Check out the new design

அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி * - மொழிபெயர்ப்பு அட்டவணை


மொழிபெயர்ப்பு அத்தியாயம்: இப்ராஹீம்   வசனம்:
وَاِذْ قَالَ مُوْسٰی لِقَوْمِهِ اذْكُرُوْا نِعْمَةَ اللّٰهِ عَلَیْكُمْ اِذْ اَنْجٰىكُمْ مِّنْ اٰلِ فِرْعَوْنَ یَسُوْمُوْنَكُمْ سُوْٓءَ الْعَذَابِ وَیُذَبِّحُوْنَ اَبْنَآءَكُمْ وَیَسْتَحْیُوْنَ نِسَآءَكُمْ ؕ— وَفِیْ ذٰلِكُمْ بَلَآءٌ مِّنْ رَّبِّكُمْ عَظِیْمٌ ۟۠
ಮೂಸ ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; ಅಲ್ಲಾಹನು ನಿಮ್ಮನ್ನು ಫಿರ್‌ಔನಿನ ಪರಿವಾರದಿಂದ ರಕ್ಷಿಸಿ ನಿಮ್ಮ ಮೇಲೆ ಮಾಡಿದ ಅನುಗ್ರಹಗಳನ್ನು ಸ್ಮರಿಸಿರಿ. ಅವರು ನಿಮಗೆ ಮಹಾ ಹಿಂಸೆ ಕೊಡುತ್ತಿದ್ದರು. ನಿಮ್ಮ ಗಂಡು ಸಂತತಿಗಳನ್ನು ಕೊಂದು ನಿಮ್ಮ ಹೆಣ್ಣು ಸಂತತಿಗಳನ್ನು ಜೀವಂತವಾಗಿ ಬಿಡುತ್ತಿದ್ದರು, ಮತ್ತು ನಿಮಗೆ ಅದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಮಹಾ ಪರೀಕ್ಷೆಯಿತ್ತು.
அரபு விரிவுரைகள்:
وَاِذْ تَاَذَّنَ رَبُّكُمْ لَىِٕنْ شَكَرْتُمْ لَاَزِیْدَنَّكُمْ وَلَىِٕنْ كَفَرْتُمْ اِنَّ عَذَابِیْ لَشَدِیْدٌ ۟
ಇನ್ನು ನೀವು ಕೃತಜ್ಞತೆ ತೋರಿದರೆ ನಿಸ್ಸಂಶಯವಾಗಿಯೂ ನಾನು ನಿಮಗೆ ಅಧಿಕ ನೀಡುವೆನು ಮತ್ತು ನೀವು ಕೃತಘ್ನತೆ ತೋರಿದರೆ ಖಂಡಿತವಾಗಿ ನನ್ನ ಶಿಕ್ಷೆ ಕಠಿಣವಾಗಿದೆ ಎಂದು ನಿಮ್ಮ ಪ್ರಭು ಎಚ್ಚರಿಸಿದ ಸಂದರ್ಭವನ್ನು ಸ್ಮರಿಸಿರಿ.
அரபு விரிவுரைகள்:
وَقَالَ مُوْسٰۤی اِنْ تَكْفُرُوْۤا اَنْتُمْ وَمَنْ فِی الْاَرْضِ جَمِیْعًا ۙ— فَاِنَّ اللّٰهَ لَغَنِیٌّ حَمِیْدٌ ۟
ಮೂಸ ಹೇಳಿದರು; ನೀವು ಮತ್ತು ಭೂಮಿಯಲ್ಲಿರುವ ಸಕಲರೂ ಅಲ್ಲಾಹನಿಗೆ ಕೃತಘ್ನತೆ ತೋರಿದರೂ ಅಲ್ಲಾಹನು ನಿರಪೇಕ್ಷನೂ, ಸ್ತುತ್ಯಾರ್ಹನು ಆಗಿರುವನು.
அரபு விரிவுரைகள்:
اَلَمْ یَاْتِكُمْ نَبَؤُا الَّذِیْنَ مِنْ قَبْلِكُمْ قَوْمِ نُوْحٍ وَّعَادٍ وَّثَمُوْدَ ۛؕ۬— وَالَّذِیْنَ مِنْ بَعْدِهِمْ ۛؕ— لَا یَعْلَمُهُمْ اِلَّا اللّٰهُ ؕ— جَآءَتْهُمْ رُسُلُهُمْ بِالْبَیِّنٰتِ فَرَدُّوْۤا اَیْدِیَهُمْ فِیْۤ اَفْوَاهِهِمْ وَقَالُوْۤا اِنَّا كَفَرْنَا بِمَاۤ اُرْسِلْتُمْ بِهٖ وَاِنَّا لَفِیْ شَكٍّ مِّمَّا تَدْعُوْنَنَاۤ اِلَیْهِ مُرِیْبٍ ۟
ನಿಮಗಿಂತ ಮುಂಚೆ ಗತಿಸಿದಂತಹ ನೂಹರ ಜನಾಂಗ, ಆದ್ ಮತ್ತು ಸಮೂದರ ಮತ್ತು ಅಲ್ಲಾಹನ ಹೊರತು ಇನ್ಯಾರು ಅರಿಯದ ಅವರ ನಂತರದ ಹಲವಾರು ಜನಾಂಗಗಳ ಸುದ್ದಿಗಳು ನಿಮಗೆ ತಲುಪಲಿಲ್ಲವೇ? ಅವರೆಡೆಗೆ ಅವರ ಸಂದೇಶವಾಹಕರು ಸ್ಪಷÀ್ಟ ಪ್ರಮಾಣಗಳನ್ನು ತಂದರು. ಆದರೆ ಅವರು ತಮ್ಮ ಕೈಗಳನ್ನು ತಮ್ಮ ಬಾಯೊಳಗೆ ತೂರಿಸಿಕೊಂಡು ಸ್ಪಷÀ್ಟವಾಗಿ ಹೇಳಿಬಿಟ್ಟರು; ಯಾವ ಸಂದೇಶದೊAದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ನಾವು ಅದನ್ನು ನಿರಾಕರಿಸುವವರಾಗಿದ್ದೇವೆ, ಹಾಗೂ ನೀವು ಯಾವುದರ ಕಡೆಗೆ ನಮ್ಮನ್ನು ಕರೆಯುತ್ತಿರುವಿರೋ ಅದರಲ್ಲಿ ನಾವು ಗಂಭೀರ ಸಂದೇಹವನ್ನು ಹೊಂದಿದ್ದೇವೆ.
அரபு விரிவுரைகள்:
قَالَتْ رُسُلُهُمْ اَفِی اللّٰهِ شَكٌّ فَاطِرِ السَّمٰوٰتِ وَالْاَرْضِ ؕ— یَدْعُوْكُمْ لِیَغْفِرَ لَكُمْ مِّنْ ذُنُوْبِكُمْ وَیُؤَخِّرَكُمْ اِلٰۤی اَجَلٍ مُّسَمًّی ؕ— قَالُوْۤا اِنْ اَنْتُمْ اِلَّا بَشَرٌ مِّثْلُنَا ؕ— تُرِیْدُوْنَ اَنْ تَصُدُّوْنَا عَمَّا كَانَ یَعْبُدُ اٰبَآؤُنَا فَاْتُوْنَا بِسُلْطٰنٍ مُّبِیْنٍ ۟
ಅವರ ಸಂದೇಶವಾಹಕರು ಹೇಳಿದರು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನಾದ ಅಲ್ಲಾಹನ ಕುರಿತು ನೀವು ಸಂದೇಹ ಪಡುತ್ತಿರುವಿರಾ? ಅವನು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡಲೆಂದು ಹಾಗೂ ನಿಮಗೆ ಒಂದು ನಿರ್ದಿಷÀ್ಟ ಅವಧಿಯವರೆಗೆ ಕಾಲಾವಕಾಶ ಕೊಡಲೆಂದು ನಿಮ್ಮನ್ನು ಕರೆಯುತ್ತಿದ್ದಾನೆ. ಅವರು ಹೇಳಿದರು: ನೀವು ನಮ್ಮಂತಹ ಮನುಷÀ್ಯರೇ ಆಗಿರುವಿರಿ. ನಮ್ಮ ಪೂರ್ವಜರು ಆರಾಧಿಸುತ್ತಿದ್ದವುಗಳಿಂದ ನಮ್ಮನ್ನು ತಡೆಯಲು ನೀವು ಬಯಸುತ್ತಿರುವಿರಾ ? ಹಾಗಾದರೆ ನಮ್ಮ ಮುಂದೆ (ಸತ್ಯತೆಯ ಬಗ್ಗೆ) ಯಾವುದಾದರೂ ಸುಸ್ಪಷÀ್ಟ ಆಧಾರವನ್ನು (ಪವಾಡವನ್ನು) ತನ್ನಿರಿ.
அரபு விரிவுரைகள்:
 
மொழிபெயர்ப்பு அத்தியாயம்: இப்ராஹீம்
அத்தியாயங்களின் அட்டவணை பக்க எண்
 
அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி - மொழிபெயர்ப்பு அட்டவணை

அதை மொழிபெயர்த்தவர் ஷேக் பஷீர் மைசூரி. மொழிபெயர்ப்பு முன்னோடிகள் மையத்தின் கண்காணிப்பில் உருவாக்கப்பட்டது.

மூடுக