Check out the new design

Tradução dos significados do Nobre Qur’an. - Tradução Canarim - Bashir Mysore * - Índice de tradução


Tradução dos significados Surah: Al-Araaf   Versículo:

ಅಲ್- ಅಅ್ ರಾಫ್

الٓمّٓصٓ ۟ۚ
ಅಲಿಫ್, ಲಾಮ್, ಮೀಮ್, ಸ್ವಾದ್
Os Tafssir em língua árabe:
كِتٰبٌ اُنْزِلَ اِلَیْكَ فَلَا یَكُنْ فِیْ صَدْرِكَ حَرَجٌ مِّنْهُ لِتُنْذِرَ بِهٖ وَذِكْرٰی لِلْمُؤْمِنِیْنَ ۟
ಇದು ನಿಮ್ಮೆಡೆಗೆ ಅವತೀರ್ಣ ಗೊಳಿಸಲಾದ ದಿವ್ಯ ಗ್ರಂಥವಾಗಿದೆ. ಇದರ ಮೂಲಕ ನೀವು ಎಚ್ಚರಿಕೆ ನೀಡಲೆಂದಾಗಿದೆ. ಆದ್ದರಿಂದ ನಿಮ್ಮ ಹೃದಯದಲ್ಲಿ ಇದರ ನಿಮಿತ್ತ ಯಾವುದೇ ಇಕ್ಕಟ್ಟುಂಟಾಗದಿರಲಿ. ಇದು ಸತ್ಯವಿಶ್ವಾಸಿಗಳಿಗೆ ಉಪದೇಶವಾಗಿದೆ.
Os Tafssir em língua árabe:
اِتَّبِعُوْا مَاۤ اُنْزِلَ اِلَیْكُمْ مِّنْ رَّبِّكُمْ وَلَا تَتَّبِعُوْا مِنْ دُوْنِهٖۤ اَوْلِیَآءَ ؕ— قَلِیْلًا مَّا تَذَكَّرُوْنَ ۟
ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಳಿಸಲಾಗುವುದನ್ನು ನೀವು ಅನುಸರಿಸಿರಿ. ಅವನ ಹೊರತು ಇತರ ಮಿಥ್ಯ ನಾಯಕರನ್ನು ಅನುಸರಿಸಬೇಡಿರಿ. ನೀವು ಉಪದೇಶವನ್ನು ಅಲ್ಪವೇ ಸ್ವೀಕರಿಸುತ್ತೀರಿ.
Os Tafssir em língua árabe:
وَكَمْ مِّنْ قَرْیَةٍ اَهْلَكْنٰهَا فَجَآءَهَا بَاْسُنَا بَیَاتًا اَوْ هُمْ قَآىِٕلُوْنَ ۟
ಮತ್ತು ಅದೆಷ್ಟೋ ನಾಡುಗಳನ್ನು ನಾವು ನಾಶಗೊಳಿಸಿದ್ದೇವೆ ಮತ್ತು ರಾತ್ರಿ ವೇಳೆಯಲ್ಲಿ ಅಥವಾ ಅವರು ಮಧ್ಯಾಹ್ನದ ವೇಳೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅವರ ಮೇಲೆ ನಮ್ಮ ಶಿಕ್ಷೆಯು ಬಂದೆರಗಿಬಿಟ್ಟಿತು.
Os Tafssir em língua árabe:
فَمَا كَانَ دَعْوٰىهُمْ اِذْ جَآءَهُمْ بَاْسُنَاۤ اِلَّاۤ اَنْ قَالُوْۤا اِنَّا كُنَّا ظٰلِمِیْنَ ۟
ನಮ್ಮ ಶಿಕ್ಷೆಯು ಅವರ ಮೇಲೆ ಬಂದಾಗ ಅವರ ಆಕ್ರಂದನವು “ನಿಜವಾಗಿಯು ನಾವು ಅಕ್ರಮಿಗಳಾಗಿದ್ದೆವು” ಎಂಬುದರ ಹೊರತು ಬೇರೇನೂ ಆಗಿರಲಿಲ್ಲ.
Os Tafssir em língua árabe:
فَلَنَسْـَٔلَنَّ الَّذِیْنَ اُرْسِلَ اِلَیْهِمْ وَلَنَسْـَٔلَنَّ الْمُرْسَلِیْنَ ۟ۙ
ಯಾರ ಬಳಿಗೆ ನಾವು ಸಂದೇಶವಾಹಕರನ್ನು ಕಳಿಹಿಸಿರುವೆವೊ ನಾವು ಅವರನ್ನು ಖಂಡಿತ ವಿಚಾರಣೆಗೊಳಪಡಿಸುವೆವು ಮತ್ತು ಸಂದೇಶವಾಹಕರನ್ನೂ ಖಂಡಿತ ವಿಚಾರಣೆಗೊಳಪಡಿಸುವೆವು.
Os Tafssir em língua árabe:
فَلَنَقُصَّنَّ عَلَیْهِمْ بِعِلْمٍ وَّمَا كُنَّا غَآىِٕبِیْنَ ۟
ಅನಂತರ ನಾವು ಸಂಪೂರ್ಣ ಜ್ಞಾನದೊಂದಿಗೆ ಅವರಿಗೆ ಎಲ್ಲವನ್ನು ವಿವರಿಸಿ ಕೊಡುವೆವು ಮತ್ತು ನಾವೆಂದೂ ಅನುಪಸ್ಥಿತರಾಗಿರಲಿಲ್ಲ.
Os Tafssir em língua árabe:
وَالْوَزْنُ یَوْمَىِٕذِ ١لْحَقُّ ۚ— فَمَنْ ثَقُلَتْ مَوَازِیْنُهٗ فَاُولٰٓىِٕكَ هُمُ الْمُفْلِحُوْنَ ۟
ಅಂದು ಕರ್ಮಗಳನ್ನು ನ್ಯಾಯೋಚಿತವಾಗಿ ತೂಗಲಾಗುವುದು ಸತ್ಯವಾಗಿದೆ ಮತ್ತು ಯಾವ ವ್ಯಕ್ತಿಯ ಕರ್ಮ ತಕ್ಕಡಿಯು ಭಾರವಾಗಿರುವುದೋ ಅವರೇ ವಿಜಯಗಳಿಸುವರು.
Os Tafssir em língua árabe:
وَمَنْ خَفَّتْ مَوَازِیْنُهٗ فَاُولٰٓىِٕكَ الَّذِیْنَ خَسِرُوْۤا اَنْفُسَهُمْ بِمَا كَانُوْا بِاٰیٰتِنَا یَظْلِمُوْنَ ۟
ಮತ್ತು ಯಾವ ವ್ಯಕ್ತಿಯ ತಕ್ಕಡಿಯು ಹಗುರವಾಗಿರುವುದೋ ಅವರೆ ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದವರಾಗಿದ್ದಾರೆ. ಇದು ನಮ್ಮ ದೃಷ್ಟಾಂತಗಳೊAದಿಗೆ ಅವರು ಅತಿಕ್ರಮವನ್ನು ತೋರಿಸುತ್ತಿದ್ದುದರ ನಿಮಿತ್ತವಾಗಿದೆ.
Os Tafssir em língua árabe:
وَلَقَدْ مَكَّنّٰكُمْ فِی الْاَرْضِ وَجَعَلْنَا لَكُمْ فِیْهَا مَعَایِشَ ؕ— قَلِیْلًا مَّا تَشْكُرُوْنَ ۟۠
ಮತ್ತು ನಿಸ್ಸಂದೇಹವಾಗಿಯೂ ನಾವು ನಿಮಗೆ ಭೂಮಿಯಲ್ಲಿ ವಾಸಸ್ಥಾನವನ್ನು ಮತ್ತು ಅದರಲ್ಲಿ ನಿಮಗೆ ಜೀವನೋಪಾಯಗಳನ್ನು ಮಾಡಿಕೊಟ್ಟೆವು ಆದರೆ ನೀವು ಅತ್ಯಲ್ಪವೇ ಕೃತಜ್ಞತೆ ತೋರುತ್ತೀರಿ.
Os Tafssir em língua árabe:
وَلَقَدْ خَلَقْنٰكُمْ ثُمَّ صَوَّرْنٰكُمْ ثُمَّ قُلْنَا لِلْمَلٰٓىِٕكَةِ اسْجُدُوْا لِاٰدَمَ ۖۗ— فَسَجَدُوْۤا اِلَّاۤ اِبْلِیْسَ ؕ— لَمْ یَكُنْ مِّنَ السّٰجِدِیْنَ ۟
ಖಂಡಿತವಾಗಿಯು ನಾವು ನಿಮ್ಮನ್ನು ಸೃಷ್ಟಿಸಿದೆವು ಮತ್ತು ನಿಮಗೆ ರೂಪವನ್ನು ನೀಡಿದೆವು. ನಂತರ ನಾವು ಆದಮರಿಗೆ ಸಾಷ್ಟಾಂಗವೆರಗಿರಿ. ಎಂದು ದೇವಚರರೊಂದಿಗೆ ಹೇಳಿದೆವು. ಆಗ ಅವರು ಸಾಷ್ಟಾಂಗವೆರಗಿದರು,; ಇಬ್ಲೀಸನ ಹೊರತು. ಅವನು ಸಾಷ್ಟಾಂಗವೆರಗುವವರಲ್ಲಿ ಸೇರಲಿಲ್ಲ.
Os Tafssir em língua árabe:
 
Tradução dos significados Surah: Al-Araaf
Índice de capítulos Número de página
 
Tradução dos significados do Nobre Qur’an. - Tradução Canarim - Bashir Mysore - Índice de tradução

Tradução feita pelo Sheikh Bashir Maisuri. Desenvolvida sob a supervisão do Centro de mestres em Tradução.

Fechar