بَیْنَهُمُ الْعَدَاوَةَ وَالْبَغْضَآءَ اِلٰی یَوْمِ الْقِیٰمَةِ ؕ— وَسَوْفَ یُنَبِّئُهُمُ اللّٰهُ بِمَا كَانُوْا یَصْنَعُوْنَ ۟
ಮತ್ತು ಇದೇ ಪ್ರಕಾರ ತಮ್ಮನ್ನು ಕ್ರೆöÊಸ್ತರು ಎಂದು ಹೇಳಿಕೊಂಡವರಿAದಲೂ ನಾವು ಕರಾರನ್ನು ಪಡೆದೆವು. ಅವರೂ ಸಹ ತಮಗೆ ಉಪದೇಶ ನೀಡಲಾದುದರ ಅತಿದೊಡ್ಡ ಅಂಶವನ್ನು ಮರೆತು ಬಿಟ್ಟರು. ಆಗ ನಾವು ಸಹ ಅವರ ನಡುವೆ ಪುನರುತ್ಥಾನದ ದಿನದವರೆಗಿರುವಂತಹ ವಿದ್ವೇಷವನ್ನೂ, ವೈರತ್ವವನ್ನೂ ಹಾಕಿಬಿಟ್ಟೆವು ಮತ್ತು ಅವರು ಏನೆಲ್ಲವನ್ನು ಮಾಡುತ್ತಿದ್ದರೋ ಅದರ ಕುರಿತು ಅಲ್ಲಾಹನು ಸದ್ಯವೇ ಅವರಿಗೆ ತಿಳಿಸಿಕೊಡಲಿದ್ದಾನೆ.
عربي تفسیرونه:
یٰۤاَهْلَ الْكِتٰبِ قَدْ جَآءَكُمْ رَسُوْلُنَا یُبَیِّنُ لَكُمْ كَثِیْرًا مِّمَّا كُنْتُمْ تُخْفُوْنَ مِنَ الْكِتٰبِ وَیَعْفُوْا عَنْ كَثِیْرٍ ؕ۬— قَدْ جَآءَكُمْ مِّنَ اللّٰهِ نُوْرٌ وَّكِتٰبٌ مُّبِیْنٌ ۟ۙ
ಓ ಗ್ರಂಥದವರೇ, ಗ್ರಂಥದಿAದ ನೀವು ಮರೆಮಾಚುತ್ತಿದ್ದ ಅನೇಕ ಸಂಗತಿಗಳನ್ನು ನಿಮಗೆ ಬಹಿರಂಗಗೊಳಿಸುವ ಮತ್ತು ಹಲವು ವಿಚಾರಗಳನ್ನು ಕಡೆಗಣಿಸುವ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ನಿಶ್ಚಯವಾಗಿಯು ನಿಮ್ಮೆಡೆಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶವೂ, ಸ್ಪಷ್ಟವಾದ ಒಂದು ಗ್ರಂಥವೂ ಬಂದಿರುತ್ತದೆ.
عربي تفسیرونه:
یَّهْدِیْ بِهِ اللّٰهُ مَنِ اتَّبَعَ رِضْوَانَهٗ سُبُلَ السَّلٰمِ وَیُخْرِجُهُمْ مِّنَ الظُّلُمٰتِ اِلَی النُّوْرِ بِاِذْنِهٖ وَیَهْدِیْهِمْ اِلٰی صِرَاطٍ مُّسْتَقِیْمٍ ۟
ಅದರ ಮೂಲಕ ತನ್ನ ಪ್ರಭುವಿನ ಸಂಪ್ರೀತಿಯನ್ನು ಬಯಸಿದವರಿಗೆ ಅಲ್ಲಾಹನು ರಕ್ಷಾ ಮಾರ್ಗಗಳಿಗೆ ಮುನ್ನಡೆಸುವನು. ಮತ್ತು ಅವನು ಅವರನ್ನು ತನ್ನ ಕೃಪೆಯಿಂದ ಅಂಧಕಾರಗಳಿAದ ಪ್ರಕಾಶದೆಡೆಗೆ ಕರೆತರುವನು ಮತ್ತು ಅವರನ್ನು ನೇರವಾದ ಮಾರ್ಗದೆಡೆಗೆ ಮಾರ್ಗದರ್ಶನ ಮಾಡುವನು.
عربي تفسیرونه:
لَقَدْ كَفَرَ الَّذِیْنَ قَالُوْۤا اِنَّ اللّٰهَ هُوَ الْمَسِیْحُ ابْنُ مَرْیَمَ ؕ— قُلْ فَمَنْ یَّمْلِكُ مِنَ اللّٰهِ شَیْـًٔا اِنْ اَرَادَ اَنْ یُّهْلِكَ الْمَسِیْحَ ابْنَ مَرْیَمَ وَاُمَّهٗ وَمَنْ فِی الْاَرْضِ جَمِیْعًا ؕ— وَلِلّٰهِ مُلْكُ السَّمٰوٰتِ وَالْاَرْضِ وَمَا بَیْنَهُمَا ؕ— یَخْلُقُ مَا یَشَآءُ ؕ— وَاللّٰهُ عَلٰی كُلِّ شَیْءٍ قَدِیْرٌ ۟
ಅಲ್ಲಾಹನೇ ಮರ್ಯಮರ ಪುತ್ರ ಮಸೀಹನಾಗಿದ್ದಾನೆ ಎಂದು ಹೇಳಿದವರು ಖಂಡಿತವಾಗಿಯು ಸತ್ಯನಿಷೇಧಿಗಳಾಗಿರುವರು. ಹೇಳಿರಿ: ಅಲ್ಲಾಹನು ಮರ್ಯಮರ ಪುತ್ರ ಮಸೀಹರನ್ನೂ, ಅವರ ತಾಯಿಯನ್ನೂ, ಭೂಮಿಯಲ್ಲಿರುವ ಸರ್ವರನ್ನೂ ನಾಶಗೊಳಿಸಲು (ಮರಣ ಕೊಡಲು) ಬಯಸಿದರೆ ಅಲ್ಲಾಹನ ಮೇಲೆ ನಿಯಂತ್ರಣ ಹೊಂದಿದವರು ಯಾರಿದ್ದಾರೆ? ಆಕಾಶಗಳಲ್ಲಿ, ಭೂಮಿಯಲ್ಲಿ ಮತ್ತು ಅವೆರಡರ ಮಧ್ಯೆಯಿರುವ ಎಲ್ಲದರ ಅಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ ಮತ್ತು ಅಲ್ಲಾಹನು ಸರ್ವ ಕಾರ್ಯಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
عربي تفسیرونه:
 
د معناګانو ژباړه سورت: مائده
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول