Tradução dos significados do Nobre Qur’an. - الترجمة الكنادية - بشير ميسوري * - Índice de tradução


Tradução dos significados Surah: Suratu Ya-sin   Versículo:

ಸೂರ ಯಾಸೀನ್

یٰسٓ ۟ۚ
ಯಾಸೀನ್.
Os Tafssir em língua árabe:
وَالْقُرْاٰنِ الْحَكِیْمِ ۟ۙ
ಯುಕ್ತಿಪೂರ್ಣವಾದ ಕುರ್‌ಆನಿನ ಆಣೆ.
Os Tafssir em língua árabe:
اِنَّكَ لَمِنَ الْمُرْسَلِیْنَ ۟ۙ
ನಿಸ್ಸಂದೇಹವಾಗಿಯು ನೀವು ಸಂದೇಶವಾಹಕರಲ್ಲಾಗಿರುವಿರಿ.
Os Tafssir em língua árabe:
عَلٰی صِرَاطٍ مُّسْتَقِیْمٍ ۟ؕ
ಋಜುವಾದ ಮಾರ್ಗದಲ್ಲಿರುವಿರಿ.
Os Tafssir em língua árabe:
تَنْزِیْلَ الْعَزِیْزِ الرَّحِیْمِ ۟ۙ
ಈ ಕುರ್‌ಆನ್ ಪ್ರತಾಪಶಾಲಿಯು, ಕರುಣಾನಿಧಿಯು ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ.
Os Tafssir em língua árabe:
لِتُنْذِرَ قَوْمًا مَّاۤ اُنْذِرَ اٰبَآؤُهُمْ فَهُمْ غٰفِلُوْنَ ۟
ಇದೇಕೆಂದರೆ ನೀವು ಒಂದು ಜನಾಂಗಕ್ಕೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅವರ ಪೂರ್ವಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿರಲಿಲ್ಲ. ಆದ್ದರಿಂದ ಅವರು ಅಲಕ್ಷö್ಯತೆಯಲ್ಲಿದ್ದರು.
Os Tafssir em língua árabe:
لَقَدْ حَقَّ الْقَوْلُ عَلٰۤی اَكْثَرِهِمْ فَهُمْ لَا یُؤْمِنُوْنَ ۟
ಅವರ ಪೆÊಕಿ ಹೆಚ್ಚಿನವರ ಮೇಲೆ (ಶಿಕ್ಷೆಯ) ಮಾತು ಧೃಢವಾಗಿ ಬಿಟ್ಟಿದೆ. ಆದ್ದರಿಂದ ಅವರು ವಿಶ್ವಾಸವಿಡಲಾರರು.
Os Tafssir em língua árabe:
اِنَّا جَعَلْنَا فِیْۤ اَعْنَاقِهِمْ اَغْلٰلًا فَهِیَ اِلَی الْاَذْقَانِ فَهُمْ مُّقْمَحُوْنَ ۟
ನಾವು ಅವರ ಕೊರಳುಗಳಲ್ಲಿ ಕಂಠಕಡಗಗಳನ್ನು ಹಾಕಿದ್ದೇವೆ. ಅವು ಗಲ್ಲಗಳವರೆಗೆ ತಲುಪಿವೆ ಅದರಿಂದಾಗಿ ಅವರ ತಲೆಯು ಸೆಟೆದು ನಿಂತಿರುತ್ತವೆ.
Os Tafssir em língua árabe:
وَجَعَلْنَا مِنْ بَیْنِ اَیْدِیْهِمْ سَدًّا وَّمِنْ خَلْفِهِمْ سَدًّا فَاَغْشَیْنٰهُمْ فَهُمْ لَا یُبْصِرُوْنَ ۟
ನಾವು ಅವರ ಮುಂದೆ ಒಂದು ತಡೆಯನ್ನು ಮತ್ತು ಅವರ ಹಿಂದೆ ಒಂದು ತಡೆಯನ್ನು ಇರಿಸಿದ್ದೇವೆ. ಇದರಿಂದ ಅವರನ್ನು ನಾವು ಆವರಿಸಿ ಬಿಟ್ಟದ್ದೇವೆ. ಆದ್ದರಿಂದ ಅವರು ಏನನ್ನೂ ನೋಡಲಾರರು.
Os Tafssir em língua árabe:
وَسَوَآءٌ عَلَیْهِمْ ءَاَنْذَرْتَهُمْ اَمْ لَمْ تُنْذِرْهُمْ لَا یُؤْمِنُوْنَ ۟
ನೀವು ಅವರಿಗೆ ಮುನ್ನೆಚ್ಚರಿಕೆ ನೀಡಿದರೂ ಅಥವಾ ಮುನ್ನೆಚ್ಚರಿಕೆ ನೀಡದಿದ್ದರು ಅವರಿಗೆ ಸಮಾನವಾಗಿದೆ. ಅವರು ವಿಶ್ವಾಸವಿಡಲಾರರು.
Os Tafssir em língua árabe:
اِنَّمَا تُنْذِرُ مَنِ اتَّبَعَ الذِّكْرَ وَخَشِیَ الرَّحْمٰنَ بِالْغَیْبِ ۚ— فَبَشِّرْهُ بِمَغْفِرَةٍ وَّاَجْرٍ كَرِیْمٍ ۟
ಕುರ್‌ಆನನ್ನು ಅನುಸರಿಸಿದ ಮತ್ತು ಪರಮದಯಾಮಯನನ್ನು ಅಗೋಚರವಾಗಿ ಭಯಪಡು ವಂತಹ ವ್ಯಕ್ತಿಗೆ ಮಾತ್ರ ನಿಮ್ಮ ಮುನ್ನೆಚ್ಚರಿಕೆಯು ಪ್ರಯೋಜನ ನೀಡಬಲ್ಲದು. ಆದ್ದರಿಂದ ನೀವು ಅವನಿಗೆ ಪಾಪವಿಮೋಚನೆ ಮತ್ತು ಗೌರವಾನ್ವಿತ ಪ್ರತಿಫಲದ ಶುಭವಾರ್ತೆಯನ್ನು ನೀಡಿರಿ.
Os Tafssir em língua árabe:
اِنَّا نَحْنُ نُحْیِ الْمَوْتٰی وَنَكْتُبُ مَا قَدَّمُوْا وَاٰثَارَهُمْ ؔؕ— وَكُلَّ شَیْءٍ اَحْصَیْنٰهُ فِیْۤ اِمَامٍ مُّبِیْنٍ ۟۠
ನಿಸ್ಸಂಶಯವಾಗಿಯೂ ನಾವು ಮೃತರನ್ನು ಜೀವಂತಗೊಳಿಸುವೆವು ಮತ್ತು ಅವರು ಮುಂದೆ ಕಳುಹಿಸಿದ ಹಾಗೂ ಹಿಂದೆ ಬಿಟ್ಟು ಬಂದಿರುವ ಕರ್ಮಗಳನ್ನು ನಾವು ದಾಖಲಿಸುತ್ತಿದ್ದೇವೆ ಮತ್ತು ಪ್ರತಿಯೊಂದನ್ನು ನಾವು ಒಂದು ಸುಸ್ಪಷ್ಟವಾದ ದಾಖಲೆಯೊಂದರಲ್ಲಿ ಲಿಖಿತಗೊಳಿಸಿರುವೆವು.
Os Tafssir em língua árabe:
وَاضْرِبْ لَهُمْ مَّثَلًا اَصْحٰبَ الْقَرْیَةِ ۘ— اِذْ جَآءَهَا الْمُرْسَلُوْنَ ۟ۚ
ಅವರಿಗೆ ಒಂದು ಗ್ರಾಮದ ಉದಾಹರಣೆಯನ್ನು ತಿಳಿಸಿಕೊಡಿರಿ. ಆ ಗ್ರಾಮಕ್ಕೆ ಸಂದೇಶವಾಹಕರು ಬಂದ ಸಂದರ್ಭವನ್ನು ಸ್ಮರಿಸಿರಿ.
Os Tafssir em língua árabe:
اِذْ اَرْسَلْنَاۤ اِلَیْهِمُ اثْنَیْنِ فَكَذَّبُوْهُمَا فَعَزَّزْنَا بِثَالِثٍ فَقَالُوْۤا اِنَّاۤ اِلَیْكُمْ مُّرْسَلُوْنَ ۟
ಅವರೆಡೆಗೆ ನಾವು ಇಬ್ಬರು ಸಂದೇಶವಾಹಕರನ್ನು ಕಳುಹಿಸಿದಾಗ ಅವರಿಬ್ಬರನ್ನು ಧಿಕ್ಕರಿಸಿದರು. ಆಗ ಮೂರನೆಯವರ ಮೂಲಕ ನಾವು ಬೆಂಬಲ ನೀಡಿದೆವು. ನಾವು ನಿಮ್ಮಡೆಗೆ ಸಂದೇಶವಾಹಕರಾಗಿ ನಿಯೋಗಿಸಲ್ಪಟ್ಟಿದ್ದೇವೆ ಎಂದು ಅವರು ಹೇಳಿದರು.
Os Tafssir em língua árabe:
قَالُوْا مَاۤ اَنْتُمْ اِلَّا بَشَرٌ مِّثْلُنَا ۙ— وَمَاۤ اَنْزَلَ الرَّحْمٰنُ مِنْ شَیْءٍ ۙ— اِنْ اَنْتُمْ اِلَّا تَكْذِبُوْنَ ۟
ಆ ಗ್ರಾಮದವರು ಹೇಳಿದರು: ನೀವಂತು ನಮ್ಮಂತೆಯೇ ಮನುಷ್ಯರಾಗಿರುವಿರಿ ಮತ್ತು ಪರಮದಯಾಮಯನು ಏನನ್ನೂ ಅವತೀರ್ಣಗೊಳಿಸಿಲ್ಲ ನೀವು ಕೇವಲ ಸುಳ್ಳು ಹೇಳುತ್ತಿರುವಿರಿ.
Os Tafssir em língua árabe:
قَالُوْا رَبُّنَا یَعْلَمُ اِنَّاۤ اِلَیْكُمْ لَمُرْسَلُوْنَ ۟
ಸಂದೇಶವಾಹಕರು ಹೇಳಿದರು: ನಿಸ್ಸಂದೇಹವಾಗಿಯೂ ನಾವು ನಿಮ್ಮಡೆಗೆ ಕಳುಹಿಸಲಾದ ಸಂದೇಶವಾಹಕರೆAದು ನಮ್ಮ ಪ್ರಭುವು ಅರಿಯುತ್ತಾನೆ.
Os Tafssir em língua árabe:
وَمَا عَلَیْنَاۤ اِلَّا الْبَلٰغُ الْمُبِیْنُ ۟
ಮತ್ತು ಸುಸ್ಪಷ್ಟವಾಗಿ ಸಂದೇಶವನ್ನು ತಲುಪಿಸುವುದರ ಹೊರತು ನಮ್ಮ ಮೇಲೆ ಬೇರೆ ಹೊಣೆಯಿಲ್ಲ.
Os Tafssir em língua árabe:
قَالُوْۤا اِنَّا تَطَیَّرْنَا بِكُمْ ۚ— لَىِٕنْ لَّمْ تَنْتَهُوْا لَنَرْجُمَنَّكُمْ وَلَیَمَسَّنَّكُمْ مِّنَّا عَذَابٌ اَلِیْمٌ ۟
ಜನರು ಹೇಳಿದರು : ನಾವು ನಿಮ್ಮನ್ನು ಅಪಶಕುನವೆಂದು ಭಾವಿಸುತ್ತಿದ್ದೇವೆ. ನೀವು ಇದನ್ನು ನಿಲ್ಲಿಸದಿದ್ದರೆ ನಾವು ಕಲ್ಲೆಸೆದು ನಿಮ್ಮ ಕಥೆ ಮುಗಿಸಿಬಿಡುವೆವು ಮತ್ತು ನಿಮಗೆ ನಮ್ಮಿಂದ ಕಠಿಣ ಶಿಕ್ಷೆಯು ತಟ್ಟಲಿದೆ.
Os Tafssir em língua árabe:
قَالُوْا طَآىِٕرُكُمْ مَّعَكُمْ ؕ— اَىِٕنْ ذُكِّرْتُمْ ؕ— بَلْ اَنْتُمْ قَوْمٌ مُّسْرِفُوْنَ ۟
ಸಂದೇಶವಾಹಕರು ಹೇಳಿದರು: ನಿಮ್ಮ ಅಪಶಕುನವು ನಿಮ್ಮಲ್ಲೇ ಅಂಟಿಕೊAಡಿದೆ. ನಿಮಗೆ ಉಪದೇಶ ನೀಡಿದುದಕ್ಕಾಗಿ ನೀವು ಹೀಗೆ ತಿಳಿಯುತ್ತಿದ್ದೀರಾ ? ನೀವು ಹದ್ದು ಮೀರಿ ಹೋಗುವ ಜನರಾಗಿರುವಿರಿ.
Os Tafssir em língua árabe:
وَجَآءَ مِنْ اَقْصَا الْمَدِیْنَةِ رَجُلٌ یَّسْعٰی ؗ— قَالَ یٰقَوْمِ اتَّبِعُوا الْمُرْسَلِیْنَ ۟ۙ
ಆ ಪಟ್ಟಣದ ಕೊನೆಯ ಅಂಚಿನಿAದ ಒಬ್ಬ ವ್ಯಕ್ತಿ ಓಡುತ್ತಾ ಬಂದು ಹೀಗೆ ಹೇಳಿದನು : ಓ ನನ್ನಜನರೇ ! ನೀವು ಆ ಸಂದೇಶವಾಹಕರನ್ನು ಅನುಸರಿಸಿರಿ.
Os Tafssir em língua árabe:
اتَّبِعُوْا مَنْ لَّا یَسْـَٔلُكُمْ اَجْرًا وَّهُمْ مُّهْتَدُوْنَ ۟
ಆ ಪಟ್ಟಣದ ಕೊನೆಯ ಅಂಚಿನಿAದ ಒಬ್ಬ ವ್ಯಕ್ತಿ ಓಡುತ್ತಾ ಬಂದು ಹೀಗೆ ಹೇಳಿದನು : ಓ ನನ್ನಜನರೇ ! ನೀವು ಆ ಸಂದೇಶವಾಹಕರನ್ನು ಅನುಸರಿಸಿರಿ.
Os Tafssir em língua árabe:
وَمَا لِیَ لَاۤ اَعْبُدُ الَّذِیْ فَطَرَنِیْ وَاِلَیْهِ تُرْجَعُوْنَ ۟
ನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನಾಗಿದೆ ಮತ್ತು ಅವನೆಡೆಗೆ ನೀವು ಮರಳಿಸಲಾಗುವಿರಿ.
Os Tafssir em língua árabe:
ءَاَتَّخِذُ مِنْ دُوْنِهٖۤ اٰلِهَةً اِنْ یُّرِدْنِ الرَّحْمٰنُ بِضُرٍّ لَّا تُغْنِ عَنِّیْ شَفَاعَتُهُمْ شَیْـًٔا وَّلَا یُنْقِذُوْنِ ۟ۚ
ನಾನು ಅವನನ್ನು ಬಿಟ್ಟು ಇತರ ರನ್ನು ಆರಾಧ್ಯರನ್ನಾಗಿ ಮಾಡಿಕೊಳ್ಳುವುದೇ. ಪರಮದಯಾಮಯನು ನನಗೇನಾದರೂ ಹಾನಿಯುಂಟು ಮಾಡಲು ಇಚ್ಛಿಸಿದರೆ ಅವರ ಶಿಫಾರಸ್ಸು ನನಗೆ ಯಾವ ಪ್ರಯೋಜನವನ್ನೂ ನೀಡದು ಮತ್ತು ಅವರು ನನ್ನನ್ನು ರಕ್ಷಿಸಲಾರರು.
Os Tafssir em língua árabe:
اِنِّیْۤ اِذًا لَّفِیْ ضَلٰلٍ مُّبِیْنٍ ۟
ಹಾಗೇನಾದರು ಮಾಡಿದರೆ ನಾನು ಖಂಡಿತವಾಗಿಯು ಸ್ಪಷ್ಟ ಪಥಭ್ರಷ್ಟತೆಯಲ್ಲಿರು ವೆನು.
Os Tafssir em língua árabe:
اِنِّیْۤ اٰمَنْتُ بِرَبِّكُمْ فَاسْمَعُوْنِ ۟ؕ
ಖಂಡಿತವಾಗಿಯೂ ನಾನು ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿಟ್ಟಿರುವೆನು. ಆದ್ದರಿಂದ ನೀವು ನನ್ನ ಮಾತನ್ನು ಕೇಳಿರಿ ಎಂದಾಗ ಜನರು ಅವನನ್ನು ವಧಿಸಿದರು.
Os Tafssir em língua árabe:
قِیْلَ ادْخُلِ الْجَنَّةَ ؕ— قَالَ یٰلَیْتَ قَوْمِیْ یَعْلَمُوْنَ ۟ۙ
(ಅವನೊಂದಿಗೆ): ಸ್ವರ್ಗವನ್ನು ಪ್ರವೇಶಿಸು ಎಂದು ಹೇಳಲಾಯಿತು.
Os Tafssir em língua árabe:
بِمَا غَفَرَ لِیْ رَبِّیْ وَجَعَلَنِیْ مِنَ الْمُكْرَمِیْنَ ۟
ಅವನು ಹೇಳಿದನು ಅಯ್ಯೋ ಯಾವುದರ ನಿಮಿತ್ತ ನನ್ನ ಪ್ರಭು ನನಗೆ ಕ್ಷಮಿಸಿರುವನು ಮತ್ತು ಗೌರವಾರ್ಹರ ಪÉÊಕಿ ನನ್ನನ್ನು ಸೇರಿಸಿರುವನು ಎಂದು ನನ್ನ ಜನಾಂಗಕ್ಕೆ ತಿಳಿದಿರುತ್ತಿದ್ದರೆ.
Os Tafssir em língua árabe:
وَمَاۤ اَنْزَلْنَا عَلٰی قَوْمِهٖ مِنْ بَعْدِهٖ مِنْ جُنْدٍ مِّنَ السَّمَآءِ وَمَا كُنَّا مُنْزِلِیْنَ ۟
ಅವನ ಬಳಿಕ ನಾವು ಅವನ ಜನಾಂಗದ ಮೇಲೆ ಆಕಾಶದಿಂದ ಯಾವುದೇ ಸÉÊನ್ಯವನ್ನು ಇಳಿಸಲಿಲ್ಲ ಮತ್ತು ನಾವು ಹೀಗೆ ಇಳಿಸುವುದೂ ಇಲ್ಲ.
Os Tafssir em língua árabe:
اِنْ كَانَتْ اِلَّا صَیْحَةً وَّاحِدَةً فَاِذَا هُمْ خٰمِدُوْنَ ۟
ಅದು ಒಂದು ಘೋರ ಆರ್ಭಟವಾಗಿತ್ತು. ಒಮ್ಮೆಲೇ ಅವರೆಲ್ಲರೂ ನಂದಿ ಹೋದರು.
Os Tafssir em língua árabe:
یٰحَسْرَةً عَلَی الْعِبَادِ ۣۚ— مَا یَاْتِیْهِمْ مِّنْ رَّسُوْلٍ اِلَّا كَانُوْا بِهٖ یَسْتَهْزِءُوْنَ ۟
ಅಯ್ಯೋ ದಾಸರ ಅವಸ್ಥೆಯೇ ! ಅವರ ಬಳಿಗೆ ಯಾವ ಸಂದೇಶವಾಹಕನು ಬಂದರೂ ಅವರು ಅವನ ಅಪಹಾಸ್ಯ ಮಾಡದೇ ಬಿಡಲಿಲ್ಲ.
Os Tafssir em língua árabe:
اَلَمْ یَرَوْا كَمْ اَهْلَكْنَا قَبْلَهُمْ مِّنَ الْقُرُوْنِ اَنَّهُمْ اِلَیْهِمْ لَا یَرْجِعُوْنَ ۟
ಇವರಿಗಿಂತ ಮುಂಚೆ ಅದೆಷ್ಟೋ ಜನಾಂಗಗಳನ್ನು ನಾವು ನಾಶಪಡಿಸಿದ್ದನ್ನು ಇವರು ಕಾಣಲಿಲ್ಲವೇ? ಅವರಾದರೋ ಇವರ ಬಳಿಗೆ ಮರಳಲಾರರು.
Os Tafssir em língua árabe:
وَاِنْ كُلٌّ لَّمَّا جَمِیْعٌ لَّدَیْنَا مُحْضَرُوْنَ ۟۠
ಅವರೆಲ್ಲರೂ(ಪುನರುತ್ಥಾನದ ದಿನ) ನಮ್ಮ ಮುಂದೆ ಒಟ್ಟಾಗಿ ಹಾಜರುಗೊಳಿಸಲಾಗುವರು.
Os Tafssir em língua árabe:
وَاٰیَةٌ لَّهُمُ الْاَرْضُ الْمَیْتَةُ ۖۚ— اَحْیَیْنٰهَا وَاَخْرَجْنَا مِنْهَا حَبًّا فَمِنْهُ یَاْكُلُوْنَ ۟
ಮತ್ತು ನಿರ್ಜೀವ ಭೂಮಿಯು ಅವರಿಗೊಂದು ದೃಷ್ಟಾಂತವಾಗಿದೆ. ಅದನ್ನು ನಾವು ಜೀವಂತಗೊಳಿಸಿ ಅದರಿಂದ ಧಾನ್ಯಗಳನ್ನು ಹೊರತರುತ್ತೇವೆ. ತರುವಾಯ ಅವರು ಅದರಿಂದ ತಿನ್ನುತ್ತಾರೆ.
Os Tafssir em língua árabe:
وَجَعَلْنَا فِیْهَا جَنّٰتٍ مِّنْ نَّخِیْلٍ وَّاَعْنَابٍ وَّفَجَّرْنَا فِیْهَا مِنَ الْعُیُوْنِ ۟ۙ
ಮತ್ತು ನಾವು ಅದರಲ್ಲಿ ಖರ್ಜೂರ ಹಾಗೂ ದ್ರಾಕ್ಷಿಗಳ ತೋಟಗಳನ್ನು ಉಂಟುಮಾಡಿದೆವು ಮತ್ತು ಅದರಲ್ಲಿ ಚಿಲುಮೆಗಳನ್ನು ಹರಿಸಿದೆವು.
Os Tafssir em língua árabe:
لِیَاْكُلُوْا مِنْ ثَمَرِهٖ ۙ— وَمَا عَمِلَتْهُ اَیْدِیْهِمْ ؕ— اَفَلَا یَشْكُرُوْنَ ۟
ಅವರು ಅದರ ಫಲಗಳನ್ನು ತಿನ್ನಲೆಂದಾಗಿದೆ ಮತ್ತು ಅದನ್ನು ಅವರ ಕÉÊಗಳು ಮಾಡಿದುದಲ್ಲ. ಹಾಗಿದ್ದೂ ಅವರು ಕೃತಜ್ಞತೆ ಸಲ್ಲಿಸುವುದಿಲ್ಲವೇ ?
Os Tafssir em língua árabe:
سُبْحٰنَ الَّذِیْ خَلَقَ الْاَزْوَاجَ كُلَّهَا مِمَّا تُنْۢبِتُ الْاَرْضُ وَمِنْ اَنْفُسِهِمْ وَمِمَّا لَا یَعْلَمُوْنَ ۟
ಭೂಮಿ ಉತ್ಪಾದಿಸುವುದರಲ್ಲಿಯು, ಸ್ವತಃ ಅವರ ವರ್ಗದಲ್ಲಿಯು ಮತ್ತು ಅವರು ಅರಿತೇ ಇಲ್ಲದಂತಹ ಸಕಲ ವಸ್ತುಗಳಲ್ಲಿಯು ಜೋಡಿಗಳನ್ನು ಸೃಷ್ಟಿಸಿದವನು ಪರಮಪಾವನನು!
Os Tafssir em língua árabe:
وَاٰیَةٌ لَّهُمُ الَّیْلُ ۖۚ— نَسْلَخُ مِنْهُ النَّهَارَ فَاِذَا هُمْ مُّظْلِمُوْنَ ۟ۙ
ಮತ್ತÄ ರಾತ್ರಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದರಿಂದ ಹಗಲನ್ನು ಸರಿಸುತ್ತೇವೆ. ಆಗ ಹಠಾತ್ತನೆ ಅವರು ಕತ್ತಲಲ್ಲಿ ಸಿಲುಕುತ್ತಾರೆ.
Os Tafssir em língua árabe:
وَالشَّمْسُ تَجْرِیْ لِمُسْتَقَرٍّ لَّهَا ؕ— ذٰلِكَ تَقْدِیْرُ الْعَزِیْزِ الْعَلِیْمِ ۟ؕ
ಮತ್ತು ಸೂರ್ಯನು ತನ್ನ ನಿಶ್ಚಿತ ಗುರಿಯೆಡೆಗೆ ಚಲಿಸುತ್ತಿದ್ದಾನೆ. ಇದು ಪ್ರತಾಪಶಾಲಿಯು, ಸರ್ವಜ್ಞನೂ ಆದ ಅಲ್ಲಾಹನ ನಿಶ್ಚಯವಾಗಿದೆ.
Os Tafssir em língua árabe:
وَالْقَمَرَ قَدَّرْنٰهُ مَنَازِلَ حَتّٰی عَادَ كَالْعُرْجُوْنِ الْقَدِیْمِ ۟
ಮತ್ತು ಚಂದ್ರನಿಗೆ ನಾವು ಹಂತಗಳನ್ನು ನಿಶ್ಚಯಿಸಿದ್ದೇವೆ. ಕೊನೆಗೆ ಅದು ಖರ್ಜೂರ ಮರದ ಹಳೆಯ ಗೊನೆಯಂತಾಗಿ ಬಿಡುತ್ತದೆ.
Os Tafssir em língua árabe:
لَا الشَّمْسُ یَنْۢبَغِیْ لَهَاۤ اَنْ تُدْرِكَ الْقَمَرَ وَلَا الَّیْلُ سَابِقُ النَّهَارِ ؕ— وَكُلٌّ فِیْ فَلَكٍ یَّسْبَحُوْنَ ۟
ಸೂರ್ಯನು ಚಂದ್ರನನ್ನು ಹಿಡಿಯಲಾರನು ಮತ್ತು ರಾತ್ರಿಯು ಹಗಲನ್ನು ದಾಟಿಹೋಗದು. ಸಕಲವೂ ತಮ್ಮ ಕಕ್ಷೆಯಲ್ಲಿ ತೇಲುತ್ತಿವೆ.
Os Tafssir em língua árabe:
وَاٰیَةٌ لَّهُمْ اَنَّا حَمَلْنَا ذُرِّیَّتَهُمْ فِی الْفُلْكِ الْمَشْحُوْنِ ۟ۙ
ನಾವು ಅವರ ಸಂತತಿಗಳನ್ನು ತುಂಬಿದ ಹಡಗಿನಲ್ಲಿ ಹೊತ್ತು ಸಾಗಿಸಿದ್ದು ಅವರಿಗೊಂದು ದೃಷ್ಟಾಂತವಾಗಿದೆ.
Os Tafssir em língua árabe:
وَخَلَقْنَا لَهُمْ مِّنْ مِّثْلِهٖ مَا یَرْكَبُوْنَ ۟
ಮತ್ತು ಅವರು ಸವಾರಿಗಾಗಿ ಉಪಯೋಗಿಸುವ ಅದೇತರಹದ ಬೇರೆ ವಾಹನಗಳನ್ನು ನಾವು ಉಂಟುಮಾಡಿದೆವು.
Os Tafssir em língua árabe:
وَاِنْ نَّشَاْ نُغْرِقْهُمْ فَلَا صَرِیْخَ لَهُمْ وَلَا هُمْ یُنْقَذُوْنَ ۟ۙ
ಮತ್ತು ನಾವು ಇಚ್ಛಿಸುತ್ತಿದ್ದರೆ ಅವರನ್ನು ಮುಳುಗಿಸಿ ಬಿಡುತ್ತಿದ್ದೆವು. ಆಗ ಅವರಿಗೆ ಯಾವ ಮೊರೆ ಕೇಳುವವನು ಇರುತ್ತಿರಲಿಲ್ಲ. ಅವರು ರಕ್ಷಣೆಯನ್ನೂ ಹೊಂದುತ್ತಿರಲಿಲ್ಲ.
Os Tafssir em língua árabe:
اِلَّا رَحْمَةً مِّنَّا وَمَتَاعًا اِلٰی حِیْنٍ ۟
ಆದರೆ ಇದು ನಮ್ಮ ವತಿಯ ಕಾರುಣ್ಯವಾಗಿದೆ ಮತ್ತÄ ಒಂದು ನಿಶ್ಚಿತ ಕಾಲದವರೆಗೆ ನಾವು ಅವರಿಗೆ ಸುಖ ಸೌಕರ್ಯಗಳನ್ನು ನೀಡುತ್ತೇವೆ.
Os Tafssir em língua árabe:
وَاِذَا قِیْلَ لَهُمُ اتَّقُوْا مَا بَیْنَ اَیْدِیْكُمْ وَمَا خَلْفَكُمْ لَعَلَّكُمْ تُرْحَمُوْنَ ۟
“ನಿಮ್ಮ ಮುಂದೆ ಮತ್ತು ನಿಮ್ಮ ಹಿಂದೆಯಿರುವ ಯಾತನೆಯ ಬಗ್ಗೆ ಜಾಗೃತರಾಗಿರಿ” ನಿಮ್ಮ ಮೇಲೆ ಅವನು ಕರುಣೆತೋರಬಹುದು ಎಂದು ಅವರೊಂದಿಗೆ ಹೇಳಲಾದರೆ (ಅವರು ಮುಖ ತಿರುಗಿಸುತ್ತಾರೆ )
Os Tafssir em língua árabe:
وَمَا تَاْتِیْهِمْ مِّنْ اٰیَةٍ مِّنْ اٰیٰتِ رَبِّهِمْ اِلَّا كَانُوْا عَنْهَا مُعْرِضِیْنَ ۟
ಮತ್ತು ಅವರ ಪ್ರಭುವಿನ ಕಡೆಯ ದೃಷ್ಟಾಂತಗಳ ಪÉÊಕಿ ಯಾವುದೇ ದೃಷ್ಟಾಂತವು ಅವರೆಡೆಗೆ ಬಂದರೂ ಅವರು ವಿಮುಖರಾಗದೇ ಇರುವುದಿಲ್ಲ.
Os Tafssir em língua árabe:
وَاِذَا قِیْلَ لَهُمْ اَنْفِقُوْا مِمَّا رَزَقَكُمُ اللّٰهُ ۙ— قَالَ الَّذِیْنَ كَفَرُوْا لِلَّذِیْنَ اٰمَنُوْۤا اَنُطْعِمُ مَنْ لَّوْ یَشَآءُ اللّٰهُ اَطْعَمَهٗۤ ۖۗ— اِنْ اَنْتُمْ اِلَّا فِیْ ضَلٰلٍ مُّبِیْنٍ ۟
“ಅಲ್ಲಾಹನು ನಿಮಗೆ ನೀಡಿರುವ ಜೀವನಾಧಾರದಿಂದ ಖರ್ಚುಮಾಡಿರಿ ಎಂದು ಅವರೊಂದಿಗೆ ಹೇಳಲಾದರೆ ಈ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಇಚ್ಛಿಸುತ್ತಿದ್ದರೆ ಸ್ವತಃ ಆಹಾರಕೊಡುತ್ತಿದ್ದನು. 'ನಾವು ಏಕೆ ಅವರಿಗೆ ಆಹಾರ ನೀಡಬೇಕು? ಎಂದು ಹೇಳುತ್ತಾರೆ. ನೀವಂತೂ ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿದ್ದೀರಿ'.
Os Tafssir em língua árabe:
وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟
ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನವು ಯಾವಾಗ ಈಡೇರುವುದು ? ಎಂದು ಅವರು ಕೇಳುತ್ತಾರೆ.
Os Tafssir em língua árabe:
مَا یَنْظُرُوْنَ اِلَّا صَیْحَةً وَّاحِدَةً تَاْخُذُهُمْ وَهُمْ یَخِصِّمُوْنَ ۟
ಅವರು ಒಂದು ಘೋರ ಆರ್ಭಟವನ್ನೇ ನಿರೀಕ್ಷಿಸುತ್ತಿದ್ದಾರೆ. ಅವರು ಪರಸ್ಪರ ಜಗಳವಾಡುತ್ತಿರುವಾಗಲೇ ಅದು ಅವರನ್ನು ಹಿಡಿದುಕೊಳ್ಳಲಿದೆ.
Os Tafssir em língua árabe:
فَلَا یَسْتَطِیْعُوْنَ تَوْصِیَةً وَّلَاۤ اِلٰۤی اَهْلِهِمْ یَرْجِعُوْنَ ۟۠
ಆಗ ಅವರಿಗೆ ಉಯಿಲು ಮಾಡಲಿಕ್ಕಾಗಲಿ, ತಮ್ಮ ಕುಟುಂಬದೆಡೆಗೆ ಮರಳುವುದಕ್ಕಾಗಲಿ ಸಾಧ್ಯವಾಗದು.
Os Tafssir em língua árabe:
وَنُفِخَ فِی الصُّوْرِ فَاِذَا هُمْ مِّنَ الْاَجْدَاثِ اِلٰی رَبِّهِمْ یَنْسِلُوْنَ ۟
ಕಹಳೆ ಊದಲಾದಾಗ ಒಮ್ಮೇಲೆ ಅವರು ಗೋರಿಗಳಿಂದ ತಮ್ಮ ಪ್ರಭುವಿನಡೆದೆ ಧಾವಿಸುವರು.
Os Tafssir em língua árabe:
قَالُوْا یٰوَیْلَنَا مَنْ بَعَثَنَا مِنْ مَّرْقَدِنَا ۣٚۘ— هٰذَا مَا وَعَدَ الرَّحْمٰنُ وَصَدَقَ الْمُرْسَلُوْنَ ۟
ಅವರು ಹೇಳುವರು: ಅಯ್ಯೋ ! ನಮ್ಮ ನಾಶವೇ ! ನಮ್ಮನ್ನು ನಮ್ಮ ಶಯನಗೃಹಗಳಿಂದ ಎಬ್ಬಿಸಿದವರಾರು ?ಇದುವೇ ಪರಮ ದಯಾಮಯನು ವಾಗ್ದಾನ ಮಾಡಿದುದಾಗಿದೆ ಮತ್ತು ಸಂದೇಶವಾಹಕರು ಸತ್ಯವನ್ನೇ ಹೇಳಿದ್ದರು.
Os Tafssir em língua árabe:
اِنْ كَانَتْ اِلَّا صَیْحَةً وَّاحِدَةً فَاِذَا هُمْ جَمِیْعٌ لَّدَیْنَا مُحْضَرُوْنَ ۟
ಅದೊಂದು ಘೋರ ಆರ್ಭಟದ ಹೊರತು ಇನ್ನೇನೂ ಅಲ್ಲ. ಕೂಡಲೇ ಅವರೆಲ್ಲರೂ ನಮ್ಮ ಮುಂದೆ ಹಾಜರುಗೊಳಿಸಲಾಗುವರು.
Os Tafssir em língua árabe:
فَالْیَوْمَ لَا تُظْلَمُ نَفْسٌ شَیْـًٔا وَّلَا تُجْزَوْنَ اِلَّا مَا كُنْتُمْ تَعْمَلُوْنَ ۟
ಇಂದು ಯಾರ ಮೇಲೂ ಒಂದಿಷ್ಟೂ ಅನ್ಯಾಯ ಮಾಡಲಾಗದು ಮತ್ತು ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುವುದು.
Os Tafssir em língua árabe:
اِنَّ اَصْحٰبَ الْجَنَّةِ الْیَوْمَ فِیْ شُغُلٍ فٰكِهُوْنَ ۟ۚ
ಅಂದು ಸ್ವರ್ಗವಾಸಿಗಳು ಸುಖಲೋಲುಪತೆಯಲ್ಲಿ ನಿರತರಾಗಿರುವರು.
Os Tafssir em língua árabe:
هُمْ وَاَزْوَاجُهُمْ فِیْ ظِلٰلٍ عَلَی الْاَرَآىِٕكِ مُتَّكِـُٔوْنَ ۟ۚ
ಅವರು ಮತ್ತು ಅವರ ಪತ್ನಿಯರು ನೆರಳುಗಳಲ್ಲಿ ಅಲಂಕೃತವಾದ ಮಂಚಗಳ ಮೇಲೆ ದಿಂಬುಗಳಿಗೆ ಒರಗಿಕೊಂಡು ಕುಳಿತಿರುವರು.
Os Tafssir em língua árabe:
لَهُمْ فِیْهَا فَاكِهَةٌ وَّلَهُمْ مَّا یَدَّعُوْنَ ۟ۚ
ಅಲ್ಲಿ ಅವರಿಗೆ ಹಣ್ಣು-ಹಂಪಲುಗಳಿರುವುವು ಮತ್ತು ಅವರು ಬಯಸುವುದೆಲ್ಲವೂ ಇರುವುದು.
Os Tafssir em língua árabe:
سَلٰمٌ ۫— قَوْلًا مِّنْ رَّبٍّ رَّحِیْمٍ ۟
ಅವರಿಗೆ ಕರುಣಾನಿಧಿಯಾದ ಪ್ರಭುವಿನ ಕಡೆಯಿಂದ ‘ಸಲಾಮ್'( ಶಾಂತಿ) ಹೇಳಲಾಗುವುದು.
Os Tafssir em língua árabe:
وَامْتَازُوا الْیَوْمَ اَیُّهَا الْمُجْرِمُوْنَ ۟
ಓ ಅಪರಾಧಿಗಳೇ!, ನೀವಿಂದು ಬೇರ್ಪಟ್ಟು ನಿಲ್ಲಿರಿ.
Os Tafssir em língua árabe:
اَلَمْ اَعْهَدْ اِلَیْكُمْ یٰبَنِیْۤ اٰدَمَ اَنْ لَّا تَعْبُدُوا الشَّیْطٰنَ ۚ— اِنَّهٗ لَكُمْ عَدُوٌّ مُّبِیْنٌ ۟ۙ
ಓ ಆದಮ್ ಸಂತತಿಗಳೇ, ನೀವು ಶÉÊತಾನನನ್ನು ಆರಾಧಿಸಬಾರದೆಂದು ನಾನು ನಿಮ್ಮಲ್ಲಿ ಪ್ರತಿಜ್ಞೆ ಪಡೆದಿರಲಿಲ್ಲವೇ? ಖಂಡಿತವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.
Os Tafssir em língua árabe:
وَّاَنِ اعْبُدُوْنِیْ ؔؕ— هٰذَا صِرَاطٌ مُّسْتَقِیْمٌ ۟
ಮತ್ತು ನನ್ನನ್ನು ಆರಾಧಿಸಿರಿ ಇದುವೇ ಖುಜುವಾದ ಮಾರ್ಗವಾಗಿದೆ.
Os Tafssir em língua árabe:
وَلَقَدْ اَضَلَّ مِنْكُمْ جِبِلًّا كَثِیْرًا ؕ— اَفَلَمْ تَكُوْنُوْا تَعْقِلُوْنَ ۟
ನಿಸ್ಸಂಶಯವಾಗಿಯು ನಿಮ್ಮಲ್ಲಿ ಅನೇಕರನ್ನು ಅವನು ದಾರಿಗೆಡಿಸಿದ್ದಾನೆ. ಅದರೂ ನೀವು ಯೋಚಿಸುವುದಿಲ್ಲವೇ?
Os Tafssir em língua árabe:
هٰذِهٖ جَهَنَّمُ الَّتِیْ كُنْتُمْ تُوْعَدُوْنَ ۟
ಇದುವೇ ನಿಮಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದ ನರಕವಾಗಿದೆ.
Os Tafssir em língua árabe:
اِصْلَوْهَا الْیَوْمَ بِمَا كُنْتُمْ تَكْفُرُوْنَ ۟
ನೀವು ನಿಮ್ಮ ಸತ್ಯನಿಷೇಧದ ಫಲವಾಗಿ ಅದರೊಳಗೆ ಪ್ರವೇಶಿಸಿರಿ.
Os Tafssir em língua árabe:
اَلْیَوْمَ نَخْتِمُ عَلٰۤی اَفْوَاهِهِمْ وَتُكَلِّمُنَاۤ اَیْدِیْهِمْ وَتَشْهَدُ اَرْجُلُهُمْ بِمَا كَانُوْا یَكْسِبُوْنَ ۟
ಇಂದು ನಾವು ಅವರ ಬಾಯಿಗಳಿಗೆ ಮುದ್ರೆಯೊತ್ತುವೆವು ಮತ್ತು ಅವರ ಕÉÊಗಳು ನಮ್ಮೊಂದಿಗೆ ಮಾತನಾಡಲಿವೆ ಮತ್ತÄ ಅವರು ಮಾಡುತ್ತಿದ್ದಂತಹ ಕರ್ಮಗಳ ಕುರಿತು ಅವರ ಕಾಲುಗಳು ಸಾಕ್ಷಿವಹಿಸಲಿವೆ.
Os Tafssir em língua árabe:
وَلَوْ نَشَآءُ لَطَمَسْنَا عَلٰۤی اَعْیُنِهِمْ فَاسْتَبَقُوا الصِّرَاطَ فَاَنّٰی یُبْصِرُوْنَ ۟
ನಾವು ಇಚ್ಚಿಸುತ್ತಿದ್ದರೆ ಅವರ ಕಣ್ಣುಗಳನ್ನು ಅಳಿಸಿಬಿಡುತ್ತಿದ್ದೆವು. ತರುವಾಯ ಅವರು ಮಾರ್ಗದಲ್ಲಿ ಮುನ್ನಡೆಯುತ್ತಿದ್ದರೆ ಅವರಿಗೆ ನೋಡಲು ಸಾಧ್ಯವಾಗುವುದಾದರೂ ಹೇಗೆ ?
Os Tafssir em língua árabe:
وَلَوْ نَشَآءُ لَمَسَخْنٰهُمْ عَلٰی مَكَانَتِهِمْ فَمَا اسْتَطَاعُوْا مُضِیًّا وَّلَا یَرْجِعُوْنَ ۟۠
ಮತ್ತು ನಾವು ಇಚ್ಛಿಸುತ್ತಿದ್ದರೆ ಅವರ ಸ್ಥಳದಲ್ಲೇ ಅವರನ್ನು ವಿರೂಪಗೊಳಿಸಿ ಬಿಡುತ್ತಿದ್ದೆವು. ಅನಂತರ ಅವರಿಗೆ ಮುಂದೆ ಚಲಿಸಲಿಕ್ಕೂ, ಹಿಂದೆ ಮರಳಿ ಬರಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.
Os Tafssir em língua árabe:
وَمَنْ نُّعَمِّرْهُ نُنَكِّسْهُ فِی الْخَلْقِ ؕ— اَفَلَا یَعْقِلُوْنَ ۟
ಯಾರಿಗೆ ನಾವು ದೀರ್ಘಾಯುಷ್ಯವನ್ನು ನೀಡುತ್ತೇವೋ ಅವನ ಪ್ರಕೃತಿಯನ್ನು ದೌರ್ಬಲ್ಯದೆಡೆಗೆ ಮರಳಿಸುವೆವು. ಹಾಗಿದ್ದೂ ಅವರು ಅರಿತುಕೊಳ್ಳುವುದಿಲ್ಲವೇ?
Os Tafssir em língua árabe:
وَمَا عَلَّمْنٰهُ الشِّعْرَ وَمَا یَنْۢبَغِیْ لَهٗ ؕ— اِنْ هُوَ اِلَّا ذِكْرٌ وَّقُرْاٰنٌ مُّبِیْنٌ ۟ۙ
ನಾವು ಪೈಗಂಬರರಿಗೆ ಕವನವನ್ನು ಕಲಿಸಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಒಂದು ಉಪದೇಶ ಮತ್ತು ಸÀ್ಪಷ್ಟ ಕುರ್‌ಆನ್ ಮಾತ್ರವಾಗಿದೆ.
Os Tafssir em língua árabe:
لِّیُنْذِرَ مَنْ كَانَ حَیًّا وَّیَحِقَّ الْقَوْلُ عَلَی الْكٰفِرِیْنَ ۟
ಇದು ಜೀವಂತವಾಗಿರುವ ಪ್ರತಿಯೊಬ್ಬ ವ್ಯಕ್ತಿಗೆ ಎಚ್ಚರಿಕೆ ನೀಡಲೆಂದು ಮತ್ತು ಸತ್ಯನಿಷೇಧಿಗಳ ಮೇಲೆ ಶಿಕ್ಷೆಯ ವಚನ ಸಾಬೀತಾಗಲೆಂದಾಗಿದೆ.
Os Tafssir em língua árabe:
اَوَلَمْ یَرَوْا اَنَّا خَلَقْنَا لَهُمْ مِّمَّا عَمِلَتْ اَیْدِیْنَاۤ اَنْعَامًا فَهُمْ لَهَا مٰلِكُوْنَ ۟
ನಾವು ನಮ್ಮ ಕÉÊಗಳಿಂದ ನಿರ್ಮಿಸಲಾದ ವಸ್ತುಗಳ ಪÉÊಕಿ ಅವರಿಗಾಗಿ ಜಾನುವರುಗಳನ್ನು ಸೃಷ್ಟಿಸಿರುವುದನ್ನು ಅವರು ಕಾಣುವುದಿಲ್ಲವೇ ? ಈಗ ಅವರು ಅವುಗಳ ಒಡೆಯರಾಗಿ ಬಿಟ್ಟಿದ್ದಾರೆ.
Os Tafssir em língua árabe:
وَذَلَّلْنٰهَا لَهُمْ فَمِنْهَا رَكُوْبُهُمْ وَمِنْهَا یَاْكُلُوْنَ ۟
ಮತ್ತು ನಾವು ಆ ಜಾನುವಾರುಗಳನ್ನು ಅವರಿಗೆ ವಿಧೇಯಗೊಳಿಸಿದೆವು. ಅವುಗಳಲ್ಲಿ ಕೆಲವು ಅವರ ಸವಾರಿಗಳಾಗಿವೆ ಮತ್ತು ಕೆಲವೊಂದರ ಮಾಂಸವನ್ನು ಅವರು ತಿನ್ನುತ್ತಾರೆ.
Os Tafssir em língua árabe:
وَلَهُمْ فِیْهَا مَنَافِعُ وَمَشَارِبُ ؕ— اَفَلَا یَشْكُرُوْنَ ۟
ಅವರಿಗೆ ಅವುಗಳಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ ಮತ್ತು ಪಾನೀಯವೂ ಇದೆ. ಹಾಗಿದ್ದೂ ಅವರು ಕೃತಜ್ಞತೆ ಸಲ್ಲಿಸುವುದಿಲ್ಲವೇ ?
Os Tafssir em língua árabe:
وَاتَّخَذُوْا مِنْ دُوْنِ اللّٰهِ اٰلِهَةً لَّعَلَّهُمْ یُنْصَرُوْنَ ۟ؕ
ಅವರು ತಮಗೆ ಸಹಾಯ ಲಭಿಸಲಿಕ್ಕಾಗಿ ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ನಿಶ್ಚಯಿಸಿಕೊಂಡಿದ್ದಾರೆ.
Os Tafssir em língua árabe:
لَا یَسْتَطِیْعُوْنَ نَصْرَهُمْ وَهُمْ لَهُمْ جُنْدٌ مُّحْضَرُوْنَ ۟
ಅವರಿಗೆ ಅವರ ಸಹಾಯ ಮಾಡುವ ಸಾಮರ್ಥ್ಯವಿಲ್ಲ. ಬದಲಾಗಿ ಬಹುದೇವಾರಾಧಕರು ಅವರಿಗಾಗಿ ಸರ್ವಸನ್ನಧ್ದ ಸÉÊನ್ಯವಾಗಿದ್ದಾರೆ.
Os Tafssir em língua árabe:
فَلَا یَحْزُنْكَ قَوْلُهُمْ ۘ— اِنَّا نَعْلَمُ مَا یُسِرُّوْنَ وَمَا یُعْلِنُوْنَ ۟
ಆದ್ದರಿಂದ ನಿಮಗೆ ಅವರ ಮಾತು ದುಃಖಕ್ಕೀಡು ಮಾಡದಿರಲಿ. ಅವರು ಅಡಗಿಸಿಡುವುದನ್ನು ಬಹಿರಂಗ ಪಡಿಸುವುದನ್ನು ನಾವು ಚೆನ್ನಾಗಿ ಬಲ್ಲೆವು.
Os Tafssir em língua árabe:
اَوَلَمْ یَرَ الْاِنْسَانُ اَنَّا خَلَقْنٰهُ مِنْ نُّطْفَةٍ فَاِذَا هُوَ خَصِیْمٌ مُّبِیْنٌ ۟
ನಾವು ಮನುಷ್ಯನನ್ನು ವೀರ್ಯದಿಂದ ಸೃಷ್ಟಿಸಿದ್ದೇವೆಂದು ಅವನಿಗೆ ಅರಿವಿಲ್ಲವೇ ? ತರುವಾಯ ಅವನು ಒಮ್ಮೆಲೇ ಜಗಳಗಂಟನಾಗಿ ಬಿಟ್ಟಿದ್ದಾನೆ.
Os Tafssir em língua árabe:
وَضَرَبَ لَنَا مَثَلًا وَّنَسِیَ خَلْقَهٗ ؕ— قَالَ مَنْ یُّحْیِ الْعِظَامَ وَهِیَ رَمِیْمٌ ۟
ಅವನು ನಮಗಾಗಿ ಉಪಮೆಯನ್ನು ಕೊಡುತ್ತಾನೆ ಮತ್ತು ತನ್ನ( ಮೂಲ) ಸೃಷ್ಟಿಯನ್ನು ಮರೆತು ಬಿಟ್ಟಿದ್ದಾನೆ. ಮೂಳೆಗಳು ಶಿಥಿಲವಾದ ಬಳಿಕ ಜೀವಂತಗೊಳಿಸುವವನಾರು ? ಎಂದು ಕೇಳುತ್ತಾನೆ.
Os Tafssir em língua árabe:
قُلْ یُحْیِیْهَا الَّذِیْۤ اَنْشَاَهَاۤ اَوَّلَ مَرَّةٍ ؕ— وَهُوَ بِكُلِّ خَلْقٍ عَلِیْمُ ۟ۙ
ಹೇಳಿರಿ ಪ್ರವಾದಿಯವರೇ: ಅದನ್ನು ಮೊದಲ ಬಾರಿಗೆ ಸೃಷ್ಟಿಸಿದವನೆ ಅದನ್ನು ಪುನಃ ಜೀವಂತಗೊಳಿಸುತ್ತಾನೆ. ಅವನು ಸೃಷ್ಟಿಗಳ ಕುರಿತು ಚೆನ್ನಾಗಿ ಬಲ್ಲನು.
Os Tafssir em língua árabe:
١لَّذِیْ جَعَلَ لَكُمْ مِّنَ الشَّجَرِ الْاَخْضَرِ نَارًا فَاِذَاۤ اَنْتُمْ مِّنْهُ تُوْقِدُوْنَ ۟
ನಿಮಗೆ ಹಸಿರು ಮರದಿಂದ ಬೆಂಕಿಯನ್ನು ಉಂಟು ಮಾಡಿದವನು ಅವನೇ, ಅದರಿಂದ ನೀವು ಬೆಂಕಿ ಉರಿಸುತ್ತೀರಿ.
Os Tafssir em língua árabe:
اَوَلَیْسَ الَّذِیْ خَلَقَ السَّمٰوٰتِ وَالْاَرْضَ بِقٰدِرٍ عَلٰۤی اَنْ یَّخْلُقَ مِثْلَهُمْ ؔؕ— بَلٰی ۗ— وَهُوَ الْخَلّٰقُ الْعَلِیْمُ ۟
ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಇಂತಹವರನ್ನು ಸೃಷ್ಟಿಸಲು ಸಾಮರ್ಥ್ಯವುಳ್ಳವನಲ್ಲವೇ? ಏಕಿಲ್ಲ ಮತ್ತು ಅವನು ಮಹಾ ಸೃಷ್ಟಿಕರ್ತನು, ಎಲ್ಲವನ್ನು ಅರಿಯುವವನು ಆಗಿದ್ದಾನೆ.
Os Tafssir em língua árabe:
اِنَّمَاۤ اَمْرُهٗۤ اِذَاۤ اَرَادَ شَیْـًٔا اَنْ یَّقُوْلَ لَهٗ كُنْ فَیَكُوْنُ ۟
ಅವನು ಯಾವುದಾದರೂ ವಸ್ತುವನ್ನು ಬಯಸಿದರೆ ಅದರೊಂದಿಗೆ' ಆಗು' ಎಂದು ಮಾತ್ರ ಹೇಳುತ್ತಾನೆ. ಅದು ಆಗಿ ಬಿಡುತ್ತದೆ.
Os Tafssir em língua árabe:
فَسُبْحٰنَ الَّذِیْ بِیَدِهٖ مَلَكُوْتُ كُلِّ شَیْءٍ وَّاِلَیْهِ تُرْجَعُوْنَ ۟۠
ಸಕಲ ವಸ್ತುಗಳ ಅಧಿಪತ್ಯವು ಯಾರ ಕÉÊಯ್ಯಲ್ಲಿದೆಯೋ, ಅವನು ಪರಮಪಾವನನು ಮತ್ತು ನೀವು ಅವನೆಡೆಗೇ ಮರಳಿಸಲಾಗುವಿರಿ.
Os Tafssir em língua árabe:
 
Tradução dos significados Surah: Suratu Ya-sin
Índice de capítulos Número de página
 
Tradução dos significados do Nobre Qur’an. - الترجمة الكنادية - بشير ميسوري - Índice de tradução

ترجمة معاني القرآن الكريم إلى اللغة الكنادية ترجمها بشير ميسوري.

Fechar