Check out the new design

Përkthimi i kuptimeve të Kuranit Fisnik - Përkthimi kanadisht - Bashir Mysuri * - Përmbajtja e përkthimeve


Përkthimi i kuptimeve Surja: Ali Imran   Ajeti:
وَسَارِعُوْۤا اِلٰی مَغْفِرَةٍ مِّنْ رَّبِّكُمْ وَجَنَّةٍ عَرْضُهَا السَّمٰوٰتُ وَالْاَرْضُ ۙ— اُعِدَّتْ لِلْمُتَّقِیْنَ ۟ۙ
ನಿಮ್ಮ ಪ್ರಭುವಿನ ಕ್ಷಮಾದಾನ ಹಾಗೂ ಭೂಮಿ, ಆಕಾಶಗಳಷ್ಟು ವಿಶಾಲವಾದ ಸ್ವರ್ಗದೆಡೆಗೆ ನೀವು ಧಾವಿಸಿರಿ. ಅದನ್ನು ಭಯಭಕ್ತಿ ಪಾಲಿಸುವವರಿಗಾಗಿ ಸಿದ್ಧಗೊಳಿಸಲಾಗಿದೆ.
Tefsiret në gjuhën arabe:
الَّذِیْنَ یُنْفِقُوْنَ فِی السَّرَّآءِ وَالضَّرَّآءِ وَالْكٰظِمِیْنَ الْغَیْظَ وَالْعَافِیْنَ عَنِ النَّاسِ ؕ— وَاللّٰهُ یُحِبُّ الْمُحْسِنِیْنَ ۟ۚ
ಅವರು ಅನುಕೂಲ ಸ್ಥಿತಿಯಲ್ಲೂ, ದುಸ್ಥಿತಿಯಲ್ಲೂ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಕೋಪವನ್ನು ನುಂಗಿಕೊಳ್ಳುವವರು ಮತ್ತು ಜನರನ್ನು ಮನ್ನಿಸುವವರಾಗಿದ್ದಾರೆ. ಅಲ್ಲಾಹನು ಆ ಸತ್ಕರ್ಮಿಗಳನ್ನು ಪ್ರೀತಿಸುತ್ತಾನೆ.
Tefsiret në gjuhën arabe:
وَالَّذِیْنَ اِذَا فَعَلُوْا فَاحِشَةً اَوْ ظَلَمُوْۤا اَنْفُسَهُمْ ذَكَرُوا اللّٰهَ فَاسْتَغْفَرُوْا لِذُنُوْبِهِمْ۫— وَمَنْ یَّغْفِرُ الذُّنُوْبَ اِلَّا اللّٰهُ ۪۫— وَلَمْ یُصِرُّوْا عَلٰی مَا فَعَلُوْا وَهُمْ یَعْلَمُوْنَ ۟
ಅವರು ಏನಾದರೂ ನೀಚಕೃತ್ಯವೆಸಗಿದರೆ ಅಥವಾ ಅವರು ಯಾವುದಾದರೂ ಪಾಪ ಮಾಡಿದರೆ ಕೂಡಲೇ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆ ಬೇಡುತ್ತಾರೆ. ವಾಸ್ತವದಲ್ಲಿ ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಇನ್ನಾರಿದ್ದಾರೆ? ಮತ್ತು ಅವರು ತಿಳಿದೂ ಯಾವುದೇ ಕೆಡುಕಿನಲ್ಲಿ ಪಟ್ಟುಹಿಡಿಯಲಾರರು.
Tefsiret në gjuhën arabe:
اُولٰٓىِٕكَ جَزَآؤُهُمْ مَّغْفِرَةٌ مِّنْ رَّبِّهِمْ وَجَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— وَنِعْمَ اَجْرُ الْعٰمِلِیْنَ ۟ؕ
ಅಂಥಹವರಿಗೆ ಇರುವ ಪ್ರತಿಫಲವು ತಮ್ಮ ಪ್ರಭುವಿನ ಕಡೆಯಿಂದಿರುವ ಪಾಪವಿಮೋಚನೆ ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಾಗಿವೆ. ಅಲ್ಲಿ ಅವರು ಶಾಶ್ವತವಾಗಿರುವರು. ಆ ಸತ್ಕರ್ಮ ಮಾಡುವವರ ಪ್ರತಿಫಲವು ಅದೆಷ್ಟು ಉತ್ತಮವಾಗಿದೆ!
Tefsiret në gjuhën arabe:
قَدْ خَلَتْ مِنْ قَبْلِكُمْ سُنَنٌ ۙ— فَسِیْرُوْا فِی الْاَرْضِ فَانْظُرُوْا كَیْفَ كَانَ عَاقِبَةُ الْمُكَذِّبِیْنَ ۟
ನಿಮಗಿಂತ ಮುಂಚೆಯ ಅನೇಕ ಸಮುದಾಯಗಳ ಘಟನೆಗಳು ಗತಿಸಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ (ದಿವ್ಯ ಸಂದೇಶಗಳನ್ನು) ನಿಷೇಧಿಸಿದವರ ಅಂತ್ಯ ಹೇಗಾಯಿತೆಂಬುದನ್ನು ನೋಡಿರಿ.
Tefsiret në gjuhën arabe:
هٰذَا بَیَانٌ لِّلنَّاسِ وَهُدًی وَّمَوْعِظَةٌ لِّلْمُتَّقِیْنَ ۟
ಇದು (ಕುರ್‌ಆನ್) ಸಾರ್ವಜನಿಕರಿಗೆ ಸ್ಪಷ್ಟ ವಿವರಣೆಯಾಗಿದೆ ಮತ್ತು ಭಯಭಕ್ತಿಯುಳ್ಳವರಿಗೆ ಸನ್ಮಾರ್ಗದರ್ಶನ ಹಾಗೂ ಉಪದೇಶವಾಗಿದೆ.
Tefsiret në gjuhën arabe:
وَلَا تَهِنُوْا وَلَا تَحْزَنُوْا وَاَنْتُمُ الْاَعْلَوْنَ اِنْ كُنْتُمْ مُّؤْمِنِیْنَ ۟
ನೀವು ಧೈರ್ಯಗುಂದಬೇಡಿರಿ ಮತ್ತು ವ್ಯಥೆ ಪಡಬೇಡಿರಿ. ನೀವು ವಿಶ್ವಾಸಿಗಳಾಗಿದ್ದರೆ ನೀವೇ ಜಯಶಾಲಿಗಳಾಗುವಿರಿ.
Tefsiret në gjuhën arabe:
اِنْ یَّمْسَسْكُمْ قَرْحٌ فَقَدْ مَسَّ الْقَوْمَ قَرْحٌ مِّثْلُهٗ ؕ— وَتِلْكَ الْاَیَّامُ نُدَاوِلُهَا بَیْنَ النَّاسِ ۚ— وَلِیَعْلَمَ اللّٰهُ الَّذِیْنَ اٰمَنُوْا وَیَتَّخِذَ مِنْكُمْ شُهَدَآءَ ؕ— وَاللّٰهُ لَا یُحِبُّ الظّٰلِمِیْنَ ۟ۙ
ನಿಮಗೆ ಗಾಯಗಳಾಗಿದ್ದರೆ ನಿಮ್ಮ ಎದುರಾಳಿಗಳೂ ಸಹ ಇದೇ ರೀತಿಯ ಗಾಯಗಳಾಗಿದ್ದವು. ನಾವು ಈ ದಿನಗಳನ್ನು ಜನರ ನಡುವೆ ಬದಲಾಯಿಸುತ್ತಿರುತ್ತೇವೆ. ಇದು (ಉಹುದ್‌ನ ಪರಾಜಯವು) ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಅರಿಯಲಿಕ್ಕೂ, ನಿಮ್ಮಲ್ಲಿ ಕೆಲವರನ್ನು ಹುತಾತ್ಮರನ್ನಾಗಿ ಮಾಡಲಿಕ್ಕು ಆಗಿತ್ತು. ಅಲ್ಲಾಹನು ಅಕ್ರಮಿಗಳನ್ನು ಪ್ರೀತಿಸುವುದಿಲ್ಲ.
Tefsiret në gjuhën arabe:
 
Përkthimi i kuptimeve Surja: Ali Imran
Përmbajtja e sureve Numri i faqes
 
Përkthimi i kuptimeve të Kuranit Fisnik - Përkthimi kanadisht - Bashir Mysuri - Përmbajtja e përkthimeve

Përkthimi u bë nga shejh Beshir Mejsuri. Zhvillimi i kësaj vepre u bë i mundur nën mbikëqyrjen e Qendrës Ruvad et-Terxheme.

Mbyll