Check out the new design

அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி * - மொழிபெயர்ப்பு அட்டவணை


மொழிபெயர்ப்பு அத்தியாயம்: அல்அன்பியா   வசனம்:
وَكَمْ قَصَمْنَا مِنْ قَرْیَةٍ كَانَتْ ظَالِمَةً وَّاَنْشَاْنَا بَعْدَهَا قَوْمًا اٰخَرِیْنَ ۟
ಅಕ್ರಮಿಯಾಗಿದ್ದಂತಹ ಅದೆಷ್ಟೋ ನಾಡುಗಳನ್ನು ನಾವು ಧ್ವಂಸಗೊಳಿಸಿ ಬಿಟ್ಟಿರುವೆವು ಮತ್ತು ಅವರ ನಂತರ ಇತರ ಜನಾಂಗಗಳನ್ನು ಸೃಷಿಸಿದೆವು.
அரபு விரிவுரைகள்:
فَلَمَّاۤ اَحَسُّوْا بَاْسَنَاۤ اِذَا هُمْ مِّنْهَا یَرْكُضُوْنَ ۟ؕ
ಅವರು ನಮ್ಮ ಶಿಕ್ಷೆಯನ್ನು ಅನುಭವಿಸಿದಾಗ ಕೂಡಲೇ ಅದರಿಂದ ಓಡತೊಡಗಿದರು.
அரபு விரிவுரைகள்:
لَا تَرْكُضُوْا وَارْجِعُوْۤا اِلٰی مَاۤ اُتْرِفْتُمْ فِیْهِ وَمَسٰكِنِكُمْ لَعَلَّكُمْ تُسْـَٔلُوْنَ ۟
ಓಡಬೇಡಿರಿ, ನೀವು ಸುಖಿಸುತ್ತಿದ್ದ ಸುಖ ಭೋಗದೆಡೆಗೆ ಮತ್ತು ನಿಮ್ಮ ಮನೆಗಳೆಡೆ ಮರಳಿರಿ. ನೀವು ವಿಚಾರಿಸಲ್ಪಡಲೂಬಹುದು
அரபு விரிவுரைகள்:
قَالُوْا یٰوَیْلَنَاۤ اِنَّا كُنَّا ظٰلِمِیْنَ ۟
ಅವರು ಹೇಳತೊಡಗಿದರು. ಅಯ್ಯೋ ನಮ್ಮ ದುರ್ಗತಿಯೇ, ನಿಸ್ಸಂಶಯವಾಗಿಯೂ ನಾವು ಅಕ್ರಮಗಿಳಾಗಿದ್ದೆವು.
அரபு விரிவுரைகள்:
فَمَا زَالَتْ تِّلْكَ دَعْوٰىهُمْ حَتّٰی جَعَلْنٰهُمْ حَصِیْدًا خٰمِدِیْنَ ۟
ಅನಂತರ ಅವರು ಇದೇ ರೀತಿ ಕೂಗುತ್ತಿದ್ದರು. ಕೊನೆಗೆ ನಾವು ಅವರನ್ನು ಬುಡದಿಂದಲೇ ಕೊಯ್ಯಲಾದ ಫಸಲು ಮತ್ತು ನಂದಿಹೋದ ಅಗ್ನಿಯಂತೆ ಮಾಡಿ ಬಿಟ್ಟೆವು.
அரபு விரிவுரைகள்:
وَمَا خَلَقْنَا السَّمَآءَ وَالْاَرْضَ وَمَا بَیْنَهُمَا لٰعِبِیْنَ ۟
ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವೆರಡರ ನಡುವೆಯಿರುವ ವಸ್ತುಗಳನ್ನು ಆಟ ವಿನೋದಕ್ಕಾಗಿ ಸೃಷ್ಟಿಸಿರುವುದಿಲ್ಲ.
அரபு விரிவுரைகள்:
لَوْ اَرَدْنَاۤ اَنْ نَّتَّخِذَ لَهْوًا لَّاتَّخَذْنٰهُ مِنْ لَّدُنَّاۤ ۖۗ— اِنْ كُنَّا فٰعِلِیْنَ ۟
ನಾವು ಆಟ-ವಿನೋದಕ್ಕಾಗಿ ನಿಶ್ಚಯಿಸಲು ಇಚ್ಛಿಸಿರುತ್ತಿದ್ದರೆ ಖಂಡಿತವಾಗಿಯೂ ನಾವು ಅದನ್ನು ನಮ್ಮ ಬಳಿಯೇ ಮಾಡಿಕೊಳ್ಳುತ್ತಿದ್ದೆವು. ನಾವು ಹಾಗೆ ಮಾಡುವವರೇ ಆಗಿದ್ದರೆ.
அரபு விரிவுரைகள்:
بَلْ نَقْذِفُ بِالْحَقِّ عَلَی الْبَاطِلِ فَیَدْمَغُهٗ فَاِذَا هُوَ زَاهِقٌ ؕ— وَلَكُمُ الْوَیْلُ مِمَّا تَصِفُوْنَ ۟
ಹಾಗಲ್ಲ. ನಾವು ಸತ್ಯವನ್ನು ಮಿಥ್ಯದ ಮೇಲೆ ಹೊಡೆಯುತ್ತೇವೆ ಆಗ ಅದು ಮಿಥ್ಯದ ತಲೆಯನ್ನು ಹೊಡೆದುಬಿಡುತ್ತದೆ. ಮತ್ತು ಅದು ನೋಡು ನೋಡುತ್ತಲೇ ನಾಶವಾಗಿಬಿಡುತ್ತದೆ. ನೀವು ಉಂಟುಮಾಡುತ್ತಿರುವ ಮಾತುಗಳಿಂದಲೇ ನಿಮಗೆ ವಿನಾಶ ಕಾದಿದೆ.
அரபு விரிவுரைகள்:
وَلَهٗ مَنْ فِی السَّمٰوٰتِ وَالْاَرْضِ ؕ— وَمَنْ عِنْدَهٗ لَا یَسْتَكْبِرُوْنَ عَنْ عِبَادَتِهٖ وَلَا یَسْتَحْسِرُوْنَ ۟ۚ
ಭೂಮಿ ಆಕಾಶಗಳಲ್ಲಿರುವುದೆಲ್ಲವು ಅಲ್ಲಾಹನದ್ದಾಗಿದೆ ಮತ್ತು ಅವನ ಸನ್ನಿಧಿಯಲ್ಲಿರುವವರು ಅವನ ಆರಾಧನೆಯಿಂದ ದರ್ಪ ತೋರುವುದಿಲ್ಲ ಹಾಗೂ ದಣಿಯುವುದೂ ಇಲ್ಲ.
அரபு விரிவுரைகள்:
یُسَبِّحُوْنَ الَّیْلَ وَالنَّهَارَ لَا یَفْتُرُوْنَ ۟
ಅವರು ಹಗಲು, ರಾತ್ರಿ ಅವನ ಪಾವಿತ್ರö್ಯವನ್ನು ಸ್ತುತಿಸುತ್ತಾರೆ ಮತ್ತು ಅವರು ದಣಿಯುವುದಿಲ್ಲ.
அரபு விரிவுரைகள்:
اَمِ اتَّخَذُوْۤا اٰلِهَةً مِّنَ الْاَرْضِ هُمْ یُنْشِرُوْنَ ۟
ಏನು ಅವರು ಮಣ್ಣಿನಿಂದ ಮಾಡಿಕೊಂಡಿರುವ ದೇವರುಗಳು ಜೀವ ನೀಡಬಲ್ಲರೇ?
அரபு விரிவுரைகள்:
لَوْ كَانَ فِیْهِمَاۤ اٰلِهَةٌ اِلَّا اللّٰهُ لَفَسَدَتَا ۚ— فَسُبْحٰنَ اللّٰهِ رَبِّ الْعَرْشِ عَمَّا یَصِفُوْنَ ۟
ಭೂಮಿ ಅಕಾಶಗಳಲ್ಲಿ ಅಲ್ಲಾಹನ ಹೊರತು ಇತರ ದೇವರುಗಳಿರುತ್ತಿದ್ದರೆ ಅವೆರಡೂ ಅವ್ಯವಸ್ಥೆಗೆ ತುತ್ತಾಗುತ್ತಿದ್ದವು. ಆದರೆ ಸಿಂಹಾಸನದ ಪ್ರಭುವಾದ ಅಲ್ಲಾಹನು ಈ ಬಹುದೇವಾರಾಧಕರು ವರ್ಣಿಸುತ್ತಿರುವುದರಿಂದ ಅದೆಷ್ಟೋ ಪವಿತ್ರನು.
அரபு விரிவுரைகள்:
لَا یُسْـَٔلُ عَمَّا یَفْعَلُ وَهُمْ یُسْـَٔلُوْنَ ۟
ಅವನು ಮಾಡುತ್ತಿರುವ ಕಾರ್ಯಗಳ ಬಗ್ಗೆ ಅವನು ವಿಚಾರಿಸಲ್ಪಡಲಾರನು ಮತ್ತು ಅವರೆಲ್ಲರೂ ವಿಚಾರಿಸಲ್ಪಡುವರು.
அரபு விரிவுரைகள்:
اَمِ اتَّخَذُوْا مِنْ دُوْنِهٖۤ اٰلِهَةً ؕ— قُلْ هَاتُوْا بُرْهَانَكُمْ ۚ— هٰذَا ذِكْرُ مَنْ مَّعِیَ وَذِكْرُ مَنْ قَبْلِیْ ؕ— بَلْ اَكْثَرُهُمْ لَا یَعْلَمُوْنَ ۙ— الْحَقَّ فَهُمْ مُّعْرِضُوْنَ ۟
ಏನು, ಅವರು ಅಲ್ಲಾಹನ ಹೊರತು ಇತರ ದೇವರುಗಳನ್ನು ಮಾಡಿಕೊಂಡಿದ್ದಾರೆಯೇ? ಅವರೊಂದಿಗೆ ಹೇಳಿ: ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು ನನ್ನೊಡನೆ ಇರುವವರ ಗ್ರಂಥ ಕುರ್‌ಆನ್ ಆಗಿದೆ ಮತ್ತು ನನ್ನ ಮುಂಚಿನವರ ಗ್ರಂಥಗಳೂ ಇವೆ. ವಾಸ್ತವದಲ್ಲಿ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಅರಿಯುವುದಿಲ್ಲ. ಹಾಗಾಗಿ ಅವರು ವಿಮುಖರಾಗಿ ಬಿಟ್ಟಿದ್ದಾರೆ.
அரபு விரிவுரைகள்:
 
மொழிபெயர்ப்பு அத்தியாயம்: அல்அன்பியா
அத்தியாயங்களின் அட்டவணை பக்க எண்
 
அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி - மொழிபெயர்ப்பு அட்டவணை

அதை மொழிபெயர்த்தவர் ஷேக் பஷீர் மைசூரி. மொழிபெயர்ப்பு முன்னோடிகள் மையத்தின் கண்காணிப்பில் உருவாக்கப்பட்டது.

மூடுக