Check out the new design

அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி * - மொழிபெயர்ப்பு அட்டவணை


மொழிபெயர்ப்பு அத்தியாயம்: அஷ்ஷுஅரா   வசனம்:
قَالَ فَعَلْتُهَاۤ اِذًا وَّاَنَا مِنَ الضَّآلِّیْنَ ۟ؕ
ಮೂಸಾ ಉತ್ತರಿಸಿದರು: ನಾನು ಅದನ್ನು ಮಾಡಿದ್ದೆ ನಿಜ. ಆಗ ನಾನು ಅಜ್ಞಾನರಲ್ಲಿ ಸೇರಿದ್ದೆ.
அரபு விரிவுரைகள்:
فَفَرَرْتُ مِنْكُمْ لَمَّا خِفْتُكُمْ فَوَهَبَ لِیْ رَبِّیْ حُكْمًا وَّجَعَلَنِیْ مِنَ الْمُرْسَلِیْنَ ۟
ಬಳಿಕ ನಾನು ನಿಮ್ಮನ್ನು ಭಯಪಟ್ಟು ನಿಮ್ಮಿಂದ ಓಡಿ ಹೋದೆನು. ಆಗ ನನ್ನ ಪ್ರಭುವು ನನಗೆ ಸುಜ್ಞಾನವನ್ನು ನೀಡಿದನು. ಮತ್ತು ನನ್ನನ್ನು ಅವನ ಸಂದೇಶವಾಹಕರಲ್ಲಿ ಸೇರಿಸಿದನು.
அரபு விரிவுரைகள்:
وَتِلْكَ نِعْمَةٌ تَمُنُّهَا عَلَیَّ اَنْ عَبَّدْتَّ بَنِیْۤ اِسْرَآءِیْلَ ۟ؕ
ಇಸ್ರಾಯೀಲ್ ಸಂತತಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದೇ ನೀನು ನನ್ನ ಮೇಲೆ ಮಾಡಿದ ಉಪಕಾರವೇ?
அரபு விரிவுரைகள்:
قَالَ فِرْعَوْنُ وَمَا رَبُّ الْعٰلَمِیْنَ ۟
ಫಿರ್‌ಔನ್ ಹೇಳಿದನು “ಸರ್ವಲೋಕಗಳ ಪ್ರಭು ಎಂದರೇನು?”
அரபு விரிவுரைகள்:
قَالَ رَبُّ السَّمٰوٰتِ وَالْاَرْضِ وَمَا بَیْنَهُمَا ؕ— اِنْ كُنْتُمْ مُّوْقِنِیْنَ ۟
ಮೂಸಾ ಹೇಳಿದರು: ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ನಡುವೆ ಇರುವ ಸಕಲ ವಸ್ತುಗಳ ಪ್ರಭುವಾಗಿದ್ದಾನೆ. ನೀವು ದೃಢವಿಶ್ವಾಸಿಗಳಾಗಿದ್ದರೆ.
அரபு விரிவுரைகள்:
قَالَ لِمَنْ حَوْلَهٗۤ اَلَا تَسْتَمِعُوْنَ ۟
ಫಿರ್‌ಔನನು ತನ್ನ ಸುತ್ತಮುತ್ತ ಇದ್ದವರಿಗೆ ಹೇಳಿದನು: ನೀವು ಕೇಳಿಸಿಕೊಳ್ಳುತ್ತಿಲ್ಲವೇ?
அரபு விரிவுரைகள்:
قَالَ رَبُّكُمْ وَرَبُّ اٰبَآىِٕكُمُ الْاَوَّلِیْنَ ۟
ಮೂಸ ಹೇಳಿದರು: ಅವನು ನಿಮ್ಮ ಪ್ರಭುವೂ ಮತ್ತು ನಿಮ್ಮ ಪೂರ್ವಿಕರಾದಂತಹ ನಿಮ್ಮ ತಾತ ಮುತ್ತಾತಂದಿರ ಪ್ರಭುವೂ ಆಗಿದ್ದಾನೆ.
அரபு விரிவுரைகள்:
قَالَ اِنَّ رَسُوْلَكُمُ الَّذِیْۤ اُرْسِلَ اِلَیْكُمْ لَمَجْنُوْنٌ ۟
ಫಿರ್‌ಔನನು ಹೇಳಿದನು: ನಿಮ್ಮೆಡೆಗೆ ಕಳುಹಿಸಲಾದ ಈ ನಿಮ್ಮ ಸಂದೇಶವಾಹಕನು ನಿಜವಾಗಿಯೂ ಹುಚ್ಚನಾಗಿದ್ದಾನೆ.
அரபு விரிவுரைகள்:
قَالَ رَبُّ الْمَشْرِقِ وَالْمَغْرِبِ وَمَا بَیْنَهُمَا ؕ— اِنْ كُنْتُمْ تَعْقِلُوْنَ ۟
ಮೂಸಾ ಹೇಳಿದರು: ಅವನೇ ಪೂರ್ವ, ಪಶ್ಚಿಮ ಹಾಗೂ ಅವೆರಡರ ನಡುವೆಯಿರುವ ಎಲ್ಲದರ ಪ್ರಭುವಾಗಿದ್ದಾನೆ. ನೀವು ಯೋಚಿಸುವವರಾಗಿದ್ದರೆ.
அரபு விரிவுரைகள்:
قَالَ لَىِٕنِ اتَّخَذْتَ اِلٰهًا غَیْرِیْ لَاَجْعَلَنَّكَ مِنَ الْمَسْجُوْنِیْنَ ۟
ಫಿರ್‌ಔನ್ ಹೇಳಿದನು: ಕೇಳು, ನೀನು ನನ್ನನ್ನು ಬಿಟ್ಟು ಬೇರೆ ಆರಾಧ್ಯನನ್ನು ಮಾಡಿಕೊಂಡಲ್ಲಿ ಖಂಡಿತವಾಗಿಯು ನಾನು ನಿನ್ನನ್ನು ಕಾರಾಗೃಹ ವಾಸಿಗಳಲ್ಲಿ ಹಾಕಿ ಬಿಡುವೆನು.
அரபு விரிவுரைகள்:
قَالَ اَوَلَوْ جِئْتُكَ بِشَیْءٍ مُّبِیْنٍ ۟ۚ
ಮೂಸಾ ಹೇಳಿದರು: ಒಂದು ವೇಳೆ ನಾನು ನಿನ್ನಲ್ಲಿಗೆ ಒಂದು ಸ್ಪಷ್ಟವಾದ ಪುರಾವೆಯನ್ನು ತಂದರೂ?
அரபு விரிவுரைகள்:
قَالَ فَاْتِ بِهٖۤ اِنْ كُنْتَ مِنَ الصّٰدِقِیْنَ ۟
ಫಿರ್‌ಔನನು ಹೇಳಿದನು: ನೀನು ಸತ್ಯವಂತರಲ್ಲಾಗಿದ್ದರೆ ಅದನ್ನು ಮುಂದೆ ತಾ.
அரபு விரிவுரைகள்:
فَاَلْقٰی عَصَاهُ فَاِذَا هِیَ ثُعْبَانٌ مُّبِیْنٌ ۟ۚۖ
ಮೂಸ ತನ್ನ ಲಾಠಿಯನ್ನು ಹಾಕಿದಾಗ ಅದು ಹಠಾತ್ತನೆ ಪ್ರತ್ಯಕ್ಷ ಹೆಬ್ಬಾವಾಗಿಬಿಟ್ಟಿತು.
அரபு விரிவுரைகள்:
وَّنَزَعَ یَدَهٗ فَاِذَا هِیَ بَیْضَآءُ لِلنّٰظِرِیْنَ ۟۠
ಮತ್ತು ಅವರು ತಮ್ಮ ಕೈಯನ್ನು ಪಾರ್ಶ್ವದಿಂದ ಹೊರಗೆಳೆದಾಗ. ಹಠಾತ್ತನೆ ಅದು ವೀಕ್ಷಕರ ಮುಂದೆ ಪ್ರಜ್ವಲಿಸತೊಡಿಗತು.
அரபு விரிவுரைகள்:
قَالَ لِلْمَلَاِ حَوْلَهٗۤ اِنَّ هٰذَا لَسٰحِرٌ عَلِیْمٌ ۟ۙ
ಫಿರ್‌ಔನ್ ತನ್ನ ಬಳಿಯಿದ್ದ ಸರದಾರರಿಗೆ ಹೇಳಿದನು: ನಿಶ್ಚಯವಾಗಿ ಇವನು ನುರಿತ ಜಾದುಗಾರನಾಗಿದ್ದಾನೆ.
அரபு விரிவுரைகள்:
یُّرِیْدُ اَنْ یُّخْرِجَكُمْ مِّنْ اَرْضِكُمْ بِسِحْرِهٖ ۖۗ— فَمَاذَا تَاْمُرُوْنَ ۟
ಇವನು ತನ್ನ ಜಾದುವಿನ ಶಕ್ತಿಯಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಲೆಂದು ಬಯಸುತ್ತಿದ್ದಾನೆ. ಇನ್ನು ನೀವು ಏನು ಸಲಹೆ ನೀಡುವಿರಿ?
அரபு விரிவுரைகள்:
قَالُوْۤا اَرْجِهْ وَاَخَاهُ وَابْعَثْ فِی الْمَدَآىِٕنِ حٰشِرِیْنَ ۟ۙ
ಅವರು ಹೇಳಿದರು: ನೀವು ಅವನಿಗೂ, ಅವನ ಸಹೋದರನಿಗೂ ಕಾಲಾವಕಾಶ ನೀಡಿರಿ. ಎಲ್ಲಾ ನಗರಗಳಲ್ಲಿ ಕರೆ ನೀಡುವವರನ್ನು ಕಳುಹಿಸಿರಿ.
அரபு விரிவுரைகள்:
یَاْتُوْكَ بِكُلِّ سَحَّارٍ عَلِیْمٍ ۟
ಅವರು ನಿನ್ನೆಡೆಗೆ ಪ್ರತಿಯೊಬ್ಬ ನುರಿತ ಜಾದುಗಾರನನ್ನು ಕರೆತರಲಿ.
அரபு விரிவுரைகள்:
فَجُمِعَ السَّحَرَةُ لِمِیْقَاتِ یَوْمٍ مَّعْلُوْمٍ ۟ۙ
ಅನಂತರ ಜಾದುಗಾರರೆಲ್ಲ ಒಂದು ನಿಗದಿತ ವೇಳೆಗೆ ಒಟ್ಟುಗೂಡಿಸಲ್ಪಟ್ಟರು.
அரபு விரிவுரைகள்:
وَّقِیْلَ لِلنَّاسِ هَلْ اَنْتُمْ مُّجْتَمِعُوْنَ ۟ۙ
ಮತ್ತು ಸಾರ್ವಜನಿಕರೊಂದಿಗೂ ಹೇಳಲಾಯಿತು: ನೀವೂ ಸಮಾವೇಶದಲ್ಲಿ ಹಾಜರಾಗುವಿರಾ?
அரபு விரிவுரைகள்:
 
மொழிபெயர்ப்பு அத்தியாயம்: அஷ்ஷுஅரா
அத்தியாயங்களின் அட்டவணை பக்க எண்
 
அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி - மொழிபெயர்ப்பு அட்டவணை

அதை மொழிபெயர்த்தவர் ஷேக் பஷீர் மைசூரி. மொழிபெயர்ப்பு முன்னோடிகள் மையத்தின் கண்காணிப்பில் உருவாக்கப்பட்டது.

மூடுக