Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: انسان   آیت:
عَیْنًا یَّشْرَبُ بِهَا عِبَادُ اللّٰهِ یُفَجِّرُوْنَهَا تَفْجِیْرًا ۟
ಅದೊಂದು ಚಿಲುಮೆ ಯಾಗಿದೆ, ಅದರಿಂದ ಅಲ್ಲಾಹನದಾಸರು ಕುಡಿಯುವರು. ತಾವಿಚ್ಛಿಸುವ ಕಡೆಗೆ ಅವರು ಅದರ ಕಾಲುವೆಗಳನ್ನು ಹರಿಸುವರು.
عربي تفسیرونه:
یُوْفُوْنَ بِالنَّذْرِ وَیَخَافُوْنَ یَوْمًا كَانَ شَرُّهٗ مُسْتَطِیْرًا ۟
ಅವರು ಹರಕೆಗಳನ್ನು ನೆರವೇರಿಸುತ್ತಾರೆ ಮತ್ತು ರ‍್ವ ವ್ಯಾಪಕವಾದ ಆಪತ್ತಿನ ಪ್ರಳಯ ದಿನವನ್ನು ಭಯಪಡುತ್ತಾರೆ.
عربي تفسیرونه:
وَیُطْعِمُوْنَ الطَّعَامَ عَلٰی حُبِّهٖ مِسْكِیْنًا وَّیَتِیْمًا وَّاَسِیْرًا ۟
ಅವರಿಗೆ ಆಹಾರದ ಅಗತ್ಯವಿದ್ದರೂ ಅಲ್ಲಾಹನ ಸಂಪ್ರೀತಿಗಾಗಿ ನರ‍್ಗತಿಕರಿಗೂ, ಅನಾಥರಿಗೂ ಮತ್ತು ಸೆರೆವಾಸಿಗಳಿಗೂ ಉಣಿಸುತ್ತಾರೆ.
عربي تفسیرونه:
اِنَّمَا نُطْعِمُكُمْ لِوَجْهِ اللّٰهِ لَا نُرِیْدُ مِنْكُمْ جَزَآءً وَّلَا شُكُوْرًا ۟
ನಾವು ನಿಮಗೆ ಕೇವಲ ಅಲ್ಲಾಹನ ಸಂತೃಪ್ತಿಗೋಸ್ಕರ, ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ, (ಎನ್ನುತ್ತಾರೆ)
عربي تفسیرونه:
اِنَّا نَخَافُ مِنْ رَّبِّنَا یَوْمًا عَبُوْسًا قَمْطَرِیْرًا ۟
ನಿಸ್ಸಂಶಯವಾಗಿಯೂ ನಾವು ನಮ್ಮ ಪ್ರಭುವಿನ ವತಿಯಿಂದ ಬರುವ ಮುಖಗಳನ್ನು ವಿಕೃತಗೊಳಿಸುವ ಮತ್ತು ಸಂಕಷ್ಟಕರವಾಗಿರುವ ಆ ದಿನವನ್ನು ಭಯಪಡುತ್ತೇವೆ.
عربي تفسیرونه:
فَوَقٰىهُمُ اللّٰهُ شَرَّ ذٰلِكَ الْیَوْمِ وَلَقّٰىهُمْ نَضْرَةً وَّسُرُوْرًا ۟ۚ
ಆದ್ದರಿಂದ ಅಲ್ಲಾಹನು ಆ ದಿನದ ಕೆಡುಕಿನಿಂದ ಅವರನ್ನು ಕಾಪಾಡಿದನು ಮತ್ತು ಅವರಿಗೆ ರ‍್ಷಉಲ್ಲಾಸವನ್ನು ದಯಪಾಲಿಸಿದನು.
عربي تفسیرونه:
وَجَزٰىهُمْ بِمَا صَبَرُوْا جَنَّةً وَّحَرِیْرًا ۟ۙ
ಅವರ ಸಹನೆಯ ಪ್ರತಿಫಲವಾಗಿ ಸ್ರ‍್ಗೋದ್ಯಾನವನ್ನು ಮತ್ತು ರೇಷ್ಮೆ ಉಡುಪುಗಳನ್ನು ಅವರಿಗೆ ಕರುಣಿಸಿದನು
عربي تفسیرونه:
مُّتَّكِـِٕیْنَ فِیْهَا عَلَی الْاَرَآىِٕكِ ۚ— لَا یَرَوْنَ فِیْهَا شَمْسًا وَّلَا زَمْهَرِیْرًا ۟ۚ
ಅವರು ಅಲ್ಲಿ ಉನ್ನತ ಆಸನಗಳಲ್ಲಿ ದಿಂಬುಗಳಿಗೆ ಒರಗಿ ಕುಳಿತಿರುವರು. ಅಲ್ಲಿ ಅವರು ಕಡು ಸೆಖೆಯಾಗಲಿ ತೀವ್ರಚಳಿಯಾಗಲಿ ಕಾಣಲಾರರು.
عربي تفسیرونه:
وَدَانِیَةً عَلَیْهِمْ ظِلٰلُهَا وَذُلِّلَتْ قُطُوْفُهَا تَذْلِیْلًا ۟
(ಓ ಪೈಗಂಬರರೇ) ಅದರ ನೆರಳು ಅವರಿಗೆ ಆವರಿಸಿರುವುದು ಮತ್ತು ಅವುಗಳ ಫಲಗಳು ಮತ್ತು ಗೊಂಚಲುಗಳು ಕೈಗೆಟಗುತ್ತಿರುವುದು.
عربي تفسیرونه:
وَیُطَافُ عَلَیْهِمْ بِاٰنِیَةٍ مِّنْ فِضَّةٍ وَّاَكْوَابٍ كَانَتْ قَوَارِیْرَ ۟ۙ
ಅವರ ಮೇಲೆ ಬೆಳ್ಳಿಯ ಪಾತ್ರೆಗಳನ್ನು ಮತ್ತು ಗಾಜಿನ ಲೋಟಗಳನ್ನು ಸುತ್ತಿತರಲಾಗುವುದು.
عربي تفسیرونه:
قَوَارِیْرَ مِنْ فِضَّةٍ قَدَّرُوْهَا تَقْدِیْرًا ۟
ಗಾಜೂ ಸಹ ಬೆಳ್ಳಿಯದ್ದಾಗಿರುವುದು, ಅವುಗಳನ್ನು ಅವರು (ಸೇವಕರು) ಪ್ರಮಾಣಬದ್ಧವಾಗಿ ಅಳೆದಿಟ್ಟಿರುವರು.
عربي تفسیرونه:
وَیُسْقَوْنَ فِیْهَا كَاْسًا كَانَ مِزَاجُهَا زَنْجَبِیْلًا ۟ۚ
ಅವರಿಗೆ ಅಲ್ಲಿ ಶುಂಠಿ ಮಿಶ್ರಿತ ಪಾನಪಾತ್ರೆಯಿಂದ ಕುಡಿಸಲಾಗುವುದು.
عربي تفسیرونه:
عَیْنًا فِیْهَا تُسَمّٰی سَلْسَبِیْلًا ۟
ಅದು ಸಲ್ಸಬೀಲ್ ಎಂಬ ಹೆಸರಿನ ಸ್ರ‍್ಗದ ಒಂದು ಚಿಲುಮೆಯಾಗಿದೆ.
عربي تفسیرونه:
وَیَطُوْفُ عَلَیْهِمْ وِلْدَانٌ مُّخَلَّدُوْنَ ۚ— اِذَا رَاَیْتَهُمْ حَسِبْتَهُمْ لُؤْلُؤًا مَّنْثُوْرًا ۟
ಅವರ ನಡುವೆ ಚಿರಬಾಲಕರು ಸುತ್ತುತ್ತಿರುವರು, ನೀವು ಅವರನ್ನು ಕಂಡರೆ ಅವರು ಹರಡಲಾದ ಮುತ್ತುಗಳಾಗಿದ್ದಾರೆ ಎಂದು ಭಾವಿಸುವಿರಿ.
عربي تفسیرونه:
وَاِذَا رَاَیْتَ ثَمَّ رَاَیْتَ نَعِیْمًا وَّمُلْكًا كَبِیْرًا ۟
ಅಲ್ಲಿ ನೀವು ಎತ್ತದೃಷ್ಟಿ ಹಾಯಿಸಿದರೂ ಸುಖಾನುಗ್ರಹ ಮತ್ತು ಬೃಹತ್ ವೈಭವದ ಸಾಮ್ರಾಜ್ಯವನ್ನೇ ಕಾಣುವಿರಿ.
عربي تفسیرونه:
عٰلِیَهُمْ ثِیَابُ سُنْدُسٍ خُضْرٌ وَّاِسْتَبْرَقٌ ؗ— وَّحُلُّوْۤا اَسَاوِرَ مِنْ فِضَّةٍ ۚ— وَسَقٰىهُمْ رَبُّهُمْ شَرَابًا طَهُوْرًا ۟
ಅವರ ಮೈ ಮೇಲೆ ಹಸಿರು ಬಣ್ಣದ ತೆಳು ರೇಷ್ಮೆ ಮತ್ತು ಮಂದ ರೇಷ್ಮೆ ಬಟ್ಟೆಗಳಿರುವುವು ಮತ್ತು ಅವರಿಗೆ ಬೆಳ್ಳಿಯ ಕಂಕಣಗಳನ್ನು ತೊಡಿಸಲಾಗುವುದು. ಮತ್ತು ಅವರ ಪ್ರಭು ಅವರಿಗೆ ನರ‍್ಮಲವಾದ ಮಧಿರೆಯನ್ನು ಕುಡಿಸುವುದು.
عربي تفسیرونه:
اِنَّ هٰذَا كَانَ لَكُمْ جَزَآءً وَّكَانَ سَعْیُكُمْ مَّشْكُوْرًا ۟۠
(ಹೇಳಲಾಗುವುದು) ಖಂಡಿತವಾ ಗಿಯೂ ಇದು ನಿಮ್ಮ ರ‍್ಮಗಳಿಗಿರುವ ಪ್ರತಿಫಲವಾಗಿದೆ. ಮತ್ತು ನಿಮ್ಮ ಪರಿಶ್ರಮಗಳನ್ನು ಆದರಿಸಲಾಗಿದೆ.
عربي تفسیرونه:
اِنَّا نَحْنُ نَزَّلْنَا عَلَیْكَ الْقُرْاٰنَ تَنْزِیْلًا ۟ۚ
ನಿಸ್ಸಂಶಯವಾಗಿಯೂ ನಾವು ಈ ಕುರ್ಆನನ್ನು ನಿಮ್ಮ ಮೇಲೆ ಹಂತ ಹಂತವಾಗಿ ಅವತರ‍್ಣಗೊಳಿಸಿದ್ದೇವೆ.
عربي تفسیرونه:
فَاصْبِرْ لِحُكْمِ رَبِّكَ وَلَا تُطِعْ مِنْهُمْ اٰثِمًا اَوْ كَفُوْرًا ۟ۚ
ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪಿಗಾಗಿ ಸಹನೆ ವಹಿಸಿರಿ ಮತ್ತು ಅವರ ಪೈಕಿ ಯಾವೊಬ್ಬ ಪಾಪಿಯನ್ನು ಕೃತಘ್ನನನ್ನು ಅನುಸರಿಸದಿರಿ.
عربي تفسیرونه:
وَاذْكُرِ اسْمَ رَبِّكَ بُكْرَةً وَّاَصِیْلًا ۟ۖۚ
ಸಂಜೆ ಮತ್ತು ಮುಂಜಾನೆಯಲ್ಲಿ ನಿಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ.
عربي تفسیرونه:
 
د معناګانو ژباړه سورت: انسان
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول