Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: ممتحنه   آیت:
لَقَدْ كَانَ لَكُمْ فِیْهِمْ اُسْوَةٌ حَسَنَةٌ لِّمَنْ كَانَ یَرْجُوا اللّٰهَ وَالْیَوْمَ الْاٰخِرَ ؕ— وَمَنْ یَّتَوَلَّ فَاِنَّ اللّٰهَ هُوَ الْغَنِیُّ الْحَمِیْدُ ۟۠
ನಿಜವಾಗಿಯೂ ನಿಮಗೆ (ಅಂದರೆ ನಿಮ್ಮಲ್ಲಿ) ಅಲ್ಲಾಹನ ಹಾಗೂ ಪುನರುತ್ಥಾನದ ದಿನದ ಭೇಟಿಯನ್ನು ನಿರೀಕ್ಷಿಸುವವನಿಗೆ ಇಬ್ರಾಹೀಮ್ ಮತ್ತು ಅವರ ಸಂಗಡಿಗರಲ್ಲಿ ಒಂದು ಉತ್ತಮ ಮಾದರಿ ಇದೆ. ಯಾರಾದರೂ ವಿಮುಖರಾದರೆ ಅಲ್ಲಾಹನು ನಿರಪೇಕ್ಷಕನು ಮತ್ತು ಸ್ತುತ್ಯಾರ್ಹನಾಗಿದ್ದಾನೆ.
عربي تفسیرونه:
عَسَی اللّٰهُ اَنْ یَّجْعَلَ بَیْنَكُمْ وَبَیْنَ الَّذِیْنَ عَادَیْتُمْ مِّنْهُمْ مَّوَدَّةً ؕ— وَاللّٰهُ قَدِیْرٌ ؕ— وَاللّٰهُ غَفُوْرٌ رَّحِیْمٌ ۟
ಸದ್ಯದಲ್ಲೇ ಅಲ್ಲಾಹನು ನಿಮ್ಮ ಮತ್ತು ನಿಮ್ಮ ಶತ್ರುಗಳ ನಡುವೆ ಸ್ನೇಹವನ್ನು ಉಂಟುಮಾಡಬಹುದು. ಅಲ್ಲಾಹನು ಸರ್ವಸಾಮರ್ಥ್ಯನೂ ಮತ್ತು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ.
عربي تفسیرونه:
لَا یَنْهٰىكُمُ اللّٰهُ عَنِ الَّذِیْنَ لَمْ یُقَاتِلُوْكُمْ فِی الدِّیْنِ وَلَمْ یُخْرِجُوْكُمْ مِّنْ دِیَارِكُمْ اَنْ تَبَرُّوْهُمْ وَتُقْسِطُوْۤا اِلَیْهِمْ ؕ— اِنَّ اللّٰهَ یُحِبُّ الْمُقْسِطِیْنَ ۟
ನಿಮ್ಮೊಂದಿಗೆ ಧರ್ಮದ ವಿಚಾರದಲ್ಲಿ ಯುದ್ಧ ಮಾಡದ ಮತ್ತು ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸದವರೊಂದಿಗೆ ಉಪಕಾರ ಮಾಡುವುದರಿಂದಲೂ ಮತ್ತು ನ್ಯಾಯ ನೀತಿ ಪಾಲಿಸುವುದರಿಂದಲೂ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ. ಖಂಡಿತವಾಗಿಯೂ ಅಲ್ಲಾಹನು ನ್ಯಾಯ ನೀತಿ ಪಾಲಿಸುವವರನ್ನು ಪ್ರೀತಿಸುತ್ತಾನೆ.
عربي تفسیرونه:
اِنَّمَا یَنْهٰىكُمُ اللّٰهُ عَنِ الَّذِیْنَ قَاتَلُوْكُمْ فِی الدِّیْنِ وَاَخْرَجُوْكُمْ مِّنْ دِیَارِكُمْ وَظَاهَرُوْا عَلٰۤی اِخْرَاجِكُمْ اَنْ تَوَلَّوْهُمْ ۚ— وَمَنْ یَّتَوَلَّهُمْ فَاُولٰٓىِٕكَ هُمُ الظّٰلِمُوْنَ ۟
ನಿಜವಾಗಿಯೂ ಅಲ್ಲಾಹನು ನಿಮಗೆ ನಿಮ್ಮೊಂದಿಗೆ ಧರ್ಮದ ವಿಚಾರದಲ್ಲಿ ಯುದ್ಧ ಮಾಡಿರುವ ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸಿದ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಗಡಿಪಾರುಗೊಳಿಸಲು ಸಹಾಯ ನೀಡಿದವರೊಂದಿಗೆ ಸ್ನೇಹ ಬೆಳೆಸುವುದನ್ನು ತಡೆದಿರುವನು. ಅವರೊಂದಿಗೆ ಗೆಳೆತನ ಬೆಳೆಸುವರೇ ಅಕ್ರಮಿಗಳಾಗಿರುತ್ತಾರೆ.
عربي تفسیرونه:
یٰۤاَیُّهَا الَّذِیْنَ اٰمَنُوْۤا اِذَا جَآءَكُمُ الْمُؤْمِنٰتُ مُهٰجِرٰتٍ فَامْتَحِنُوْهُنَّ ؕ— اَللّٰهُ اَعْلَمُ بِاِیْمَانِهِنَّ ۚ— فَاِنْ عَلِمْتُمُوْهُنَّ مُؤْمِنٰتٍ فَلَا تَرْجِعُوْهُنَّ اِلَی الْكُفَّارِ ؕ— لَا هُنَّ حِلٌّ لَّهُمْ وَلَا هُمْ یَحِلُّوْنَ لَهُنَّ ؕ— وَاٰتُوْهُمْ مَّاۤ اَنْفَقُوْا ؕ— وَلَا جُنَاحَ عَلَیْكُمْ اَنْ تَنْكِحُوْهُنَّ اِذَاۤ اٰتَیْتُمُوْهُنَّ اُجُوْرَهُنَّ ؕ— وَلَا تُمْسِكُوْا بِعِصَمِ الْكَوَافِرِ وَسْـَٔلُوْا مَاۤ اَنْفَقْتُمْ وَلْیَسْـَٔلُوْا مَاۤ اَنْفَقُوْا ؕ— ذٰلِكُمْ حُكْمُ اللّٰهِ ؕ— یَحْكُمُ بَیْنَكُمْ ؕ— وَاللّٰهُ عَلِیْمٌ حَكِیْمٌ ۟
ಓ ಸತ್ಯ ವಿಶ್ವಾಸವಿರಿಸಿದವರೇ, ನಿಮ್ಮ ಬಳಿಗೆ ಸತ್ಯವಿಶ್ವಾಸಿನಿ ಸ್ತ್ರೀಯರು ವಲಸೆ ಬಂದುಬಿಟ್ಟರೆ ನೀವು ಅವರನ್ನು ಪರೀಕ್ಷಿಸಿರಿ ವಾಸ್ತವದಲ್ಲಿ ಅವರ ವಿಶ್ವಾಸದ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು. ಆದರೆ ನೀವು ಅವರನ್ನು ಸತ್ಯವಿಶ್ವಾಸಿನಿಗಳೆಂದು ಅರಿತುಕೊಂಡಲ್ಲಿ ಅವರನ್ನು ಸತ್ಯನಿಷೇಧಿಗಳ ಬಳಿಗೆ ಹಿಂದಿರುಗಿಸಬೇಡಿರಿ. ಅವರು ಅವರಿಗೆ ಧರ್ಮಸಮ್ಮತವಲ್ಲ ಮತ್ತು ಸತ್ಯ ನಿಷೇಧಿಗಳೂ ಅವರಿಗೆ ಧರ್ಮಸಮ್ಮತರಲ್ಲ ಮತ್ತು ಅವರ ಸತ್ಯನಿಷೇಧಿ ಪತಿಯರು ಮಾಡಿರುವ ಖರ್ಚನ್ನು ನೀವು ಅವರಿಗೆ ಕೊಟ್ಟುಬಿಡಿ, ನೀವು ಆ ಸ್ತ್ರೀಯರನ್ನು ಅವರ ಮಹರ್(ವಧುಧನ) ಪಾವತಿಸಿರಿ, ಅವರೊಂದಿಗೆ ವಿವಾಹ ಮಾಡಿಕೊಳ್ಳುವುದರಲ್ಲಿ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ, ನೀವು ಸತ್ಯನಿಷೆೆÃಧಿ ಸ್ತ್ರೀಯರನ್ನು ವಿವಾಹ ಬಂಧನದಲ್ಲಿರಿಸಿಕೊಳ್ಳಬೇಡಿರಿ. ಮತ್ತು ನೀವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಿರಿ ಮತ್ತು ಅವರೂ ಸಹ ತಾವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಲಿ. ಇದು ಅಲ್ಲಾಹನ ತೀರ್ಪು ಆಗಿದೆ. ಅವನು ನಿಮ್ಮ ನಡುವೆ ತೀರ್ಮಾನ ಮಾಡುತ್ತಾನೆ ಮತ್ತು ಅಲ್ಲಾಹನು ಮಹಾಜ್ಞಾನಿಯೂ ಯುಕ್ತಿಪೂರ್ಣನೂ ಆಗಿದ್ದಾನೆ.
عربي تفسیرونه:
وَاِنْ فَاتَكُمْ شَیْءٌ مِّنْ اَزْوَاجِكُمْ اِلَی الْكُفَّارِ فَعَاقَبْتُمْ فَاٰتُوا الَّذِیْنَ ذَهَبَتْ اَزْوَاجُهُمْ مِّثْلَ مَاۤ اَنْفَقُوْا ؕ— وَاتَّقُوا اللّٰهَ الَّذِیْۤ اَنْتُمْ بِهٖ مُؤْمِنُوْنَ ۟
ಮತ್ತು ನಿಮ್ಮ ಪತ್ನಿಯರ ಪೈಕಿ ಯಾರಾದರೂ ನಿಮ್ಮನ್ನು ಬಿಟ್ಟು ಸತ್ಯನಿಷೇಧಿಗಳೆಡೆಗೆ ಹೋದರೆ ಆ ಬಳಿಕ ನಿಮಗೆ ಅದೇ ಪ್ರತಿಕಾರದ ಅವಕಾಶ ಸಿಕ್ಕಿದರೆ, ಆಗ ಯಾರ ಪತ್ನಿಯರು ಹೊರಟುಹೋಗಿದ್ದಾರೋ ಅವರಿಗೆ ಅವರು ಮಾಡಿರುವ ಖರ್ಚನ್ನು ನೀಡಿ ಬಿಡಿರಿ ಮತ್ತು ನೀವು ವಿಶ್ವಾಸವಿರಿಸಿರುವ ಅಲ್ಲಾಹನನ್ನು ಭಯಪಡಿರಿ.
عربي تفسیرونه:
 
د معناګانو ژباړه سورت: ممتحنه
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول