Ibisobanuro bya qoran ntagatifu - الترجمة الكنادية - بشير ميسوري * - Ishakiro ry'ibisobanuro


Ibisobanuro by'amagambo Isura: Al Anbiya’u (Abahanuzi),   Umurongo:

ಸೂರ ಅಲ್ ಅಂಬಿಯಾ

اِقْتَرَبَ لِلنَّاسِ حِسَابُهُمْ وَهُمْ فِیْ غَفْلَةٍ مُّعْرِضُوْنَ ۟ۚ
ಜನರ ಲೆಕ್ಕಾಚಾರದ ಸಮಯವು ಸಮೀಪಿಸಿದೆ. ಅದಾಗ್ಯೂ ಅವರು ಅಲಕ್ಷö್ಯತೆಯಿಂದ ವಿಮುಖರಾಗುತ್ತಿದ್ದಾರೆ.
Ibisobanuro by'icyarabu:
مَا یَاْتِیْهِمْ مِّنْ ذِكْرٍ مِّنْ رَّبِّهِمْ مُّحْدَثٍ اِلَّا اسْتَمَعُوْهُ وَهُمْ یَلْعَبُوْنَ ۟ۙ
ಅವರ ಬಳಿಗೆ ಅವರ ಪ್ರಭುವಿನ ಕಡೆಯಿಂದ ಯಾವುದೇ ಹೊಸ ಉಪದೇಶವು ಬಂದರೆ ಅದನ್ನು ಅವರು ಆಟ-ವಿನೋದದಲ್ಲಿಯೇ ಆಲಿಸುತ್ತಾರೆ.
Ibisobanuro by'icyarabu:
لَاهِیَةً قُلُوْبُهُمْ ؕ— وَاَسَرُّوا النَّجْوَی ۖۗ— الَّذِیْنَ ظَلَمُوْا ۖۗ— هَلْ هٰذَاۤ اِلَّا بَشَرٌ مِّثْلُكُمْ ۚ— اَفَتَاْتُوْنَ السِّحْرَ وَاَنْتُمْ تُبْصِرُوْنَ ۟
ಅವರ ಹೃದಯಗಳು ಅಲಕ್ಷö್ಯವಾಗಿವೆ. ಇವನು ನಿಮ್ಮಂತಹ ಒಬ್ಬ ಮನುಷ್ಯನಲ್ಲವೆ? ನೀವು ಕಣ್ಣಾರೆ ಕಾಣುತ್ತಾ ಜಾದೂವಿಗೆ ಗುರಿಯಾಗುತ್ತಿರುವಿರಾ? ಎಂದು ಅಕ್ರಮಿಗಳು ರಹಸ್ಯವಾಗಿ ಸಮಾಲೋಚನೆಯನ್ನು ಮಾಡಿದರು.
Ibisobanuro by'icyarabu:
قٰلَ رَبِّیْ یَعْلَمُ الْقَوْلَ فِی السَّمَآءِ وَالْاَرْضِ ؗ— وَهُوَ السَّمِیْعُ الْعَلِیْمُ ۟
ಪೈಗಂಬರ್ ಹೇಳಿದರು: ನನ್ನ ಪ್ರಭು ಆಕಾಶದಲ್ಲೂ, ಭೂಮಿಯಲ್ಲೂ ಇರುವ ಸಕಲ ಮಾತುಗಳನ್ನೂ ಚೆನ್ನಾಗಿ ಅರಿಯುತ್ತಾನೆ ಮತ್ತು ಅವನು ಸರ್ವವನ್ನಾಲಿಸುವವನೂ, ಸರ್ವಜ್ಞನೂ ಆಗಿದ್ದಾನೆ.
Ibisobanuro by'icyarabu:
بَلْ قَالُوْۤا اَضْغَاثُ اَحْلَامٍ بَلِ افْتَرٰىهُ بَلْ هُوَ شَاعِرٌ ۖۚ— فَلْیَاْتِنَا بِاٰیَةٍ كَمَاۤ اُرْسِلَ الْاَوَّلُوْنَ ۟
ಆ ಅಕ್ರಮಿಗಳು ಹೀಗೂ ಹೇಳುತ್ತಾರೆ: ಇದು (ಕುರ್‌ಆನ್) ನಿರರ್ಥಕ ಕನಸುಗಳಾಗಿವೆ. ಹಾಗಲ್ಲ, ಅವನು ಇದನ್ನು ಸ್ವತಃ ರಚಿಸಿದ್ದಾನೆ. ಇಲ್ಲ, ಅವನೊಬ್ಬ ಕವಿಯಾಗಿದ್ದಾನೆ. ಅನ್ಯಥಾ ಅವನು ಹಿಂದಿನ ಪೈಗಂಬರರು ದೃಷ್ಟಾಂತಗಳೊAದಿಗೆ ಕಳುಹಿಸಲ್ಪಟ್ಟಂತೇ ಇವನು ನಮ್ಮಲ್ಲಿಗೂ ಒಂದು ದೃಷ್ಟಾಂತವನ್ನು ತರಲಿ.
Ibisobanuro by'icyarabu:
مَاۤ اٰمَنَتْ قَبْلَهُمْ مِّنْ قَرْیَةٍ اَهْلَكْنٰهَا ۚ— اَفَهُمْ یُؤْمِنُوْنَ ۟
ಇವರಿಗಿಂತ ಮೊದಲು ನಾವು ನಾಶಪಡಿಸಿದ ನಾಡಿನವರು ವಿಶ್ವಾಸವಿರಿಸಲಿಲ್ಲ. ಇನ್ನು ಇವರು ವಿಶ್ವಾಸವಿರಿಸುವರೇ?
Ibisobanuro by'icyarabu:
وَمَاۤ اَرْسَلْنَا قَبْلَكَ اِلَّا رِجَالًا نُّوْحِیْۤ اِلَیْهِمْ فَسْـَٔلُوْۤا اَهْلَ الذِّكْرِ اِنْ كُنْتُمْ لَا تَعْلَمُوْنَ ۟
(ಓ ಸಂದೇಶವಾಹಕರೇ) ನಿಮಗಿಂತ ಮೊದಲು ನಾವು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸಿದ್ದೆವು. ಅವರೆಡೆಗೆ ದಿವ್ಯವಾಣಿ ಮಾಡುತ್ತಿದೆವು. ನಿಮಗೆ (ಬಹುದೇವಾರಾಧಕರಿಗೆ) ಜ್ಞಾನವಿಲ್ಲದಿದ್ದರೆ ಗ್ರಂಥದವರೊAದಿಗೆ ವಿಚಾರಿಸಿರಿ.
Ibisobanuro by'icyarabu:
وَمَا جَعَلْنٰهُمْ جَسَدًا لَّا یَاْكُلُوْنَ الطَّعَامَ وَمَا كَانُوْا خٰلِدِیْنَ ۟
ನಾವು ಅವರಿಗೆ ಅಹಾರವನ್ನು ಸೇವಿಸದಂತಹ ಶರೀರವನ್ನು ಮಾಡಿರಲಿಲ್ಲ ಮತ್ತು ಅವರು ಶಾಶ್ವತರೂ ಆಗಿರಲಿಲ್ಲ.
Ibisobanuro by'icyarabu:
ثُمَّ صَدَقْنٰهُمُ الْوَعْدَ فَاَنْجَیْنٰهُمْ وَمَنْ نَّشَآءُ وَاَهْلَكْنَا الْمُسْرِفِیْنَ ۟
ಅನಂತರ ನಾವು ಅವರೊಂದಿಗೆ ಮಾಡಿದ ವಾಗ್ದಾನವನ್ನು ಪೂರ್ಣಗೊಳಿಸಿದೆವು. ನಾವು ಅವರನ್ನೂ ಮತ್ತು ನಾವಿಚ್ಛಿಸಿದ ಇತರರನ್ನು ರಕ್ಷಿಸಿದೆವು ಮತ್ತು ಮಿತಿಮೀರಿದವರನ್ನು ನಾಶ ಪಡಿಸಿದೆವು.
Ibisobanuro by'icyarabu:
لَقَدْ اَنْزَلْنَاۤ اِلَیْكُمْ كِتٰبًا فِیْهِ ذِكْرُكُمْ ؕ— اَفَلَا تَعْقِلُوْنَ ۟۠
ನಿಶ್ಚಯವಾಗಿಯೂ ನಾವು ನಿಮ್ಮೆಡೆಗೆ ನಿಮ್ಮದೇ ಪ್ರಾಸ್ತಾವವಿರುವಂತಹ ಒಂದು ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ನಿಮಗೆ ಉದ್ಬೋಧವಿದೆ. ಹಾಗಿದ್ದೂ ನೀವು ವಿವೇಚಿಸಿಕೊಳ್ಳುವುದಿಲ್ಲವೇ?
Ibisobanuro by'icyarabu:
وَكَمْ قَصَمْنَا مِنْ قَرْیَةٍ كَانَتْ ظَالِمَةً وَّاَنْشَاْنَا بَعْدَهَا قَوْمًا اٰخَرِیْنَ ۟
ಅಕ್ರಮಿಯಾಗಿದ್ದಂತಹ ಅದೆಷ್ಟೋ ನಾಡುಗಳನ್ನು ನಾವು ಧ್ವಂಸಗೊಳಿಸಿ ಬಿಟ್ಟಿರುವೆವು ಮತ್ತು ಅವರ ನಂತರ ಇತರ ಜನಾಂಗಗಳನ್ನು ಸೃಷಿಸಿದೆವು.
Ibisobanuro by'icyarabu:
فَلَمَّاۤ اَحَسُّوْا بَاْسَنَاۤ اِذَا هُمْ مِّنْهَا یَرْكُضُوْنَ ۟ؕ
ಅವರು ನಮ್ಮ ಶಿಕ್ಷೆಯನ್ನು ಅನುಭವಿಸಿದಾಗ ಕೂಡಲೇ ಅದರಿಂದ ಓಡತೊಡಗಿದರು.
Ibisobanuro by'icyarabu:
لَا تَرْكُضُوْا وَارْجِعُوْۤا اِلٰی مَاۤ اُتْرِفْتُمْ فِیْهِ وَمَسٰكِنِكُمْ لَعَلَّكُمْ تُسْـَٔلُوْنَ ۟
ಓಡಬೇಡಿರಿ, ನೀವು ಸುಖಿಸುತ್ತಿದ್ದ ಸುಖ ಭೋಗದೆಡೆಗೆ ಮತ್ತು ನಿಮ್ಮ ಮನೆಗಳೆಡೆ ಮರಳಿರಿ. ನೀವು ವಿಚಾರಿಸಲ್ಪಡಲೂಬಹುದು
Ibisobanuro by'icyarabu:
قَالُوْا یٰوَیْلَنَاۤ اِنَّا كُنَّا ظٰلِمِیْنَ ۟
ಅವರು ಹೇಳತೊಡಗಿದರು. ಅಯ್ಯೋ ನಮ್ಮ ದುರ್ಗತಿಯೇ, ನಿಸ್ಸಂಶಯವಾಗಿಯೂ ನಾವು ಅಕ್ರಮಗಿಳಾಗಿದ್ದೆವು.
Ibisobanuro by'icyarabu:
فَمَا زَالَتْ تِّلْكَ دَعْوٰىهُمْ حَتّٰی جَعَلْنٰهُمْ حَصِیْدًا خٰمِدِیْنَ ۟
ಅನಂತರ ಅವರು ಇದೇ ರೀತಿ ಕೂಗುತ್ತಿದ್ದರು. ಕೊನೆಗೆ ನಾವು ಅವರನ್ನು ಬುಡದಿಂದಲೇ ಕೊಯ್ಯಲಾದ ಫಸಲು ಮತ್ತು ನಂದಿಹೋದ ಅಗ್ನಿಯಂತೆ ಮಾಡಿ ಬಿಟ್ಟೆವು.
Ibisobanuro by'icyarabu:
وَمَا خَلَقْنَا السَّمَآءَ وَالْاَرْضَ وَمَا بَیْنَهُمَا لٰعِبِیْنَ ۟
ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವೆರಡರ ನಡುವೆಯಿರುವ ವಸ್ತುಗಳನ್ನು ಆಟ ವಿನೋದಕ್ಕಾಗಿ ಸೃಷ್ಟಿಸಿರುವುದಿಲ್ಲ.
Ibisobanuro by'icyarabu:
لَوْ اَرَدْنَاۤ اَنْ نَّتَّخِذَ لَهْوًا لَّاتَّخَذْنٰهُ مِنْ لَّدُنَّاۤ ۖۗ— اِنْ كُنَّا فٰعِلِیْنَ ۟
ನಾವು ಆಟ-ವಿನೋದಕ್ಕಾಗಿ ನಿಶ್ಚಯಿಸಲು ಇಚ್ಛಿಸಿರುತ್ತಿದ್ದರೆ ಖಂಡಿತವಾಗಿಯೂ ನಾವು ಅದನ್ನು ನಮ್ಮ ಬಳಿಯೇ ಮಾಡಿಕೊಳ್ಳುತ್ತಿದ್ದೆವು. ನಾವು ಹಾಗೆ ಮಾಡುವವರೇ ಆಗಿದ್ದರೆ.
Ibisobanuro by'icyarabu:
بَلْ نَقْذِفُ بِالْحَقِّ عَلَی الْبَاطِلِ فَیَدْمَغُهٗ فَاِذَا هُوَ زَاهِقٌ ؕ— وَلَكُمُ الْوَیْلُ مِمَّا تَصِفُوْنَ ۟
ಹಾಗಲ್ಲ. ನಾವು ಸತ್ಯವನ್ನು ಮಿಥ್ಯದ ಮೇಲೆ ಹೊಡೆಯುತ್ತೇವೆ ಆಗ ಅದು ಮಿಥ್ಯದ ತಲೆಯನ್ನು ಹೊಡೆದುಬಿಡುತ್ತದೆ. ಮತ್ತು ಅದು ನೋಡು ನೋಡುತ್ತಲೇ ನಾಶವಾಗಿಬಿಡುತ್ತದೆ. ನೀವು ಉಂಟುಮಾಡುತ್ತಿರುವ ಮಾತುಗಳಿಂದಲೇ ನಿಮಗೆ ವಿನಾಶ ಕಾದಿದೆ.
Ibisobanuro by'icyarabu:
وَلَهٗ مَنْ فِی السَّمٰوٰتِ وَالْاَرْضِ ؕ— وَمَنْ عِنْدَهٗ لَا یَسْتَكْبِرُوْنَ عَنْ عِبَادَتِهٖ وَلَا یَسْتَحْسِرُوْنَ ۟ۚ
ಭೂಮಿ ಆಕಾಶಗಳಲ್ಲಿರುವುದೆಲ್ಲವು ಅಲ್ಲಾಹನದ್ದಾಗಿದೆ ಮತ್ತು ಅವನ ಸನ್ನಿಧಿಯಲ್ಲಿರುವವರು ಅವನ ಆರಾಧನೆಯಿಂದ ದರ್ಪ ತೋರುವುದಿಲ್ಲ ಹಾಗೂ ದಣಿಯುವುದೂ ಇಲ್ಲ.
Ibisobanuro by'icyarabu:
یُسَبِّحُوْنَ الَّیْلَ وَالنَّهَارَ لَا یَفْتُرُوْنَ ۟
ಅವರು ಹಗಲು, ರಾತ್ರಿ ಅವನ ಪಾವಿತ್ರö್ಯವನ್ನು ಸ್ತುತಿಸುತ್ತಾರೆ ಮತ್ತು ಅವರು ದಣಿಯುವುದಿಲ್ಲ.
Ibisobanuro by'icyarabu:
اَمِ اتَّخَذُوْۤا اٰلِهَةً مِّنَ الْاَرْضِ هُمْ یُنْشِرُوْنَ ۟
ಏನು ಅವರು ಮಣ್ಣಿನಿಂದ ಮಾಡಿಕೊಂಡಿರುವ ದೇವರುಗಳು ಜೀವ ನೀಡಬಲ್ಲರೇ?
Ibisobanuro by'icyarabu:
لَوْ كَانَ فِیْهِمَاۤ اٰلِهَةٌ اِلَّا اللّٰهُ لَفَسَدَتَا ۚ— فَسُبْحٰنَ اللّٰهِ رَبِّ الْعَرْشِ عَمَّا یَصِفُوْنَ ۟
ಭೂಮಿ ಅಕಾಶಗಳಲ್ಲಿ ಅಲ್ಲಾಹನ ಹೊರತು ಇತರ ದೇವರುಗಳಿರುತ್ತಿದ್ದರೆ ಅವೆರಡೂ ಅವ್ಯವಸ್ಥೆಗೆ ತುತ್ತಾಗುತ್ತಿದ್ದವು. ಆದರೆ ಸಿಂಹಾಸನದ ಪ್ರಭುವಾದ ಅಲ್ಲಾಹನು ಈ ಬಹುದೇವಾರಾಧಕರು ವರ್ಣಿಸುತ್ತಿರುವುದರಿಂದ ಅದೆಷ್ಟೋ ಪವಿತ್ರನು.
Ibisobanuro by'icyarabu:
لَا یُسْـَٔلُ عَمَّا یَفْعَلُ وَهُمْ یُسْـَٔلُوْنَ ۟
ಅವನು ಮಾಡುತ್ತಿರುವ ಕಾರ್ಯಗಳ ಬಗ್ಗೆ ಅವನು ವಿಚಾರಿಸಲ್ಪಡಲಾರನು ಮತ್ತು ಅವರೆಲ್ಲರೂ ವಿಚಾರಿಸಲ್ಪಡುವರು.
Ibisobanuro by'icyarabu:
اَمِ اتَّخَذُوْا مِنْ دُوْنِهٖۤ اٰلِهَةً ؕ— قُلْ هَاتُوْا بُرْهَانَكُمْ ۚ— هٰذَا ذِكْرُ مَنْ مَّعِیَ وَذِكْرُ مَنْ قَبْلِیْ ؕ— بَلْ اَكْثَرُهُمْ لَا یَعْلَمُوْنَ ۙ— الْحَقَّ فَهُمْ مُّعْرِضُوْنَ ۟
ಏನು, ಅವರು ಅಲ್ಲಾಹನ ಹೊರತು ಇತರ ದೇವರುಗಳನ್ನು ಮಾಡಿಕೊಂಡಿದ್ದಾರೆಯೇ? ಅವರೊಂದಿಗೆ ಹೇಳಿ: ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು ನನ್ನೊಡನೆ ಇರುವವರ ಗ್ರಂಥ ಕುರ್‌ಆನ್ ಆಗಿದೆ ಮತ್ತು ನನ್ನ ಮುಂಚಿನವರ ಗ್ರಂಥಗಳೂ ಇವೆ. ವಾಸ್ತವದಲ್ಲಿ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಅರಿಯುವುದಿಲ್ಲ. ಹಾಗಾಗಿ ಅವರು ವಿಮುಖರಾಗಿ ಬಿಟ್ಟಿದ್ದಾರೆ.
Ibisobanuro by'icyarabu:
وَمَاۤ اَرْسَلْنَا مِنْ قَبْلِكَ مِنْ رَّسُوْلٍ اِلَّا نُوْحِیْۤ اِلَیْهِ اَنَّهٗ لَاۤ اِلٰهَ اِلَّاۤ اَنَا فَاعْبُدُوْنِ ۟
ನನ್ನ ಹೊರತು ಇನ್ನಾವ ಆರಾಧ್ಯನೂ ಇಲ್ಲ. ಆದ್ದರಿಂದ ನೀವೆಲ್ಲರೂ ನನ್ನನ್ನು ಮಾತ್ರ ಆರಾಧಿಸಿರಿ ಎಂಬ ದಿವ್ಯ ಸಂದೇಶ ನೀಡದೇ ನಿಮಗಿಂತ ಮುಂಚೆ ನಾವು ಯಾವೊಬ್ಬ ಸಂದೇಶವಾಹಕನನ್ನು ಕಳುಹಿಸಿರುವುದಿಲ್ಲ.
Ibisobanuro by'icyarabu:
وَقَالُوا اتَّخَذَ الرَّحْمٰنُ وَلَدًا سُبْحٰنَهٗ ؕ— بَلْ عِبَادٌ مُّكْرَمُوْنَ ۟ۙ
ಪರಮ ದಯಾಮಯನು ಮಕ್ಕಳನ್ನು ಹೊಂದಿದ್ದಾನೆAದು ಅವರು ಹೇಳುತ್ತಾರೆ. ಅಲ್ಲಾಹನು ಪರಮ ಪಾವನನು. ಅವರು (ಮಲಕ್‌ಗಳು) ಸನ್ಮಾನ್ಯ ದಾಸರಾಗಿದ್ದಾರೆ.
Ibisobanuro by'icyarabu:
لَا یَسْبِقُوْنَهٗ بِالْقَوْلِ وَهُمْ بِاَمْرِهٖ یَعْمَلُوْنَ ۟
ಅವರು ಅಲ್ಲಾಹನ ಎದುರು ಅಡ್ಡ ಮಾತನಾಡುವುದಿಲ್ಲ. ಮಾತ್ರವಲ್ಲ ಅವನ ಆದೇಶದಂತೆ ಕಾರ್ಯವೆಸಗುತ್ತಾರೆ.
Ibisobanuro by'icyarabu:
یَعْلَمُ مَا بَیْنَ اَیْدِیْهِمْ وَمَا خَلْفَهُمْ وَلَا یَشْفَعُوْنَ ۙ— اِلَّا لِمَنِ ارْتَضٰی وَهُمْ مِّنْ خَشْیَتِهٖ مُشْفِقُوْنَ ۟
ಅವರ ಮುಂದೆ ಮತ್ತು ಹಿಂದಿರುವುದನ್ನು ಅವನು ಬಲ್ಲನು ಮತ್ತು ಅಲ್ಲಾಹನು ಸಂತೃಪ್ತನಾಗಿರುವವರ ಹೊರತು ಅವರು ಇನ್ನಾರ ಪರವಾಗಿಯೂ ಶಿಫಾರಸ್ಸು ಮಾಡಲಾರರು ಮತ್ತು ಅವರು ಅವನ ಭಯದಿಂದ ನಡುಗುತ್ತಿರುತ್ತಾರೆ.
Ibisobanuro by'icyarabu:
وَمَنْ یَّقُلْ مِنْهُمْ اِنِّیْۤ اِلٰهٌ مِّنْ دُوْنِهٖ فَذٰلِكَ نَجْزِیْهِ جَهَنَّمَ ؕ— كَذٰلِكَ نَجْزِی الظّٰلِمِیْنَ ۟۠
ಅವರ ಪೈಕಿ ಯಾರಾದರೂ ನಾನು ಅಲ್ಲಾಹನ ಹೊರತು ಆರಾಧ್ಯನಾಗಿರುವೆನು ಎಂದು ಹೇಳುತ್ತಾನೋ ಅವನಿಗೆ ನಾವು ನರಕ ಯಾತನೆಯನ್ನು ನೀಡುವೆವು. ಇದೇ ಪ್ರಕಾರ ನಾವು ಅಕ್ರಮಿಗಳಿಗೆ ಶಿಕ್ಷೆ ನೀಡುತ್ತೇವೆ.
Ibisobanuro by'icyarabu:
اَوَلَمْ یَرَ الَّذِیْنَ كَفَرُوْۤا اَنَّ السَّمٰوٰتِ وَالْاَرْضَ كَانَتَا رَتْقًا فَفَتَقْنٰهُمَا ؕ— وَجَعَلْنَا مِنَ الْمَآءِ كُلَّ شَیْءٍ حَیٍّ ؕ— اَفَلَا یُؤْمِنُوْنَ ۟
ಆಕಾಶಗಳು ಭೂಮಿಯು ಪರಸ್ಪರ ಕೂಡಿಕೊಂಡಿದ್ದವು ನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನು, ಸತ್ಯನಿಷೇಧಿಗಳು ಕಾಣುವುದಿಲ್ಲವೇ? ನಾವು ಪ್ರತಿಯೊಂದು ಜೀವಿಯನ್ನು ನೀರಿನಿಂದ ಉಂಟು ಮಾಡಿರುತ್ತೇವೆ ಹಾಗಿದ್ದೂ ಅವರು ವಿಶ್ವಾಸವಿರಿಸವುದಿಲ್ಲವೇ?
Ibisobanuro by'icyarabu:
وَجَعَلْنَا فِی الْاَرْضِ رَوَاسِیَ اَنْ تَمِیْدَ بِهِمْ وَجَعَلْنَا فِیْهَا فِجَاجًا سُبُلًا لَّعَلَّهُمْ یَهْتَدُوْنَ ۟
ಭೂಮಿಯು ಜನರೊಂದಿಗೆ ವಾಲದಂತೆ ಅದರಲ್ಲಿ ನಾವು ಪರ್ವತಶ್ರೇಣಿಗಳನ್ನು ನಾಟಿರುವೆವು. ಮತ್ತು ಅವರು ಗುರಿ ತಲುಪಲೆಂದು ಅದರಲ್ಲಿ ನಾವು ವಿಶಾಲ ಮಾರ್ಗಗಳನ್ನು ಮಾಡಿದ್ದೇವೆ.
Ibisobanuro by'icyarabu:
وَجَعَلْنَا السَّمَآءَ سَقْفًا مَّحْفُوْظًا ۖۚ— وَّهُمْ عَنْ اٰیٰتِهَا مُعْرِضُوْنَ ۟
ನಾವು ಆಕಾಶವನ್ನು ಸುರಕ್ಷಿತ ಮೇಲ್ಛಾವಣಿಯನ್ನಾಗಿ ಮಾಡಿದ್ದೇವೆ. ಆದರೆ ಅವರು ಅದರ ದೃಷ್ಟಾಂತಗಳ ಬಗ್ಗೆ ನಿರ್ಲಕ್ಷö್ಯರಾಗಿದ್ದಾರೆ.
Ibisobanuro by'icyarabu:
وَهُوَ الَّذِیْ خَلَقَ الَّیْلَ وَالنَّهَارَ وَالشَّمْسَ وَالْقَمَرَ ؕ— كُلٌّ فِیْ فَلَكٍ یَّسْبَحُوْنَ ۟
ಹಗಲು, ರಾತ್ರಿ, ಸೂರ್ಯ ಮತ್ತು ಚಂದ್ರನನ್ನು ಸೃಷ್ಟಿಸಿದವನು ಅವನೇ, ಎಲ್ಲವೂ ತಮ್ಮದೇ ಕಕ್ಷೆಯಲ್ಲಿ ತೇಲುತ್ತಿವೆ.
Ibisobanuro by'icyarabu:
وَمَا جَعَلْنَا لِبَشَرٍ مِّنْ قَبْلِكَ الْخُلْدَ ؕ— اَفَاۡىِٕنْ مِّتَّ فَهُمُ الْخٰلِدُوْنَ ۟
ಹಗಲು, ರಾತ್ರಿ, ಸೂರ್ಯ ಮತ್ತು ಚಂದ್ರನನ್ನು ಸೃಷ್ಟಿಸಿದವನು ಅವನೇ, ಎಲ್ಲವೂ ತಮ್ಮದೇ ಕಕ್ಷೆಯಲ್ಲಿ ತೇಲುತ್ತಿವೆ.
Ibisobanuro by'icyarabu:
كُلُّ نَفْسٍ ذَآىِٕقَةُ الْمَوْتِ ؕ— وَنَبْلُوْكُمْ بِالشَّرِّ وَالْخَیْرِ فِتْنَةً ؕ— وَاِلَیْنَا تُرْجَعُوْنَ ۟
ಪ್ರತಿಯೊಂದು ಜೀವಿಗೂ ಮರಣದ ರುಚಿ ಸವಿಯಬೇಕಾಗಿದೆ. ಮತ್ತು ನಿಮ್ಮನ್ನು ನಾವು ಕಷ್ಟ ಸುಖದಲ್ಲಿ ಪರೀಕ್ಷಿಸುವೆವು. ಕೊನೆಗೆ ನೀವೆಲ್ಲರೂ ನಮ್ಮೆಡೆಗೇ ಮರಳಿಸಲ್ಪಡುವಿರಿ.
Ibisobanuro by'icyarabu:
وَاِذَا رَاٰكَ الَّذِیْنَ كَفَرُوْۤا اِنْ یَّتَّخِذُوْنَكَ اِلَّا هُزُوًا ؕ— اَهٰذَا الَّذِیْ یَذْكُرُ اٰلِهَتَكُمْ ۚ— وَهُمْ بِذِكْرِ الرَّحْمٰنِ هُمْ كٰفِرُوْنَ ۟
ಸತ್ಯ ನಿಷೇಧಿಗಳು ನಿಮ್ಮನ್ನು ಕಂಡಾಗ ನಿಮ್ಮ ದೇವರುಗಳ ಖಂಡನಾತ್ಮಕ ಪ್ರಸ್ತಾಪ ಮಾಡುವವನು ಇವನೇ ಎನು? ಎಂದು ಪರಿಹಾಸ್ಯ ಮಾಡುತ್ತಾರೆ ಮತ್ತು ಅವರಾದರೂ ಪರಮ ದಯಾಮಯನ ಸ್ಮರಣೆಯನ್ನು ನಿರಾಕರಿಸುತ್ತಾರೆ.
Ibisobanuro by'icyarabu:
خُلِقَ الْاِنْسَانُ مِنْ عَجَلٍ ؕ— سَاُورِیْكُمْ اٰیٰتِیْ فَلَا تَسْتَعْجِلُوْنِ ۟
ಮನುಷ್ಯನನ್ನು ದುಡುಕು ಸ್ವಭಾವದವನಾಗಿ ಸೃಷ್ಟಿಸಲಾಗಿದೆ. ಸಧ್ಯದಲ್ಲೇ ನಾನು ನಿಮಗೆ ನನ್ನ ದೃಷ್ಟಾಂತಗಳನ್ನು ತೋರಿಸಿ ಕೊಡಲಿದ್ದೇನೆ. ನೀವು ನನ್ನಲ್ಲಿ (ಯಾತನೆಗಾಗಿ) ಆತುರ ಪಡಬೇಡಿರಿ.
Ibisobanuro by'icyarabu:
وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟
ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನ ಈಡೇರುವುದು ಯಾವಾಗ ಎಂದು ಇವರು ಕೇಳುತ್ತಾರೆ.
Ibisobanuro by'icyarabu:
لَوْ یَعْلَمُ الَّذِیْنَ كَفَرُوْا حِیْنَ لَا یَكُفُّوْنَ عَنْ وُّجُوْهِهِمُ النَّارَ وَلَا عَنْ ظُهُوْرِهِمْ وَلَا هُمْ یُنْصَرُوْنَ ۟
ಸತ್ಯನಿಷೇಧಿಗಳು ತಮ್ಮ ಮುಖಗಳಿಂದಾಗಲೀ, ತಮ್ಮ ಬೆನ್ನುಗಳಿಂದಾಗಲೀ ನರಕಾಗ್ನಿಯನ್ನು ತಡೆಯಲಾಗದ ಮತ್ತು ಸಹಾಯವನ್ನೂ ನೀಡಲಾಗದ ಸಂದರ್ಭವನ್ನು ಅರಿಯುತ್ತಿದ್ದರೆ!
Ibisobanuro by'icyarabu:
بَلْ تَاْتِیْهِمْ بَغْتَةً فَتَبْهَتُهُمْ فَلَا یَسْتَطِیْعُوْنَ رَدَّهَا وَلَا هُمْ یُنْظَرُوْنَ ۟
ಪ್ರಳಯ ಸಮಯವು ಹಠಾತ್ತನೆ ಅವರ ಬಳಿಗೆ ಬಂದೆರಗುವುದು ಮತ್ತು ಅವರನ್ನು ದಿಗ್ಭಾçಂತಗೊಳಿಸುವುದು. ಅನಂತರ ಅವರು ಅದನ್ನು ತಡೆಯಲಾರರು ಮತ್ತು ಅವರಿಗೆ ಕಾಲಾವಕಾಶವೂ ನೀಡಲಾಗದು.
Ibisobanuro by'icyarabu:
وَلَقَدِ اسْتُهْزِئَ بِرُسُلٍ مِّنْ قَبْلِكَ فَحَاقَ بِالَّذِیْنَ سَخِرُوْا مِنْهُمْ مَّا كَانُوْا بِهٖ یَسْتَهْزِءُوْنَ ۟۠
ಓ ಪ್ರವಾದಿ ನಿಮಗಿಂತ ಮುಂಚಿನ ಸಂದೇಶವಾಹಕರೊAದಿಗೂ ಪರಿಹಾಸ್ಯ ಮಾಡಲಾಗಿತ್ತು. ಆದರೆ ಅವರಿಗೆ ಪರಿಹಾಸ್ಯ ಮಾಡುತ್ತಿದ್ದುದ್ದೇ ಆವರಿಸಿ ಬಿಟ್ಟಿತು.
Ibisobanuro by'icyarabu:
قُلْ مَنْ یَّكْلَؤُكُمْ بِالَّیْلِ وَالنَّهَارِ مِنَ الرَّحْمٰنِ ؕ— بَلْ هُمْ عَنْ ذِكْرِ رَبِّهِمْ مُّعْرِضُوْنَ ۟
ಹಗಲು, ರಾತ್ರಿಯಲ್ಲಿ ನಿಮ್ಮನ್ನು ಪರಮ ದಯಾಮಯನಾದ ಅಲ್ಲಾಹನಿಂದ ರಕ್ಷಿಸುವವನಾರು? ಎಂದು ನೀವು ಅವರೊಂದಿಗೆ ಕೇಳಿರಿ. ನಿಜವಾಗಿಯೂ ಅವರು ತಮ್ಮ ಪ್ರಭುವಿನ ಸ್ಮರಣೆಯಿಂದ ವಿಮುಖರಾಗಿದ್ದಾರೆ.
Ibisobanuro by'icyarabu:
اَمْ لَهُمْ اٰلِهَةٌ تَمْنَعُهُمْ مِّنْ دُوْنِنَا ؕ— لَا یَسْتَطِیْعُوْنَ نَصْرَ اَنْفُسِهِمْ وَلَا هُمْ مِّنَّا یُصْحَبُوْنَ ۟
ಏನು! ಅವರಿಗೆ ನಮ್ಮ ಹೊರತು ವಿಪತ್ತುಗಳಿಂದ ತಡೆಯುವಂತಹ ಇತರೆ ದೇವರುಗಳಿದ್ದಾರೆಯೇ? ಅವರು ಸ್ವತಃ ತಮಗೂ ಸಹಾಯ ಮಡಲಾರರು ಮತ್ತು ಅವರಿಗೆ ನಮ್ಮ ಕಡೆಯಿಂದ ಸಹಾಯವು ನೀಡಲಾಗದು.
Ibisobanuro by'icyarabu:
بَلْ مَتَّعْنَا هٰۤؤُلَآءِ وَاٰبَآءَهُمْ حَتّٰی طَالَ عَلَیْهِمُ الْعُمُرُ ؕ— اَفَلَا یَرَوْنَ اَنَّا نَاْتِی الْاَرْضَ نَنْقُصُهَا مِنْ اَطْرَافِهَا ؕ— اَفَهُمُ الْغٰلِبُوْنَ ۟
ವಾಸ್ತವದಲ್ಲಿ ನಾವು ಅವರಿಗೂ, ಅವರ ಪೂರ್ವಿಕರಿಗೂ ಐಹಿಕ ಸುಖಭೂಗವನ್ನು ನೀಡಿರುತ್ತೇವೆ. ಕೊನೆಗೆ ಅವರ ಮೇಲೆ ಆಯುಷ್ಯವು ಸುಧೀರ್ಘವಾಯಿತು. ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಾ ಬರುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಇನ್ನು ಅವರೇ ಮೇಲುಗೈ ಸಾಧಿಸುವರೇ?
Ibisobanuro by'icyarabu:
قُلْ اِنَّمَاۤ اُنْذِرُكُمْ بِالْوَحْیِ ۖؗ— وَلَا یَسْمَعُ الصُّمُّ الدُّعَآءَ اِذَا مَا یُنْذَرُوْنَ ۟
ಹೇಳಿರಿ: ನಾನು ನಿನಗೆ ದಿವ್ಯ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತಿರುವೆನು. ಆದರೆ ಕಿವುಡರಿಗೆ ಎಚ್ಚರಿಕೆ ನೀಡಲಾದಾಗ ಕರೆಯನ್ನು ಕೇಳಿಸಿಕೊಳ್ಳಲಾರರು.
Ibisobanuro by'icyarabu:
وَلَىِٕنْ مَّسَّتْهُمْ نَفْحَةٌ مِّنْ عَذَابِ رَبِّكَ لَیَقُوْلُنَّ یٰوَیْلَنَاۤ اِنَّا كُنَّا ظٰلِمِیْنَ ۟
ಮತ್ತು ಇವರಿಗೆ ನಿನ್ನ ಪ್ರಭುವಿನ ಯಾತನೆಯು ಅಲ್ಪವೂ ಸೊಂಕಿದರೆ ಅವರು ಅಯ್ಯೋ ನಮ್ಮ ದುರ್ಗತಿಯೇ, ನಿಜವಾಗಿಯು ನಾವು ಅಪರಾಧಿಗಳಾಗಿದ್ದೆವು ಎಂದು ಗೋಳಾಡುವರು.
Ibisobanuro by'icyarabu:
وَنَضَعُ الْمَوَازِیْنَ الْقِسْطَ لِیَوْمِ الْقِیٰمَةِ فَلَا تُظْلَمُ نَفْسٌ شَیْـًٔا ؕ— وَاِنْ كَانَ مِثْقَالَ حَبَّةٍ مِّنْ خَرْدَلٍ اَتَیْنَا بِهَا ؕ— وَكَفٰی بِنَا حٰسِبِیْنَ ۟
ಪುನರುತ್ಥಾನದ ದಿನ ನಾವು ನ್ಯಾಯದ ತಕ್ಕಡಿಯನ್ನು ಇರಿಸುವೆವು. ಅ ಬಳಿಕ ಯಾರೊಂದಿಗೂ ಸ್ವಲ್ಪವು ಅನ್ಯಾಯ ಮಾಡಲಾಗದು ಕರ್ಮವು ಒಂದು ಸಾಸಿವೆಯ ಕಾಳಿನಷ್ಟಿದ್ದರೂ ನಾವದನ್ನು ಹಾಜರುಗೊಳಿಸುವೆವು, ಮತ್ತು ಲೆಕ್ಕ ಪರಿಶೋಧಕರಾಗಿ ನಾವೇ ಸಾಕು.
Ibisobanuro by'icyarabu:
وَلَقَدْ اٰتَیْنَا مُوْسٰی وَهٰرُوْنَ الْفُرْقَانَ وَضِیَآءً وَّذِكْرًا لِّلْمُتَّقِیْنَ ۟ۙ
ನಾವು ಮೂಸಾ ಮತ್ತು ಹಾರೂನರಿಗೆ ಸತ್ಯಾಸತ್ಯತೆಯ ಮಾನದಂಡ ಪ್ರಕಾಶ ಹಾಗೂ ಭಯಭಕ್ತಿಯುಳ್ಳವರಿಗೆ ಸ್ಮರಣೆಯು ಆಗಿರುವಂತಹ ಗ್ರಂಥವನ್ನು ದಯಪಾಲಿಸಿರುತ್ತೇವೆ.
Ibisobanuro by'icyarabu:
الَّذِیْنَ یَخْشَوْنَ رَبَّهُمْ بِالْغَیْبِ وَهُمْ مِّنَ السَّاعَةِ مُشْفِقُوْنَ ۟
ಅವರು ತಮ್ಮ ಪ್ರಭುವನ್ನು ಅಗೋಚರವಾಗಿ ಭಯ ಪಡುತ್ತಾರೆ ಮತ್ತು ಪ್ರಳಯ ದಿನದ ಬಗ್ಗೆ ಹೆದರುತ್ತಿರುತ್ತಾರೆ.
Ibisobanuro by'icyarabu:
وَهٰذَا ذِكْرٌ مُّبٰرَكٌ اَنْزَلْنٰهُ ؕ— اَفَاَنْتُمْ لَهٗ مُنْكِرُوْنَ ۟۠
ಈ (ಕುರ್‌ಆನ್) ಅನುಗ್ರಹಿತ ಬೋಧನೆಯನ್ನು ನಾವೇ ಇಳಿಸಿರುತ್ತೇವೆ. ಹಾಗಿದ್ದೂ ನೀವದನ್ನು ನಿರಾಕರಿಸುವಿರಾ?
Ibisobanuro by'icyarabu:
وَلَقَدْ اٰتَیْنَاۤ اِبْرٰهِیْمَ رُشْدَهٗ مِنْ قَبْلُ وَكُنَّا بِهٖ عٰلِمِیْنَ ۟ۚ
ನಿಶ್ಚಯವಾಗಿಯು ಇದಕ್ಕೆ ಮೊದಲು ನಾವು ಇಬ್ರಾಹೀಮರಿಗೆ ಸನ್ಮಾರ್ಗವನ್ನು ದಯಪಾಲಿಸಿದ್ದೆವು. ಮತ್ತು ನಾವು ಅವರ ಸ್ಥಿತಿಗತಿಯ ಬಗ್ಗೆ ನಿಖರ ಜ್ಞಾನವುಳ್ಳರಾಗಿದ್ದೆವು.
Ibisobanuro by'icyarabu:
اِذْ قَالَ لِاَبِیْهِ وَقَوْمِهٖ مَا هٰذِهِ التَّمَاثِیْلُ الَّتِیْۤ اَنْتُمْ لَهَا عٰكِفُوْنَ ۟
ನೀವು ಭಕ್ತಾರಾಧನೆಯಲ್ಲಿ ಕುಳಿತಿರುವಂತಹ ಈ ವಿಗ್ರಹಗಳೇನು ? ಎಂದು ಇಬ್ರಾಹೀಮರವರು ತಮ್ಮ ತಂದೆ ಮತ್ತು ತಮ್ಮ ಜನಾಂಗದೊಡನೆ ಕೇಳಿದ ಸಂದರ್ಭನ್ನು ಸ್ಮರಿಸಿರಿ.
Ibisobanuro by'icyarabu:
قَالُوْا وَجَدْنَاۤ اٰبَآءَنَا لَهَا عٰبِدِیْنَ ۟
ಅವರು ಉತ್ತರಿಸಿದರು: ನಮ್ಮ ಪೂರ್ವಿಕರು ಇವುಗಳನ್ನು ಪೂಜಿಸುತ್ತಿರುವುದಾಗಿ ನಾವು ಕಂಡಿರುವೆವು.
Ibisobanuro by'icyarabu:
قَالَ لَقَدْ كُنْتُمْ اَنْتُمْ وَاٰبَآؤُكُمْ فِیْ ضَلٰلٍ مُّبِیْنٍ ۟
ಆಗ ಇಬ್ರಾಹೀಮರು ಹೇಳಿದರು: ನಿಶ್ಚಯವಾಗಿಯು ನೀವು ಮತ್ತು ನಿಮ್ಮ ಪೂರ್ವಿಕರು ಸ್ಪಷ್ಟ ಪಥಭ್ರಷ್ಟತೆಯಲ್ಲಿದ್ದೀರಿ.
Ibisobanuro by'icyarabu:
قَالُوْۤا اَجِئْتَنَا بِالْحَقِّ اَمْ اَنْتَ مِنَ اللّٰعِبِیْنَ ۟
ಅವರು ಕೇಳಿದರು: ನೀನು ನಮ್ಮ ಬಳಿಗೆ ಸತ್ಯವನ್ನು ತಂದಿರುವೆಯಾ? ಅಥವಾ ಅಪಹಾಸ್ಯ ಮಾಡುತ್ತಿರುವೆಯಾ?
Ibisobanuro by'icyarabu:
قَالَ بَلْ رَّبُّكُمْ رَبُّ السَّمٰوٰتِ وَالْاَرْضِ الَّذِیْ فَطَرَهُنَّ ۖؗ— وَاَنَا عَلٰی ذٰلِكُمْ مِّنَ الشّٰهِدِیْنَ ۟
ಅವರು ಹೇಳಿದರು: ಅಲ್ಲ, ವಾಸ್ತವದಲ್ಲಿ ನಿಮ್ಮ ಪ್ರಭು ಭೂಮಿ, ಆಕಾಶಗಳ ಒಡೆಯನಾಗಿದ್ದಾನೆ. ಅವನು ಅವುಗಳನ್ನು ಸೃಷ್ಟಿಸಿದನು ನಾನು ಇದರ ಮೇಲೆ ಸಾಕ್ಷಿ ನೀಡುತ್ತೇನೆ.
Ibisobanuro by'icyarabu:
وَتَاللّٰهِ لَاَكِیْدَنَّ اَصْنَامَكُمْ بَعْدَ اَنْ تُوَلُّوْا مُدْبِرِیْنَ ۟
ಅಲ್ಲಾಹನ ಆಣೆ, ನೀವು ಹಿಂತಿರುಗಿ ಹೋದ ಬಳಿಕ ನಿಮ್ಮ ವಿಗ್ರಹಗಳೊಂದಿಗೆ ನಾನೊಂದು ತಂತ್ರವನ್ನು ಪ್ರಯೋಗಿಸುವೆನು.
Ibisobanuro by'icyarabu:
فَجَعَلَهُمْ جُذٰذًا اِلَّا كَبِیْرًا لَّهُمْ لَعَلَّهُمْ اِلَیْهِ یَرْجِعُوْنَ ۟
ಅಲ್ಲಾಹನ ಆಣೆ, ನೀವು ಹಿಂತಿರುಗಿ ಹೋದ ಬಳಿಕ ನಿಮ್ಮ ವಿಗ್ರಹಗಳೊಂದಿಗೆ ನಾನೊಂದು ತಂತ್ರವನ್ನು ಪ್ರಯೋಗಿಸುವೆನು.
Ibisobanuro by'icyarabu:
قَالُوْا مَنْ فَعَلَ هٰذَا بِاٰلِهَتِنَاۤ اِنَّهٗ لَمِنَ الظّٰلِمِیْنَ ۟
ಅವರು ಕೇಳಿದರು: ನಮ್ಮ ದೇವರುಗಳಿಗೆ ಈ ಗತಿ ಮಾಡಿದವನಾರು? ಖಂಡಿತವಾಗಿಯೂ ಅವನು ಅಕ್ರಮಿಗಳಲ್ಲಾಗಿರುವನು.
Ibisobanuro by'icyarabu:
قَالُوْا سَمِعْنَا فَتًی یَّذْكُرُهُمْ یُقَالُ لَهٗۤ اِبْرٰهِیْمُ ۟ؕ
ಕೆಲವರು ಹೇಳಿದರು: ಇಬ್ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವುಗಳನ್ನು ಹಿಯ್ಯಾಳಿಸುತ್ತಿರುವುದನ್ನು ನಾವು ಕೇಳಿದ್ದೇವೆ.
Ibisobanuro by'icyarabu:
قَالُوْا فَاْتُوْا بِهٖ عَلٰۤی اَعْیُنِ النَّاسِ لَعَلَّهُمْ یَشْهَدُوْنَ ۟
ಕೆಲವರು ಹೇಳಿದರು: ಇಬ್ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವುಗಳನ್ನು ಹಿಯ್ಯಾಳಿಸುತ್ತಿರುವುದನ್ನು ನಾವು ಕೇಳಿದ್ದೇವೆ.
Ibisobanuro by'icyarabu:
قَالُوْۤا ءَاَنْتَ فَعَلْتَ هٰذَا بِاٰلِهَتِنَا یٰۤاِبْرٰهِیْمُ ۟ؕ
ಅವರು ಕೇಳಿದರು: ನಮ್ಮ ದೇವರುಗಳಿಗೆ ಈ ಗತಿ ಮಾಡಿರುವುದು ನೀನೋ, ಓ ಇಬ್ರಾಹೀಮ್?
Ibisobanuro by'icyarabu:
قَالَ بَلْ فَعَلَهٗ ۖۗ— كَبِیْرُهُمْ هٰذَا فَسْـَٔلُوْهُمْ اِنْ كَانُوْا یَنْطِقُوْنَ ۟
ಅವರು ಉತ್ತರಿಸಿದರು: ಅಲ್ಲ, ಅದನ್ನು ಅವರ ದೊಡ್ಡವನು ಮಾಡಿದ್ದಾನೆ ಅವರು ಮಾತನಾಡುವವ ರಾಗಿದ್ದರೆ ಅವರನ್ನೇ ಕೇಳಿಕೊಳ್ಳಿರಿ.
Ibisobanuro by'icyarabu:
فَرَجَعُوْۤا اِلٰۤی اَنْفُسِهِمْ فَقَالُوْۤا اِنَّكُمْ اَنْتُمُ الظّٰلِمُوْنَ ۟ۙ
ಹಾಗೆಯೇ ಜನರು ತಮ್ಮ ಮನಸ್ಸಿನಲ್ಲಿ ಆಲೋಚಿಸತೊಡಗಿದರು ಮತ್ತು ಪರಸ್ಪರ ತಮ್ಮೊಳಗೇ ಹೇಳಿದರು: (ನಿಸ್ಸಹಾಯಕ ವಿವಷ ವಿಗ್ರಹಗಳನ್ನು ಪೂಜಿಸಿ) ನಿಜವಾಗಿಯೂ ನೀವೇ ಅಕ್ರಮಿಗಳಾಗಿರುವಿರಿ.
Ibisobanuro by'icyarabu:
ثُمَّ نُكِسُوْا عَلٰی رُءُوْسِهِمْ ۚ— لَقَدْ عَلِمْتَ مَا هٰۤؤُلَآءِ یَنْطِقُوْنَ ۟
ಅನಂತರ ಅವರು ತಮ್ಮ ತಲೆಗಳನ್ನು ತಗ್ಗಿಸಿದರು. (ಮತ್ತು ಹೇಳಿದರು): ಇವು ಮಾತನಾಡುವುದಿಲ್ಲವೆಂದು ನಿನಗೆ ಚೆನ್ನಾಗಿ ತಿಳಿದಿದೆ.
Ibisobanuro by'icyarabu:
قَالَ اَفَتَعْبُدُوْنَ مِنْ دُوْنِ اللّٰهِ مَا لَا یَنْفَعُكُمْ شَیْـًٔا وَّلَا یَضُرُّكُمْ ۟ؕ
ಆಗ ಇಬ್ರಾಹೀಮ್ ಹೇಳಿದರು: ನಿಮಗೆ ಯಾವುದೇ ಪ್ರಯೋಜನವನ್ನಾಗಲೀ, ಹಾನಿಯನ್ನಗಲೀ ಉಂಟು ಮಾಡದವುಗಳನ್ನು ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವಿರಾ?
Ibisobanuro by'icyarabu:
اُفٍّ لَّكُمْ وَلِمَا تَعْبُدُوْنَ مِنْ دُوْنِ اللّٰهِ ؕ— اَفَلَا تَعْقِلُوْنَ ۟
ಛೇ, ನಿಮಗೂ, ನೀವು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿರುವವುಗಳಿಗೂ ಧಿಕ್ಕಾರವಿರಲಿ. ನಿಮಗೆ ಇಷ್ಟು ಬುದ್ಧಿಯೂ ಇಲ್ಲವೇ?
Ibisobanuro by'icyarabu:
قَالُوْا حَرِّقُوْهُ وَانْصُرُوْۤا اٰلِهَتَكُمْ اِنْ كُنْتُمْ فٰعِلِیْنَ ۟
ಅವರು ಹೇಳಿದರು: ನೀವೇನಾದರೂ ಮಾಡುವವರಾಗಿದ್ದರೆ. ಇವನನ್ನು ಸುಟ್ಟು ಹಾಕಿರಿ ಹಾಗೂ ನಿಮ್ಮ ದೇವರುಗಳಿಗೆ ನೆರವಾಗಿರಿ.
Ibisobanuro by'icyarabu:
قُلْنَا یٰنَارُ كُوْنِیْ بَرْدًا وَّسَلٰمًا عَلٰۤی اِبْرٰهِیْمَ ۟ۙ
ಅವರು ಹೇಳಿದರು: ನೀವೇನಾದರೂ ಮಾಡುವವರಾಗಿದ್ದರೆ. ಇವನನ್ನು ಸುಟ್ಟು ಹಾಕಿರಿ ಹಾಗೂ ನಿಮ್ಮ ದೇವರುಗಳಿಗೆ ನೆರವಾಗಿರಿ.
Ibisobanuro by'icyarabu:
وَاَرَادُوْا بِهٖ كَیْدًا فَجَعَلْنٰهُمُ الْاَخْسَرِیْنَ ۟ۚ
ಅವರು ಇಬ್ರಾಹೀಮರೊಂದಿಗೆ ದುಷ್ಟತೆಯನ್ನು ಬಯಸಿದ್ದರು. ಆದರೆ ನಾವು ಅವರನ್ನು ಸಂಪೂರ್ಣ ವಿಫಲಗೊಳಿಸಿ ಬಿಟ್ಟೆವು.
Ibisobanuro by'icyarabu:
وَنَجَّیْنٰهُ وَلُوْطًا اِلَی الْاَرْضِ الَّتِیْ بٰرَكْنَا فِیْهَا لِلْعٰلَمِیْنَ ۟
ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.
Ibisobanuro by'icyarabu:
وَوَهَبْنَا لَهٗۤ اِسْحٰقَ ؕ— وَیَعْقُوْبَ نَافِلَةً ؕ— وَكُلًّا جَعَلْنَا صٰلِحِیْنَ ۟
ಮತ್ತು ನಾವು ಇಬ್ರಾಹೀಮರನ್ನೂ ಹಾಗೂ ಲೂತ್‌ರನ್ನೂ ರಕ್ಷಿಸಿ ಸರ್ವಲೋಕದವರಿಗೆ ನಾವು ಸಮೃದ್ಧಿಯನ್ನು ನೀಡಿದ್ದ ಪ್ರದೇಶ (ಸೀರಿಯಾ)ದೆಡೆಗೆ ತಲುಪಿಸಿದೆವು.
Ibisobanuro by'icyarabu:
وَجَعَلْنٰهُمْ اَىِٕمَّةً یَّهْدُوْنَ بِاَمْرِنَا وَاَوْحَیْنَاۤ اِلَیْهِمْ فِعْلَ الْخَیْرٰتِ وَاِقَامَ الصَّلٰوةِ وَاِیْتَآءَ الزَّكٰوةِ ۚ— وَكَانُوْا لَنَا عٰبِدِیْنَ ۟ۙ
ಮತ್ತು ನಾವು ಅವರನ್ನು ನಮ್ಮ ಆದೇಶದಂತೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನಾಯಕರನ್ನಾಗಿ ಮಾಡಿದೆವು ಮತ್ತು ನಾವು ಅವರೆಡೆಗೆ ಒಳಿತುಗಳ ಪಾಲನೆ, ನಮಾಝ್‌ನ ಸಂಸ್ಥಾಪನೆ ಹಾಗೂ ಝಕಾತ್ ಪಾವತಿ ಮಾಡಲಿಕ್ಕೆಂದು ದಿವ್ಯಸಂದೇಶವನ್ನು ನೀಡಿದ್ದೆವು ಮತ್ತು ಅವರು ನಮ್ಮನ್ನು ಆರಾಧಿಸುತ್ತಿದ್ದರು.
Ibisobanuro by'icyarabu:
وَلُوْطًا اٰتَیْنٰهُ حُكْمًا وَّعِلْمًا وَّنَجَّیْنٰهُ مِنَ الْقَرْیَةِ الَّتِیْ كَانَتْ تَّعْمَلُ الْخَبٰٓىِٕثَ ؕ— اِنَّهُمْ كَانُوْا قَوْمَ سَوْءٍ فٰسِقِیْنَ ۟ۙ
ಲೂತರಿಗೆ ನಾವು ವಿವೇಕವನ್ನೂ, ಜ್ಞಾನವನ್ನೂ ದಯಪಾಲಿಸಿದೆವು ಮತ್ತು ನಾವವರನ್ನು ನೀಚಕೃತ್ಯಗಳನ್ನು ಎಸಗುತ್ತಿದ್ದ ನಾಡಿನಿಂದ ರಕ್ಷಿಸಿದೆವು. ನಿಜವಾಗಿಯು ಅವರು ಅತೀ ನಿಕೃಷ್ಟ ಅಪರಾಧಿ ಜನಾಂಗವಾಗಿದ್ದರು.
Ibisobanuro by'icyarabu:
وَاَدْخَلْنٰهُ فِیْ رَحْمَتِنَا ؕ— اِنَّهٗ مِنَ الصّٰلِحِیْنَ ۟۠
ಮತ್ತು ನಾವು ಲೂತ್‌ರನ್ನು ನಮ್ಮ ಕೃಪೆಯಲ್ಲಿ ಸೇರಿಸಿದೆವು. ನಿಸ್ಸಂದೇಹವಾಗಿಯು ಅವರು ಸಜ್ಜನರಲ್ಲಾಗಿದ್ದರು.
Ibisobanuro by'icyarabu:
وَنُوْحًا اِذْ نَادٰی مِنْ قَبْلُ فَاسْتَجَبْنَا لَهٗ فَنَجَّیْنٰهُ وَاَهْلَهٗ مِنَ الْكَرْبِ الْعَظِیْمِ ۟ۚ
ನೂಹರವರು ಇದಕ್ಕೆ ಮೊದಲು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ. ನಾವು ಅವರ ಪ್ರಾರ್ಥನೆಗೆ ಓಗೊಟ್ಟೆವು ಮತ್ತು ಅವರನ್ನು, ಅವರ ಮನೆಯವರನ್ನು ಮಹಾ ವಿಪತ್ತಿನಿಂದ ರಕ್ಷಿಸಿದೆವು.
Ibisobanuro by'icyarabu:
وَنَصَرْنٰهُ مِنَ الْقَوْمِ الَّذِیْنَ كَذَّبُوْا بِاٰیٰتِنَا ؕ— اِنَّهُمْ كَانُوْا قَوْمَ سَوْءٍ فَاَغْرَقْنٰهُمْ اَجْمَعِیْنَ ۟
ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದ ವಿರುದ್ಧ ಸಹಾಯ ನೀಡಿದೆವು. ನಿಜವಾಗಿಯು ಅವರು ಕೆಟ್ಟ ಜನರಾಗಿದ್ದರು.ಆದ್ದರಿಂದ ನಾವು ಅವರೆಲ್ಲರನ್ನು ಮುಳಿಗಿಸಿ ಬಿಟ್ಟೆವು.
Ibisobanuro by'icyarabu:
وَدَاوٗدَ وَسُلَیْمٰنَ اِذْ یَحْكُمٰنِ فِی الْحَرْثِ اِذْ نَفَشَتْ فِیْهِ غَنَمُ الْقَوْمِ ۚ— وَكُنَّا لِحُكْمِهِمْ شٰهِدِیْنَ ۟ۙ
ಮತ್ತು ದಾವೂದ್ ಹಾಗೂ ಸುಲೈಮಾನರು ಒಂದು ಹೊಲದ ಕುರಿತು ತೀರ್ಪು ನೀಡುತ್ತಿದ್ದಂತಹ ಸಂದರ್ಭವನ್ನು ಸ್ಮರಿಸಿರಿ. ಒಂದು ಜನಾಂಗದ ಅಡುಗಳು ಒಂದು ಹೊಲದಲ್ಲಿ ರಾತ್ರಿ ಹೊತ್ತಲ್ಲಿ ಮೇಯ್ದಿದ್ದವು ಮತ್ತು ನಾವು ಅವರ ತೀರ್ಪಿನ ಕುರಿತು ಸಾಕ್ಷಿಯಾಗಿದ್ದೆವು.
Ibisobanuro by'icyarabu:
فَفَهَّمْنٰهَا سُلَیْمٰنَ ۚ— وَكُلًّا اٰتَیْنَا حُكْمًا وَّعِلْمًا ؗ— وَّسَخَّرْنَا مَعَ دَاوٗدَ الْجِبَالَ یُسَبِّحْنَ وَالطَّیْرَ ؕ— وَكُنَّا فٰعِلِیْنَ ۟
ನಾವದರ ಸರಿಯಾದ ತೀರ್ಪನ್ನು ಸುಲೈಮಾನರಿಗೆ ತಿಳಿಸಿಕೊಟ್ಟೆವು. ನಾವು ಇಬ್ಬರಿಗೂ ವಿವೇಕ ಮತ್ತು ಜ್ಞಾನವನ್ನು ದಯಪಾಲಿಸಿದ್ದೆವು ಮತ್ತು ದಾವೂದರವರೊಂದಿಗೆ ಪಾವಿತ್ರö್ಯವನ್ನು ಸ್ತುತಿಸಲಿಕ್ಕಾಗಿ ಪರ್ವತಗಳನ್ನು, ಪಕ್ಷಿಗಳನ್ನು ವಿಧೇಯಗೊಳಿಸಿ ಕೊಟ್ಟೆವು ಮತ್ತು ನಾವು ಹೀಗೆ ಮಾಡುವವರಾಗಿದ್ದೆವು.
Ibisobanuro by'icyarabu:
وَعَلَّمْنٰهُ صَنْعَةَ لَبُوْسٍ لَّكُمْ لِتُحْصِنَكُمْ مِّنْ بَاْسِكُمْ ۚ— فَهَلْ اَنْتُمْ شٰكِرُوْنَ ۟
ನಾವು ದಾವೂದರಿಗೆ ಯುದ್ಧಗಳ ಸಂದರ್ಭದಲ್ಲಿ ನಿಮ್ಮನ್ನು ಅಪಾಯದಿಂದ ರಕ್ಷಿಸಲು ನಿಮಗೋಸ್ಕರ ಎದೆಗವಚ ನಿರ್ಮಾಣ ಕೌಶಲ್ಯವನ್ನು ಕಲಿಸಿಕೊಟ್ಟೆವು. ನೀವು ಕೃತಜ್ಞತೆ ತೋರುವಿರಾ?
Ibisobanuro by'icyarabu:
وَلِسُلَیْمٰنَ الرِّیْحَ عَاصِفَةً تَجْرِیْ بِاَمْرِهٖۤ اِلَی الْاَرْضِ الَّتِیْ بٰرَكْنَا فِیْهَا ؕ— وَكُنَّا بِكُلِّ شَیْءٍ عٰلِمِیْنَ ۟
ಮತ್ತು ಸುಲೈಮಾನರಿಗೆ ಬಿರುಗಾಳಿಯನ್ನು ವಿಧೇಯಗೊಳಿಸಿ ಕೊಟ್ಟೆವು. ಅದು ಅವರ ಆದೇಶದ ಮೇರೆಗೆ ನಾವು ಸಮೃದ್ಧಿ ನೀಡಿದ್ದ ಭೂಮಿಯೆಡೆಗೆ ಸಂಚರಿಸುತ್ತಿತ್ತು ಮತ್ತು ನಾವು ಸಕಲ ವಸ್ತುಗಳ ಜ್ಞಾನವುಳ್ಳವರಾಗಿದ್ದೇವೆ.
Ibisobanuro by'icyarabu:
وَمِنَ الشَّیٰطِیْنِ مَنْ یَّغُوْصُوْنَ لَهٗ وَیَعْمَلُوْنَ عَمَلًا دُوْنَ ذٰلِكَ ۚ— وَكُنَّا لَهُمْ حٰفِظِیْنَ ۟ۙ
ಮತ್ತು ಅನೇಕ ಶೈತಾನರನ್ನು ಅವರಿಗೆ ವಿಧೇಯಗೊಳಿಸಿಕೊಟ್ಟೆವು. ಅವರು ಅವರಿಗಾಗಿ ಮುಳುಗುತ್ತಿದ್ದರು ಮತ್ತು ಇದರ ಹೊರತು. ಅನೇಕ ಕೆಲಸಗಳನ್ನು ಸಹ ಮಾಡಿ ಕೊಡುತ್ತಿದ್ದರು. ಹಾಗೂ ಅವರ ಮೇಲ್ವಿಚಾರಕರು ನಾವೇ ಆಗಿದ್ದೆವು.
Ibisobanuro by'icyarabu:
وَاَیُّوْبَ اِذْ نَادٰی رَبَّهٗۤ اَنِّیْ مَسَّنِیَ الضُّرُّ وَاَنْتَ اَرْحَمُ الرّٰحِمِیْنَ ۟ۚۖ
ಅಯ್ಯೂಬರು ತನ್ನ ಪ್ರಭುವನ್ನು ಕೂಗಿ ಕರೆದ ಸಂದರ್ಭವನ್ನು ಸ್ಮರಿಸಿರಿ. ನನಗೆ ರೋಗ ಬಾಧಿಸಿದೆ ಮತ್ತು ನೀನು ಕರುಣೆ ತೋರುವವರಲ್ಲಿ ಅತ್ಯಂತ ಕರುಣಾಮಯಿಯಾಗಿರುವೆ.
Ibisobanuro by'icyarabu:
فَاسْتَجَبْنَا لَهٗ فَكَشَفْنَا مَا بِهٖ مِنْ ضُرٍّ وَّاٰتَیْنٰهُ اَهْلَهٗ وَمِثْلَهُمْ مَّعَهُمْ رَحْمَةً مِّنْ عِنْدِنَا وَذِكْرٰی لِلْعٰبِدِیْنَ ۟
ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.
Ibisobanuro by'icyarabu:
وَاِسْمٰعِیْلَ وَاِدْرِیْسَ وَذَا الْكِفْلِ ؕ— كُلٌّ مِّنَ الصّٰبِرِیْنَ ۟
ಆಗ ನಾವು ಅವರ ಕರೆಗೆ ಓಗೊಟ್ಟೆವು. ಅವರಿಗಿದ್ದಂತಹ ಸಂಕಷ್ಟಗಳನ್ನು ನೀಗಿಸಿದೆವು ಮತ್ತು ಅವರಿಗೆ ಅವರ ಮನೆಯವರನ್ನೂ ಅವರ ಜೊತೆ ಅವರಷ್ಟೇ ಇನ್ನಷ್ಟು ಮಂದಿಯನ್ನೂ ನಮ್ಮ ಕಾರುಣ್ಯದಿಂದ ದಯಪಾಲಿಸಿದೆವು. ಇದು ಆರಾಧಕರಿಗೆ ಉಪದೇಶವಾಗಿದೆ.
Ibisobanuro by'icyarabu:
وَاَدْخَلْنٰهُمْ فِیْ رَحْمَتِنَا ؕ— اِنَّهُمْ مِّنَ الصّٰلِحِیْنَ ۟
ಮತ್ತು ನಾವು ಅವರನ್ನು ನಮ್ಮ ಕೃಪೆಯಲ್ಲಿ ಪ್ರವೇಶಿಸಿದೆವು. ನಿಸ್ಸಂದೇಹವಾಗಿಯು ಅವರು ಸಜ್ಜನರಲ್ಲಾಗಿದ್ದರು.
Ibisobanuro by'icyarabu:
وَذَا النُّوْنِ اِذْ ذَّهَبَ مُغَاضِبًا فَظَنَّ اَنْ لَّنْ نَّقْدِرَ عَلَیْهِ فَنَادٰی فِی الظُّلُمٰتِ اَنْ لَّاۤ اِلٰهَ اِلَّاۤ اَنْتَ سُبْحٰنَكَ ۖۗ— اِنِّیْ كُنْتُ مِنَ الظّٰلِمِیْنَ ۟ۚۖ
ಮತ್ಸö್ಯದವರನ್ನು (ಪೈಗಂಬರ್ ಯೂನುಸರನ್ನು) ಸ್ಮರಿಸಿರಿ. ಅವರು (ತಮ್ಮ ಜನಾಂಗದಿAದ) ಕುಪಿತರಾಗಿ ಹೊರಟು ಹೋದ ಸಂದರ್ಭ ಮತ್ತು ನಾವು ಅವರನ್ನು ಹಿಡಿಯಲಾರೆವೆಂದು ಅವರು ಭಾವಿಸಿದ್ದರು. ಕೊನೆಗೆ ಅವರು ಅಂಧಕಾರಗಳಲ್ಲಿ ಅಲ್ಲಾಹನನ್ನು ಕೂಗಿ ಕರೆದರು. ಓ ನನ್ನ ಪ್ರಭು ನಿನ್ನ ಹೊರತು ಇನ್ನಾವ ಆರಾಧ್ಯನಿಲ್ಲ. ನೀನು ಪವಿತ್ರನು. ನಿಜವಾಗಿಯೂ ನಾನು ಅಕ್ರಮಿಗಳಲ್ಲಾಗಿದ್ದೆನು.
Ibisobanuro by'icyarabu:
فَاسْتَجَبْنَا لَهٗ ۙ— وَنَجَّیْنٰهُ مِنَ الْغَمِّ ؕ— وَكَذٰلِكَ نُـجِی الْمُؤْمِنِیْنَ ۟
ಮತ್ಸö್ಯದವರನ್ನು (ಪೈಗಂಬರ್ ಯೂನುಸರನ್ನು) ಸ್ಮರಿಸಿರಿ. ಅವರು (ತಮ್ಮ ಜನಾಂಗದಿAದ) ಕುಪಿತರಾಗಿ ಹೊರಟು ಹೋದ ಸಂದರ್ಭ ಮತ್ತು ನಾವು ಅವರನ್ನು ಹಿಡಿಯಲಾರೆವೆಂದು ಅವರು ಭಾವಿಸಿದ್ದರು. ಕೊನೆಗೆ ಅವರು ಅಂಧಕಾರಗಳಲ್ಲಿ ಅಲ್ಲಾಹನನ್ನು ಕೂಗಿ ಕರೆದರು. ಓ ನನ್ನ ಪ್ರಭು ನಿನ್ನ ಹೊರತು ಇನ್ನಾವ ಆರಾಧ್ಯನಿಲ್ಲ. ನೀನು ಪವಿತ್ರನು. ನಿಜವಾಗಿಯೂ ನಾನು ಅಕ್ರಮಿಗಳಲ್ಲಾಗಿದ್ದೆನು.
Ibisobanuro by'icyarabu:
وَزَكَرِیَّاۤ اِذْ نَادٰی رَبَّهٗ رَبِّ لَا تَذَرْنِیْ فَرْدًا وَّاَنْتَ خَیْرُ الْوٰرِثِیْنَ ۟ۚۖ
ಝಕರಿಯ್ಯರನ್ನು ಸ್ಮರಿಸಿರಿ. ಅವರು ತನ್ನ ಪ್ರಭುವನ್ನು ಕೂಗಿ ಪ್ರಾರ್ಥಿಸಿದ ಸಂದರ್ಭ: ಓ ನನ್ನ ಪ್ರಭುವೇ, ನೀನು ನನ್ನನ್ನು ಒಬ್ಬಂಟಿಗನಾಗಿ ಬಿಡಬೇಡ ಮತ್ತು ನೀನೇ ಉತ್ತಮ ವಾರಿಸುದಾರನಾಗಿರುವೆ.
Ibisobanuro by'icyarabu:
فَاسْتَجَبْنَا لَهٗ ؗ— وَوَهَبْنَا لَهٗ یَحْیٰی وَاَصْلَحْنَا لَهٗ زَوْجَهٗ ؕ— اِنَّهُمْ كَانُوْا یُسٰرِعُوْنَ فِی الْخَیْرٰتِ وَیَدْعُوْنَنَا رَغَبًا وَّرَهَبًا ؕ— وَكَانُوْا لَنَا خٰشِعِیْنَ ۟
ಝಕರಿಯ್ಯರನ್ನು ಸ್ಮರಿಸಿರಿ. ಅವರು ತನ್ನ ಪ್ರಭುವನ್ನು ಕೂಗಿ ಪ್ರಾರ್ಥಿಸಿದ ಸಂದರ್ಭ: ಓ ನನ್ನ ಪ್ರಭುವೇ, ನೀನು ನನ್ನನ್ನು ಒಬ್ಬಂಟಿಗನಾಗಿ ಬಿಡಬೇಡ ಮತ್ತು ನೀನೇ ಉತ್ತಮ ವಾರಿಸುದಾರನಾಗಿರುವೆ.
Ibisobanuro by'icyarabu:
وَالَّتِیْۤ اَحْصَنَتْ فَرْجَهَا فَنَفَخْنَا فِیْهَا مِنْ رُّوْحِنَا وَجَعَلْنٰهَا وَابْنَهَاۤ اٰیَةً لِّلْعٰلَمِیْنَ ۟
ತನ್ನ ಶೀಲವನ್ನು ಕಾಪಾಡಿಕೊಂಡ ಆ ಸ್ತಿçà (ಮರ್ಯಮ್)ಯನ್ನು ಸ್ಮರಿಸಿರಿ. ನಾವು ಅವಳ ಒಳಗೆ ನಮ್ಮ ಆತ್ಮದಿಂದ ಊದಿದೆವು ಮತ್ತು ಆಕೆಯನ್ನು, ಆಕೆಯ ಪುತ್ರನನ್ನು ಸರ್ವ ಲೋಕದವರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು.
Ibisobanuro by'icyarabu:
اِنَّ هٰذِهٖۤ اُمَّتُكُمْ اُمَّةً وَّاحِدَةً ۖؗ— وَّاَنَا رَبُّكُمْ فَاعْبُدُوْنِ ۟
ವಾಸ್ತವದಲ್ಲಿ ಈ ನಿಮ್ಮ ಸಮುದಾಯವು ಏಕೈಕ ಸಮುದಾಯವಾಗಿದೆ ಮತ್ತು ನಾನು ನಿಮ್ಮ ಪ್ರಭುವಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಆರಾಧಿಸಿರಿ.
Ibisobanuro by'icyarabu:
وَتَقَطَّعُوْۤا اَمْرَهُمْ بَیْنَهُمْ ؕ— كُلٌّ اِلَیْنَا رٰجِعُوْنَ ۟۠
ಆದರೆ ಅವರು (ಗ್ರಂಥದವರು) ತಮ್ಮ ಧರ್ಮದಲ್ಲಿ ಗುಂಪುಗಳನ್ನು ಕಟ್ಟಿಕೊಂಡರು. ಎಲ್ಲರೂ ನಮ್ಮೆಡೆಗೇ ಮರಳಿ ಬರುವವರಾಗಿದ್ದಾರೆ.
Ibisobanuro by'icyarabu:
فَمَنْ یَّعْمَلْ مِنَ الصّٰلِحٰتِ وَهُوَ مُؤْمِنٌ فَلَا كُفْرَانَ لِسَعْیِهٖ ۚ— وَاِنَّا لَهٗ كٰتِبُوْنَ ۟
ಯಾರು ಸತ್ಯವಿಶ್ವಾಸಿಯಾಗಿದ್ದು ಕೊಂಡು ಸತ್ಕರ್ಮಗಳನ್ನು ಮಾಡುತ್ತನೋ ಅವನ ಪರಿಶ್ರಮವನ್ನು ತಿರಸ್ಕರಿಸಲಾಗದು. ನಾವು ಅದನ್ನು ದಾಖಲಿಸುತ್ತಿದ್ದೇವೆ.
Ibisobanuro by'icyarabu:
وَحَرٰمٌ عَلٰی قَرْیَةٍ اَهْلَكْنٰهَاۤ اَنَّهُمْ لَا یَرْجِعُوْنَ ۟
ಮತ್ತು ನಾವು ನಾಶ ಮಾಡಿರುವ ಯಾವುದೇ ನಾಡಿನ ಜನರು (ಮರಣದ ನಂತರ) ಪುನಃ ಮರಳಿ ಬರುವುದು ಅಸಾಧ್ಯವಾಗಿದೆ.
Ibisobanuro by'icyarabu:
حَتّٰۤی اِذَا فُتِحَتْ یَاْجُوْجُ وَمَاْجُوْجُ وَهُمْ مِّنْ كُلِّ حَدَبٍ یَّنْسِلُوْنَ ۟
ಯಾಜೂಜ್-ಮಾಜೂಜ್‌ರನ್ನು ಬಿಡುಗಡೆಗೊಳಿಸಲ್ಪಡುವ ತನಕ ಅವರ ಪ್ರತಿಯೊಂದು ಎತ್ತರ ಪ್ರದೇಶಗಳಿಂದಲೂ ಧಾವಿಸಿ ಬರುವರು.
Ibisobanuro by'icyarabu:
وَاقْتَرَبَ الْوَعْدُ الْحَقُّ فَاِذَا هِیَ شَاخِصَةٌ اَبْصَارُ الَّذِیْنَ كَفَرُوْا ؕ— یٰوَیْلَنَا قَدْ كُنَّا فِیْ غَفْلَةٍ مِّنْ هٰذَا بَلْ كُنَّا ظٰلِمِیْنَ ۟
ಸತ್ಯಪೂರ್ಣ ವಾಗ್ದಾನದ ಸಮಯ ಸಮೀಪಿಸಿದಾಗ ಸತ್ಯನಿಷೇಧಿಗಳ ದೃಷ್ಟಿಗಳು ದಿಟ್ಟಿಸಿ ನೋಡುತ್ತಿರುವುವು. (ಅವರು ಹೇಳುವರು) ಅಯ್ಯೋ ನಮ್ಮ ದುರ್ಗತಿಯೇ, ನಾವು ಇದರ ಕುರಿತು ಅಲಕ್ಷö್ಯರಾಗಿದ್ದೆವು. ಅಲ್ಲ, ನಾವು ಅಪರಾಧಿಗಳಾಗಿದ್ದೆವು.
Ibisobanuro by'icyarabu:
اِنَّكُمْ وَمَا تَعْبُدُوْنَ مِنْ دُوْنِ اللّٰهِ حَصَبُ جَهَنَّمَ ؕ— اَنْتُمْ لَهَا وٰرِدُوْنَ ۟
ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿದ್ದ ವಸ್ತುಗಳು ನರಕದ ಇಂಧನವಾಗಿವೆ. ನೀವೆಲ್ಲರೂ ಅಲ್ಲಿಗೆ ತಲುಪುವವರಾಗಿರುವಿರಿ.
Ibisobanuro by'icyarabu:
لَوْ كَانَ هٰۤؤُلَآءِ اٰلِهَةً مَّا وَرَدُوْهَا ؕ— وَكُلٌّ فِیْهَا خٰلِدُوْنَ ۟
ಇವು ನೈಜವಾಗಿ ದೇವರುಗಳೇ ಆಗಿರುತ್ತಿದ್ದರೆ, ನರಕಕ್ಕೆ ತಲುಪುತ್ತಿರಲಿಲ್ಲ ಮತ್ತು ಸಕಲರೂ ಅದರಲ್ಲೇ ಶಾಶ್ವತರಾಗಿರುವರು.
Ibisobanuro by'icyarabu:
لَهُمْ فِیْهَا زَفِیْرٌ وَّهُمْ فِیْهَا لَا یَسْمَعُوْنَ ۟
ಅವರು ಅಲ್ಲಿ ಚೀರುತ್ತಿರುವರು ಮತ್ತು ಅದರಲ್ಲಿ ಏನನ್ನೂ ಕೇಳಿಸಿಕೊಳ್ಳಾರರು.
Ibisobanuro by'icyarabu:
اِنَّ الَّذِیْنَ سَبَقَتْ لَهُمْ مِّنَّا الْحُسْنٰۤی ۙ— اُولٰٓىِٕكَ عَنْهَا مُبْعَدُوْنَ ۟ۙ
ನಿಶ್ಚಯವಾಗಿಯೂ ಯಾರಿಗೆ ಮೊದಲೇ ನಮ್ಮಿಂದ ಒಳಿತಿನ ನಿರ್ಧಾರವಾಗಿದೆಯೋ (ಸತ್ಯವಿಶ್ವಾಸಿಗಳು) ಅವರೆಲ್ಲರೂ ನರಕಾಗ್ನಿಯಿಂದ ದೂರ ಇಡಲಾಗುವರು.
Ibisobanuro by'icyarabu:
لَا یَسْمَعُوْنَ حَسِیْسَهَا ۚ— وَهُمْ فِیْ مَا اشْتَهَتْ اَنْفُسُهُمْ خٰلِدُوْنَ ۟ۚ
ಅವರು ಅದರ ಮೆಲುಸದ್ದನ್ನೂ ಕೇಳಲಾರರು ಮತ್ತು ತಮ್ಮ ಮನ ಮೆಚ್ಚುವ ಸ್ಥಳಗಳಲ್ಲಿ ಶಾಶ್ವತವಾಗಿ ಇರುವರು.
Ibisobanuro by'icyarabu:
لَا یَحْزُنُهُمُ الْفَزَعُ الْاَكْبَرُ وَتَتَلَقّٰىهُمُ الْمَلٰٓىِٕكَةُ ؕ— هٰذَا یَوْمُكُمُ الَّذِیْ كُنْتُمْ تُوْعَدُوْنَ ۟
ಅವರನ್ನು (ಪ್ರಳಯ ದಿನದ) ದೊಡ್ಡ ಭೀತಿಯು ದುಃಖಕ್ಕೀಡು ಮಾಡಲಾರದು ಮತ್ತು ಇದುವೇ ನಿಮಗೆ ವಾಗ್ದಾನ ನೀಡಲಾಗುತ್ತಿದ್ದ ದಿನವಾಗಿದೆ ಎಂದು ಮಲಕ್‌ಗಳು ಅವರನ್ನು ಬರಮಾಡಿ ಕೊಳ್ಳವರು.
Ibisobanuro by'icyarabu:
یَوْمَ نَطْوِی السَّمَآءَ كَطَیِّ السِّجِلِّ لِلْكُتُبِ ؕ— كَمَا بَدَاْنَاۤ اَوَّلَ خَلْقٍ نُّعِیْدُهٗ ؕ— وَعْدًا عَلَیْنَا ؕ— اِنَّا كُنَّا فٰعِلِیْنَ ۟
ಬರೆದ ಹಾಳೆಗಳನ್ನು ಸುರುಳಿ ಸುತ್ತುವಂತೆ ನಾವು ಆಕಾಶವನ್ನು ಸುತ್ತಿಬಿಡುವ ದಿನ. ನಾವು ಮೊದಲ ಬಾರಿ ಸೃಷ್ಟಿಯನ್ನು ಆರಂಭಿಸಿದAತೆಯೇ ಅದನ್ನು ಪುನರಾವರ್ತಿಸುವೆವು. ಇದು ನಮ್ಮ ಮೇಲೆ ಹೊಣೆಯಾಗಿರುವ ವಾಗ್ದಾನವಾಗಿದೆ. ನಿಶ್ಚಯವಾಗಿಯೂ ನಾವು ಇದನ್ನು ಮಾಡಿಯೇ ತೀರುವೆವು.
Ibisobanuro by'icyarabu:
وَلَقَدْ كَتَبْنَا فِی الزَّبُوْرِ مِنْ بَعْدِ الذِّكْرِ اَنَّ الْاَرْضَ یَرِثُهَا عِبَادِیَ الصّٰلِحُوْنَ ۟
ನಾವು ಝಬೂರ್‌ನಲ್ಲಿ ಉಪದೇಶಗಳ ನಂತರ ಹೀಗೆ ದಾಖಲಿಸಿದ್ದೇವೆ. ಭೂಮಿಯ ವಾರೀಸುದಾರರು ನನ್ನ ಸಜ್ಜನ ದಾಸರಾಗುವರು.
Ibisobanuro by'icyarabu:
اِنَّ فِیْ هٰذَا لَبَلٰغًا لِّقَوْمٍ عٰبِدِیْنَ ۟ؕ
ಖಂಡಿತವಾಗಿಯೂ ಇದರಲ್ಲಿ (ಕುರ್‌ಅನ್) ಆರಾಧಕರಾದ ದಾಸರಿಗೆ ಒಂದು ಮಹಾಸಂದೇಶವಿದೆ.
Ibisobanuro by'icyarabu:
وَمَاۤ اَرْسَلْنٰكَ اِلَّا رَحْمَةً لِّلْعٰلَمِیْنَ ۟
(ಓ ಪೈಗಂಬರರೇ) ನಿಮ್ಮನ್ನು ನಾವು ಸರ್ವಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.
Ibisobanuro by'icyarabu:
قُلْ اِنَّمَا یُوْحٰۤی اِلَیَّ اَنَّمَاۤ اِلٰهُكُمْ اِلٰهٌ وَّاحِدٌ ۚ— فَهَلْ اَنْتُمْ مُّسْلِمُوْنَ ۟
ಹೇಳಿರಿ: ನಿಮ್ಮ ದೇವನು ಏಕೈಕ ದೇವನೆಂದು, ನನ್ನೆಡೆ ದಿವ್ಯಸಂದೆಶ ಮಾಡಲಾಗುತ್ತಿದೆ: ನೀವೂ ವಿಧೇಯರಾಗುವಿರಾ?
Ibisobanuro by'icyarabu:
فَاِنْ تَوَلَّوْا فَقُلْ اٰذَنْتُكُمْ عَلٰی سَوَآءٍ ؕ— وَاِنْ اَدْرِیْۤ اَقَرِیْبٌ اَمْ بَعِیْدٌ مَّا تُوْعَدُوْنَ ۟
ಇನ್ನು ಅವರು ವಿಮುಖರಾಗುವುದಾದರೆ ಹೇಳಿರಿ: ನಾನು ನಿಮಗೆ ಸಮಾನ ರೀತಿಯಲ್ಲಿ ಎಚ್ಚರಿಸಿರುವೆನು ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದು (ಯಾತನೆ) ಸಮೀಪವಿದೆಯೋ ಅಥವಾ ದೂರವಿದೆಯೋ ಎಂಬುದನ್ನು ನಾನರಿಯೆನು.
Ibisobanuro by'icyarabu:
اِنَّهٗ یَعْلَمُ الْجَهْرَ مِنَ الْقَوْلِ وَیَعْلَمُ مَا تَكْتُمُوْنَ ۟
ನಿಸ್ಸಂದೇಹವಾಗಿಯೂ ಉಚ್ಛಸ್ವರದಲ್ಲಿ ಹೇಳುವುದನ್ನೂ, ರಹಸ್ಯವಾಗಿ ಹೇಳುವುದನ್ನೂ ಅಲ್ಲಾಹನು ಅರಿಯುತ್ತಾನೆ.
Ibisobanuro by'icyarabu:
وَاِنْ اَدْرِیْ لَعَلَّهٗ فِتْنَةٌ لَّكُمْ وَمَتَاعٌ اِلٰی حِیْنٍ ۟
ನನಗೆ ಇದರ ಅರಿವೂ ಇಲ್ಲ: ಬಹುಶಃ ಈ ವಿಳಂಬ ನಿಮಗೆ ಒಂದು ಪರೀಕ್ಷೆಯಾಗಿರಬಹುದು ಅಥವಾ ಒಂದು ನಿರ್ದಿಷ್ಟ ಸಮಯದವರೆಗೆ ಸುಖ ಭೋಗವಾಗಿರಬಹುದು.
Ibisobanuro by'icyarabu:
قٰلَ رَبِّ احْكُمْ بِالْحَقِّ ؕ— وَرَبُّنَا الرَّحْمٰنُ الْمُسْتَعَانُ عَلٰی مَا تَصِفُوْنَ ۟۠
ಪೈಗಂಬರರು ಹೇಳಿದರು: ಓ ನನ್ನ ಪ್ರಭುವೇ, ನೀನು ನ್ಯಾಯದೊಂದಿಗೆ ತೀರ್ಪು ನೀಡು ಮತ್ತು ನಮ್ಮ ಪ್ರಭು ಪರಮ ದಯಾಮಯನು ನೀವು ಆರೋಪಿಸುತ್ತಿರುವ ಮಾತುಗಳ ಕುರಿತು ಅವನಿಂದಲೇ ಸಹಾಯ ಬೇಡಲಾಗುವುದು.
Ibisobanuro by'icyarabu:
 
Ibisobanuro by'amagambo Isura: Al Anbiya’u (Abahanuzi),
Urutonde rw'amasura numero y'urupapuro
 
Ibisobanuro bya qoran ntagatifu - الترجمة الكنادية - بشير ميسوري - Ishakiro ry'ibisobanuro

ترجمة معاني القرآن الكريم إلى اللغة الكنادية ترجمها بشير ميسوري.

Gufunga