Ibisobanuro bya qoran ntagatifu - الترجمة الكنادية - حمزة بتور * - Ishakiro ry'ibisobanuro

XML CSV Excel API
Please review the Terms and Policies

Ibisobanuro by'amagambo Isura: Yaasiin   Umurongo:

ಸೂರ ಯಾಸೀನ್

یٰسٓ ۟ۚ
ಯಾಸೀನ್.
Ibisobanuro by'icyarabu:
وَالْقُرْاٰنِ الْحَكِیْمِ ۟ۙ
ವಿವೇಕಪೂರ್ಣವಾದ ಕುರ್‌ಆನಿನ ಮೇಲಾಣೆ.
Ibisobanuro by'icyarabu:
اِنَّكَ لَمِنَ الْمُرْسَلِیْنَ ۟ۙ
ನಿಶ್ಚಯವಾಗಿಯೂ ನೀವು ಸಂದೇಶವಾಹಕರುಗಳಲ್ಲಿ ಒಬ್ಬರಾಗಿದ್ದೀರಿ.
Ibisobanuro by'icyarabu:
عَلٰی صِرَاطٍ مُّسْتَقِیْمٍ ۟ؕ
ನೀವು ನೇರ ಮಾರ್ಗದಲ್ಲಿದ್ದೀರಿ.
Ibisobanuro by'icyarabu:
تَنْزِیْلَ الْعَزِیْزِ الرَّحِیْمِ ۟ۙ
ಈ ಕುರ್‌ಆನ್ ಪ್ರಬಲನು ಮತ್ತು ಕರುಣಾನಿಧಿಯಾದ ಅಲ್ಲಾಹನಿಂದ ಅವತೀರ್ಣವಾಗಿದೆ.
Ibisobanuro by'icyarabu:
لِتُنْذِرَ قَوْمًا مَّاۤ اُنْذِرَ اٰبَآؤُهُمْ فَهُمْ غٰفِلُوْنَ ۟
ನೀವು ಈ ಜನರಿಗೆ ಎಚ್ಚರಿಕೆ ನೀಡಲೆಂದು. ಅವರ ಪೂರ್ವಜರಿಗೆ ಯಾರೂ ಎಚ್ಚರಿಕೆ ನೀಡಿಲ್ಲ. ಆದ್ದರಿಂದ ಅವರು ನಿರ್ಲಕ್ಷ್ಯದಲ್ಲಿದ್ದಾರೆ.[1]
[1] ಪ್ರವಾದಿ ಇಸ್ಮಾಈಲರ (ಅವರ ಮೇಲೆ ಶಾಂತಿಯಿರಲಿ) ಬಳಿಕ ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಬೇರೆ ಪ್ರವಾದಿಗಳು ಬಂದಿರಲಿಲ್ಲ. ಆದ್ದರಿಂದ ಅವರು ಸತ್ಯಧರ್ಮದ ಬಗ್ಗೆ ಸಂಪೂರ್ಣ ಅಜ್ಞಾನದಲ್ಲಿದ್ದರು.
Ibisobanuro by'icyarabu:
لَقَدْ حَقَّ الْقَوْلُ عَلٰۤی اَكْثَرِهِمْ فَهُمْ لَا یُؤْمِنُوْنَ ۟
ಅವರಲ್ಲಿ ಹೆಚ್ಚಿನವರ ಮೇಲೂ ಶಿಕ್ಷೆಯ ವಚನವು ಖಾತ್ರಿಯಾಗಿದೆ. ಆದ್ದರಿಂದ ಅವರು ವಿಶ್ವಾಸವಿಡುವುದಿಲ್ಲ.
Ibisobanuro by'icyarabu:
اِنَّا جَعَلْنَا فِیْۤ اَعْنَاقِهِمْ اَغْلٰلًا فَهِیَ اِلَی الْاَذْقَانِ فَهُمْ مُّقْمَحُوْنَ ۟
ನಾವು ಅವರ ಕೊರಳುಗಳಲ್ಲಿ ಸಂಕೋಲೆಗಳನ್ನು ಹಾಕಿದ್ದೇವೆ. ಅದು ಅವರ ಗಲ್ಲಗಳ ತನಕ ಇದೆ. ಆದ್ದರಿಂದ ಅವರು ತಲೆಯೆತ್ತಿಕೊಂಡೇ ಇರುತ್ತಾರೆ.
Ibisobanuro by'icyarabu:
وَجَعَلْنَا مِنْ بَیْنِ اَیْدِیْهِمْ سَدًّا وَّمِنْ خَلْفِهِمْ سَدًّا فَاَغْشَیْنٰهُمْ فَهُمْ لَا یُبْصِرُوْنَ ۟
ನಾವು ಅವರ ಮುಂಭಾಗದಲ್ಲಿ ಒಂದು ಪರದೆಯನ್ನು ಮತ್ತು ಅವರ ಹಿಂಭಾಗದಲ್ಲಿ ಒಂದು ಪರದೆಯನ್ನು ಹಾಕಿ ಅವರನ್ನು ಮುಚ್ಚಿ ಬಿಟ್ಟಿದ್ದೇವೆ. ಆದ್ದರಿಂದ ಅವರಿಗೆ ನೋಡಲು ಸಾಧ್ಯವಾಗುವುದಿಲ್ಲ.
Ibisobanuro by'icyarabu:
وَسَوَآءٌ عَلَیْهِمْ ءَاَنْذَرْتَهُمْ اَمْ لَمْ تُنْذِرْهُمْ لَا یُؤْمِنُوْنَ ۟
ನೀವು ಅವರಿಗೆ ಎಚ್ಚರಿಕೆ ನೀಡಿದರೂ ಅಥವಾ ಎಚ್ಚರಿಕೆ ನೀಡದಿದ್ದರೂ ಅವರ ಮಟ್ಟಿಗೆ ಅದು ಸಮಾನವಾಗಿದೆ. ಅವರು ವಿಶ್ವಾಸವಿಡುವುದಿಲ್ಲ.
Ibisobanuro by'icyarabu:
اِنَّمَا تُنْذِرُ مَنِ اتَّبَعَ الذِّكْرَ وَخَشِیَ الرَّحْمٰنَ بِالْغَیْبِ ۚ— فَبَشِّرْهُ بِمَغْفِرَةٍ وَّاَجْرٍ كَرِیْمٍ ۟
ಯಾರು ನಿಮ್ಮ ಉಪದೇಶವನ್ನು ಅನುಸರಿಸುತ್ತಾನೋ ಮತ್ತು ಪರಮ ದಯಾಳುವಾದ ಅಲ್ಲಾಹನನ್ನು ಅದೃಶ್ಯ ಸ್ಥಿತಿಯಲ್ಲಿ ಭಯಪಡುತ್ತಾನೋ ಅವನಿಗೆ ಮಾತ್ರ ನಿಮ್ಮ ಎಚ್ಚರಿಕೆ ಪ್ರಯೋಜನ ನೀಡುತ್ತದೆ. ಆದ್ದರಿಂದ ಅವನಿಗೆ ಕ್ಷಮೆ ಮತ್ತು ಉದಾರ ಪ್ರತಿಫಲದ ಸುವಾರ್ತೆಯನ್ನು ತಿಳಿಸಿ.
Ibisobanuro by'icyarabu:
اِنَّا نَحْنُ نُحْیِ الْمَوْتٰی وَنَكْتُبُ مَا قَدَّمُوْا وَاٰثَارَهُمْ ؔؕ— وَكُلَّ شَیْءٍ اَحْصَیْنٰهُ فِیْۤ اِمَامٍ مُّبِیْنٍ ۟۠
ನಿಶ್ಚಯವಾಗಿಯೂ ನಾವು ಮೃತರಿಗೆ ಜೀವ ನೀಡುತ್ತೇವೆ. ಅವರು ಮುಂದಕ್ಕೆ ಕಳುಹಿಸಿದ ಕರ್ಮಗಳನ್ನು ಮತ್ತು ಅವರು ಹಿಂದೆಯೇ ಬಿಟ್ಟಿರುವ ಕರ್ಮಗಳನ್ನು ನಾವು ದಾಖಲಿಸಿಡುತ್ತೇವೆ. ನಾವು ಎಲ್ಲಾ ವಿಷಯಗಳನ್ನೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಿಸಿಟ್ಟಿದ್ದೇವೆ.
Ibisobanuro by'icyarabu:
وَاضْرِبْ لَهُمْ مَّثَلًا اَصْحٰبَ الْقَرْیَةِ ۘ— اِذْ جَآءَهَا الْمُرْسَلُوْنَ ۟ۚ
ಅವರಿಗೆ ಒಂದು ಊರಿನ ನಿವಾಸಿಗಳ ಉದಾಹರಣೆಯನ್ನು ತಿಳಿಸಿಕೊಡಿ. ಅಲ್ಲಿಗೆ ಸಂದೇಶವಾಹಕರುಗಳು ಬಂದ ಸಂದರ್ಭ!
Ibisobanuro by'icyarabu:
اِذْ اَرْسَلْنَاۤ اِلَیْهِمُ اثْنَیْنِ فَكَذَّبُوْهُمَا فَعَزَّزْنَا بِثَالِثٍ فَقَالُوْۤا اِنَّاۤ اِلَیْكُمْ مُّرْسَلُوْنَ ۟
ನಾವು ಅವರ ಬಳಿಗೆ ಇಬ್ಬರು ಸಂದೇಶವಾಹಕರುಗಳನ್ನು ಕಳುಹಿಸಿದ್ದೆವು. ಆದರೆ ಅವರು ಆ ಇಬ್ಬರು ಸಂದೇಶವಾಹಕರನ್ನೂ ನಿಷೇಧಿಸಿದರು. ಆಗ ಅವರಿಗೆ ಬಲ ನೀಡುವುದಕ್ಕಾಗಿ ನಾವು ಮೂರನೆಯವರನ್ನು ಕಳುಹಿಸಿದೆವು. ಅವರು ಹೇಳಿದರು: “ನಿಶ್ಚಯವಾಗಿಯೂ ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಲಾಗಿದೆ.”
Ibisobanuro by'icyarabu:
قَالُوْا مَاۤ اَنْتُمْ اِلَّا بَشَرٌ مِّثْلُنَا ۙ— وَمَاۤ اَنْزَلَ الرَّحْمٰنُ مِنْ شَیْءٍ ۙ— اِنْ اَنْتُمْ اِلَّا تَكْذِبُوْنَ ۟
ಜನರು ಹೇಳಿದರು: “ನೀವು ನಮ್ಮಂತೆಯೇ ಇರುವ ಮನುಷ್ಯರಾಗಿದ್ದೀರಿ. ಪರಮ ದಯಾಳು (ಅಲ್ಲಾಹು) ಏನನ್ನೂ ಅವತೀರ್ಣಗೊಳಿಸಿಲ್ಲ. ನೀವು ಕೇವಲ ಸುಳ್ಳು ಹೇಳುತ್ತಿದ್ದೀರಿ.”
Ibisobanuro by'icyarabu:
قَالُوْا رَبُّنَا یَعْلَمُ اِنَّاۤ اِلَیْكُمْ لَمُرْسَلُوْنَ ۟
ಸಂದೇಶವಾಹಕರುಗಳು ಹೇಳಿದರು: “ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಲಾಗಿದೆಯೆಂದು ನಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ತಿಳಿದಿದೆ.
Ibisobanuro by'icyarabu:
وَمَا عَلَیْنَاۤ اِلَّا الْبَلٰغُ الْمُبِیْنُ ۟
ನಮ್ಮ ಕರ್ತವ್ಯವು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸುವುದು ಮಾತ್ರವಾಗಿದೆ.”
Ibisobanuro by'icyarabu:
قَالُوْۤا اِنَّا تَطَیَّرْنَا بِكُمْ ۚ— لَىِٕنْ لَّمْ تَنْتَهُوْا لَنَرْجُمَنَّكُمْ وَلَیَمَسَّنَّكُمْ مِّنَّا عَذَابٌ اَلِیْمٌ ۟
ಜನರು ಹೇಳಿದರು: “ನಾವು ನಿಮ್ಮನ್ನು ಅಪಶಕುನವೆಂದು ಭಾವಿಸಿದ್ದೇವೆ. ನೀವು (ನಿಮ್ಮ ಧರ್ಮಪ್ರಚಾರವನ್ನು) ನಿಲ್ಲಿಸದಿದ್ದರೆ ನಾವು ನಿಮ್ಮನ್ನು ಖಂಡಿತ ಕಲ್ಲೆಸೆದು ಸಾಯಿಸುವೆವು ಮತ್ತು ನಿಮಗೆ ನಮ್ಮ ಕಡೆಯ ಯಾತನಾಮಯ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರುವುದು.”
Ibisobanuro by'icyarabu:
قَالُوْا طَآىِٕرُكُمْ مَّعَكُمْ ؕ— اَىِٕنْ ذُكِّرْتُمْ ؕ— بَلْ اَنْتُمْ قَوْمٌ مُّسْرِفُوْنَ ۟
ಸಂದೇಶವಾಹಕರುಗಳು ಹೇಳಿದರು: “ನಿಮ್ಮ ಅಪಶಕುನವು ನಿಮ್ಮ ಜೊತೆಯಲ್ಲೇ ಇದೆ. ನಿಮಗೆ ಉಪದೇಶ ನೀಡಿದರೆ ನೀವು ಅದನ್ನು ಅಪಶಕುನ ಎನ್ನುತ್ತೀರಾ? ಅಲ್ಲ, ವಾಸ್ತವವಾಗಿ ನೀವು ಎಲ್ಲೆ ಮೀರಿದ ಜನರಾಗಿದ್ದೀರಿ.”
Ibisobanuro by'icyarabu:
وَجَآءَ مِنْ اَقْصَا الْمَدِیْنَةِ رَجُلٌ یَّسْعٰی ؗ— قَالَ یٰقَوْمِ اتَّبِعُوا الْمُرْسَلِیْنَ ۟ۙ
ನಗರದ ತುತ್ತತುದಿಯಿಂದ ಒಬ್ಬ ವ್ಯಕ್ತಿ ಓಡುತ್ತಾ ಬಂದನು. ಅವನು ಹೇಳಿದನು: “ಓ ನನ್ನ ಜನರೇ! ನೀವು ಸಂದೇಶವಾಹಕರುಗಳನ್ನು ಅನುಸರಿಸಿರಿ.
Ibisobanuro by'icyarabu:
اتَّبِعُوْا مَنْ لَّا یَسْـَٔلُكُمْ اَجْرًا وَّهُمْ مُّهْتَدُوْنَ ۟
ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳದ ಮತ್ತು ಸನ್ಮಾರ್ಗದಲ್ಲಿರುವ ಇವರನ್ನು ಅನುಸರಿಸಿರಿ.
Ibisobanuro by'icyarabu:
وَمَا لِیَ لَاۤ اَعْبُدُ الَّذِیْ فَطَرَنِیْ وَاِلَیْهِ تُرْجَعُوْنَ ۟
ನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನು ಹಕ್ಕಿದೆ? ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.
Ibisobanuro by'icyarabu:
ءَاَتَّخِذُ مِنْ دُوْنِهٖۤ اٰلِهَةً اِنْ یُّرِدْنِ الرَّحْمٰنُ بِضُرٍّ لَّا تُغْنِ عَنِّیْ شَفَاعَتُهُمْ شَیْـًٔا وَّلَا یُنْقِذُوْنِ ۟ۚ
ನಾನು ಅವನನ್ನು (ಅಲ್ಲಾಹನನ್ನು) ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಬೇಕೇ? ಪರಮ ದಯಾಳು (ಅಲ್ಲಾಹು) ನನಗೇನಾದರೂ ತೊಂದರೆ ಕೊಡಲು ಬಯಸಿದರೆ ಅವರು (ಆ ದೇವರುಗಳು) ಮಾಡುವ ಶಿಫಾರಸು ನನಗೆ ಸ್ವಲ್ಪವೂ ಪ್ರಯೋಜನವಾಗುವುದಿಲ್ಲ. ಅವರು ನನ್ನನ್ನು ರಕ್ಷಿಸುವುದೂ ಇಲ್ಲ.
Ibisobanuro by'icyarabu:
اِنِّیْۤ اِذًا لَّفِیْ ضَلٰلٍ مُّبِیْنٍ ۟
ಹಾಗೇನಾದರೂ ಆದರೆ, ನಾನು ಸ್ಪಷ್ಟವಾಗಿ ದಾರಿತಪ್ಪುವುದು ನಿಶ್ಚಿತ.
Ibisobanuro by'icyarabu:
اِنِّیْۤ اٰمَنْتُ بِرَبِّكُمْ فَاسْمَعُوْنِ ۟ؕ
ನಿಶ್ಚಯವಾಗಿಯೂ ನಾನು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇನೆ. ಆದ್ದರಿಂದ ನೀವು ನನ್ನ ಮಾತಿಗೆ ಕಿವಿಗೊಡಿ.”
Ibisobanuro by'icyarabu:
قِیْلَ ادْخُلِ الْجَنَّةَ ؕ— قَالَ یٰلَیْتَ قَوْمِیْ یَعْلَمُوْنَ ۟ۙ
ಆ ವ್ಯಕ್ತಿಯೊಡನೆ ಹೇಳಲಾಯಿತು: “ಸ್ವರ್ಗವನ್ನು ಪ್ರವೇಶಿಸಿ.” ಆ ವ್ಯಕ್ತಿ ಹೇಳಿದರು: “ನನ್ನ ಜನರು ಇದನ್ನು ತಿಳಿಯುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
Ibisobanuro by'icyarabu:
بِمَا غَفَرَ لِیْ رَبِّیْ وَجَعَلَنِیْ مِنَ الْمُكْرَمِیْنَ ۟
ಅಂದರೆ, ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ಕ್ಷಮಿಸಿದ್ದಾನೆ ಮತ್ತು ನನ್ನನ್ನು ಗಣ್ಯರಲ್ಲಿ ಸೇರಿಸಿದ್ದಾನೆಂದು.”[1]
[1] ಆ ಊರಿನ ಸತ್ಯನಿಷೇಧಿ ಜನರು ಆ ವ್ಯಕ್ತಿಯನ್ನು ಕೊಂದರು. ಮರಣದ ನಂತರವೂ ಆ ವ್ಯಕ್ತಿ ತನ್ನ ಜನರ ಹಿತಚಿಂತಕರಾಗಿದ್ದರೆಂದು ಅವರ ಈ ಮಾತುಗಳಿಂದ ಅರ್ಥಮಾಡಿಕೊಳ್ಳಬಹುದು.
Ibisobanuro by'icyarabu:
وَمَاۤ اَنْزَلْنَا عَلٰی قَوْمِهٖ مِنْ بَعْدِهٖ مِنْ جُنْدٍ مِّنَ السَّمَآءِ وَمَا كُنَّا مُنْزِلِیْنَ ۟
ಅವರ ಬಳಿಕ ಅವರ ಜನರ ಮೇಲೆ ನಾವು ಆಕಾಶದಿಂದ ಯಾವುದೇ ಸೈನ್ಯವನ್ನು ಇಳಿಸಲಿಲ್ಲ. ನಾವು ಆ ರೀತಿ ಇಳಿಸುವವರೂ ಅಲ್ಲ.
Ibisobanuro by'icyarabu:
اِنْ كَانَتْ اِلَّا صَیْحَةً وَّاحِدَةً فَاِذَا هُمْ خٰمِدُوْنَ ۟
ಅದು ಒಂದು ಮಹಾ ಚೀತ್ಕಾರ ಮಾತ್ರವಾಗಿತ್ತು. ಆಗ ಹಠಾತ್ತನೆ ಅವರೆಲ್ಲರೂ ಸರ್ವನಾಶವಾದರು.
Ibisobanuro by'icyarabu:
یٰحَسْرَةً عَلَی الْعِبَادِ ۣۚ— مَا یَاْتِیْهِمْ مِّنْ رَّسُوْلٍ اِلَّا كَانُوْا بِهٖ یَسْتَهْزِءُوْنَ ۟
ಅಯ್ಯೋ ನನ್ನ ದಾಸರೇ! ಅವರ ಬಳಿಗೆ ಸಂದೇಶವಾಹಕರು ಬಂದಾಗಲೆಲ್ಲಾ ಅವರು ಆ ಸಂದೇಶವಾಹಕರನ್ನು ತಮಾಷೆ ಮಾಡುತ್ತಲೇ ಇದ್ದರು.
Ibisobanuro by'icyarabu:
اَلَمْ یَرَوْا كَمْ اَهْلَكْنَا قَبْلَهُمْ مِّنَ الْقُرُوْنِ اَنَّهُمْ اِلَیْهِمْ لَا یَرْجِعُوْنَ ۟
ಏನು ಅವರು ನೋಡಿಲ್ಲವೇ? ಅವರಿಗಿಂತ ಮೊದಲು ನಾವು ಎಷ್ಟೆಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆ ಮತ್ತು ಅವರಲ್ಲಿ ಯಾರೂ ಇವರ ಬಳಿಗೆ ಮರಳಿ ಬರುವುದಿಲ್ಲವೆಂದು.
Ibisobanuro by'icyarabu:
وَاِنْ كُلٌّ لَّمَّا جَمِیْعٌ لَّدَیْنَا مُحْضَرُوْنَ ۟۠
ನಿಶ್ಚಯವಾಗಿಯೂ ಅವರಲ್ಲಿ ಯಾರನ್ನೂ ಬಿಡದೆ ಎಲ್ಲರನ್ನೂ ನಮ್ಮ ಮುಂದೆ ಹಾಜರುಪಡಿಸಲಾಗುವುದು.
Ibisobanuro by'icyarabu:
وَاٰیَةٌ لَّهُمُ الْاَرْضُ الْمَیْتَةُ ۖۚ— اَحْیَیْنٰهَا وَاَخْرَجْنَا مِنْهَا حَبًّا فَمِنْهُ یَاْكُلُوْنَ ۟
ಬರಡು ಭೂಮಿಯು ಅವರಿಗೊಂದು ದೃಷ್ಟಾಂತವಾಗಿದೆ. ನಾವು ಅದಕ್ಕೆ ಜೀವವನ್ನು ನೀಡಿದೆವು ಮತ್ತು ಅದರಿಂದ ಧಾನ್ಯವನ್ನು ಉತ್ಪಾದಿಸಿದೆವು. ಅವರು ಅದರಿಂದ ತಿನ್ನುತ್ತಿದ್ದಾರೆ.
Ibisobanuro by'icyarabu:
وَجَعَلْنَا فِیْهَا جَنّٰتٍ مِّنْ نَّخِیْلٍ وَّاَعْنَابٍ وَّفَجَّرْنَا فِیْهَا مِنَ الْعُیُوْنِ ۟ۙ
ನಾವು ಅಲ್ಲಿ ಖರ್ಜೂರ ಮತ್ತು ದ್ರಾಕ್ಷಿಗಳ ತೋಟಗಳನ್ನು ಮಾಡಿಕೊಟ್ಟೆವು. ನಾವು ಅದರಲ್ಲಿ ಚಿಲುಮೆಗಳನ್ನೂ ಹರಿಸಿದೆವು.
Ibisobanuro by'icyarabu:
لِیَاْكُلُوْا مِنْ ثَمَرِهٖ ۙ— وَمَا عَمِلَتْهُ اَیْدِیْهِمْ ؕ— اَفَلَا یَشْكُرُوْنَ ۟
ಅವರು ಅದರ ಹಣ್ಣುಗಳನ್ನು ತಿನ್ನಲೆಂದು. ಅದನ್ನು ಅವರ ಕೈಗಳು ಉತ್ಪಾದಿಸಿಲ್ಲ. ಆದರೂ ಅವರು ಕೃತಜ್ಞರಾಗುವುದಿಲ್ಲವೇ?
Ibisobanuro by'icyarabu:
سُبْحٰنَ الَّذِیْ خَلَقَ الْاَزْوَاجَ كُلَّهَا مِمَّا تُنْۢبِتُ الْاَرْضُ وَمِنْ اَنْفُسِهِمْ وَمِمَّا لَا یَعْلَمُوْنَ ۟
ಭೂಮಿ ಉತ್ಪಾದಿಸುವ ಸಸ್ಯಲತಾದಿಗಳು, ಅವರ (ಮನುಷ್ಯರ) ವರ್ಗಗಳು ಮತ್ತು ಅವರಿಗೆ ತಿಳಿದಿಲ್ಲದ ವಸ್ತುಗಳು ಮುಂತಾದ ಎಲ್ಲದರಲ್ಲೂ ಜೋಡಿಗಳನ್ನು ಸೃಷ್ಟಿಸಿದ ಅಲ್ಲಾಹು ಪರಿಶುದ್ಧನಾಗಿದ್ದಾನೆ.
Ibisobanuro by'icyarabu:
وَاٰیَةٌ لَّهُمُ الَّیْلُ ۖۚ— نَسْلَخُ مِنْهُ النَّهَارَ فَاِذَا هُمْ مُّظْلِمُوْنَ ۟ۙ
ರಾತ್ರಿ ಅವರಿಗೆ ಒಂದು ದೃಷ್ಟಾಂತವಾಗಿದೆ. ನಾವು ಅದರಿಂದ ಹಗಲನ್ನು ಎಳೆದು ತೆಗೆಯುತ್ತೇವೆ. ಆಗ ಅಗೋ! ಅವರು ಇರುಳಿನಲ್ಲಿರುತ್ತಾರೆ.
Ibisobanuro by'icyarabu:
وَالشَّمْسُ تَجْرِیْ لِمُسْتَقَرٍّ لَّهَا ؕ— ذٰلِكَ تَقْدِیْرُ الْعَزِیْزِ الْعَلِیْمِ ۟ؕ
ಸೂರ್ಯ ಅದರ ನಿಶ್ಚಿತ ಪಥದಲ್ಲಿ ಚಲಿಸುತ್ತಿದೆ. ಅದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ನಿರ್ಣಯವಾಗಿದೆ.
Ibisobanuro by'icyarabu:
وَالْقَمَرَ قَدَّرْنٰهُ مَنَازِلَ حَتّٰی عَادَ كَالْعُرْجُوْنِ الْقَدِیْمِ ۟
ನಾವು ಚಂದ್ರನಿಗೆ ಕೆಲವು ಹಂತಗಳನ್ನು ನಿರ್ಣಯಿಸಿದ್ದೇವೆ. ಎಲ್ಲಿಯವರೆಗೆಂದರೆ, ಅದು ಹಳೆಯ ಖರ್ಜೂರದ ದಿಂಡಿನ ರೂಪಕ್ಕೆ ಮರಳುತ್ತದೆ.
Ibisobanuro by'icyarabu:
لَا الشَّمْسُ یَنْۢبَغِیْ لَهَاۤ اَنْ تُدْرِكَ الْقَمَرَ وَلَا الَّیْلُ سَابِقُ النَّهَارِ ؕ— وَكُلٌّ فِیْ فَلَكٍ یَّسْبَحُوْنَ ۟
ಸೂರ್ಯನಿಗೆ ಚಂದ್ರನನ್ನು ಮುಟ್ಟಲು ಸಾಧ್ಯವಿಲ್ಲ. ರಾತ್ರಿ ಹಗಲನ್ನು ದಾಟಿಹೋಗುವುದಿಲ್ಲ. ಎಲ್ಲವೂ ಅವುಗಳ ನಿಶ್ಚಿತ ಕಕ್ಷೆಗಳಲ್ಲಿ ಈಜುತ್ತಿವೆ.
Ibisobanuro by'icyarabu:
وَاٰیَةٌ لَّهُمْ اَنَّا حَمَلْنَا ذُرِّیَّتَهُمْ فِی الْفُلْكِ الْمَشْحُوْنِ ۟ۙ
ನಾವು ಅವರ ಸಂತಾನವನ್ನು ತುಂಬಿ ತುಳುಕುವ ನಾವೆಯಲ್ಲಿ ಹೊತ್ತು ಸಾಗಿಸಿದ್ದು ಅವರಿಗೊಂದು ದೃಷ್ಟಾಂತವಾಗಿದೆ.
Ibisobanuro by'icyarabu:
وَخَلَقْنَا لَهُمْ مِّنْ مِّثْلِهٖ مَا یَرْكَبُوْنَ ۟
ಅವರು ಸವಾರಿ ಮಾಡಲು ಬಳಸುವ ಇಂತಹ ಅನೇಕ ವಸ್ತುಗಳನ್ನು ನಾವು ಸೃಷ್ಟಿಸಿದ್ದೇವೆ.
Ibisobanuro by'icyarabu:
وَاِنْ نَّشَاْ نُغْرِقْهُمْ فَلَا صَرِیْخَ لَهُمْ وَلَا هُمْ یُنْقَذُوْنَ ۟ۙ
ನಾವು ಇಚ್ಛಿಸಿದರೆ ಅವರನ್ನು ಮುಳುಗಿಸಿ ಬಿಡುವೆವು. ಆಗ ಅವರ ಕೂಗನ್ನು ಕೇಳುವವರು ಯಾರೂ ಇರಲಾರರು. ಅವರು ಸ್ವತಃ ರಕ್ಷಣೆಯನ್ನೂ ಪಡೆಯಲಾರರು.
Ibisobanuro by'icyarabu:
اِلَّا رَحْمَةً مِّنَّا وَمَتَاعًا اِلٰی حِیْنٍ ۟
ಆದರೆ ನಾವು ನಮ್ಮ ಕಡೆಯ ದಯೆಯಿಂದ ಅವರನ್ನು ರಕ್ಷಿಸುತ್ತೇವೆ ಮತ್ತು ಒಂದು ನಿಶ್ಚಿತ ಕಾಲದವರೆಗೆ ಅವರಿಗೆ ಸವಲತ್ತುಗಳನ್ನು ನೀಡುತ್ತೇವೆ.
Ibisobanuro by'icyarabu:
وَاِذَا قِیْلَ لَهُمُ اتَّقُوْا مَا بَیْنَ اَیْدِیْكُمْ وَمَا خَلْفَكُمْ لَعَلَّكُمْ تُرْحَمُوْنَ ۟
“ಮುಂದೆ ಉಂಟಾಗಲಿರುವ ಮತ್ತು ಈಗಾಗಲೇ ಉಂಟಾಗಿರುವ ಪಾಪಗಳ ಬಗ್ಗೆ ಎಚ್ಚರವಾಗಿರಿ; ನಿಮಗೆ ದಯೆ ತೋರಲಾಗುವುದಕ್ಕಾಗಿ” ಎಂದು ಅವರೊಡನೆ ಹೇಳಲಾದರೆ (ಅವರು ಅದನ್ನು ನಿರ್ಲಕ್ಷಿಸುತ್ತಾರೆ).
Ibisobanuro by'icyarabu:
وَمَا تَاْتِیْهِمْ مِّنْ اٰیَةٍ مِّنْ اٰیٰتِ رَبِّهِمْ اِلَّا كَانُوْا عَنْهَا مُعْرِضِیْنَ ۟
ಅವರ ಪರಿಪಾಲಕನ (ಅಲ್ಲಾಹನ) ಕಡೆಯ ದೃಷ್ಟಾಂತಗಳಲ್ಲಿ ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದರೂ ಅವರು ಅದನ್ನು ನಿರ್ಲಕ್ಷಿಸಿ ವಿಮುಖರಾಗುತ್ತಿದ್ದರು.
Ibisobanuro by'icyarabu:
وَاِذَا قِیْلَ لَهُمْ اَنْفِقُوْا مِمَّا رَزَقَكُمُ اللّٰهُ ۙ— قَالَ الَّذِیْنَ كَفَرُوْا لِلَّذِیْنَ اٰمَنُوْۤا اَنُطْعِمُ مَنْ لَّوْ یَشَآءُ اللّٰهُ اَطْعَمَهٗۤ ۖۗ— اِنْ اَنْتُمْ اِلَّا فِیْ ضَلٰلٍ مُّبِیْنٍ ۟
“ಅಲ್ಲಾಹು ನಿಮಗೆ ಒದಗಿಸಿದ ಸಂಪತ್ತಿನಿಂದ ಖರ್ಚು ಮಾಡಿರಿ”[1] ಎಂದು ಅವರೊಡನೆ ಹೇಳಲಾದರೆ ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳುತ್ತಾರೆ: “ಅಲ್ಲಾಹು ಇಚ್ಛಿಸಿದರೆ ಅವನೇ ಆಹಾರ ನೀಡಬಹುದಾದ ಈ ಜನರಿಗೆ ನಾವೇಕೆ ಆಹಾರ ನೀಡಬೇಕು? ನಿಜಕ್ಕೂ ನೀವು ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ.”[2]
[1] ಅಂದರೆ ಬಡವರು, ನಿರ್ಗತಿಕರು ಮುಂತಾದವರಿಗೆ ದಾನ ಮಾಡಿರಿ.
[2] ಅವರು ಬಡವರಾಗಿರಬೇಕು ಎಂಬುದು ಅಲ್ಲಾಹನ ನಿರ್ಧಾರವಾಗಿದೆ. ಅವನು ಇಚ್ಛಿಸುತ್ತಿದ್ದರೆ ಅವರನ್ನು ಶ್ರೀಮಂತರನ್ನಾಗಿ ಮಾಡುತ್ತಿದ್ದನು. ನಾವು ಅವರಿಗೆ ದಾನ ಮಾಡಬೇಕೆಂದು ಹೇಳುವುದು ಅಲ್ಲಾಹನ ನಿರ್ಧಾರಕ್ಕೆ ವಿರುದ್ಧವಾಗುತ್ತದೆ. ಇದು ಸ್ಪಷ್ಟ ದುರ್ಮಾರ್ಗವಾಗಿದೆ ಎಂದು ಅವರು ಹೇಳುತ್ತಿದ್ದರು.
Ibisobanuro by'icyarabu:
وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟
ಅವರು ಹೇಳುತ್ತಾರೆ: “ನೀವು ಸತ್ಯವಂತರಾಗಿದ್ದರೆ ಈ ವಾಗ್ದಾನವು ಯಾವಾಗ ನಿಜವಾಗುತ್ತದೆಂದು ಹೇಳಿರಿ.”
Ibisobanuro by'icyarabu:
مَا یَنْظُرُوْنَ اِلَّا صَیْحَةً وَّاحِدَةً تَاْخُذُهُمْ وَهُمْ یَخِصِّمُوْنَ ۟
ಅವರು ಒಂದು ಮಹಾ ಚೀತ್ಕಾರವನ್ನು ಮಾತ್ರ ಕಾಯುತ್ತಿದ್ದಾರೆ. ಅವರು ಪರಸ್ಪರ ತರ್ಕಿಸುತ್ತಿರುವಾಗಲೇ ಅದು ಅವರನ್ನು ಹಿಡಿಯುವುದು.
Ibisobanuro by'icyarabu:
فَلَا یَسْتَطِیْعُوْنَ تَوْصِیَةً وَّلَاۤ اِلٰۤی اَهْلِهِمْ یَرْجِعُوْنَ ۟۠
ಆಗ ಯಾವುದೇ ಉಯಿಲು ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ. ತಮ್ಮ ಮನೆಯವರ ಬಳಿಗೆ ಮರಳಲೂ ಸಾಧ್ಯವಾಗುವುದಿಲ್ಲ.
Ibisobanuro by'icyarabu:
وَنُفِخَ فِی الصُّوْرِ فَاِذَا هُمْ مِّنَ الْاَجْدَاثِ اِلٰی رَبِّهِمْ یَنْسِلُوْنَ ۟
ಕಹಳೆಯಲ್ಲಿ ಊದಲಾಗುವುದು. ಆಗ ಅಗೋ! ಅವರು ಸಮಾಧಿಗಳಿಂದ ಎದ್ದು ತಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಧಾವಿಸುವರು.
Ibisobanuro by'icyarabu:
قَالُوْا یٰوَیْلَنَا مَنْ بَعَثَنَا مِنْ مَّرْقَدِنَا ۣٚۘ— هٰذَا مَا وَعَدَ الرَّحْمٰنُ وَصَدَقَ الْمُرْسَلُوْنَ ۟
ಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ನಮ್ಮನ್ನು ನಿದ್ದೆಯಿಂದ ಎಬ್ಬಿಸಿದ್ದು ಯಾರು?” (ಆಗ ಅವರಿಗೆ ಉತ್ತರ ನೀಡಲಾಗುವುದು): “ಇದು ಪರಮ ದಯಾಳು (ಅಲ್ಲಾಹು) ಮಾಡಿದ ವಾಗ್ದಾನವಾಗಿದೆ ಮತ್ತು ಸಂದೇಶವಾಹಕರುಗಳು ಈ ಸತ್ಯವನ್ನು ನಿಮಗೆ ತಿಳಿಸಿದ್ದರು.”
Ibisobanuro by'icyarabu:
اِنْ كَانَتْ اِلَّا صَیْحَةً وَّاحِدَةً فَاِذَا هُمْ جَمِیْعٌ لَّدَیْنَا مُحْضَرُوْنَ ۟
ಅದು ಕೇವಲ ಒಂದು ಚೀತ್ಕಾರ ಮಾತ್ರವಾಗಿರುತ್ತದೆ. ಆಗ ಅಗೋ! ಅವರೆಲ್ಲರನ್ನೂ ನಮ್ಮ ಮುಂದೆ ಹಾಜರುಪಡಿಸಲಾಗುತ್ತದೆ.
Ibisobanuro by'icyarabu:
فَالْیَوْمَ لَا تُظْلَمُ نَفْسٌ شَیْـًٔا وَّلَا تُجْزَوْنَ اِلَّا مَا كُنْتُمْ تَعْمَلُوْنَ ۟
ಆ ದಿನ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ. ನೀವು ಮಾಡಿದ ಕರ್ಮಗಳ ಪ್ರತಿಫಲವನ್ನೇ ಹೊರತು ಬೇರೇನೂ ನಿಮಗೆ ನೀಡಲಾಗುವುದಿಲ್ಲ.
Ibisobanuro by'icyarabu:
اِنَّ اَصْحٰبَ الْجَنَّةِ الْیَوْمَ فِیْ شُغُلٍ فٰكِهُوْنَ ۟ۚ
ನಿಶ್ಚಯವಾಗಿಯೂ ಅಂದು ಸ್ವರ್ಗವಾಸಿಗಳು (ಆನಂದದಾಯಕ) ಕೆಲಸ-ಕಾರ್ಯಗಳಲ್ಲಿ ನಿರತರಾಗಿರುವರು.
Ibisobanuro by'icyarabu:
هُمْ وَاَزْوَاجُهُمْ فِیْ ظِلٰلٍ عَلَی الْاَرَآىِٕكِ مُتَّكِـُٔوْنَ ۟ۚ
ಅವರು ಮತ್ತು ಅವರ ಮಡದಿಯರು ನೆರಳುಗಳಲ್ಲಿ ಮಂಚಗಳ ಮೇಲೆ ಒರಗಿ ಕುಳಿತಿರುವರು.
Ibisobanuro by'icyarabu:
لَهُمْ فِیْهَا فَاكِهَةٌ وَّلَهُمْ مَّا یَدَّعُوْنَ ۟ۚ
ಅಲ್ಲಿ ಅವರಿಗೆ ಅನೇಕ ತರಹದ ಹಣ್ಣು-ಹಂಪಲುಗಳಿರುವುವು. ಅವರು ಕೇಳುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು.
Ibisobanuro by'icyarabu:
سَلٰمٌ ۫— قَوْلًا مِّنْ رَّبٍّ رَّحِیْمٍ ۟
ಕರುಣಾನಿಧಿಯಾದ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವರಿಗೆ ಸಲಾಂ ಹೇಳಲಾಗುವುದು.
Ibisobanuro by'icyarabu:
وَامْتَازُوا الْیَوْمَ اَیُّهَا الْمُجْرِمُوْنَ ۟
“ಅಪರಾಧಿಗಳೇ! ಇಂದು ನೀವು ಬೇರ್ಪಟ್ಟು ನಿಲ್ಲಿರಿ” (ಎಂದು ಘೋಷಿಸಲಾಗುವುದು).
Ibisobanuro by'icyarabu:
اَلَمْ اَعْهَدْ اِلَیْكُمْ یٰبَنِیْۤ اٰدَمَ اَنْ لَّا تَعْبُدُوا الشَّیْطٰنَ ۚ— اِنَّهٗ لَكُمْ عَدُوٌّ مُّبِیْنٌ ۟ۙ
ಓ ಆದಮ್ ಸಂತತಿಗಳೇ! ನೀವು ಶೈತಾನನನ್ನು ಆರಾಧಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಸ್ಪಷ್ಟ ವೈರಿಯಾಗಿದ್ದಾನೆ ಎಂದು ನಾನು ನಿಮಗೆ ಆದೇಶಿಸಿರಲಿಲ್ಲವೇ?
Ibisobanuro by'icyarabu:
وَّاَنِ اعْبُدُوْنِیْ ؔؕ— هٰذَا صِرَاطٌ مُّسْتَقِیْمٌ ۟
ನನ್ನನ್ನು ಮಾತ್ರ ಆರಾಧಿಸಿರಿ. ಇದೇ ನೇರ ಮಾರ್ಗ ಎಂದು.
Ibisobanuro by'icyarabu:
وَلَقَدْ اَضَلَّ مِنْكُمْ جِبِلًّا كَثِیْرًا ؕ— اَفَلَمْ تَكُوْنُوْا تَعْقِلُوْنَ ۟
ನಿಶ್ಚಯವಾಗಿಯೂ ನಿಮ್ಮಲ್ಲಿ ಸೇರಿದ ಎಷ್ಟೋ ಜನರನ್ನು ಅವನು ದಾರಿತಪ್ಪಿಸಿದ್ದಾನೆ. ಆದರೂ ನೀವು ಅರ್ಥಮಾಡಿಕೊಳ್ಳುವುದಿಲ್ಲವೇ?
Ibisobanuro by'icyarabu:
هٰذِهٖ جَهَنَّمُ الَّتِیْ كُنْتُمْ تُوْعَدُوْنَ ۟
ಇದೇ ನಿಮಗೆ ಎಚ್ಚರಿಕೆ ನೀಡಲಾದ ಆ ನರಕಾಗ್ನಿ!
Ibisobanuro by'icyarabu:
اِصْلَوْهَا الْیَوْمَ بِمَا كُنْتُمْ تَكْفُرُوْنَ ۟
ನಿಮ್ಮ ಸತ್ಯನಿಷೇಧದ ಪ್ರತಿಫಲ ಪಡೆಯಲು ನೀವು ಇಂದು ಅದನ್ನು ಪ್ರವೇಶಿಸಿರಿ.
Ibisobanuro by'icyarabu:
اَلْیَوْمَ نَخْتِمُ عَلٰۤی اَفْوَاهِهِمْ وَتُكَلِّمُنَاۤ اَیْدِیْهِمْ وَتَشْهَدُ اَرْجُلُهُمْ بِمَا كَانُوْا یَكْسِبُوْنَ ۟
ಇಂದು ನಾವು ಅವರ ಬಾಯಿಗಳಿಗೆ ಮೊಹರು ಹಾಕುವೆವು, ಅವರ ಕೈಗಳು ನಮ್ಮೊಡನೆ ಮಾತನಾಡುವುವು ಮತ್ತು ಅವರ ಕಾಲುಗಳು ಅವರು ಮಾಡಿದ ದುಷ್ಕರ್ಮಗಳಿಗೆ ಸಾಕ್ಷಿ ಹೇಳುವುವು.
Ibisobanuro by'icyarabu:
وَلَوْ نَشَآءُ لَطَمَسْنَا عَلٰۤی اَعْیُنِهِمْ فَاسْتَبَقُوا الصِّرَاطَ فَاَنّٰی یُبْصِرُوْنَ ۟
ನಾವು ಬಯಸಿದರೆ ಅವರ ಕಣ್ಣುಗಳನ್ನು ಕುರುಡಾಗಿಸುವೆವು. ಆದರೂ ಅವರು ಮಾರ್ಗದ ಕಡೆಗೆ ಧಾವಿಸುವರು. ಆದರೆ ಅವರಿಗೆ ನೋಡಲು ಸಾಧ್ಯವಾಗುವುದು ಹೇಗೆ?
Ibisobanuro by'icyarabu:
وَلَوْ نَشَآءُ لَمَسَخْنٰهُمْ عَلٰی مَكَانَتِهِمْ فَمَا اسْتَطَاعُوْا مُضِیًّا وَّلَا یَرْجِعُوْنَ ۟۠
ನಾವು ಬಯಸಿದರೆ ಅವರು ನಿಂತ ಸ್ಥಳದಲ್ಲಿಯೇ ಅವರ ರೂಪವನ್ನು ವಿರೂಪಗೊಳಿಸುವೆವು. ಆಗ ಅವರಿಗೆ ಮುಂದಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹಿಂದಕ್ಕೆ ಮರಳಲೂ ಸಾಧ್ಯವಾಗುವುದಿಲ್ಲ.
Ibisobanuro by'icyarabu:
وَمَنْ نُّعَمِّرْهُ نُنَكِّسْهُ فِی الْخَلْقِ ؕ— اَفَلَا یَعْقِلُوْنَ ۟
ನಾವು ಯಾರಿಗೆ ದೀರ್ಘಾಯುಷ್ಯ ನೀಡುತ್ತೇವೆಯೋ ಅವನ ಸೃಷ್ಟಿಯನ್ನು ನಾವು ತಿರುಗುಮುರುಗು ಮಾಡುತ್ತೇವೆ. ಆದರೂ ಅವರು ಅರ್ಥಮಾಡಿಕೊಳ್ಳುವುದಿಲ್ಲವೇ?
Ibisobanuro by'icyarabu:
وَمَا عَلَّمْنٰهُ الشِّعْرَ وَمَا یَنْۢبَغِیْ لَهٗ ؕ— اِنْ هُوَ اِلَّا ذِكْرٌ وَّقُرْاٰنٌ مُّبِیْنٌ ۟ۙ
ನಾವು ಅವರಿಗೆ (ಪ್ರವಾದಿಗೆ) ಕಾವ್ಯವನ್ನು ಕಲಿಸಿಕೊಟ್ಟಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಕೇವಲ ಒಂದು ಉಪದೇಶ ಮತ್ತು ಸ್ಪಷ್ಟ ಕುರ್‌ಆನ್ ಆಗಿದೆ.
Ibisobanuro by'icyarabu:
لِّیُنْذِرَ مَنْ كَانَ حَیًّا وَّیَحِقَّ الْقَوْلُ عَلَی الْكٰفِرِیْنَ ۟
ಇದು ಜೀವಂತವಿರುವವರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಮತ್ತು ಸತ್ಯನಿಷೇಧಿಗಳ ಮೇಲೆ (ಶಿಕ್ಷೆಯ) ವಚನವು ಖಾತ್ರಿಯಾಗುವುದಕ್ಕಾಗಿದೆ.
Ibisobanuro by'icyarabu:
اَوَلَمْ یَرَوْا اَنَّا خَلَقْنَا لَهُمْ مِّمَّا عَمِلَتْ اَیْدِیْنَاۤ اَنْعَامًا فَهُمْ لَهَا مٰلِكُوْنَ ۟
ನಮ್ಮ ಕೈಗಳು ನಿರ್ಮಿಸಿದ ವಸ್ತುಗಳಲ್ಲಿ ಸೇರಿದ ಜಾನುವಾರುಗಳನ್ನು ನಾವು ಅವರಿಗೋಸ್ಕರ ಸೃಷ್ಟಿಸಿದ್ದೇವೆಂದು ಅವರು ನೋಡಿಲ್ಲವೇ? ಅವರು ಅವುಗಳ ಮಾಲಿಕರಾಗಿದ್ದಾರೆ.
Ibisobanuro by'icyarabu:
وَذَلَّلْنٰهَا لَهُمْ فَمِنْهَا رَكُوْبُهُمْ وَمِنْهَا یَاْكُلُوْنَ ۟
ನಾವು ಅವುಗಳನ್ನು ಅವರಿಗೆ ಪಳಗಿಸಿಕೊಟ್ಟಿದ್ದೇವೆ. ಅವುಗಳಲ್ಲಿ ಕೆಲವು ಪ್ರಾಣಿಗಳ ಮೇಲೆ ಅವರ ಸವಾರಿ ಮಾಡುತ್ತಾರೆ ಮತ್ತು ಕೆಲವು ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ.
Ibisobanuro by'icyarabu:
وَلَهُمْ فِیْهَا مَنَافِعُ وَمَشَارِبُ ؕ— اَفَلَا یَشْكُرُوْنَ ۟
ಅವುಗಳಲ್ಲಿ ಅವರಿಗೆ ಅನೇಕ ಪ್ರಯೋಜನಗಳಿವೆ; ಪಾನೀಯವೂ ಇದೆ. ಆದರೂ ಅವರು ಕೃತಜ್ಞರಾಗುವುದಿಲ್ಲವೇ?
Ibisobanuro by'icyarabu:
وَاتَّخَذُوْا مِنْ دُوْنِ اللّٰهِ اٰلِهَةً لَّعَلَّهُمْ یُنْصَرُوْنَ ۟ؕ
ಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಆ ದೇವರುಗಳು ಅವರಿಗೆ ಸಹಾಯ ಮಾಡುವುದಕ್ಕಾಗಿ.
Ibisobanuro by'icyarabu:
لَا یَسْتَطِیْعُوْنَ نَصْرَهُمْ وَهُمْ لَهُمْ جُنْدٌ مُّحْضَرُوْنَ ۟
ಆದರೆ ಅವರಿಗೆ ಸಹಾಯ ಮಾಡಲು ಆ ದೇವರುಗಳಿಗೆ ಸಾಧ್ಯವಿಲ್ಲ. (ಆದರೂ) ಅವರು ಆ ದೇವರುಗಳಿಗಿರುವ ಸನ್ನದ್ಧ ಸೈನ್ಯವಾಗಿ ಬಿಟ್ಟಿದ್ದಾರೆ.
Ibisobanuro by'icyarabu:
فَلَا یَحْزُنْكَ قَوْلُهُمْ ۘ— اِنَّا نَعْلَمُ مَا یُسِرُّوْنَ وَمَا یُعْلِنُوْنَ ۟
ಆದ್ದರಿಂದ ಅವರು ಹೇಳುವ ಮಾತುಗಳು ನಿಮ್ಮನ್ನು ಬೇಸರಗೊಳಿಸದಿರಲಿ. ಅವರು ರಹಸ್ಯವಾಗಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ನಾವು ಖಂಡಿತ ತಿಳಿಯುತ್ತೇವೆ.
Ibisobanuro by'icyarabu:
اَوَلَمْ یَرَ الْاِنْسَانُ اَنَّا خَلَقْنٰهُ مِنْ نُّطْفَةٍ فَاِذَا هُوَ خَصِیْمٌ مُّبِیْنٌ ۟
ಮನುಷ್ಯನು ನೋಡಿಲ್ಲವೇ? ನಾವು ಅವನನ್ನು ಒಂದು ವೀರ್ಯದಿಂದ ಸೃಷ್ಟಿಸಿದ್ದೇವೆಂದು? ನಂತರ ಇದ್ದಕ್ಕಿದ್ದಂತೆ ಅವನು ಸ್ಪಷ್ಟ ಎದುರಾಳಿಯಾಗಿ ಬಿಟ್ಟಿದ್ದಾನೆ.
Ibisobanuro by'icyarabu:
وَضَرَبَ لَنَا مَثَلًا وَّنَسِیَ خَلْقَهٗ ؕ— قَالَ مَنْ یُّحْیِ الْعِظَامَ وَهِیَ رَمِیْمٌ ۟
ಅವನು ನಮಗೆ ಒಂದು ಉದಾಹರಣೆಯನ್ನು ತಿಳಿಸುತ್ತಾನೆ. ಆದರೆ ಸ್ವತಃ ತನ್ನ ಸೃಷ್ಟಿಯನ್ನೇ ಅವನು ಮರೆತು ಬಿಟ್ಟಿದ್ದಾನೆ. ಅವನು ಕೇಳುತ್ತಾನೆ: “ಕೊಳೆತ ಮೂಳೆಗಳಿಗೆ ಜೀವ ನೀಡುವುದು ಯಾರು?”
Ibisobanuro by'icyarabu:
قُلْ یُحْیِیْهَا الَّذِیْۤ اَنْشَاَهَاۤ اَوَّلَ مَرَّةٍ ؕ— وَهُوَ بِكُلِّ خَلْقٍ عَلِیْمُ ۟ۙ
ಹೇಳಿರಿ: “ಅದನ್ನು ಪ್ರಥಮ ಬಾರಿ ಸೃಷ್ಟಿಸಿದವನೇ ಅದಕ್ಕೆ ಜೀವವನ್ನು ನೀಡುತ್ತಾನೆ. ಅವನು ಎಲ್ಲಾ ಸೃಷ್ಟಿಗಳ ಬಗ್ಗೆ ಸ್ಪಷ್ಟ ಜ್ಞಾನವುಳ್ಳವನಾಗಿದ್ದಾನೆ.”
Ibisobanuro by'icyarabu:
١لَّذِیْ جَعَلَ لَكُمْ مِّنَ الشَّجَرِ الْاَخْضَرِ نَارًا فَاِذَاۤ اَنْتُمْ مِّنْهُ تُوْقِدُوْنَ ۟
ಅವನು ಯಾರೆಂದರೆ, ನಿಮಗೆ ಹಸಿರು ಮರದಿಂದ ಬೆಂಕಿಯನ್ನು ನಿರ್ಮಿಸಿ ಕೊಟ್ಟವನು. ಆಗ ಅಗೋ! ನೀವು ಅದರಿಂದ ಬೆಂಕಿ ಉರಿಸುತ್ತೀರಿ.
Ibisobanuro by'icyarabu:
اَوَلَیْسَ الَّذِیْ خَلَقَ السَّمٰوٰتِ وَالْاَرْضَ بِقٰدِرٍ عَلٰۤی اَنْ یَّخْلُقَ مِثْلَهُمْ ؔؕ— بَلٰی ۗ— وَهُوَ الْخَلّٰقُ الْعَلِیْمُ ۟
ಭೂಮ್ಯಾಕಾಶಗಳನ್ನು ಸೃಷ್ಟಿಸಿದವನಿಗೆ ಅವರಂತಿರುವ ಮನುಷ್ಯರನ್ನು ಸೃಷ್ಟಿಸುವ ಸಾಮರ್ಥ್ಯವಿಲ್ಲವೇ? ಹೌದು (ಖಂಡಿತ ಸಾಮರ್ಥ್ಯವಿದೆ)! ಅವನು ಎಲ್ಲವನ್ನು ಸೃಷ್ಟಿಸುವವನು ಮತ್ತು ಸರ್ವಜ್ಞನಾಗಿದ್ದಾನೆ.
Ibisobanuro by'icyarabu:
اِنَّمَاۤ اَمْرُهٗۤ اِذَاۤ اَرَادَ شَیْـًٔا اَنْ یَّقُوْلَ لَهٗ كُنْ فَیَكُوْنُ ۟
ಅವನು ಯಾವುದೇ ವಸ್ತುವನ್ನು ಬಯಸಿದರೆ, ಅದಕ್ಕೆ “ಉಂಟಾಗು” ಎಂಬ ಆಜ್ಞೆಯನ್ನು ಮಾತ್ರ ನೀಡುತ್ತಾನೆ. ತಕ್ಷಣ ಅದು ಉಂಟಾಗುತ್ತದೆ!
Ibisobanuro by'icyarabu:
فَسُبْحٰنَ الَّذِیْ بِیَدِهٖ مَلَكُوْتُ كُلِّ شَیْءٍ وَّاِلَیْهِ تُرْجَعُوْنَ ۟۠
ಎಲ್ಲ ವಸ್ತುಗಳ ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆಯೋ ಅವನು ಪರಮ ಪರಿಶುದ್ಧನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.
Ibisobanuro by'icyarabu:
 
Ibisobanuro by'amagambo Isura: Yaasiin
Urutonde rw'amasura numero y'urupapuro
 
Ibisobanuro bya qoran ntagatifu - الترجمة الكنادية - حمزة بتور - Ishakiro ry'ibisobanuro

ترجمة معاني القرآن الكريم إلى اللغة الكنادية ترجمها محمد حمزة بتور.

Gufunga