Check out the new design

د قرآن کریم د معناګانو ژباړه - کنادي ژباړه - حمزه بتور * - د ژباړو فهرست (لړلیک)

PDF XML CSV Excel API
Please review the Terms and Policies

د معناګانو ژباړه سورت: نحل   آیت:
وَاَلْقٰی فِی الْاَرْضِ رَوَاسِیَ اَنْ تَمِیْدَ بِكُمْ وَاَنْهٰرًا وَّسُبُلًا لَّعَلَّكُمْ تَهْتَدُوْنَ ۟ۙ
ಭೂಮಿಯು ನಿಮ್ಮೊಂದಿಗೆ ಅಲುಗಾಡದಿರಲು ಅವನು ಅದರಲ್ಲಿ ದೃಢವಾಗಿ ನಿಲ್ಲುವ ಪರ್ವತಗಳನ್ನು ಸ್ಥಾಪಿಸಿದನು. ಅವನು ನದಿಗಳನ್ನು ಮತ್ತು ರಸ್ತೆಗಳನ್ನು ಮಾಡಿಕೊಟ್ಟನು. ನೀವು ಉದ್ದೇಶಿತ ಸ್ಥಳಕ್ಕೆ ತಲುಪುವುದಕ್ಕಾಗಿ.
عربي تفسیرونه:
وَعَلٰمٰتٍ ؕ— وَبِالنَّجْمِ هُمْ یَهْتَدُوْنَ ۟
ಅವನು ಇನ್ನೂ ಅನೇಕ ಚಿಹ್ನೆಗಳನ್ನು ಮಾಡಿಕೊಟ್ಟನು. ನಕ್ಷತ್ರಗಳ ಮೂಲಕವೂ ಅವರು (ಜನರು) ದಾರಿಯನ್ನು ಕಂಡುಹಿಡಿಯುತ್ತಾರೆ.
عربي تفسیرونه:
اَفَمَنْ یَّخْلُقُ كَمَنْ لَّا یَخْلُقُ ؕ— اَفَلَا تَذَكَّرُوْنَ ۟
ಹಾಗಾದರೆ, ಸೃಷ್ಟಿಸುವವನು ಸೃಷ್ಟಿಸದವನಂತೆ ಆಗುವನೇ? ಆದರೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
عربي تفسیرونه:
وَاِنْ تَعُدُّوْا نِعْمَةَ اللّٰهِ لَا تُحْصُوْهَا ؕ— اِنَّ اللّٰهَ لَغَفُوْرٌ رَّحِیْمٌ ۟
ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸುವುದಾದರೆ ಅವುಗಳನ್ನು ಲೆಕ್ಕ ಮಾಡಲು ನಿಮಗೆ ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
عربي تفسیرونه:
وَاللّٰهُ یَعْلَمُ مَا تُسِرُّوْنَ وَمَا تُعْلِنُوْنَ ۟
ನೀವು ರಹಸ್ಯವಾಗಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ತಿಳಿಯುತ್ತಾನೆ.
عربي تفسیرونه:
وَالَّذِیْنَ یَدْعُوْنَ مِنْ دُوْنِ اللّٰهِ لَا یَخْلُقُوْنَ شَیْـًٔا وَّهُمْ یُخْلَقُوْنَ ۟ؕ
ಅವರು ಅಲ್ಲಾಹನನ್ನು ಬಿಟ್ಟು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತಾರೋ ಅವರು ಏನೂ ಸೃಷ್ಟಿಸುವುದಿಲ್ಲ. ವಾಸ್ತವವಾಗಿ, ಅವರೇ ಸೃಷ್ಟಿಗಳಾಗಿದ್ದಾರೆ.
عربي تفسیرونه:
اَمْوَاتٌ غَیْرُ اَحْیَآءٍ ؕۚ— وَمَا یَشْعُرُوْنَ ۙ— اَیَّانَ یُبْعَثُوْنَ ۟۠
ಅವರು ನಿರ್ಜೀವಿಗಳು; ಜೀವವಿರುವವರಲ್ಲ. ಅವರನ್ನು ಯಾವಾಗ ಜೀವ ನೀಡಿ ಎಬ್ಬಿಸಲಾಗುವುದೆಂದು ಕೂಡ ಅವರು ತಿಳಿದಿಲ್ಲ.[1]
[1] ನಿರ್ಜೀವಿಗಳು ಎಂದರೆ ಕಲ್ಲುಗಳು, ವಿಗ್ರಹಗಳು ಇತ್ಯಾದಿ. ಮೃತ ಮಹಾಪುರುಷರು ಕೂಡ ಇದರಲ್ಲಿ ಸೇರುತ್ತಾರೆ. ಏಕೆಂದರೆ ನಿರ್ಜೀವಿಗಳು ಎಂದು ಹೇಳಿದ ಬಳಿಕ ಅವರನ್ನು ಜೀವವಿರುವವರಲ್ಲ ಎಂದು ವರ್ಣಿಸಲಾಗಿದೆ. ಇದರಿಂದ ತಿಳಿದುಬರುವ ಪ್ರಕಾರ ಮರಣದ ನಂತರ ಯಾರಿಗೂ ಇಹಲೋಕದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಅವರು ಪ್ರವಾದಿಗಳು ಅಥವಾ ಮಹಾಪುರುಷರಾಗಿದ್ದರೂ ಸಹ. ಅವರನ್ನು ಯಾವಾಗ ಜೀವ ನೀಡಿ ಎಬ್ಬಿಸಲಾಗುವುದೆಂದೂ ಅವರು ತಿಳಿದಿಲ್ಲ. ಹೀಗಿರುವಾಗ, ಉಪಕಾರ ಮಾಡಲು ಮತ್ತು ತೊಂದರೆ ನಿವಾರಿಸಲು ಅವರನ್ನು ಕರೆದು ಪ್ರಾರ್ಥಿಸುವುದು ವ್ಯರ್ಥ ಮಾತ್ರವಲ್ಲ, ಅದು ಅರ್ಥಶೂನ್ಯವೂ ಆಗಿದೆ.
عربي تفسیرونه:
اِلٰهُكُمْ اِلٰهٌ وَّاحِدٌ ۚ— فَالَّذِیْنَ لَا یُؤْمِنُوْنَ بِالْاٰخِرَةِ قُلُوْبُهُمْ مُّنْكِرَةٌ وَّهُمْ مُّسْتَكْبِرُوْنَ ۟
ನಿಮ್ಮ ದೇವರು ಏಕೈಕ ದೇವರು. ಪರಲೋಕದಲ್ಲಿ ವಿಶ್ವಾಸವಿಲ್ಲದವರ ಹೃದಯಗಳಲ್ಲಿ ಅಸಮ್ಮತಿಯಿದೆ.[1] ಅವರು ಅಹಂಕಾರದಿಂದ ವರ್ತಿಸುತ್ತಾರೆ.
[1] ಏಕೈಕ ದೇವನಲ್ಲಿ ವಿಶ್ವಾಸವಿಡಲು ಅವರು ಹಿಂಜರಿಯುತ್ತಾರೆ. ಮಾತ್ರವಲ್ಲ, ಏಕದೇವವಿಶ್ವಾಸದ ಕಡೆಗೆ ಕರೆದರೆ ಅವರು ಅಹಂಕಾರದಿಂದ ವರ್ತಿಸುತ್ತಾರೆ. ನೋಡಿ: 37:35.
عربي تفسیرونه:
لَا جَرَمَ اَنَّ اللّٰهَ یَعْلَمُ مَا یُسِرُّوْنَ وَمَا یُعْلِنُوْنَ ؕ— اِنَّهٗ لَا یُحِبُّ الْمُسْتَكْبِرِیْنَ ۟
ಸಂಶಯವೇ ಇಲ್ಲ! ಅವರು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ಸ್ಪಷ್ಟವಾಗಿ ತಿಳಿಯುತ್ತಾನೆ. ಅವನು ಅಹಂಕಾರಿಗಳನ್ನು ಇಷ್ಟಪಡುವುದಿಲ್ಲ.
عربي تفسیرونه:
وَاِذَا قِیْلَ لَهُمْ مَّاذَاۤ اَنْزَلَ رَبُّكُمْ ۙ— قَالُوْۤا اَسَاطِیْرُ الْاَوَّلِیْنَ ۟ۙ
“ನಿಮ್ಮ ಪರಿಪಾಲಕನು (ಅಲ್ಲಾಹು) ಏನನ್ನು ಅವತೀರ್ಣಗೊಳಿಸಿದನು?” ಎಂದು ಅವರೊಡನೆ ಕೇಳಲಾದರೆ, “ಪ್ರಾಚೀನ ಕಾಲದ ಜನರ ಪುರಾಣಗಳನ್ನು” ಎಂದು ಅವರು ಉತ್ತರಿಸುತ್ತಾರೆ.
عربي تفسیرونه:
لِیَحْمِلُوْۤا اَوْزَارَهُمْ كَامِلَةً یَّوْمَ الْقِیٰمَةِ ۙ— وَمِنْ اَوْزَارِ الَّذِیْنَ یُضِلُّوْنَهُمْ بِغَیْرِ عِلْمٍ ؕ— اَلَا سَآءَ مَا یَزِرُوْنَ ۟۠
ಇದರ ಪರಿಣಾಮವಾಗಿ ಪುನರುತ್ಥಾನ ದಿನದಂದು ಅವರು ತಮ್ಮ ಪಾಪದ ಹೊರೆಯನ್ನು ಪೂರ್ಣವಾಗಿ ಹೊರುತ್ತಾರೆ ಮತ್ತು ಯಾವುದೇ ಜ್ಞಾನವಿಲ್ಲದೆ ಅವರು ಯಾರನ್ನೆಲ್ಲಾ ದಾರಿತಪ್ಪಿಸಿದ್ದಾರೋ ಅವರ ಪಾಪದ ಒಂದು ಭಾಗವನ್ನು ಕೂಡ ಹೊರುತ್ತಾರೆ. ತಿಳಿಯಿರಿ! ಅವರು ಹೊರುವ ಹೊರೆ ಬಹಳ ನಿಕೃಷ್ಟವಾಗಿದೆ.
عربي تفسیرونه:
قَدْ مَكَرَ الَّذِیْنَ مِنْ قَبْلِهِمْ فَاَتَی اللّٰهُ بُنْیَانَهُمْ مِّنَ الْقَوَاعِدِ فَخَرَّ عَلَیْهِمُ السَّقْفُ مِنْ فَوْقِهِمْ وَاَتٰىهُمُ الْعَذَابُ مِنْ حَیْثُ لَا یَشْعُرُوْنَ ۟
ಅವರಿಗಿಂತ ಮೊದಲಿನವರು ಕೂಡ ಪಿತೂರಿ ಮಾಡಿದ್ದರು. ಆಗ ಅಲ್ಲಾಹು ಅವರು ಕಟ್ಟಡದ ಅಡಿಪಾಯವನ್ನೇ ಅಲುಗಾಡಿಸಿದನು. ಆಗ ಅದರ ಛಾವಣಿಯು ಅವರ ತಲೆಯ ಮೇಲೆ ಕುಸಿದು ಬಿತ್ತು. ಅವರು ನಿರೀಕ್ಷಿಸದ ಕಡೆಯಿಂದ ಶಿಕ್ಷೆಯು ಅವರ ಬಳಿಗೆ ಬಂತು.
عربي تفسیرونه:
 
د معناګانو ژباړه سورت: نحل
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - حمزه بتور - د ژباړو فهرست (لړلیک)

محمد حمزه بتور ژباړلی دی. د رواد الترجمة مرکز تر څارنې لاندې انکشاف ورکړل شوی.

بندول