Përkthimi i kuptimeve të Kuranit Fisnik - الترجمة الكنادية * - Përmbajtja e përkthimeve

XML CSV Excel API
Please review the Terms and Policies

Përkthimi i kuptimeve Surja: Suretu Merjem   Ajeti:

ಸೂರ ಮರ್ಯಮ್

كٓهٰیٰعٓصٓ ۟
ಕಾಫ್ ಹಾ ಯಾ ಐನ್ ಸ್ವಾದ್.
Tefsiret në gjuhën arabe:
ذِكْرُ رَحْمَتِ رَبِّكَ عَبْدَهٗ زَكَرِیَّا ۟ۖۚ
ಇದು ನಿಮ್ಮ ಪರಿಪಾಲಕನು (ಅಲ್ಲಾಹು) ತನ್ನ ದಾಸ ಝಕರಿಯ್ಯಾರಿಗೆ ದಯಪಾಲಿಸಿದ ದಯೆಯ ಉಲ್ಲೇಖವಾಗಿದೆ.
Tefsiret në gjuhën arabe:
اِذْ نَادٰی رَبَّهٗ نِدَآءً خَفِیًّا ۟
ಅವರು (ಝಕರಿಯ್ಯಾ) ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ರಹಸ್ಯವಾಗಿ ಕರೆದು ಪ್ರಾರ್ಥಿಸಿದ ಸಂದರ್ಭ.
Tefsiret në gjuhën arabe:
قَالَ رَبِّ اِنِّیْ وَهَنَ الْعَظْمُ مِنِّیْ وَاشْتَعَلَ الرَّاْسُ شَیْبًا وَّلَمْ اَكُنْ بِدُعَآىِٕكَ رَبِّ شَقِیًّا ۟
ಅವರು ಹೇಳಿದರು: “ನನ್ನ ಪರಿಪಾಲಕನೇ! ನನ್ನ ಮೂಳೆಗಳು ದುರ್ಬಲವಾಗಿವೆ. ವಯಸ್ಸಾಗಿ ತಲೆಯು ಬೆಳ್ಳಗಾಗಿದೆ. ನನ್ನ ಪರಿಪಾಲಕನೇ! ನಿನ್ನಲ್ಲಿ ಪ್ರಾರ್ಥಿಸಿ ನಾನು ಯಾವತ್ತೂ ನಿರಾಶನಾಗಿಲ್ಲ.
Tefsiret në gjuhën arabe:
وَاِنِّیْ خِفْتُ الْمَوَالِیَ مِنْ وَّرَآءِیْ وَكَانَتِ امْرَاَتِیْ عَاقِرًا فَهَبْ لِیْ مِنْ لَّدُنْكَ وَلِیًّا ۟ۙ
ನಿಶ್ಚಯವಾಗಿಯೂ, ನನ್ನ ಮರಣಾನಂತರ ನನ್ನ ಕುಟುಂಬದವರ ಬಗ್ಗೆ ನಾನು ಭಯವಾಗುತ್ತಿದೆ. ನನ್ನ ಪತ್ನಿ ಬಂಜೆಯಾಗಿದ್ದಾಳೆ. ಆದ್ದರಿಂದ ನನಗೆ ನಿನ್ನ ಕಡೆಯಿಂದ ಒಬ್ಬ ಉತ್ತರಾಧಿಕಾರಿಯನ್ನು ಕರುಣಿಸು.
Tefsiret në gjuhën arabe:
یَّرِثُنِیْ وَیَرِثُ مِنْ اٰلِ یَعْقُوْبَ ۗ— وَاجْعَلْهُ رَبِّ رَضِیًّا ۟
ಅವನು ನನ್ನ ವಾರಸುದಾರ ಮತ್ತು ಯಾಕೂಬ್ ಕುಟುಂಬದ ವಾರಸುದಾರನಾಗಿರಲಿ. ಓ ನನ್ನ ಪರಿಪಾಲಕನೇ! ಅವನನ್ನು ಸಂತೃಪ್ತ ದಾಸನನ್ನಾಗಿ ಮಾಡು.”
Tefsiret në gjuhën arabe:
یٰزَكَرِیَّاۤ اِنَّا نُبَشِّرُكَ بِغُلٰمِ ١سْمُهٗ یَحْیٰی ۙ— لَمْ نَجْعَلْ لَّهٗ مِنْ قَبْلُ سَمِیًّا ۟
“ಓ ಝಕರಿಯ್ಯಾ! ನಿಶ್ಚಯವಾಗಿಯೂ ನಾವು ನಿಮಗೆ ಒಬ್ಬ ಪುತ್ರನ ಜನನದ ಬಗ್ಗೆ ಶುಭವಾರ್ತೆ ನೀಡುತ್ತಿದ್ದೇವೆ. ಅವನ ಹೆಸರು ಯಹ್ಯಾ. ಇದಕ್ಕಿಂತ ಮೊದಲು ನಾವು ಯಾರಿಗೂ ಆ ಹೆಸರನ್ನು ನೀಡಿಲ್ಲ.”
Tefsiret në gjuhën arabe:
قَالَ رَبِّ اَنّٰی یَكُوْنُ لِیْ غُلٰمٌ وَّكَانَتِ امْرَاَتِیْ عَاقِرًا وَّقَدْ بَلَغْتُ مِنَ الْكِبَرِ عِتِیًّا ۟
ಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಬ್ಬ ಪುತ್ರ ಉಂಟಾಗುವುದು ಹೇಗೆ? ನನ್ನ ಪತ್ನಿ ಬಂಜೆಯಾಗಿದ್ದಾಳೆ. ನಾನಂತೂ ವಯೋವೃದ್ಧನಾಗಿ ಬಿಟ್ಟಿದ್ದೇನೆ.”
Tefsiret në gjuhën arabe:
قَالَ كَذٰلِكَ ۚ— قَالَ رَبُّكَ هُوَ عَلَیَّ هَیِّنٌ وَّقَدْ خَلَقْتُكَ مِنْ قَبْلُ وَلَمْ تَكُ شَیْـًٔا ۟
ಅಲ್ಲಾಹು ಹೇಳಿದನು: “ಅದು ಹಾಗೆಯೇ ಆಗಿದೆ. ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳುತ್ತಾನೆ: ಅದು ನನಗೆ ಅತ್ಯಂತ ಸುಲಭವಾಗಿದೆ. ಇದಕ್ಕೆ ಮೊದಲು, ನೀವು ಅಸ್ತಿತ್ವದಲ್ಲೇ ಇರದಿದ್ದಾಗ ನಾನು ನಿಮ್ಮನ್ನು ಸೃಷ್ಟಿಸಿದ್ದೇನೆ.”
Tefsiret në gjuhën arabe:
قَالَ رَبِّ اجْعَلْ لِّیْۤ اٰیَةً ؕ— قَالَ اٰیَتُكَ اَلَّا تُكَلِّمَ النَّاسَ ثَلٰثَ لَیَالٍ سَوِیًّا ۟
ಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಂದು ದೃಷ್ಟಾಂತವನ್ನು ನಿಶ್ಚಯಿಸಿಕೊಡು.” ಅಲ್ಲಾಹು ಹೇಳಿದನು: “ನೀವು ಸರಿಯಾಗಿದ್ದರೂ ಸಹ ಮೂರು ರಾತ್ರಿಗಳವರೆಗೆ ಜನರೊಡನೆ ಮಾತನಾಡಲು ನಿಮಗೆ ಸಾಧ್ಯವಾಗದಿರುವುದು ನಿಮಗಿರುವ ದೃಷ್ಟಾಂತವಾಗಿದೆ.”
Tefsiret në gjuhën arabe:
فَخَرَجَ عَلٰی قَوْمِهٖ مِنَ الْمِحْرَابِ فَاَوْحٰۤی اِلَیْهِمْ اَنْ سَبِّحُوْا بُكْرَةً وَّعَشِیًّا ۟
ನಂತರ ಅವರು ಪ್ರಾರ್ಥನಾ ಕೊಠಡಿಯಿಂದ ಜನರ ಬಳಿಗೆ ತೆರಳಿ, “ನೀವು ಮುಂಜಾನೆ ಮತ್ತು ಸಂಜೆ ಅಲ್ಲಾಹನ ಪರಿಶುದ್ಧತೆಯನ್ನು ಕೊಂಡಾಡಿರಿ” ಎಂದು ಸನ್ನೆ ಮಾಡಿ ಹೇಳಿದರು.
Tefsiret në gjuhën arabe:
یٰیَحْیٰی خُذِ الْكِتٰبَ بِقُوَّةٍ ؕ— وَاٰتَیْنٰهُ الْحُكْمَ صَبِیًّا ۟ۙ
“ಓ ಯಹ್ಯಾ! ಗ್ರಂಥವನ್ನು ಬಿಗಿಯಾಗಿ ಹಿಡಿದುಕೊಳ್ಳಿ.” ನಾವು ಅವರಿಗೆ ಬಾಲ್ಯದಲ್ಲೇ ವಿವೇಕವನ್ನು ನೀಡಿದೆವು.
Tefsiret në gjuhën arabe:
وَّحَنَانًا مِّنْ لَّدُنَّا وَزَكٰوةً ؕ— وَكَانَ تَقِیًّا ۟ۙ
ಅವರಿಗೆ ನಮ್ಮ ಕಡೆಯ ವಾತ್ಸಲ್ಯ ಮತ್ತು ಪರಿಶುದ್ಧತೆಯನ್ನೂ ನೀಡಿದೆವು. ಅವರು ದೇವಭಯವುಳ್ಳವರಾಗಿದ್ದರು.
Tefsiret në gjuhën arabe:
وَّبَرًّا بِوَالِدَیْهِ وَلَمْ یَكُنْ جَبَّارًا عَصِیًّا ۟
ಅವರು ತಂದೆ-ತಾಯಿಗೆ ಒಳಿತು ಮಾಡುತ್ತಿದ್ದರು. ಅವರು ನಿರಂಕುಶರೋ ವಿಧೇಯತೆಯಿಲ್ಲದವರೋ ಆಗಿರಲಿಲ್ಲ.
Tefsiret në gjuhën arabe:
وَسَلٰمٌ عَلَیْهِ یَوْمَ وُلِدَ وَیَوْمَ یَمُوْتُ وَیَوْمَ یُبْعَثُ حَیًّا ۟۠
ಅವರು ಜನಿಸಿದ ದಿನ, ನಿಧನವಾಗುವ ದಿನ ಮತ್ತು ಅವರಿಗೆ ಪುನಃ ಜೀವ ನೀಡಿ ಎಬ್ಬಿಸಲಾಗುವ ದಿನ ಅವರ ಮೇಲೆ ಶಾಂತಿಯಿರುವುದು.
Tefsiret në gjuhën arabe:
وَاذْكُرْ فِی الْكِتٰبِ مَرْیَمَ ۘ— اِذِ انْتَبَذَتْ مِنْ اَهْلِهَا مَكَانًا شَرْقِیًّا ۟ۙ
ಈ ಗ್ರಂಥದಲ್ಲಿ ಮರ್ಯಮರ ಬಗ್ಗೆ ತಿಳಿಸಿರಿ. ಅವರು ತಮ್ಮ ಮನೆಯವರಿಂದ ದೂರವಾಗಿ ಪೂರ್ವದಲ್ಲಿರುವ ಒಂದು ಸ್ಥಳಕ್ಕೆ ತೆರಳಿದ ಸಂದರ್ಭ.
Tefsiret në gjuhën arabe:
فَاتَّخَذَتْ مِنْ دُوْنِهِمْ حِجَابًا ۫— فَاَرْسَلْنَاۤ اِلَیْهَا رُوْحَنَا فَتَمَثَّلَ لَهَا بَشَرًا سَوِیًّا ۟
ಜನರು ನೋಡದಿರಲು ಅವರು ಒಂದು ಪರದೆಯನ್ನು ಹಾಕಿಕೊಂಡರು. ನಂತರ ನಾವು ಅವರ ಬಳಿಗೆ ನಮ್ಮ ಆತ್ಮವನ್ನು (ಜಿಬ್ರೀಲರನ್ನು) ಕಳುಹಿಸಿದೆವು. ಜಿಬ್ರೀಲ್ ಅವರ ಮುಂದೆ ಪೂರ್ಣ ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು.
Tefsiret në gjuhën arabe:
قَالَتْ اِنِّیْۤ اَعُوْذُ بِالرَّحْمٰنِ مِنْكَ اِنْ كُنْتَ تَقِیًّا ۟
ಮರ್ಯಮ್ ಹೇಳಿದರು: “ನಾನು ನಿನ್ನ ಕೆಡುಕಿನಿಂದ ಪರಮ ದಯಾಮಯನಲ್ಲಿ (ಅಲ್ಲಾಹನಲ್ಲಿ) ಅಭಯಕೋರುತ್ತೇನೆ. ನೀನು ದೇವಭಯವುಳ್ಳವನಾದರೆ (ನನ್ನಿಂದ ದೂರವಾಗು).”[1]
[1] ಮನುಷ್ಯರೂಪದಲ್ಲಿ ಬಂದದ್ದು ಜಿಬ್ರೀಲ್ ಎಂದು ಮರ್ಯಮರಿಗೆ ತಿಳಿಯಲಿಲ್ಲ.
Tefsiret në gjuhën arabe:
قَالَ اِنَّمَاۤ اَنَا رَسُوْلُ رَبِّكِ ۖۗ— لِاَهَبَ لَكِ غُلٰمًا زَكِیًّا ۟
ಜಿಬ್ರೀಲ್ ಹೇಳಿದರು: “ನಾನು ನಿಮ್ಮ ಪರಿಪಾಲಕನ (ಅಲ್ಲಾಹನ) ದೂತನಾಗಿದ್ದೇನೆ. ನಿಮಗೆ ಒಬ್ಬ ಪರಿಶುದ್ಧ ಪುತ್ರನನ್ನು ನೀಡಲು ನಾನು ಬಂದಿದ್ದೇನೆ.”
Tefsiret në gjuhën arabe:
قَالَتْ اَنّٰی یَكُوْنُ لِیْ غُلٰمٌ وَّلَمْ یَمْسَسْنِیْ بَشَرٌ وَّلَمْ اَكُ بَغِیًّا ۟
ಮರ್ಯಮ್ ಹೇಳಿದರು: “ನನಗೆ ಪುತ್ರ ಉಂಟಾಗುವುದು ಹೇಗೆ? ಯಾವುದೇ ಮನುಷ್ಯನು ನನ್ನನ್ನು ಮುಟ್ಟಿಲ್ಲ. ನಾನು ಶೀಲಗೆಟ್ಟವಳೂ ಅಲ್ಲ.”
Tefsiret në gjuhën arabe:
قَالَ كَذٰلِكِ ۚ— قَالَ رَبُّكِ هُوَ عَلَیَّ هَیِّنٌ ۚ— وَلِنَجْعَلَهٗۤ اٰیَةً لِّلنَّاسِ وَرَحْمَةً مِّنَّا ۚ— وَكَانَ اَمْرًا مَّقْضِیًّا ۟
ಜಿಬ್ರೀಲ್ ಹೇಳಿದರು: “ಸಂಗತಿ ನೀವು ಹೇಳಿದಂತೆಯೇ ಆಗಿದೆ. ಆದರೆ, ಅದು ನನಗೆ ಬಹಳ ಸುಲಭವಾಗಿದೆಯೆಂದು ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳುತ್ತಾನೆ. ನಾವು ಆ ಮಗುವನ್ನು ಮನುಷ್ಯರಿಗೆ ಒಂದು ದೃಷ್ಟಾಂತವಾಗಿ ಮಾಡಲು ಬಯಸುತ್ತೇವೆ. ಆ ಮಗು ನಮ್ಮ ಕಡೆಯ ವಿಶೇಷ ದಯೆಯಾಗಿದ್ದಾರೆ. ಇದು ತೀರ್ಮಾನಿಸಲಾದ ಸಂಗತಿಯಾಗಿದೆ.”
Tefsiret në gjuhën arabe:
فَحَمَلَتْهُ فَانْتَبَذَتْ بِهٖ مَكَانًا قَصِیًّا ۟
ಮರ್ಯಮ್ ಮಗುವಿನ ಗರ್ಭ ಧರಿಸಿದರು. ನಂತರ ಆ ಗರ್ಭದೊಂದಿಗೆ ವಿದೂರ ಸ್ಥಳದಲ್ಲಿ ವಾಸಿಸತೊಡಗಿದರು.
Tefsiret në gjuhën arabe:
فَاَجَآءَهَا الْمَخَاضُ اِلٰی جِذْعِ النَّخْلَةِ ۚ— قَالَتْ یٰلَیْتَنِیْ مِتُّ قَبْلَ هٰذَا وَكُنْتُ نَسْیًا مَّنْسِیًّا ۟
ನಂತರ ಹೆರಿಗೆ ನೋವು ಅವರನ್ನು ಖರ್ಜೂರದ ಮರದ ಬಳಿಗೆ ತಲುಪಿಸಿತು. ಅವರು ಹೇಳಿದರು: “ಇದಕ್ಕಿಂತ ಮೊದಲೇ ನಾನು ತೀರಿ ಹೋಗಿದ್ದರೆ ಮತ್ತು ಜನರ ನೆನಪಿನಿಂದ ನಾನು ಸಂಪೂರ್ಣ ಮಾಸಿ ಹೋಗಿದ್ದರೆ ಎಷ್ಟು ಚೆನ್ನಾಗಿತ್ತು!”[1]
[1] ನಾನು ಈ ಮಗುವನ್ನು ಹೆತ್ತರೆ ಜನರಿಗೆ ಏನು ಉತ್ತರ ಕೊಡಲಿ? ನನ್ನ ಮಾತನ್ನು ಅವರು ನಂಬುವರೇ? ಅವರನ್ನು ನಾನು ಹೇಗೆ ಸಮಾಧಾನಪಡಿಸಲಿ? ಎಂಬ ಚಿಂತೆಯಿಂದ ಅವರು ಈ ಮಾತು ಹೇಳಿದ್ದರು.
Tefsiret në gjuhën arabe:
فَنَادٰىهَا مِنْ تَحْتِهَاۤ اَلَّا تَحْزَنِیْ قَدْ جَعَلَ رَبُّكِ تَحْتَكِ سَرِیًّا ۟
ಆಗ ಮರ್ಯಮರ ತಳಭಾಗದಿಂದ ಒಂದು ಕೂಗು ಕೇಳಿಸಿತು: “ಬೇಸರ ಪಡಬೇಡಿ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮ ತಳಭಾಗದಲ್ಲಿ ಒಂದು ತೊರೆಯನ್ನು ಹರಿಸಿದ್ದಾನೆ.
Tefsiret në gjuhën arabe:
وَهُزِّیْۤ اِلَیْكِ بِجِذْعِ النَّخْلَةِ تُسٰقِطْ عَلَیْكِ رُطَبًا جَنِیًّا ۟ؗ
ಖರ್ಜೂರದ ಮರವನ್ನು ನಿಮ್ಮ ಕಡೆಗೆ ಎಳೆದು ಕುಲುಕಿರಿ. ಆಗ ಅದು ನಿಮಗೆ ಹಣ್ಣಾದ ತಾಜಾ ಖರ್ಜೂರವನ್ನು ಬೀಳಿಸುತ್ತದೆ.
Tefsiret në gjuhën arabe:
فَكُلِیْ وَاشْرَبِیْ وَقَرِّیْ عَیْنًا ۚ— فَاِمَّا تَرَیِنَّ مِنَ الْبَشَرِ اَحَدًا ۙ— فَقُوْلِیْۤ اِنِّیْ نَذَرْتُ لِلرَّحْمٰنِ صَوْمًا فَلَنْ اُكَلِّمَ الْیَوْمَ اِنْسِیًّا ۟ۚ
ನೀವು ತಿನ್ನಿರಿ, ಕುಡಿಯಿರಿ ಮತ್ತು ಕಣ್ಮನ ತಣಿಸಿರಿ. ನೀವು ಯಾವುದೇ ಒಬ್ಬ ಮನುಷ್ಯನನ್ನು ಕಂಡರೆ, “ನಾನು ಪರಮ ದಯಾಮಯನಿಗೆ (ಅಲ್ಲಾಹನಿಗೆ) ಉಪವಾಸದ ಹರಕೆ ಹೊತ್ತಿದ್ದೇನೆ. ಆದ್ದರಿಂದ ಇಂದು ನಾನು ಯಾವುದೇ ವ್ಯಕ್ತಿಯೊಡನೆ ಮಾತನಾಡುವುದಿಲ್ಲ” ಎಂದು ಹೇಳಿರಿ.
Tefsiret në gjuhën arabe:
فَاَتَتْ بِهٖ قَوْمَهَا تَحْمِلُهٗ ؕ— قَالُوْا یٰمَرْیَمُ لَقَدْ جِئْتِ شَیْـًٔا فَرِیًّا ۟
ನಂತರ ಅವರು ಆ ಮಗುವನ್ನು ಹಿಡಿದುಕೊಂಡು ತಮ್ಮ ಜನರ ಬಳಿಗೆ ಬಂದರು. ಜನರು ಹೇಳಿದರು: “ಓ ಮರ್ಯಮ್! ನೀನು ಬಹಳ ಕೆಟ್ಟ ಕೆಲಸವನ್ನು ಮಾಡಿದ್ದೀಯಾ.
Tefsiret në gjuhën arabe:
یٰۤاُخْتَ هٰرُوْنَ مَا كَانَ اَبُوْكِ امْرَاَ سَوْءٍ وَّمَا كَانَتْ اُمُّكِ بَغِیًّا ۟ۖۚ
ಓ ಹಾರೂನರ ಸಹೋದರೀ! ನಿನ್ನ ತಂದೆ ಕೆಟ್ಟ ಮನುಷ್ಯನಾಗಿರಲಿಲ್ಲ. ನಿನ್ನ ತಾಯಿ ಶೀಲಗೆಟ್ಟ ಮಹಿಳೆಯಾಗಿರಲಿಲ್ಲ.”
Tefsiret në gjuhën arabe:
فَاَشَارَتْ اِلَیْهِ ۫ؕ— قَالُوْا كَیْفَ نُكَلِّمُ مَنْ كَانَ فِی الْمَهْدِ صَبِیًّا ۟
ಆಗ ಮರ್ಯಮ್ ಮಗುವಿನ ಕಡೆಗೆ ಸನ್ನೆ ಮಾಡಿದರು. ಜನರು ಕೇಳಿದರು: “ತೊಟ್ಟಿಲಲ್ಲಿರುವ ಮಗುವಿನೊಂದಿಗೆ ನಾವು ಮಾತನಾಡುವುದು ಹೇಗೆ?”
Tefsiret në gjuhën arabe:
قَالَ اِنِّیْ عَبْدُ اللّٰهِ ۫ؕ— اٰتٰىنِیَ الْكِتٰبَ وَجَعَلَنِیْ نَبِیًّا ۟ۙ
ಮಗು ಹೇಳಿತು: “ನಾನು ಅಲ್ಲಾಹನ ದಾಸ. ಅವನು ನನಗೆ ಗ್ರಂಥವನ್ನು ನೀಡಿದ್ದಾನೆ ಮತ್ತು ನನ್ನನ್ನು ಪ್ರವಾದಿಯಾಗಿ ಮಾಡಿದ್ದಾನೆ.
Tefsiret në gjuhën arabe:
وَّجَعَلَنِیْ مُبٰرَكًا اَیْنَ مَا كُنْتُ ۪— وَاَوْصٰنِیْ بِالصَّلٰوةِ وَالزَّكٰوةِ مَا دُمْتُ حَیًّا ۟ۙ
ನಾನು ಎಲ್ಲೇ ಇದ್ದರೂ ಅವನು ನನ್ನನ್ನು ಸಮೃದ್ಧಿಯುಳ್ಳವನಾಗಿ ಮಾಡಿದ್ದಾನೆ. ನಾನು ಜೀವಂತವಿರುವ ಕಾಲದ ತನಕ ನಮಾಝ್ ಮಾಡಲು ಮತ್ತು ಝಕಾತ್ ನೀಡಲು ಅವನು ನನಗೆ ಆಜ್ಞಾಪಿಸಿದ್ದಾನೆ.
Tefsiret në gjuhën arabe:
وَّبَرًّا بِوَالِدَتِیْ ؗ— وَلَمْ یَجْعَلْنِیْ جَبَّارًا شَقِیًّا ۟
ನನ್ನ ತಾಯಿಗೆ ಒಳಿತು ಮಾಡಲು (ನನಗೆ ಆಜ್ಞಾಪಿಸಿದ್ದಾನೆ). ಅವನು ನನ್ನನ್ನು ನಿರಂಕುಶ ಅಥವಾ ನತದೃಷ್ಟನನ್ನಾಗಿ ಮಾಡಿಲ್ಲ.
Tefsiret në gjuhën arabe:
وَالسَّلٰمُ عَلَیَّ یَوْمَ وُلِدْتُّ وَیَوْمَ اَمُوْتُ وَیَوْمَ اُبْعَثُ حَیًّا ۟
ನಾನು ಜನಿಸಿದ ದಿನ, ನಿಧನನಾಗುವ ದಿನ ಮತ್ತು ನನಗೆ ಜೀವ ನೀಡಿ ಎಬ್ಬಿಸಲಾಗುವ ದಿನ ನನ್ನ ಮೇಲೆ ಶಾಂತಿಯಿರುವುದು.”
Tefsiret në gjuhën arabe:
ذٰلِكَ عِیْسَی ابْنُ مَرْیَمَ ۚ— قَوْلَ الْحَقِّ الَّذِیْ فِیْهِ یَمْتَرُوْنَ ۟
ಅವರೇ ಮರ್ಯಮರ ಮಗ ಈಸಾ (ಯೇಸು). ಜನರು ಸಂಶಯಪಡುತ್ತಿರುವ ಆ ಸತ್ಯ ವಚನವು ಇದೇ ಆಗಿದೆ.
Tefsiret në gjuhën arabe:
مَا كَانَ لِلّٰهِ اَنْ یَّتَّخِذَ مِنْ وَّلَدٍ ۙ— سُبْحٰنَهٗ ؕ— اِذَا قَضٰۤی اَمْرًا فَاِنَّمَا یَقُوْلُ لَهٗ كُنْ فَیَكُوْنُ ۟ؕ
ಒಬ್ಬ ಪುತ್ರನಿರುವುದು ಅಲ್ಲಾಹನಿಗೆ ಯೋಗ್ಯವಾದುದಲ್ಲ. ಅವನು ಪರಿಶುದ್ಧನು. ಅವನು ಯಾವುದೇ ವಿಷಯವನ್ನು ತೀರ್ಮಾನಿಸಿದರೆ ಅದರೊಂದಿಗೆ “ಉಂಟಾಗು” ಎಂದು ಮಾತ್ರ ಹೇಳುತ್ತಾನೆ. ತಕ್ಷಣ ಅದು ಉಂಟಾಗುತ್ತದೆ!
Tefsiret në gjuhën arabe:
وَاِنَّ اللّٰهَ رَبِّیْ وَرَبُّكُمْ فَاعْبُدُوْهُ ؕ— هٰذَا صِرَاطٌ مُّسْتَقِیْمٌ ۟
(ಈಸಾ ಹೇಳಿದರು): “ನಿಶ್ಚಯವಾಗಿಯೂ ಅಲ್ಲಾಹನೇ ನನ್ನ ಮತ್ತು ನಿಮ್ಮ ಪರಿಪಾಲಕನು. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಇದೇ ನೇರವಾದ ಮಾರ್ಗ.”
Tefsiret në gjuhën arabe:
فَاخْتَلَفَ الْاَحْزَابُ مِنْ بَیْنِهِمْ ۚ— فَوَیْلٌ لِّلَّذِیْنَ كَفَرُوْا مِنْ مَّشْهَدِ یَوْمٍ عَظِیْمٍ ۟
ನಂತರ ಅವರಲ್ಲಿನ ಗುಂಪುಗಳು ಪರಸ್ಪರ ಭಿನ್ನಮತ ತಳೆದರು.[1] ಆದ್ದರಿಂದ, ಒಂದು ಭಯಾನಕ ದಿನದ ಸಾನಿಧ್ಯದಿಂದಾಗಿ ಸತ್ಯನಿಷೇಧಿಗಳಿಗೆ ವಿನಾಶ ಕಾದಿದೆ.
[1] ಗುಂಪುಗಳು ಎಂದರೆ ಯಹೂದಿಗಳು ಮತ್ತು ಕ್ರೈಸ್ತರಲ್ಲೇ ಇದ್ದಂತಹ ಅನೇಕ ಪಂಗಡಗಳು. ಯಹೂದಿಗಳು ಈಸಾ (ಯೇಸು) ರನ್ನು ಮಾಟಗಾರ ಮತ್ತು ವೇಶ್ಯೆಯ ಮಗ (ಅಲ್ಲಾಹು ಕಾಪಾಡಲಿ) ಎಂದು ಹೇಳಿದರು. ಕ್ರೈಸ್ತರಲ್ಲಿ ಸೇರಿದ ನೆಸ್ಟೋರಿಯನ್‌ಗಳು ಈಸಾರನ್ನು ದೇವಪುತ್ರ ಎಂದರು. ಕೆಥೋಲಿಕರು ಮೂರು ದೇವರುಗಳಲ್ಲಿ ಒಬ್ಬರು ಎಂದರು. ಆರ್ಥೋಡಾಕ್ಸ್‌ನವರು ಈಸಾರನ್ನು ದೇವರು ಎಂದೇ ಕರೆದರು. ಯಹೂದಿಗಳು ಈಸಾ (ಅವರ ಮೇಲೆ ಶಾಂತಿಯಿರಲಿ) ರನ್ನು ಅವರ ಸ್ಥಾನಕ್ಕಿಂತ ಕೆಳಗಿಳಿಸಿದರೆ, ಕ್ರೈಸ್ತರು ಅವರನ್ನು ಅವರ ಸ್ಥಾನದಿಂದ ಅಲ್ಲಾಹನ ಸ್ಥಾನಕ್ಕೇರಿಸಿದರು.
Tefsiret në gjuhën arabe:
اَسْمِعْ بِهِمْ وَاَبْصِرْ ۙ— یَوْمَ یَاْتُوْنَنَا لٰكِنِ الظّٰلِمُوْنَ الْیَوْمَ فِیْ ضَلٰلٍ مُّبِیْنٍ ۟
ಅವರು ನಮ್ಮ ಬಳಿಗೆ ಬರುವ ಆ ದಿನದಂದು ಅವರ ಕೇಳುವ ಶಕ್ತಿ ಮತ್ತು ದೃಷ್ಟಿ ಎಷ್ಟು ಚೆನ್ನಾಗಿರುತ್ತದೆ! ಆದರೆ ಅಂದು ಆ ಅಕ್ರಮಿಗಳು ಸ್ಪಷ್ಟ ದುರ್ಮಾರ್ಗದಲ್ಲಿರುವರು.
Tefsiret në gjuhën arabe:
وَاَنْذِرْهُمْ یَوْمَ الْحَسْرَةِ اِذْ قُضِیَ الْاَمْرُ ۘ— وَهُمْ فِیْ غَفْلَةٍ وَّهُمْ لَا یُؤْمِنُوْنَ ۟
(ಪ್ರವಾದಿಯವರೇ) ಆ ವಿಷಾದದ ದಿನದ (ಅಂತ್ಯದಿನದ) ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಅಂದರೆ, ಎಲ್ಲಾ ವಿಷಯಗಳನ್ನು (ಅಂತಿಮವಾಗಿ) ತೀರ್ಮಾನಿಸಲಾಗುವ ಸಂದರ್ಭದ ಬಗ್ಗೆ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ. ಅವರು ವಿಶ್ವಾಸವಿಡುವುದಿಲ್ಲ.
Tefsiret në gjuhën arabe:
اِنَّا نَحْنُ نَرِثُ الْاَرْضَ وَمَنْ عَلَیْهَا وَاِلَیْنَا یُرْجَعُوْنَ ۟۠
ನಿಶ್ಚಯವಾಗಿಯೂ ನಾವೇ ಭೂಮಿ ಮತ್ತು ಅದರಲ್ಲಿರುವ ಎಲ್ಲರ ಉತ್ತರಾಧಿಕಾರಿಗಳು. ಅವರನ್ನು ನಮ್ಮ ಬಳಿಗೇ ಮರಳಿಸಲಾಗುತ್ತದೆ.
Tefsiret në gjuhën arabe:
وَاذْكُرْ فِی الْكِتٰبِ اِبْرٰهِیْمَ ؕ۬— اِنَّهٗ كَانَ صِدِّیْقًا نَّبِیًّا ۟
ಈ ಗ್ರಂಥದಲ್ಲಿ ಇಬ್ರಾಹೀಮರ ಬಗ್ಗೆ ತಿಳಿಸಿರಿ. ನಿಶ್ಚಯವಾಗಿಯೂ ಅವರು ಸತ್ಯವಂತರಾದ ಪ್ರವಾದಿಯಾಗಿದ್ದರು.
Tefsiret në gjuhën arabe:
اِذْ قَالَ لِاَبِیْهِ یٰۤاَبَتِ لِمَ تَعْبُدُ مَا لَا یَسْمَعُ وَلَا یُبْصِرُ وَلَا یُغْنِیْ عَنْكَ شَیْـًٔا ۟
ಅವರು ತಮ್ಮ ತಂದೆಯೊಡನೆ ಹೇಳಿದ ಸಂದರ್ಭ: “ಪ್ರೀತಿಯ ಅಪ್ಪಾ! ನೀವು ನಿಮ್ಮ ಮಾತನ್ನು ಕೇಳದ, ನಿಮ್ಮನ್ನು ನೋಡದ ಮತ್ತು ನಿಮಗೆ ಯಾವುದೇ ಉಪಕಾರ ಮಾಡದ ಈ ವಿಗ್ರಹಗಳನ್ನು ಏಕೆ ಆರಾಧಿಸುತ್ತೀರಿ?
Tefsiret në gjuhën arabe:
یٰۤاَبَتِ اِنِّیْ قَدْ جَآءَنِیْ مِنَ الْعِلْمِ مَا لَمْ یَاْتِكَ فَاتَّبِعْنِیْۤ اَهْدِكَ صِرَاطًا سَوِیًّا ۟
ಪ್ರೀತಿಯ ಅಪ್ಪಾ! ನಿಜವಾಗಿಯೂ ನಿಮ್ಮ ಬಳಿ ಇಲ್ಲದ ಜ್ಞಾನವು ನನ್ನ ಬಳಿಗೆ ಬಂದಿದೆ. ಆದ್ದರಿಂದ ನಾನು ಹೇಳುವಂತೆ ಕೇಳಿರಿ. ನಾನು ನಿಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತೇನೆ.
Tefsiret në gjuhën arabe:
یٰۤاَبَتِ لَا تَعْبُدِ الشَّیْطٰنَ ؕ— اِنَّ الشَّیْطٰنَ كَانَ لِلرَّحْمٰنِ عَصِیًّا ۟
ಪ್ರೀತಿಯ ಅಪ್ಪಾ! ಶೈತಾನನನ್ನು ಆರಾಧಿಸಬೇಡಿ. ಶೈತಾನನು ಪರಮ ದಯಾಳುವಿಗೆ (ಅಲ್ಲಾಹನಿಗೆ) ಅವಿಧೇಯನಾಗಿದ್ದಾನೆ.
Tefsiret në gjuhën arabe:
یٰۤاَبَتِ اِنِّیْۤ اَخَافُ اَنْ یَّمَسَّكَ عَذَابٌ مِّنَ الرَّحْمٰنِ فَتَكُوْنَ لِلشَّیْطٰنِ وَلِیًّا ۟
ಪ್ರೀತಿಯ ಅಪ್ಪಾ! ಪರಮ ದಯಾಳುವಿನ (ಅಲ್ಲಾಹನ) ಯಾವುದಾದರೂ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ. ಹಾಗೇನಾದರೂ ಆದರೆ ನೀವು ಶೈತಾನನ ಮಿತ್ರನಾಗಿ ಬಿಡುವಿರಿ.”
Tefsiret në gjuhën arabe:
قَالَ اَرَاغِبٌ اَنْتَ عَنْ اٰلِهَتِیْ یٰۤاِبْرٰهِیْمُ ۚ— لَىِٕنْ لَّمْ تَنْتَهِ لَاَرْجُمَنَّكَ وَاهْجُرْنِیْ مَلِیًّا ۟
ತಂದೆ ಹೇಳಿದನು: “ಇಬ್ರಾಹೀಮ್! ನೀನು ನನ್ನ ದೇವರುಗಳನ್ನು ತಿರಸ್ಕರಿಸುತ್ತಿರುವೆಯಾ? ನೀನು ಇದನ್ನು ನಿಲ್ಲಿಸದಿದ್ದರೆ ನಾನು ನಿನ್ನನ್ನು ಖಂಡಿತ ಕಲ್ಲೆಸೆದು ಓಡಿಸುವೆನು. ಹೋಗು! ಒಂದು ದೀರ್ಘಕಾಲದ ತನಕ ನನ್ನಿಂದ ದೂರವಿರು.”
Tefsiret në gjuhën arabe:
قَالَ سَلٰمٌ عَلَیْكَ ۚ— سَاَسْتَغْفِرُ لَكَ رَبِّیْ ؕ— اِنَّهٗ كَانَ بِیْ حَفِیًّا ۟
ಇಬ್ರಾಹೀಮ್ ಹೇಳಿದರು: “ನಿಮ್ಮ ಮೇಲೆ ಶಾಂತಿಯಿರಲಿ! ನಾನು ನಿಮಗೋಸ್ಕರ ನನ್ನ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸುತ್ತೇನೆ. ನಿಶ್ಚಯವಾಗಿಯೂ ಅವನಿಗೆ ನನ್ನ ಮೇಲೆ ಬಹಳ ಅನುಕಂಪವಿದೆ.
Tefsiret në gjuhën arabe:
وَاَعْتَزِلُكُمْ وَمَا تَدْعُوْنَ مِنْ دُوْنِ اللّٰهِ وَاَدْعُوْا رَبِّیْ ۖؗ— عَسٰۤی اَلَّاۤ اَكُوْنَ بِدُعَآءِ رَبِّیْ شَقِیًّا ۟
ನಾನು ನಿಮ್ಮನ್ನು ಮತ್ತು ಅಲ್ಲಾಹನ ಹೊರತಾಗಿ ನೀವು ಕರೆದು ಪ್ರಾರ್ಥಿಸುವವರನ್ನು ಬಿಟ್ಟು ಹೋಗುತ್ತಿದ್ದೇನೆ. ನಾನು ನನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮಾತ್ರ ಕರೆದು ಪ್ರಾರ್ಥಿಸುತ್ತೇನೆ. ನನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರೆ ನಾನೆಂದೂ ನತದೃಷ್ಟನಾಗುವುದಿಲ್ಲ.”
Tefsiret në gjuhën arabe:
فَلَمَّا اعْتَزَلَهُمْ وَمَا یَعْبُدُوْنَ مِنْ دُوْنِ اللّٰهِ ۙ— وَهَبْنَا لَهٗۤ اِسْحٰقَ وَیَعْقُوْبَ ؕ— وَكُلًّا جَعَلْنَا نَبِیًّا ۟
ಅವರು ತಂದೆಯನ್ನು ಮತ್ತು ಅಲ್ಲಾಹನ ಹೊರತಾಗಿ ಅವರು ಆರಾಧಿಸುತ್ತಿದ್ದವರನ್ನು ಬಿಟ್ಟು ತೆರಳಿದಾಗ ನಾವು ಅವರಿಗೆ ಇಸ್‍ಹಾಕ್ (ಮಗ) ಮತ್ತು ಯಅ್‌ಕೂಬ್ (ಮೊಮ್ಮಗ)ರನ್ನು ದಯಪಾಲಿಸಿದೆವು. ಅವರೆಲ್ಲರನ್ನೂ ನಾವು ಪ್ರವಾದಿಗಳನ್ನಾಗಿ ಮಾಡಿದೆವು.
Tefsiret në gjuhën arabe:
وَوَهَبْنَا لَهُمْ مِّنْ رَّحْمَتِنَا وَجَعَلْنَا لَهُمْ لِسَانَ صِدْقٍ عَلِیًّا ۟۠
ನಾವು ಅವರಿಗೆ ನಮ್ಮ ದಯೆಯಿಂದ ಕರುಣಿಸಿದೆವು. ನಾವು ಅವರ ಕೀರ್ತಿಯನ್ನು ಉನ್ನತಗೊಳಿಸಿದೆವು.
Tefsiret në gjuhën arabe:
وَاذْكُرْ فِی الْكِتٰبِ مُوْسٰۤی ؗ— اِنَّهٗ كَانَ مُخْلَصًا وَّكَانَ رَسُوْلًا نَّبِیًّا ۟
ಈ ಗ್ರಂಥದಲ್ಲಿ ಮೂಸಾರ ಬಗ್ಗೆ ತಿಳಿಸಿರಿ. ನಿಜಕ್ಕೂ ಅವರು ನಿಷ್ಕಳಂಕರಾಗಿದ್ದರು. ಅವರು ಸಂದೇಶವಾಹಕರು ಮತ್ತು ಪ್ರವಾದಿಯಾಗಿದ್ದರು.
Tefsiret në gjuhën arabe:
وَنَادَیْنٰهُ مِنْ جَانِبِ الطُّوْرِ الْاَیْمَنِ وَقَرَّبْنٰهُ نَجِیًّا ۟
ತೂರ್ ಪರ್ವತದ ಬಲಭಾಗದಿಂದ ನಾವು ಅವರನ್ನು ಕರೆದೆವು ಮತ್ತು ಆಪ್ತ ಸಂಭಾಷಣೆ ಮಾಡಲು ನಾವು ಅವರನ್ನು ಹತ್ತಿರಗೊಳಿಸಿದೆವು.
Tefsiret në gjuhën arabe:
وَوَهَبْنَا لَهٗ مِنْ رَّحْمَتِنَاۤ اَخَاهُ هٰرُوْنَ نَبِیًّا ۟
ನಮ್ಮ ದಯೆಯಿಂದ ನಾವು ಅವರಿಗೆ ಅವರ ಸಹೋದರ ಹಾರೂನರನ್ನು ಪ್ರವಾದಿಯಾಗಿ ಮಾಡಿದೆವು.
Tefsiret në gjuhën arabe:
وَاذْكُرْ فِی الْكِتٰبِ اِسْمٰعِیْلَ ؗ— اِنَّهٗ كَانَ صَادِقَ الْوَعْدِ وَكَانَ رَسُوْلًا نَّبِیًّا ۟ۚ
ಈ ಗ್ರಂಥದಲ್ಲಿ ಇಸ್ಮಾಈಲರ ಬಗ್ಗೆ ತಿಳಿಸಿರಿ. ನಿಜಕ್ಕೂ ಅವರು ವಾಗ್ದಾನಗಳನ್ನು ನೆರವೇರಿಸುತ್ತಿದ್ದರು. ಅವರು ಸಂದೇಶವಾಹಕರು ಮತ್ತು ಪ್ರವಾದಿಯಾಗಿದ್ದರು.
Tefsiret në gjuhën arabe:
وَكَانَ یَاْمُرُ اَهْلَهٗ بِالصَّلٰوةِ وَالزَّكٰوةِ ۪— وَكَانَ عِنْدَ رَبِّهٖ مَرْضِیًّا ۟
ಅವರು ತಮ್ಮ ಮನೆಯವರಿಗೆ ನಮಾಝ್ ಮಾಡಲು ಮತ್ತು ಝಕಾತ್ ನೀಡಲು ಆಜ್ಞಾಪಿಸುತ್ತಿದ್ದರು. ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಪ್ರೀತಿಗೆ ಪಾತ್ರರಾಗಿದ್ದರು.
Tefsiret në gjuhën arabe:
وَاذْكُرْ فِی الْكِتٰبِ اِدْرِیْسَ ؗ— اِنَّهٗ كَانَ صِدِّیْقًا نَّبِیًّا ۟ۗۙ
ಈ ಗ್ರಂಥದಲ್ಲಿ ಇದ್ರೀಸರ ಬಗ್ಗೆ ತಿಳಿಸಿರಿ. ನಿಜಕ್ಕೂ ಅವರು ಸತ್ಯವಂತ ಪ್ರವಾದಿಯಾಗಿದ್ದರು.
Tefsiret në gjuhën arabe:
وَّرَفَعْنٰهُ مَكَانًا عَلِیًّا ۟
ನಾವು ಅವರನ್ನು ಉನ್ನತ ದರ್ಜೆಗೇರಿಸಿದೆವು.
Tefsiret në gjuhën arabe:
اُولٰٓىِٕكَ الَّذِیْنَ اَنْعَمَ اللّٰهُ عَلَیْهِمْ مِّنَ النَّبِیّٖنَ مِنْ ذُرِّیَّةِ اٰدَمَ ۗ— وَمِمَّنْ حَمَلْنَا مَعَ نُوْحٍ ؗ— وَّمِنْ ذُرِّیَّةِ اِبْرٰهِیْمَ وَاِسْرَآءِیْلَ ؗ— وَمِمَّنْ هَدَیْنَا وَاجْتَبَیْنَا ؕ— اِذَا تُتْلٰی عَلَیْهِمْ اٰیٰتُ الرَّحْمٰنِ خَرُّوْا سُجَّدًا وَّبُكِیًّا ۟
ಇವರೆಲ್ಲರೂ ಅಲ್ಲಾಹು ಅನುಗ್ರಹಿಸಿದ ಪ್ರವಾದಿಗಳಾಗಿದ್ದಾರೆ. ಅವರು ಆದಮರ ಸಂತಾನದಲ್ಲಿ, ನೂಹರೊಡನೆ ನಾವು ನಾವೆಯಲ್ಲಿ ಏರಿಸಿದವರಲ್ಲಿ ಮತ್ತು ಇಬ್ರಾಹೀಮ್ ಹಾಗೂ ಇಸ್ರಾಈಲರ ಸಂತಾನದಲ್ಲಿ ಸೇರಿದವರಾಗಿದ್ದಾರೆ. ಅವರೆಲ್ಲರೂ ನಾವು ಸನ್ಮಾರ್ಗದಲ್ಲಿ ಸೇರಿಸಿ ವಿಶೇಷವಾಗಿ ಆರಿಸಿದವರಲ್ಲಿ ಸೇರಿದವರಾಗಿದ್ದಾರೆ. ಅವರಿಗೆ ಪರಮ ದಯಾಮಯನ (ಅಲ್ಲಾಹನ) ವಚನಗಳನ್ನು ಓದಿಕೊಡಲಾದರೆ ಅವರು ಸಾಷ್ಟಾಂಗ ಮಾಡುತ್ತಾ ಅಳುತ್ತಾ ಬೀಳುತ್ತಾರೆ.
Tefsiret në gjuhën arabe:
فَخَلَفَ مِنْ بَعْدِهِمْ خَلْفٌ اَضَاعُوا الصَّلٰوةَ وَاتَّبَعُوا الشَّهَوٰتِ فَسَوْفَ یَلْقَوْنَ غَیًّا ۟ۙ
ಅವರ ನಂತರ ಅವರ ಸ್ಥಾನದಲ್ಲಿ ಬೇರೊಂದು ತಲೆಮಾರು ಬಂತು. ಅವರು ನಮಾಝನ್ನು ಹಾಳು ಮಾಡಿದರು ಮತ್ತು ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಅವರು ತಮ್ಮ ದುಷ್ಕರ್ಮದ ಫಲವನ್ನು ಉಣ್ಣುವರು.
Tefsiret në gjuhën arabe:
اِلَّا مَنْ تَابَ وَاٰمَنَ وَعَمِلَ صَالِحًا فَاُولٰٓىِٕكَ یَدْخُلُوْنَ الْجَنَّةَ وَلَا یُظْلَمُوْنَ شَیْـًٔا ۟ۙ
ಆದರೆ ಪಶ್ಚಾತ್ತಾಪಪಟ್ಟವರು, ವಿಶ್ವಾಸವಿಟ್ಟವರು ಹಾಗೂ ಸತ್ಕರ್ಮವೆಸಗಿದವರು ಇದರಿಂದ ಹೊರತಾಗಿದ್ದಾರೆ. ಅವರು ಸ್ವರ್ಗವನ್ನು ಪ್ರವೇಶಿಸುವರು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.
Tefsiret në gjuhën arabe:
جَنّٰتِ عَدْنِ ١لَّتِیْ وَعَدَ الرَّحْمٰنُ عِبَادَهٗ بِالْغَیْبِ ؕ— اِنَّهٗ كَانَ وَعْدُهٗ مَاْتِیًّا ۟
ಶಾಶ್ವತ ವಾಸಕ್ಕಿರುವ ಸ್ವರ್ಗೋದ್ಯಾನಗಳನ್ನು. ಇದು ಪರಮ ದಯಾಮಯನು (ಅಲ್ಲಾಹು) ತನ್ನ ದಾಸರಿಗೆ ಅದೃಶ್ಯರೂಪದಲ್ಲಿ ವಾಗ್ದಾನ ಮಾಡಿದ್ದಾಗಿದೆ. ನಿಶ್ಚಯವಾಗಿಯೂ ಅವನ ವಾಗ್ದಾನವು ಜಾರಿಯಾಗಿಯೇ ತೀರುತ್ತದೆ.
Tefsiret në gjuhën arabe:
لَا یَسْمَعُوْنَ فِیْهَا لَغْوًا اِلَّا سَلٰمًا ؕ— وَلَهُمْ رِزْقُهُمْ فِیْهَا بُكْرَةً وَّعَشِیًّا ۟
ಅಲ್ಲಿ ಅವರು ಯಾವುದೇ ಅನಗತ್ಯ ಮಾತುಗಳನ್ನು ಕೇಳುವುದಿಲ್ಲ. ಶಾಂತಿ ಶಾಂತಿ ಎಂಬ ಮಾತುಗಳನ್ನಲ್ಲದೆ. ಅಲ್ಲಿ ಅವರಿಗೆ ಅವರ ಆಹಾರವನ್ನು ಮುಂಜಾನೆ ಮತ್ತು ಮುಸ್ಸಂಜೆಗಳಲ್ಲಿ ಒದಗಿಸಲಾಗುವುದು.
Tefsiret në gjuhën arabe:
تِلْكَ الْجَنَّةُ الَّتِیْ نُوْرِثُ مِنْ عِبَادِنَا مَنْ كَانَ تَقِیًّا ۟
ಇದೇ ನಾವು ನಮ್ಮ ದಾಸರಲ್ಲಿ ದೇವಭಯವುಳ್ಳವರಿಗೆ ಉತ್ತರಾಧಿಕಾರವಾಗಿ ನೀಡುವ ಸ್ವರ್ಗ.
Tefsiret në gjuhën arabe:
وَمَا نَتَنَزَّلُ اِلَّا بِاَمْرِ رَبِّكَ ۚ— لَهٗ مَا بَیْنَ اَیْدِیْنَا وَمَا خَلْفَنَا وَمَا بَیْنَ ذٰلِكَ ۚ— وَمَا كَانَ رَبُّكَ نَسِیًّا ۟ۚ
(ಜಿಬ್ರೀಲ್ ಹೇಳಿದರು): “ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆಯಿಲ್ಲದೆ ನಾವು ಇಳಿಯುವುದಿಲ್ಲ. ನಮ್ಮ ಮುಂಭಾಗದಲ್ಲಿ, ಹಿಂಭಾಗದಲ್ಲಿ ಮತ್ತು ಅವುಗಳ ನಡುವೆಯಿರುವ ಎಲ್ಲವೂ ಅವನಿಗೆ ಸೇರಿದ್ದು. ನಿಮ್ಮ ಪರಿಪಾಲಕನು (ಅಲ್ಲಾಹು) ಮರೆಯುವವನಲ್ಲ.”
Tefsiret në gjuhën arabe:
رَبُّ السَّمٰوٰتِ وَالْاَرْضِ وَمَا بَیْنَهُمَا فَاعْبُدْهُ وَاصْطَبِرْ لِعِبَادَتِهٖ ؕ— هَلْ تَعْلَمُ لَهٗ سَمِیًّا ۟۠
ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ತಾಳ್ಮೆಯಿಂದಿರಿ. ಅವನಿಗೆ ಸರಿಸಾಟಿಯಾಗಿ ಯಾರಾದರೂ ಇರುವುದು ನಿಮಗೆ ತಿಳಿದಿದೆಯೇ?
Tefsiret në gjuhën arabe:
وَیَقُوْلُ الْاِنْسَانُ ءَاِذَا مَا مِتُّ لَسَوْفَ اُخْرَجُ حَیًّا ۟
ಮನುಷ್ಯನು ಹೇಳುತ್ತಾನೆ: “ನಾನು ಸತ್ತರೆ ನನ್ನನ್ನು ಪುನಃ ಜೀವಂತಗೊಳಿಸಿ ಹೊರತರಲಾಗುತ್ತದೆಯೇ?”
Tefsiret në gjuhën arabe:
اَوَلَا یَذْكُرُ الْاِنْسَانُ اَنَّا خَلَقْنٰهُ مِنْ قَبْلُ وَلَمْ یَكُ شَیْـًٔا ۟
ಆದರೆ ಮನುಷ್ಯನಿಗೆ ಅಸ್ತಿತ್ವವೇ ಇಲ್ಲದಿದ್ದಾಗ ನಾವು ಅವನನ್ನು ಪ್ರಥಮ ಬಾರಿ ಸೃಷ್ಟಿಸಿದ್ದು ಅವನಿಗೆ ನೆನಪಿಲ್ಲವೇ?
Tefsiret në gjuhën arabe:
فَوَرَبِّكَ لَنَحْشُرَنَّهُمْ وَالشَّیٰطِیْنَ ثُمَّ لَنُحْضِرَنَّهُمْ حَوْلَ جَهَنَّمَ جِثِیًّا ۟ۚ
ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನಾವು ಖಂಡಿತವಾಗಿಯೂ ಅವರನ್ನು ಮತ್ತು ಶೈತಾನರನ್ನು ಒಟ್ಟುಗೂಡಿಸಿ, ನಂತರ ಅವರನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ನರಕದ ಸುತ್ತಲೂ ಹಾಜರುಪಡಿಸುವೆವು.
Tefsiret në gjuhën arabe:
ثُمَّ لَنَنْزِعَنَّ مِنْ كُلِّ شِیْعَةٍ اَیُّهُمْ اَشَدُّ عَلَی الرَّحْمٰنِ عِتِیًّا ۟ۚ
ನಂತರ ಎಲ್ಲಾ ಗುಂಪುಗಳಿಂದಲೂ ಪರಮ ದಯಾಮಯನಿಗೆ (ಅಲ್ಲಾಹನಿಗೆ) ಕಡು ದ್ರೋಹವೆಸಗಿದವರನ್ನು ಎಳೆದು ಬೇರ್ಪಡಿಸುವೆವು.
Tefsiret në gjuhën arabe:
ثُمَّ لَنَحْنُ اَعْلَمُ بِالَّذِیْنَ هُمْ اَوْلٰی بِهَا صِلِیًّا ۟
ನಂತರ ನರಕದಲ್ಲಿ ಉರಿಯಲು ಅವರಲ್ಲಿ ಅತ್ಯಂತ ಅರ್ಹರು ಯಾರೆಂದು ನಮಗೆ ಬಹಳ ಚೆನ್ನಾಗಿ ತಿಳಿದಿದೆ.
Tefsiret në gjuhën arabe:
وَاِنْ مِّنْكُمْ اِلَّا وَارِدُهَا ۚ— كَانَ عَلٰی رَبِّكَ حَتْمًا مَّقْضِیًّا ۟ۚ
ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ (ನರಕದ) ಬಳಿಗೆ ಬರುವರು. ಅದು ತಮ್ಮ ಪರಿಪಾಲಕನ (ಅಲ್ಲಾಹನ) ಖಚಿತ ಹಾಗೂ ಬದಲಾವಣೆಯಿಲ್ಲದ ತೀರ್ಮಾನವಾಗಿದೆ.[1]
[1] ನರಕದ ಮೇಲ್ಭಾಗದಲ್ಲಿ ಒಂದು ಸೇತುವೆಯನ್ನು ನಿರ್ಮಿಸಲಾಗುವುದು. ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳೆಲ್ಲರೂ ಆ ಸೇತುವೆಯನ್ನು ದಾಟಲು ಪ್ರಯತ್ನಿಸುವರು. ಸತ್ಯವಿಶ್ವಾಸಿಗಳು ತಮ್ಮ ತಮ್ಮ ಕರ್ಮಗಳಿಗೆ ಅನುಗುಣವಾಗಿ ಆ ಸೇತುವೆಯನ್ನು ದಾಟುವರು. ಕೆಲವರು ಕಣ್ಣೆವೆಯಿಕ್ಕುವ ವೇಗದಲ್ಲಿ, ಕೆಲವರು ಮಿಂಚಿನ ವೇಗದಲ್ಲಿ, ಕೆಲವರು ಹಕ್ಕಿ ಹಾರುವ ವೇಗದಲ್ಲಿ, ಕೆಲವರು ಕುದುರೆಗಳ ವೇಗದಲ್ಲಿ ದಾಟುವರು. ದುಷ್ಕರ್ಮಿಗಳಾದ ಸತ್ಯವಿಶ್ವಾಸಿಗಳು ದಾಟಲು ಸಾಧ್ಯವಾಗದೆ ನರಕದಲ್ಲಿ ಬೀಳುವರು. ಅವರನ್ನು ನಂತರ ಶಿಫಾರಸು ಮಾಡುವ ಮೂಲಕ ಅಥವಾ ಅವರ ಶಿಕ್ಷೆ ಮುಗಿದ ಬಳಿಕ ನರಕದಿಂದ ಪಾರು ಮಾಡಲಾಗುವುದು. ಆದರೆ ಸತ್ಯನಿಷೇಧಿಗಳಿಗೆ ಆ ಸೇತುವೆಯನ್ನು ದಾಟಲು ಸಾಧ್ಯವಾಗದೆ ಎಲ್ಲರೂ ನರಕದಲ್ಲಿ ಬೀಳುವರು. ಅದರಲ್ಲೇ ಶಾಶ್ವತವಾಗಿ ವಾಸಿಸುವರು.
Tefsiret në gjuhën arabe:
ثُمَّ نُنَجِّی الَّذِیْنَ اتَّقَوْا وَّنَذَرُ الظّٰلِمِیْنَ فِیْهَا جِثِیًّا ۟
ನಂತರ ನಾವು ದೇವಭಯವುಳ್ಳವರನ್ನು ರಕ್ಷಿಸಿ, ಅಕ್ರಮವೆಸಗಿದವರನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅಲ್ಲೇ ಬಿಟ್ಟುಬಿಡುವೆವು.
Tefsiret në gjuhën arabe:
وَاِذَا تُتْلٰی عَلَیْهِمْ اٰیٰتُنَا بَیِّنٰتٍ قَالَ الَّذِیْنَ كَفَرُوْا لِلَّذِیْنَ اٰمَنُوْۤا ۙ— اَیُّ الْفَرِیْقَیْنِ خَیْرٌ مَّقَامًا وَّاَحْسَنُ نَدِیًّا ۟
ನಮ್ಮ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ಅವರಿಗೆ ಓದಿಕೊಡಲಾದರೆ, ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳುತ್ತಾರೆ: “ಸ್ಥಾನಮಾನ ಮತ್ತು ಜನಬಲದ ದೃಷ್ಟಿಯಲ್ಲಿ ನಮ್ಮ ಈ ಎರಡು ಗುಂಪುಗಳಲ್ಲಿ ಯಾರು ಶ್ರೇಷ್ಠರು?”[1]
[1] ಮಕ್ಕಾದಲ್ಲಿರುವ ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ಪೈಕಿ ಅತ್ಯಧಿಕ ಸ್ಥಾನಮಾನ ಮತ್ತು ಜನಬಲವುಳ್ಳವರು ಯಾರೆಂದು ಸತ್ಯವಿಶ್ವಾಸಿಗಳನ್ನು ಲೇವಡಿ ಮಾಡುತ್ತಾ ಸತ್ಯನಿಷೇಧಿಗಳು ಕೇಳುತ್ತಿದ್ದರು. ಏಕೆಂದರೆ, ಮಕ್ಕಾದ ಮುಖಂಡರು ಮತ್ತು ಶ್ರೀಮಂತರಲ್ಲಿ ಹೆಚ್ಚಿನವರೂ ಸತ್ಯನಿಷೇಧಿಗಳಾಗಿದ್ದರು.
Tefsiret në gjuhën arabe:
وَكَمْ اَهْلَكْنَا قَبْلَهُمْ مِّنْ قَرْنٍ هُمْ اَحْسَنُ اَثَاثًا وَّرِﺋْﻴًﺎ ۟
ನಾವು ಅವರಿಗಿಂತ ಮೊದಲು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ಅವರು ಸವಲತ್ತುಗಳು ಮತ್ತು ದೇಹದಾರ್ಢ್ಯದಲ್ಲಿ ಇವರಿಗಿಂತಲೂ ಶ್ರೇಷ್ಠರಾಗಿದ್ದರು.
Tefsiret në gjuhën arabe:
قُلْ مَنْ كَانَ فِی الضَّلٰلَةِ فَلْیَمْدُدْ لَهُ الرَّحْمٰنُ مَدًّا ۚ۬— حَتّٰۤی اِذَا رَاَوْا مَا یُوْعَدُوْنَ اِمَّا الْعَذَابَ وَاِمَّا السَّاعَةَ ؕ۬— فَسَیَعْلَمُوْنَ مَنْ هُوَ شَرٌّ مَّكَانًا وَّاَضْعَفُ جُنْدًا ۟
ಹೇಳಿರಿ: “ಯಾರು ದುರ್ಮಾರ್ಗದಲ್ಲಿದ್ದಾನೋ ಅವನಿಗೆ ಪರಮ ದಯಾಮಯನು (ಅಲ್ಲಾಹು) ಅವಧಿಯನ್ನು ವಿಸ್ತರಿಸಿಕೊಡಲಿ. ಎಲ್ಲಿಯವರೆಗೆಂದರೆ, ಅವರು ತಮಗೆ ಎಚ್ಚರಿಕೆ ನೀಡಲಾದ ಸಂಗತಿಯನ್ನು—ಅಂದರೆ ಒಂದೋ ಶಿಕ್ಷೆಯನ್ನು ಅಥವಾ ಅಂತ್ಯಸಮಯವನ್ನು—ಕಾಣುವಾಗ, ಅತಿನಿಕೃಷ್ಟ ಸ್ಥಾನಮಾನವಿರುವವರು ಮತ್ತು ಅತಿ ದುರ್ಬಲ ಜನಬಲವು ಯಾರದ್ದೆಂದು ಅವರು ಬಹಳ ಚೆನ್ನಾಗಿ ತಿಳಿಯುವರು.”
Tefsiret në gjuhën arabe:
وَیَزِیْدُ اللّٰهُ الَّذِیْنَ اهْتَدَوْا هُدًی ؕ— وَالْبٰقِیٰتُ الصّٰلِحٰتُ خَیْرٌ عِنْدَ رَبِّكَ ثَوَابًا وَّخَیْرٌ مَّرَدًّا ۟
ಸನ್ಮಾರ್ಗದಲ್ಲಿರುವವರಿಗೆ ಅಲ್ಲಾಹು ಸನ್ಮಾರ್ಗವನ್ನು ಹೆಚ್ಚಿಸಿಕೊಡುವನು. ಆದರೆ ಬಾಕಿಯಾಗುವ ಸತ್ಕರ್ಮಗಳು ತಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಿಯಲ್ಲಿ ಅತ್ಯುತ್ತಮ ಪ್ರತಿಫಲವನ್ನು ಮತ್ತು ಅತ್ಯುತ್ತಮ ಫಲಿತಾಂಶವನ್ನು ಹೊಂದಿವೆ.
Tefsiret në gjuhën arabe:
اَفَرَءَیْتَ الَّذِیْ كَفَرَ بِاٰیٰتِنَا وَقَالَ لَاُوْتَیَنَّ مَالًا وَّوَلَدًا ۟ؕ
ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವನನ್ನು ನೀವು ನೋಡಿದ್ದೀರಾ?[1] ಅವನು ಹೇಳಿದನು: “ನನಗೆ ಖಂಡಿತ ಸಂಪತ್ತು ಮತ್ತು ಸಂತಾನವನ್ನು ನೀಡಲಾಗುತ್ತದೆ.”
[1] ಈತ ಇಸ್ಲಾಂ ಧರ್ಮದ ಕಡುವೈರಿಯಾಗಿದ್ದ ಆಸ್ ಬಿನ್ ವಾಯಿಲ್. ಕಮ್ಮಾರ ಕೆಲಸ ಮಾಡುತ್ತಿದ್ದ ಖಬ್ಬಾಬ್ ಬಿನ್ ಅರತ್ ಇಸ್ಲಾಂ ಸ್ವೀಕರಿಸಿದರು. ಅವರಿಗೆ ಆಸ್ ಬಿನ್ ವಾಯಿಲ್ ನಿಂದ ಹಣ ಬರಬೇಕಿತ್ತು. ಅವರು ಅದನ್ನು ಕೇಳಿದಾಗ ಆಸ್ ಬಿನ್ ವಾಯಿಲ್ ಹೇಳಿದ: “ನೀನು ಮುಹಮ್ಮದರನ್ನು ನಿಷೇಧಿಸಿದರೆ ಮಾತ್ರ ನಿನ್ನ ಹಣವನ್ನು ಕೊಡುತ್ತೇನೆ.” ಖಬ್ಬಾಬ್ ಹೇಳಿದರು: “ನೀನು ಇನ್ನೊಂದು ಜನ್ಮವೆತ್ತಿ ಬಂದರೂ ಅದು ಸಾಧ್ಯವಿಲ್ಲ.” ಆಗ ಆಸ್ ಹೇಳಿದ: “ನಾನು ಸತ್ತ ನಂತರ ಪುನಃ ನನಗೆ ಜೀವ ನೀಡಿ ಎಬ್ಬಿಸಲಾದರೂ ಅಲ್ಲಿ ನನಗೆ ಹೇರಳ ಐಶ್ವರ್ಯ ಮತ್ತು ಮಕ್ಕಳನ್ನು ನೀಡಿ ಆಶೀರ್ವದಿಸಲಾಗುವುದು.” ಅವನ ಅಹಂಕಾರದ ಮಾತುಗಳನ್ನು ಖಂಡಿಸುತ್ತಾ ಈ ವಚನಗಳು ಅವತೀರ್ಣವಾದವು.
Tefsiret në gjuhën arabe:
اَطَّلَعَ الْغَیْبَ اَمِ اتَّخَذَ عِنْدَ الرَّحْمٰنِ عَهْدًا ۟ۙ
ಅವನು ಅದೃಶ್ಯ ವಿಷಯಗಳನ್ನು ತಿಳಿದುಕೊಂಡನೇ? ಅಥವಾ ಪರಮ ದಯಾಮಯನ (ಅಲ್ಲಾಹನ) ಬಳಿ ಯಾವುದಾದರೂ ಕರಾರು ಮಾಡಿದ್ದಾನೆಯೇ?
Tefsiret në gjuhën arabe:
كَلَّا ؕ— سَنَكْتُبُ مَا یَقُوْلُ وَنَمُدُّ لَهٗ مِنَ الْعَذَابِ مَدًّا ۟ۙ
ಖಂಡಿತ ಇಲ್ಲ, ಅವನು ಹೇಳುವುದನ್ನು ನಾವು ದಾಖಲಿಸಿಡುತ್ತೇವೆ ಮತ್ತು ಅವನಿಗೆ ಶಿಕ್ಷೆಯನ್ನು ಹೆಚ್ಚಿಸುತ್ತಲೇ ಇರುತ್ತೇವೆ.
Tefsiret në gjuhën arabe:
وَّنَرِثُهٗ مَا یَقُوْلُ وَیَاْتِیْنَا فَرْدًا ۟
ಅವನು ಹೇಳುತ್ತಿರುವ ವಿಷಯಗಳನ್ನು (ಸಂಪತ್ತು ಮತ್ತು ಸಂತಾನವನ್ನು) ಅವನ ಮರಣಾನಂತರ ನಾವು ಉತ್ತರಾಧಿಕಾರವಾಗಿ ಪಡೆಯುವೆವು. ಅವನು ನಮ್ಮ ಬಳಿಗೆ ಒಂಟಿಯಾಗಿಯೇ ಬರುವನು.
Tefsiret në gjuhën arabe:
وَاتَّخَذُوْا مِنْ دُوْنِ اللّٰهِ اٰلِهَةً لِّیَكُوْنُوْا لَهُمْ عِزًّا ۟ۙ
ಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಅವರಿಂದ ಇವರಿಗೆ ಪ್ರತಿಷ್ಠೆಯುಂಟಾಗಲು!
Tefsiret në gjuhën arabe:
كَلَّا ؕ— سَیَكْفُرُوْنَ بِعِبَادَتِهِمْ وَیَكُوْنُوْنَ عَلَیْهِمْ ضِدًّا ۟۠
ಖಂಡಿತ ಇಲ್ಲ, (ಪುನರುತ್ಥಾನ ದಿನದಂದು) ಅವರು ಇವರು ಮಾಡಿದ ಆರಾಧನೆಗಳನ್ನು ನಿಷೇಧಿಸುವರು ಮತ್ತು ಇವರಿಗೆ ವಿರುದ್ಧವಾಗಿ ನಿಲ್ಲುವರು.
Tefsiret në gjuhën arabe:
اَلَمْ تَرَ اَنَّاۤ اَرْسَلْنَا الشَّیٰطِیْنَ عَلَی الْكٰفِرِیْنَ تَؤُزُّهُمْ اَزًّا ۟ۙ
ನಾವು ಸತ್ಯನಿಷೇಧಿಗಳ ಬಳಿಗೆ, ಅವರನ್ನು ಉತ್ತೇಜಿಸಲು ಶೈತಾನರನ್ನು ಕಳುಹಿಸಿದ್ದನ್ನು ನೀವು ನೋಡಿಲ್ಲವೇ?
Tefsiret në gjuhën arabe:
فَلَا تَعْجَلْ عَلَیْهِمْ ؕ— اِنَّمَا نَعُدُّ لَهُمْ عَدًّا ۟ۚ
ಆದ್ದರಿಂದ ಅವರ ವಿಷಯದಲ್ಲಿ ತ್ವರೆ ಮಾಡಬೇಡಿ. ನಾವು ಸ್ವತಃ ಅವರಿಗೆ ಅವಧಿಯನ್ನು ಎಣಿಸುತ್ತಿದ್ದೇವೆ!
Tefsiret në gjuhën arabe:
یَوْمَ نَحْشُرُ الْمُتَّقِیْنَ اِلَی الرَّحْمٰنِ وَفْدًا ۟ۙ
ನಾವು ದೇವಭಯವುಳ್ಳವರನ್ನು ಪರಮ ದಯಾಮಯನ (ಅಲ್ಲಾಹನ) ಬಳಿಯಲ್ಲಿ ಗಣ್ಯ ಅತಿಥಿಗಳಾಗಿ ಒಟ್ಟುಗೂಡಿಸುವ ದಿನ!
Tefsiret në gjuhën arabe:
وَّنَسُوْقُ الْمُجْرِمِیْنَ اِلٰی جَهَنَّمَ وِرْدًا ۟ۘ
ನಾವು ಅಪರಾಧಿಗಳನ್ನು ಅತಿಯಾಗಿ ಬಾಯಾರಿದ ಸ್ಥಿತಿಯಲ್ಲಿ ನರಕಕ್ಕೆ ಸಾಗಿಸುವೆವು.
Tefsiret në gjuhën arabe:
لَا یَمْلِكُوْنَ الشَّفَاعَةَ اِلَّا مَنِ اتَّخَذَ عِنْدَ الرَّحْمٰنِ عَهْدًا ۟ۘ
ಪರಮ ದಯಾಮಯನಿಂದ (ಅಲ್ಲಾಹನಿಂದ) ಸ್ಪಷ್ಟ ಕರಾರು ಪಡೆದವರಿಗಲ್ಲದೆ ಇನ್ನಾರಿಗೂ ಅಂದು ಶಿಫಾರಸು ಮಾಡುವ ಅಧಿಕಾರವಿಲ್ಲ.[1]
[1] ಅಂದರೆ ಸತ್ಯವಿಶ್ವಾಸಿಗಳು ಮತ್ತು ದೇವಭಯವುಳ್ಳವರಿಗೆ ಮಾತ್ರ ಶಿಫಾರಸು ಮಾಡುವ ಅಧಿಕಾರ ದೊರೆಯುವುದು. ಅಲ್ಲಾಹು ಇಚ್ಛಿಸುವವರಿಗೆ ಮಾತ್ರ ಅವರು ಶಿಫಾರಸು ಮಾಡುವರು.
Tefsiret në gjuhën arabe:
وَقَالُوا اتَّخَذَ الرَّحْمٰنُ وَلَدًا ۟ؕ
ಅವರು ಹೇಳಿದರು: “ಪರಮ ದಯಾಮಯನಿಗೆ (ಅಲ್ಲಾಹನಿಗೆ) ಒಬ್ಬ ಪುತ್ರನಿದ್ದಾನೆ.”
Tefsiret në gjuhën arabe:
لَقَدْ جِئْتُمْ شَیْـًٔا اِدًّا ۟ۙ
ನಿಶ್ಚಯವಾಗಿಯೂ ನೀವು ಒಂದು ಘೋರ ಸಂಗತಿಯನ್ನೇ ತಂದಿದ್ದೀರಿ.
Tefsiret në gjuhën arabe:
تَكَادُ السَّمٰوٰتُ یَتَفَطَّرْنَ مِنْهُ وَتَنْشَقُّ الْاَرْضُ وَتَخِرُّ الْجِبَالُ هَدًّا ۟ۙ
ಅದರಿಂದ ಇನ್ನೇನು ಆಕಾಶಗಳು ಒಡೆದು ಛಿದ್ರವಾಗಿ, ಭೂಮಿ ಬಿರುಕು ಬಿಟ್ಟು, ಪರ್ವತಗಳು ಪುಡಿಪುಡಿಯಾಗಿ ಬೀಳಬಹುದು.
Tefsiret në gjuhën arabe:
اَنْ دَعَوْا لِلرَّحْمٰنِ وَلَدًا ۟ۚ
ಪರಮ ದಯಾಮಯನಿಗೆ (ಅಲ್ಲಾಹನಿಗೆ) ಒಬ್ಬ ಪುತ್ರನಿದ್ದಾನೆಂದು ಅವರು ವಾದಿಸಿದ ಕಾರಣ.
Tefsiret në gjuhën arabe:
وَمَا یَنْۢبَغِیْ لِلرَّحْمٰنِ اَنْ یَّتَّخِذَ وَلَدًا ۟ؕ
ಒಬ್ಬ ಪುತ್ರನಿರುವುದು ಪರಮ ದಯಾಮಯನಿಗೆ (ಅಲ್ಲಾಹನಿಗೆ) ಯೋಗ್ಯವಾದುದಲ್ಲ.
Tefsiret në gjuhën arabe:
اِنْ كُلُّ مَنْ فِی السَّمٰوٰتِ وَالْاَرْضِ اِلَّاۤ اٰتِی الرَّحْمٰنِ عَبْدًا ۟ؕ
ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಪರಮ ದಯಾಮಯನ (ಅಲ್ಲಾಹನ) ಬಳಿಗೆ ದಾಸರಾಗಿರುವ ಸ್ಥಿತಿಯಲ್ಲೇ ಬರುವರು.
Tefsiret në gjuhën arabe:
لَقَدْ اَحْصٰىهُمْ وَعَدَّهُمْ عَدًّا ۟ؕ
ಅವನಿಗೆ ಅವರ ಸಂಖ್ಯೆಯ ಬಗ್ಗೆ ಪೂರ್ಣ ಮಾಹಿತಿಯಿದೆ ಮತ್ತು ಅವನು ಅವರೆಲ್ಲರನ್ನೂ ನಿಖರವಾಗಿ ಎಣಿಸಿಟ್ಟಿದ್ದಾನೆ.
Tefsiret në gjuhën arabe:
وَكُلُّهُمْ اٰتِیْهِ یَوْمَ الْقِیٰمَةِ فَرْدًا ۟
ಪುನರುತ್ಥಾನ ದಿನದಂದು ಅವರೆಲ್ಲರೂ ಅವನ ಬಳಿಗೆ ಏಕಾಂಗಿಯಾಗಿ ಬರುವರು.
Tefsiret në gjuhën arabe:
اِنَّ الَّذِیْنَ اٰمَنُوْا وَعَمِلُوا الصّٰلِحٰتِ سَیَجْعَلُ لَهُمُ الرَّحْمٰنُ وُدًّا ۟
ನಿಶ್ಚಯವಾಗಿಯೂ, ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಪರಮ ದಯಾಮಯನು (ಅಲ್ಲಾಹು) ಪ್ರೀತಿಯನ್ನು ಉಂಟುಮಾಡುವನು.[1]
[1] ಅಂದರೆ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗುವವರ ಹೃದಯದಲ್ಲಿ ಅಲ್ಲಾಹು ಅವನ ಬಗ್ಗೆ ಪ್ರೀತಿಯುಂಟಾಗುವಂತೆ ಮಾಡುವನು. ಅಲ್ಲಾಹನನ್ನು ಯಾರು ಪ್ರೀತಿಸುತ್ತಾರೋ ಅವರನ್ನು ಅಲ್ಲಾಹು ಪ್ರೀತಿಸುವನು. ಅಲ್ಲಾಹು ಯಾರನ್ನಾದರೂ ಪ್ರೀತಿಸಿದರೆ ಜಿಬ್ರೀಲರನ್ನು (ಅವರ ಮೇಲೆ ಶಾಂತಿಯಿರಲಿ) ಕರೆದು ಹೇಳುವನು: “ನಾನು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸಿದ್ದೇನೆ. ನೀನು ಕೂಡ ಅವನನ್ನು ಪ್ರೀತಿಸು.” ಆಗ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಕೂಡ ಅವನನ್ನು ಪ್ರೀತಿಸುವರು. ನಂತರ ಅವರು ಆಕಾಶಲೋಕದಲ್ಲಿರುವ ಎಲ್ಲಾ ದೇವದೂತರುಗಳನ್ನು ಕರೆದು ಹೇಳವರು: “ಅಲ್ಲಾಹು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸಿದ್ದಾನೆ. ಆದ್ದರಿಂದ ನೀವು ಕೂಡ ಅವನನ್ನು ಪ್ರೀತಿಸಿರಿ.” ಆಗ ಆಕಾಶಲೋಕದಲ್ಲಿರುವವರೆಲ್ಲರೂ ಅವನನ್ನು ಪ್ರೀತಿಸುವರು. ಆಕಾಶಲೋಕದಲ್ಲಿರುವವರ ಪ್ರೀತಿ ಲಭ್ಯವಾಗುವುದರೊಂದಿಗೆ ಆ ವ್ಯಕ್ತಿಗೆ ಭೂಮಿಯಲ್ಲಿ ಅಂಗೀಕಾರ ಮತ್ತು ಶ್ಲಾಘನೆಯು ಲಭ್ಯವಾಗುವುದು.
Tefsiret në gjuhën arabe:
فَاِنَّمَا یَسَّرْنٰهُ بِلِسَانِكَ لِتُبَشِّرَ بِهِ الْمُتَّقِیْنَ وَتُنْذِرَ بِهٖ قَوْمًا لُّدًّا ۟
ನಿಶ್ಚಯವಾಗಿಯೂ, ನಾವು ಇದನ್ನು (ಕುರ್‌ಆನನ್ನು) ನಿಮ್ಮ ಭಾಷೆಯಲ್ಲಿಯೇ ಸುಲಭಗೊಳಿಸಿದ್ದೇವೆ. ನೀವು ಇದರ ಮೂಲಕ ದೇವಭಯವುಳ್ಳವರಿಗೆ ಸುವಾರ್ತೆಯನ್ನು ನೀಡಲು ಮತ್ತು ಹಿಂಸಾವಾದಿ ಜನರಿಗೆ ಇದರ ಮೂಲಕ ಎಚ್ಚರಿಕೆಯನ್ನು ನೀಡಲು.
Tefsiret në gjuhën arabe:
وَكَمْ اَهْلَكْنَا قَبْلَهُمْ مِّنْ قَرْنٍ ؕ— هَلْ تُحِسُّ مِنْهُمْ مِّنْ اَحَدٍ اَوْ تَسْمَعُ لَهُمْ رِكْزًا ۟۠
ನಾವು ಅವರಿಗಿಂತ ಮೊದಲು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ನೀವು ಅವರಲ್ಲಿ ಯಾರಾದರೊಬ್ಬರನ್ನು ಕಾಣುತ್ತಿದ್ದೀರಾ? ಅಥವಾ ಅವರ ಕೀರಲು ಧ್ವನಿಯನ್ನು ಕೇಳುತ್ತಿದ್ದೀರಾ?
Tefsiret në gjuhën arabe:
 
Përkthimi i kuptimeve Surja: Suretu Merjem
Përmbajtja e sureve Numri i faqes
 
Përkthimi i kuptimeve të Kuranit Fisnik - الترجمة الكنادية - Përmbajtja e përkthimeve

ترجمة معاني القرآن الكريم إلى اللغة الكنادية ترجمها محمد حمزة بتور.

Mbyll