Check out the new design

Përkthimi i kuptimeve të Kuranit Fisnik - Përkthimi kanadisht - Bashir Mysuri * - Përmbajtja e përkthimeve


Përkthimi i kuptimeve Surja: El Maide   Ajeti:
یُرِیْدُوْنَ اَنْ یَّخْرُجُوْا مِنَ النَّارِ وَمَا هُمْ بِخٰرِجِیْنَ مِنْهَا ؗ— وَلَهُمْ عَذَابٌ مُّقِیْمٌ ۟
ಅವರು ನರಕದಿಂದ ಹೊರಹೋಗಲು ಬಯಸುತ್ತಾರೆ. ಆದರೆ ಅದರಿಂದ ಎಂದೆAದಿಗೂ ಹೊರಹೋಗಲು ಅವರಿಗೆ ಸಾಧ್ಯವಾಗದು. ಮತ್ತು ಅವರಿಗೆ ನಿರಂತರವಾದ ಶಿಕ್ಷೆಯಿರುವುದು.
Tefsiret në gjuhën arabe:
وَالسَّارِقُ وَالسَّارِقَةُ فَاقْطَعُوْۤا اَیْدِیَهُمَا جَزَآءً بِمَا كَسَبَا نَكَالًا مِّنَ اللّٰهِ ؕ— وَاللّٰهُ عَزِیْزٌ حَكِیْمٌ ۟
ಕದಿಯುವವನ ಮತ್ತು ಕದಿಯುವವಳ ಕೈಗಳನ್ನು ಕತ್ತರಿಸಿರಿ. ಅದು ಅವರು ಗಳಿಸಿರುವುದರ ಪ್ರತಿಫಲ ಮತ್ತು ಅಲ್ಲಾಹನ ಕಡೆಯ ಶಿಕ್ಷೆಯಾಗಿದೆ ಮತ್ತು ಅಲ್ಲಾಹನು ಸಾಮರ್ಥ್ಯವುಳ್ಳವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
Tefsiret në gjuhën arabe:
فَمَنْ تَابَ مِنْ بَعْدِ ظُلْمِهٖ وَاَصْلَحَ فَاِنَّ اللّٰهَ یَتُوْبُ عَلَیْهِ ؕ— اِنَّ اللّٰهَ غَفُوْرٌ رَّحِیْمٌ ۟
ಆದರೆ ಯಾರಾದರೂ ಅಕ್ರಮವೆಸಗಿದ ಬಳಿಕ ಪಶ್ಚಾತ್ತಾಪ ಪಟ್ಟರೆ ಮತ್ತು ಸುಧಾರಣೆ ಮಾಡಿಕೊಂಡರೆ ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣೆ ತೋರುವವನಾಗಿದ್ದಾನೆ.
Tefsiret në gjuhën arabe:
اَلَمْ تَعْلَمْ اَنَّ اللّٰهَ لَهٗ مُلْكُ السَّمٰوٰتِ وَالْاَرْضِ ؕ— یُعَذِّبُ مَنْ یَّشَآءُ وَیَغْفِرُ لِمَنْ یَّشَآءُ ؕ— وَاللّٰهُ عَلٰی كُلِّ شَیْءٍ قَدِیْرٌ ۟
ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನಿಗೇ ಸೇರಿದ್ದೆಂದು ನಿಮಗೆ ತಿಳಿದಿಲ್ಲವೇ? ತಾನಿಚ್ಛಿಸುವವರನ್ನು ಅವನು ಶಿಕ್ಷಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಅವನು ಕ್ಷಮಿಸುತ್ತಾನೆ. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
Tefsiret në gjuhën arabe:
یٰۤاَیُّهَا الرَّسُوْلُ لَا یَحْزُنْكَ الَّذِیْنَ یُسَارِعُوْنَ فِی الْكُفْرِ مِنَ الَّذِیْنَ قَالُوْۤا اٰمَنَّا بِاَفْوَاهِهِمْ وَلَمْ تُؤْمِنْ قُلُوْبُهُمْ ۛۚ— وَمِنَ الَّذِیْنَ هَادُوْا ۛۚ— سَمّٰعُوْنَ لِلْكَذِبِ سَمّٰعُوْنَ لِقَوْمٍ اٰخَرِیْنَ ۙ— لَمْ یَاْتُوْكَ ؕ— یُحَرِّفُوْنَ الْكَلِمَ مِنْ بَعْدِ مَوَاضِعِهٖ ۚ— یَقُوْلُوْنَ اِنْ اُوْتِیْتُمْ هٰذَا فَخُذُوْهُ وَاِنْ لَّمْ تُؤْتَوْهُ فَاحْذَرُوْا ؕ— وَمَنْ یُّرِدِ اللّٰهُ فِتْنَتَهٗ فَلَنْ تَمْلِكَ لَهٗ مِنَ اللّٰهِ شَیْـًٔا ؕ— اُولٰٓىِٕكَ الَّذِیْنَ لَمْ یُرِدِ اللّٰهُ اَنْ یُّطَهِّرَ قُلُوْبَهُمْ ؕ— لَهُمْ فِی الدُّنْیَا خِزْیٌ ۙ— وَّلَهُمْ فِی الْاٰخِرَةِ عَذَابٌ عَظِیْمٌ ۟
ಓ ಸಂದೇಶವಾಹಕರೇ, ನಾವು ಸತ್ಯವಿಶ್ವಾಸವಿಟ್ಟೆವು ಎಂದು ಬಾಯಿ ಮಾತಿನಲ್ಲಿ ಹೇಳುವ ಹಾಗೂ ಹೃದಯದಲ್ಲಿ ವಿಶ್ವಾಸವಿಲ್ಲದ ಕಪಟವಿಶ್ವಾಸಿಗಳ ಪೈಕಿ ಮತ್ತು ಯಹೂದರ ಪೈಕಿ ಸತ್ಯನಿಷೇಧದೆಡೆಗೆ ಧಾವಿಸುತ್ತಿರುವವರ ಅವಸ್ಥೆಯು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ. ಕೆಲವರು ಹೀಗಿರುತ್ತಾರೆ ಅವರು ಸುಳ್ಳು ವದಂತಿಗಳನ್ನು ಆಲಿಸುವವರೂ, ಮತ್ತು ನಿಮ್ಮ ಬಳಿಗೆ ಇದುವರೆಗೂ ಬರದಂತಹ ಜನರ ಗೂಢಾಚಾರರೂ ಆಗಿದ್ದಾರೆ. ಅವರು ಗ್ರಂಥ ವಾಕ್ಯಗಳನ್ನು ಅವುಗಳ ನೈಜ ಸ್ಥಾನದಿಂದ ಬದಲಿಸುತ್ತಾರೆ. ಮತ್ತು ಹೇಳುತ್ತಾರೆ (ಪೈಗಂಬರರ ಬಳಿ) ಇದೇ ವಿಧಿಯು ನಿಮಗೆ ನೀಡಲಾಗುವುದಾದರೆ ನೀವು ಅದನ್ನು ಸ್ವೀಕರಿಸಿರಿ. ಇದೇ ವಿಧಿಯು ನೀಡಲಾಗುವುದಿಲ್ಲವೆಂದಾದರೆ ನೀವು ಎಚ್ಚರ ವಹಿಸಿರಿ. ಅಲ್ಲಾಹನು ಯಾರನ್ನಾದರೂ ಗೊಂದಲಗೊಳಿಸಲು ಇಚ್ಚಿಸಿದರೆ ಅವನಿಗೆ ಅಲ್ಲಾಹನಿಂದ ಏನನ್ನೂ ತಡೆಯಲೂ ನಿಮಗೆ ಸಾಧ್ಯವಿಲ್ಲ. ಅಲ್ಲಾಹನು ಅವರ ಹೃದಯಗಳನ್ನು ಶುದ್ಧೀಕರಿಸಲು ಇಚ್ಛಿಸುವುದಿಲ್ಲ. ಅವರಿಗೆ ಇಹಲೋಕದಲ್ಲಿ ಅಪಮಾನವಿದೆ ಮತ್ತು ಪರಲೋಕದಲ್ಲೂ ಕಠಿಣ ಶಿಕ್ಷೆಯಿದೆ.
Tefsiret në gjuhën arabe:
 
Përkthimi i kuptimeve Surja: El Maide
Përmbajtja e sureve Numri i faqes
 
Përkthimi i kuptimeve të Kuranit Fisnik - Përkthimi kanadisht - Bashir Mysuri - Përmbajtja e përkthimeve

Përkthimi u bë nga shejh Beshir Mejsuri. Zhvillimi i kësaj vepre u bë i mundur nën mbikëqyrjen e Qendrës Ruvad et-Terxheme.

Mbyll