Check out the new design

Tradução dos significados do Nobre Qur’an. - Tradução Canarim - Bashir Mysore * - Índice de tradução


Tradução dos significados Surah: An-Nur   Versículo:
یُقَلِّبُ اللّٰهُ الَّیْلَ وَالنَّهَارَ ؕ— اِنَّ فِیْ ذٰلِكَ لَعِبْرَةً لِّاُولِی الْاَبْصَارِ ۟
ಅಲ್ಲಾಹನೇ ರಾತ್ರಿ, ಹಗಲನ್ನು ಬದಲಾಯಿಸುತ್ತಿರುತ್ತಾನೆ. ನಿಶ್ಚಯವಾಗಿಯೂ ಇದರಲ್ಲಿ ದೃಷ್ಟಿಯುಳ್ಳವರಿಗೆ ಮಹಾ ಪಾಠವಿದೆ.
Os Tafssir em língua árabe:
وَاللّٰهُ خَلَقَ كُلَّ دَآبَّةٍ مِّنْ مَّآءٍ ۚ— فَمِنْهُمْ مَّنْ یَّمْشِیْ عَلٰی بَطْنِهٖ ۚ— وَمِنْهُمْ مَّنْ یَّمْشِیْ عَلٰی رِجْلَیْنِ ۚ— وَمِنْهُمْ مَّنْ یَّمْشِیْ عَلٰۤی اَرْبَعٍ ؕ— یَخْلُقُ اللّٰهُ مَا یَشَآءُ ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟
ಅಲ್ಲಾಹನು ಪ್ರತಿಯೊಂದು ಜೀವಿಯನ್ನು ನೀರಿನಿಂದ ಸೃಷ್ಟಿಸಿರುತ್ತಾನೆ. ಹಾಗೆಯೇ ಅವುಗಳ ಪೈಕಿ ಕೆಲವು ತಮ್ಮ ಹೊಟ್ಟೆಯ ಆಧಾರದ ಮೇಲೆ ಚಲಿಸಿದರೆ ಇನ್ನೂ ಕೆಲವು ಎರಡು ಕಾಲುಗಳಲ್ಲಿ ನಡೆಯುತ್ತವೆ ಮತ್ತು ಕೆಲವು ನಾಲ್ಕು ಕಾಲುಗಳಲ್ಲಿ ನಡೆಯುತ್ತವೆ. ಅಲ್ಲಾಹನು ತಾನಿಚ್ಛಿಸುವುದನ್ನು ಸೃಷ್ಟಿಸುತ್ತಾನೆ. ನಿಸ್ಸಂಶಯವಾಗಿಯು ಅಲ್ಲಾಹನು ಎಲ್ಲಾ ವಸ್ತುಗಳ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Os Tafssir em língua árabe:
لَقَدْ اَنْزَلْنَاۤ اٰیٰتٍ مُّبَیِّنٰتٍ ؕ— وَاللّٰهُ یَهْدِیْ مَنْ یَّشَآءُ اِلٰی صِرَاطٍ مُّسْتَقِیْمٍ ۟
ನಿಸ್ಸಂದೇಹವಾಗಿಯೂ ನಾವು ಸತ್ಯವನ್ನು ಸ್ಪಷ್ಟವಾಗಿ ತಿಳಿಸುವ ಸೂಕ್ತಿಗಳನ್ನು ಅವತೀರ್ಣಗೊಳಿಸಿದ್ದೇವೆ ಮತ್ತು ಅಲ್ಲಾಹನು ತಾನಿಚ್ಛಿಸಿದವರನ್ನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
Os Tafssir em língua árabe:
وَیَقُوْلُوْنَ اٰمَنَّا بِاللّٰهِ وَبِالرَّسُوْلِ وَاَطَعْنَا ثُمَّ یَتَوَلّٰی فَرِیْقٌ مِّنْهُمْ مِّنْ بَعْدِ ذٰلِكَ ؕ— وَمَاۤ اُولٰٓىِٕكَ بِالْمُؤْمِنِیْنَ ۟
“ನಾವು ಅಲ್ಲಾಹನಲ್ಲೂ, ಸಂದೇಶವಾಹಕರಲ್ಲೂ ವಿಶ್ವಾಸಿವಿರಿಸಿದೆವು ಮತ್ತು ಅವರನ್ನು ಅನುಸರಿಸಿದೆವು ಎಂದು ಅವರು (ಕಪಟಿಗಳು) ಹೇಳುತ್ತಾರೆ”. “ಬಳಿಕ ಅವರ ಪೈಕಿ ಒಂದು ಗುಂಪು ತಿರುಗಿ ಬಿಡುತ್ತದೆ ಮತ್ತು ಇಂಥವರು ಖಂಡಿತ ಸತ್ಯವಿಶ್ವಾಸಿಗಳಲ್ಲ”.
Os Tafssir em língua árabe:
وَاِذَا دُعُوْۤا اِلَی اللّٰهِ وَرَسُوْلِهٖ لِیَحْكُمَ بَیْنَهُمْ اِذَا فَرِیْقٌ مِّنْهُمْ مُّعْرِضُوْنَ ۟
ಅವರ ನಡುವೆ ತೀರ್ಪು ನೀಡಲಿಕ್ಕಾಗಿ ಅವರನ್ನು ಅಲ್ಲಾಹನೆಡೆಗೂ, ಅವನ ಸಂದೇಶವಾಹಕರೆಡೆಗೂ ಕರೆಯಲಾದರೆ ಕೂಡಲೇ ಅವರ ಪೈಕಿ ಒಂದು ಗುಂಪು ವಿಮುಖವಾಗಿಬಿಡುತ್ತದೆ.
Os Tafssir em língua árabe:
وَاِنْ یَّكُنْ لَّهُمُ الْحَقُّ یَاْتُوْۤا اِلَیْهِ مُذْعِنِیْنَ ۟ؕ
ಅವರಿಗೇನಾದರೂ ಹಕ್ಕು ಲಭಿಸುವುದಿದ್ದರೆ ಅವರೆಡೆಗೆ ವಿಧೇಯರಾಗಿ ಬರುತ್ತಾರೆ.
Os Tafssir em língua árabe:
اَفِیْ قُلُوْبِهِمْ مَّرَضٌ اَمِ ارْتَابُوْۤا اَمْ یَخَافُوْنَ اَنْ یَّحِیْفَ اللّٰهُ عَلَیْهِمْ وَرَسُوْلُهٗ ؕ— بَلْ اُولٰٓىِٕكَ هُمُ الظّٰلِمُوْنَ ۟۠
ಅವರ ಹೃದಯಗಳಲ್ಲಿ ಕಾಪಟ್ಯದ ರೋಗಿವಿದೆಯೇ? ಅಥವಾ ಅವರು ನಿಮ್ಮ ಪ್ರವಾದಿತ್ವದ ಕುರಿತು ಸಂದೇಹದಲ್ಲಿದ್ದಾರೆಯೇ?ಅಥವಾ ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ಅವರ ಹಕ್ಕನ್ನು ಕಸಿದುಬಿಡಬಹುದೆಂಬ ಆಶಂಕೆಯಲ್ಲಿದ್ದಾರೆಯೇ?
Os Tafssir em língua árabe:
اِنَّمَا كَانَ قَوْلَ الْمُؤْمِنِیْنَ اِذَا دُعُوْۤا اِلَی اللّٰهِ وَرَسُوْلِهٖ لِیَحْكُمَ بَیْنَهُمْ اَنْ یَّقُوْلُوْا سَمِعْنَا وَاَطَعْنَا ؕ— وَاُولٰٓىِٕكَ هُمُ الْمُفْلِحُوْنَ ۟
ಸತ್ಯವಿಶ್ವಾಸಿಗಳ ನಡುವೆ ತೀರ್ಮಾನವೇನಾದರೂ ಮಾಡಲೆಂದು ಅವರನ್ನು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಕಡೆಗೆ ಕರೆಯಾದರೆ “ನಾವು ಆಲಿಸಿದೆವು ಹಾಗೂ ಆಜ್ಞಾನುಸರಣೆ ಮಾಡಿದೆವು” ಎಂಬುದೇ ಅವರ ಮಾತಾಗಿರುತ್ತದೆ. ಅಂತಹವರು ಯಶಸ್ಸು ಪಡೆಯುವವರಾಗಿದ್ದಾರೆ.
Os Tafssir em língua árabe:
وَمَنْ یُّطِعِ اللّٰهَ وَرَسُوْلَهٗ وَیَخْشَ اللّٰهَ وَیَتَّقْهِ فَاُولٰٓىِٕكَ هُمُ الْفَآىِٕزُوْنَ ۟
ಯಾರು ಅಲ್ಲಾಹನನ್ನು, ಭಯಪಟ್ಟು ಅವನ ಆಜ್ಞೋಲ್ಲಂಘನೆಯಿAದ ರಕ್ಷಿಸಿಕೊಳ್ಳುತ್ತಾನೋ ಅಂತಹವರು ಯಶಸ್ಸು ಹೊಂದುವವರಾಗಿದ್ದಾರೆ.
Os Tafssir em língua árabe:
وَاَقْسَمُوْا بِاللّٰهِ جَهْدَ اَیْمَانِهِمْ لَىِٕنْ اَمَرْتَهُمْ لَیَخْرُجُنَّ ؕ— قُلْ لَّا تُقْسِمُوْا ۚ— طَاعَةٌ مَّعْرُوْفَةٌ ؕ— اِنَّ اللّٰهَ خَبِیْرٌ بِمَا تَعْمَلُوْنَ ۟
ನೀವು ಆದೇಶ ನೀಡಿದ ಕೂಡಲೇ ನಾವು ಹೊರಟು ಬಿಡುತ್ತೇವೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ದೃಢ ಆಣೆ ಹಾಕಿ ಹೇಳುತ್ತಾರೆ. ಹೇಳಿರಿ: ನೀವು ಕೇವಲ ಆಣೆ ಹಾಕಬೇಡಿರಿ. (ನಿಮ್ಮ) ಆಜ್ಞಾನುಸರಣೆಯು ಗೊತ್ತಿದೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಚೆನ್ನಾಗಿ ಬಲ್ಲನು.
Os Tafssir em língua árabe:
 
Tradução dos significados Surah: An-Nur
Índice de capítulos Número de página
 
Tradução dos significados do Nobre Qur’an. - Tradução Canarim - Bashir Mysore - Índice de tradução

Tradução feita pelo Sheikh Bashir Maisuri. Desenvolvida sob a supervisão do Centro de mestres em Tradução.

Fechar