Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: انعام   آیت:
ذٰلِكُمُ اللّٰهُ رَبُّكُمْ ۚ— لَاۤ اِلٰهَ اِلَّا هُوَ ۚ— خَالِقُ كُلِّ شَیْءٍ فَاعْبُدُوْهُ ۚ— وَهُوَ عَلٰی كُلِّ شَیْءٍ وَّكِیْلٌ ۟
ಅವನೇ ನಿಮ್ಮ ಪ್ರಭುವಾದ ಅಲ್ಲಾಹನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಅವನು ಸಕಲ ವಸ್ತುಗಳ ಸೃಷ್ಟಿಕರ್ತನಾಗಿದ್ದಾನೆ. ಅದ್ದರಿಂದ ಅವನನ್ನೇ ಆರಾಧಿಸಿರಿ. ಅವನು ಸಕಲ ವಿಷಯಗಳ ಮೇಲ್ವಿಚಾರಕನಾಗಿದ್ದಾನೆ.
عربي تفسیرونه:
لَا تُدْرِكُهُ الْاَبْصَارُ ؗ— وَهُوَ یُدْرِكُ الْاَبْصَارَ ۚ— وَهُوَ اللَّطِیْفُ الْخَبِیْرُ ۟
ದೃಷ್ಟಿಗಳು ಅವನನ್ನು ಗ್ರಹಿಸಲಾರವು ಮತ್ತು ಅವನು ಸಕಲ ದೃಷ್ಟಿಗಳನ್ನು ಗ್ರಹಿಸಿಕೊಳ್ಳುತ್ತಾನೆ. ಅವನು ಸೂಕ್ಷö್ಮ ದೃಷ್ಟಿಯುಳ್ಳವನೂ, ಸೂಕ್ಷö್ಮ ಜ್ಞಾನಿಯೂ ಆಗಿದ್ದಾನೆ.
عربي تفسیرونه:
قَدْ جَآءَكُمْ بَصَآىِٕرُ مِنْ رَّبِّكُمْ ۚ— فَمَنْ اَبْصَرَ فَلِنَفْسِهٖ ۚ— وَمَنْ عَمِیَ فَعَلَیْهَا ؕ— وَمَاۤ اَنَا عَلَیْكُمْ بِحَفِیْظٍ ۟
ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ವತಿಯಿಂದ ಕಣ್ಣು ತೆರೆಸುವಂತಹ ಪ್ರಕಾಶಗಳು ಬಂದಿವೆ. ಆದ್ದರಿಂದ ಯಾರು ಅದನ್ನು ನೋಡುತ್ತಾನೋ ಅದರ ಪ್ರಯೋಜನ ಅವನಿಗೇ ಸಿಗುವುದು ಮತ್ತು ಯಾರು ಕುರುಡನಾಗುತ್ತಾನೋ ಅದರ ನಷ್ಟ ಅವನಿಗೇ ಅಗುವುದು. ನಾನು ನಿಮ್ಮ ಕಾವಲುಗಾರನಲ್ಲ.
عربي تفسیرونه:
وَكَذٰلِكَ نُصَرِّفُ الْاٰیٰتِ وَلِیَقُوْلُوْا دَرَسْتَ وَلِنُبَیِّنَهٗ لِقَوْمٍ یَّعْلَمُوْنَ ۟
ಇದೇ ಪ್ರಕಾರ ನಾವು ನಾನಾ ವಿಧದಲ್ಲಿ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತೇವೆ. ಇದೇಕೆಂದರೆ ನೀವು ಯಾರಿಂದಲೋ ಕಲಿತು ಬಂದಿರುವಿರೆAದು ಬಹುದೇವಾರಾದಕರು ಹೇಳಲೆಂದು, ಮತ್ತು ಅರಿವು ಹೊಂದಿರುವ ಜನರಿಗೆ ನಾವಿದನ್ನು ವಿವರಿಸಿಕೊಡಲೆಂದಾಗಿದೆ.
عربي تفسیرونه:
اِتَّبِعْ مَاۤ اُوْحِیَ اِلَیْكَ مِنْ رَّبِّكَ ۚ— لَاۤ اِلٰهَ اِلَّا هُوَ ۚ— وَاَعْرِضْ عَنِ الْمُشْرِكِیْنَ ۟
ನಿಮಗೆ ನಿಮ್ಮ ಪ್ರಭುವಿನ ವತಿಯಿಂದ ದಿವ್ಯ ಸಂದೇಶ ನೀಡಲಾಗಿರುವುದನ್ನು ಅನುಸರಿಸಿರಿ. ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲ ಮತ್ತು ಬಹುದೇವಾರಾಧಕರಿಂದ ನೀವು ವಿಮುಖರಾಗಿರಿ.
عربي تفسیرونه:
وَلَوْ شَآءَ اللّٰهُ مَاۤ اَشْرَكُوْا ؕ— وَمَا جَعَلْنٰكَ عَلَیْهِمْ حَفِیْظًا ۚ— وَمَاۤ اَنْتَ عَلَیْهِمْ بِوَكِیْلٍ ۟
ಅಲ್ಲಾಹನು ಬಲವಂತವಾಗಿ ತಡೆಯಲು ಬಯಸಿದ್ದರೆ ಅವರು ಅವನಿಗೆ ಸಹಭಾಗಿಗಳನ್ನು ನಿಶ್ಚಯಿಸುತ್ತಿರಲಿಲ್ಲ ಮತ್ತು ನಾವು ನಿಮ್ಮನ್ನು ಅವರ ಕಾವಲುಗಾರನನ್ನಾಗಿ ಮಾಡಿಲ್ಲ ಮತ್ತು ನೀವು ಅವರ ಹೊಣೆ ಹೊತ್ತವರೂ ಅಲ್ಲ.
عربي تفسیرونه:
وَلَا تَسُبُّوا الَّذِیْنَ یَدْعُوْنَ مِنْ دُوْنِ اللّٰهِ فَیَسُبُّوا اللّٰهَ عَدْوًا بِغَیْرِ عِلْمٍ ؕ— كَذٰلِكَ زَیَّنَّا لِكُلِّ اُمَّةٍ عَمَلَهُمْ ۪— ثُمَّ اِلٰی رَبِّهِمْ مَّرْجِعُهُمْ فَیُنَبِّئُهُمْ بِمَا كَانُوْا یَعْمَلُوْنَ ۟
ಮತ್ತು ಅಲ್ಲಾಹನ ಹೊರತು ಅವರು ಕರೆದು ಪ್ರಾರ್ಥಿಸುತ್ತಿರುವವರನ್ನು ನೀವು ತೆಗಳಬೇಡಿರಿ. ಬಳಿಕ ಅವರು ಅಜ್ಞಾನವಿಲ್ಲದೆ ವೈರತ್ವದಿಂದ ಅಲ್ಲಾಹನನ್ನು ತೆಗಳುವರು. ಇದೇ ರೀತಿ ನಾವು ಪ್ರತಿಯೊಂದು ಸಮುದಾಯದವರಿಗೂ ಅವರ ಪ್ರವೃತ್ತಿಗಳನ್ನು ಅಕರ್ಷಕಗೊಳಿಸಿದ್ದೇವೆ. ನಂತರ ಅವರ ಮರಳುವಿಕೆಯು ಅವರ ಪ್ರಭುವಿನೆಡೆಗೇ ಆಗಿದೆ. ಆಗ ಅವನು ಅವರು ಮಾಡುತ್ತಿರುವುದರ ಕುರಿತು ಅವರಿಗೆ ತಿಳಿಸಿಕೊಡುವನು.
عربي تفسیرونه:
وَاَقْسَمُوْا بِاللّٰهِ جَهْدَ اَیْمَانِهِمْ لَىِٕنْ جَآءَتْهُمْ اٰیَةٌ لَّیُؤْمِنُنَّ بِهَا ؕ— قُلْ اِنَّمَا الْاٰیٰتُ عِنْدَ اللّٰهِ وَمَا یُشْعِرُكُمْ ۙ— اَنَّهَاۤ اِذَا جَآءَتْ لَا یُؤْمِنُوْنَ ۟
ಅಂದರೆ “ತಮ್ಮ ಬಳಿಯೇನಾದರೂ ದೃಷ್ಟಾಂತವು ಬಂದರೆ ನಾವು ಅದರಲ್ಲಿ ವಿಶ್ವಾಸವಿಡುವೆವೆಂದು ಅವರು ತಮಗೆ ಸಾಧ್ಯವಿರುವಷ್ಟರ ಮಟ್ಟಿಗೆ ಬಲವಾಗಿ ಅಲ್ಲಾಹನ ಆಣೆ ಹಾಕುತ್ತಾರೆ. ದೃಷ್ಟಾಂತಗಳೆಲ್ಲವೂ ಅಲ್ಲಾಹನ ವಶದಲ್ಲಿವೆ. (ಸತ್ಯವಿಶ್ವಾಸಿಗಳೇ) ನಿಮಗೇನು ಗೊತ್ತು? ದೃಷ್ಟಾಂತಗಳು ಬಂದರೂ ಅವರು ವಿಶ್ವಾಸವಿಡಲಾರರು.
عربي تفسیرونه:
وَنُقَلِّبُ اَفْـِٕدَتَهُمْ وَاَبْصَارَهُمْ كَمَا لَمْ یُؤْمِنُوْا بِهٖۤ اَوَّلَ مَرَّةٍ وَّنَذَرُهُمْ فِیْ طُغْیَانِهِمْ یَعْمَهُوْنَ ۟۠
ಅವರು ಮೊದಲ ಬಾರಿ ಇದರ ಮೇಲೆ ವಿಶ್ವಾಸವಿಡದಂತೆ ಈಗಲೂ ನಾವು ಸಹ ಅವರ ಹೃದಯಗಳನ್ನೂ, ಕಣ್ಣುಗಳನ್ನೂ ತಿರುಗಿಸಿ ಬಿಡುವೆವು. ಅವರು ತಮ್ಮ ಧಿಕ್ಕಾರದಲ್ಲಿ ಅಲೆದಾಡುವಂತೆ ನಾವು ಅವರನ್ನು ಬಿಟ್ಟು ಬಿಡುವೆವು.
عربي تفسیرونه:
 
د معناګانو ژباړه سورت: انعام
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول