Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: انفال   آیت:
وَاَطِیْعُوا اللّٰهَ وَرَسُوْلَهٗ وَلَا تَنَازَعُوْا فَتَفْشَلُوْا وَتَذْهَبَ رِیْحُكُمْ وَاصْبِرُوْا ؕ— اِنَّ اللّٰهَ مَعَ الصّٰبِرِیْنَ ۟ۚ
ನೀವು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ಅನುಸರಿಸಿರಿ. ಪರಸ್ಪರ ಭಿನ್ನತೆಯನ್ನು ತೋರದಿರಿ. ಅನ್ಯಥಾ ನೀವು ಧೈರ್ಯಗುಂದುವಿರಿ ಮತ್ತು ನಿಮ್ಮ ಸ್ಪೂರ್ತಿಯು ಕಳೆದು ಹೋಗುವುದು ಮತ್ತು ನೀವು ಸಹನೆ ವಹಿಸಿರಿ. ಖಂಡಿತವಾಗಿಯು ಅಲ್ಲಾಹನು ಸಹನಶೀಲರೊಂದಿಗಿದ್ದಾನೆ.
عربي تفسیرونه:
وَلَا تَكُوْنُوْا كَالَّذِیْنَ خَرَجُوْا مِنْ دِیَارِهِمْ بَطَرًا وَّرِئَآءَ النَّاسِ وَیَصُدُّوْنَ عَنْ سَبِیْلِ اللّٰهِ ؕ— وَاللّٰهُ بِمَا یَعْمَلُوْنَ مُحِیْطٌ ۟
ದುರಹಂಕಾರದೊAದಿಗೂ, ಜನರಿಗೆ ತೋರಿಸುವ ಸಲುವಾಗಿಯೂ ತಮ್ಮ ಮನೆಗಳಿಂದ ಹೊರಟವರಂತೆ ನೀವಾಗಬೇಡಿರಿ. ಅವರು ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದರು. ಅವರು ಮಾಡುತ್ತಿರುವುದೆಲ್ಲವನ್ನು ಅಲ್ಲಾಹನು ಆವರಿಸಿದ್ದಾನೆ
عربي تفسیرونه:
وَاِذْ زَیَّنَ لَهُمُ الشَّیْطٰنُ اَعْمَالَهُمْ وَقَالَ لَا غَالِبَ لَكُمُ الْیَوْمَ مِنَ النَّاسِ وَاِنِّیْ جَارٌ لَّكُمْ ۚ— فَلَمَّا تَرَآءَتِ الْفِئَتٰنِ نَكَصَ عَلٰی عَقِبَیْهِ وَقَالَ اِنِّیْ بَرِیْٓءٌ مِّنْكُمْ اِنِّیْۤ اَرٰی مَا لَا تَرَوْنَ اِنِّیْۤ اَخَافُ اللّٰهَ ؕ— وَاللّٰهُ شَدِیْدُ الْعِقَابِ ۟۠
'ಇಂದು ನಿಮ್ಮ ಮೇಲೆ ಜಯ ಸಾಧಿಸುವವನು ಯಾರೂ ಇಲ್ಲ ಮತ್ತು ನಾನು ನಿಮ್ಮ ಬೆಂಬಲಿಗನಾಗಿರುವೆನು' ಎಂದು ಶೈತಾನನು ಅವರ ಕರ್ಮಗಳನ್ನು ಸುಂದರವಾಗಿ ತೋರಿಸಿಕೊಟ್ಟ ಸಂದರ್ಭವನ್ನು ಸ್ಮರಿಸಿರಿ. ಆದರೆ ಎರಡು ಬಣಗಳು ಎದುರುಗೊಂಡಾಗ ಅವನು ಹಿಮ್ಮೆಟ್ಟಿ ಓಡಿ ಹೋದನು. ಮತ್ತು ಹೇಳಿದನು: ನಾನು ನಿಮ್ಮಿಂದ ಸಂಬAಧ ಮುಕ್ತನಾಗಿದ್ದೇನೆ. ನೀವು ಕಾಣದ್ದನ್ನು ನಾನು ಕಾಣುತ್ತಿದ್ದೇನೆ, ನಾನು ಅಲ್ಲಾಹನನ್ನು ಭಯಪಡುತ್ತೇನೆ ಮತ್ತು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
عربي تفسیرونه:
اِذْ یَقُوْلُ الْمُنٰفِقُوْنَ وَالَّذِیْنَ فِیْ قُلُوْبِهِمْ مَّرَضٌ غَرَّ هٰۤؤُلَآءِ دِیْنُهُمْ ؕ— وَمَنْ یَّتَوَكَّلْ عَلَی اللّٰهِ فَاِنَّ اللّٰهَ عَزِیْزٌ حَكِیْمٌ ۟
ಇವರ ಧರ್ಮವು ಇವರನ್ನು ಮೋಸಗೊಳಿಸಿಬಿಟ್ಟಿದೆ ಎಂದು ಕಪಟವಿಶ್ವಾಸಿಗಳು ಹಾಗೂ ಹೃದಯದಲ್ಲಿ ರೋಗವಿರುವವರು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಯಾರಾದರೂ ಅಲ್ಲಾಹನ ಮೇಲೆ ಭರವಸೆಯಿಡುವುದಾದರೆ ನಿಸ್ಸಂದೇಹವಾಗಿಯು ಅಲ್ಲಾಹನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿದ್ದಾನೆ.
عربي تفسیرونه:
وَلَوْ تَرٰۤی اِذْ یَتَوَفَّی الَّذِیْنَ كَفَرُوا الْمَلٰٓىِٕكَةُ یَضْرِبُوْنَ وُجُوْهَهُمْ وَاَدْبَارَهُمْ ۚ— وَذُوْقُوْا عَذَابَ الْحَرِیْقِ ۟
ಮಲಕ್‌ಗಳು ಸತ್ಯನಿಷೇಧಿಗಳ ಆತ್ಮಗಳನ್ನು ವಶಪಡಿಸಿಕೊಳ್ಳುವಾಗ ನೀವು ನೋಡಿರುತ್ತಿದ್ದರೆ! ಅವರು ಅವರ ಮುಖಗಳಿಗೂ, ಬೆನ್ನುಗಳಿಗೂ ಹೊಡೆಯುತ್ತಾ ನೀವು ಸುಡುವ ಶಿಕ್ಷೆಯನ್ನು ಸವಿಯಿರಿ. (ಎಂದು ಹೇಳಿದರು)
عربي تفسیرونه:
ذٰلِكَ بِمَا قَدَّمَتْ اَیْدِیْكُمْ وَاَنَّ اللّٰهَ لَیْسَ بِظَلَّامٍ لِّلْعَبِیْدِ ۟ۙ
ಇದು ನಿಮ್ಮ ಕೈಗಳು ಮುಂಚೆಯೇ ಮಾಡಿಟ್ಟ ಆ ಕರ್ಮಗಳ ಕಾರಣದಿಂದಾಗಿದೆ. ನಿಸ್ಸಂಶಯವಾಗಿಯು ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗುವವನಲ್ಲ.
عربي تفسیرونه:
كَدَاْبِ اٰلِ فِرْعَوْنَ ۙ— وَالَّذِیْنَ مِنْ قَبْلِهِمْ ؕ— كَفَرُوْا بِاٰیٰتِ اللّٰهِ فَاَخَذَهُمُ اللّٰهُ بِذُنُوْبِهِمْ ؕ— اِنَّ اللّٰهَ قَوِیٌّ شَدِیْدُ الْعِقَابِ ۟
ಇವರ ಸ್ಥಿತಿ ಫಿರ್‌ಔನ್‌ನ ಜನಾಂಗ ಮತ್ತು ಅವರ ಪೂರ್ವಿಕರ ಸ್ಥಿತಿಯಂತೆಯೇ ಅವರು ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸಿದರು. ಆಗ ಅಲ್ಲಾಹನು ಅವರ ಪಾಪಗಳ ನಿಮಿತ್ತ ಅವರನ್ನು ಹಿಡಿದುಬಿಟ್ಟನು. ಖಂಡಿತವಾಗಿಯು ಅಲ್ಲಾಹನು ಪ್ರಬಲನೂ, ಕಠಿಣವಾಗಿ ಶಿಕ್ಷಿಸುವವನೂ ಆಗಿದ್ದಾನೆ.
عربي تفسیرونه:
 
د معناګانو ژباړه سورت: انفال
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول