Check out the new design

அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி * - மொழிபெயர்ப்பு அட்டவணை


மொழிபெயர்ப்பு அத்தியாயம்: அந்நம்ல்   வசனம்:
اَمَّنْ یَّبْدَؤُا الْخَلْقَ ثُمَّ یُعِیْدُهٗ وَمَنْ یَّرْزُقُكُمْ مِّنَ السَّمَآءِ وَالْاَرْضِ ؕ— ءَاِلٰهٌ مَّعَ اللّٰهِ ؕ— قُلْ هَاتُوْا بُرْهَانَكُمْ اِنْ كُنْتُمْ صٰدِقِیْنَ ۟
ಸೃಷ್ಟಿಯನ್ನು ಪ್ರಥಮ ಬಾರಿಗೆ ಉಂಟು ಮಾಡಿ, ತರುವಾಯ ಅದನ್ನು ಪುನರಾವರ್ತಿಸುವವನು ಯಾರು? ಆಕಾಶದಿಂದಲೂ, ಭೂಮಿಯಿಂದಲೂ ನಿಮಗೆ ಜೀವನಾಧಾರ ನೀಡುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಹೇಳಿರಿ, ನೀವು ಸತ್ಯವಂತರಾಗಿದ್ದರೆ ನಿಮ್ಮ ಆಧಾರ ಪುರಾವೆಯನ್ನು ತನ್ನಿರಿ.
அரபு விரிவுரைகள்:
قُلْ لَّا یَعْلَمُ مَنْ فِی السَّمٰوٰتِ وَالْاَرْضِ الْغَیْبَ اِلَّا اللّٰهُ ؕ— وَمَا یَشْعُرُوْنَ اَیَّانَ یُبْعَثُوْنَ ۟
ಹೇಳಿರಿ: ಆಕಾಶ ಮತ್ತು ಭೂಮಿಯಲ್ಲಿರುವವರ ಪೈಕಿ ಯಾರೂ ಅಲ್ಲಾಹನ ಹೊರತು ಅಗೋಚರ ಜ್ಞಾನವನ್ನು ಅರಿಯುವುದಿಲ್ಲ. ಅವರಿಗೆ ತಾವು ಯಾವಾಗ ಎಬ್ಬಿಸಲಾಗುವೆವೆಂದೂ ತಿಳಿದಿಲ್ಲ.
அரபு விரிவுரைகள்:
بَلِ ادّٰرَكَ عِلْمُهُمْ فِی الْاٰخِرَةِ ۫— بَلْ هُمْ فِیْ شَكٍّ مِّنْهَا ۫— بَلْ هُمْ مِّنْهَا عَمُوْنَ ۟۠
ಹೇಳಿರಿ: ಆಕಾಶ ಮತ್ತು ಭೂಮಿಯಲ್ಲಿರುವವರ ಪೈಕಿ ಯಾರೂ ಅಲ್ಲಾಹನ ಹೊರತು ಅಗೋಚರ ಜ್ಞಾನವನ್ನು ಅರಿಯುವುದಿಲ್ಲ. ಅವರಿಗೆ ತಾವು ಯಾವಾಗ ಎಬ್ಬಿಸಲಾಗುವೆವೆಂದೂ ತಿಳಿದಿಲ್ಲ.
அரபு விரிவுரைகள்:
وَقَالَ الَّذِیْنَ كَفَرُوْۤا ءَاِذَا كُنَّا تُرٰبًا وَّاٰبَآؤُنَاۤ اَىِٕنَّا لَمُخْرَجُوْنَ ۟
ಸತ್ಯನಿಷೇಧಿಗಳು ಹೇಳಿದರು: ನಾವು, ನಮ್ಮ ತಂದೆ ತಾತಂದಿರು ಮಣ್ಣಾಗಿ ಹೋದರೂ ನಮ್ಮನ್ನು ಹೊರತರಲಾಗುತ್ತದೆಯೇ?
அரபு விரிவுரைகள்:
لَقَدْ وُعِدْنَا هٰذَا نَحْنُ وَاٰبَآؤُنَا مِنْ قَبْلُ ۙ— اِنْ هٰذَاۤ اِلَّاۤ اَسَاطِیْرُ الْاَوَّلِیْنَ ۟
ಖಂಡಿತವಾಗಿಯು ಇಂತಹ ವಾಗ್ದಾನಗಳನ್ನು ನಮಗೂ, ಇದಕ್ಕೆ ಮೊದಲು ನಮ್ಮ ತಂದೆ ತಾತಂದಿರಿಗೂ ನೀಡಲಾಗಿತ್ತು. ಇವು ಪೂರ್ವಿಕರ ಕಟ್ಟು ಕಥೆಗಳೇ ಹೊರತು ಬೇರೇನಲ್ಲ.
அரபு விரிவுரைகள்:
قُلْ سِیْرُوْا فِی الْاَرْضِ فَانْظُرُوْا كَیْفَ كَانَ عَاقِبَةُ الْمُجْرِمِیْنَ ۟
ಹೇಳಿರಿ: ಭೂಮಿಯಲ್ಲಿ ಸಂಚರಿಸಿ ಅಪರಾಧಿಗಳ ಪರಿಣಾಮವು ಹೇಗಾಯಿತೆಂದು ನೋಡಿರಿ.
அரபு விரிவுரைகள்:
وَلَا تَحْزَنْ عَلَیْهِمْ وَلَا تَكُنْ فِیْ ضَیْقٍ مِّمَّا یَمْكُرُوْنَ ۟
ನೀವು ಅವರ ಬಗ್ಗೆ ವ್ಯಥೆಪಡಬೇಡಿರಿ ಮತ್ತು ಅವರು ಹೂಡುವ ಕುತಂತ್ರಗಳ ನಿಮಿತ್ತ ವ್ಯಾಕುಲಗೊಳ್ಳದಿರಿ.
அரபு விரிவுரைகள்:
وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟
(ಓ ಪೈಗಂಬರರೇ) ನೀವು ಸತ್ಯವಂತರಾಗಿದ್ದರೆ ಈ ಯಾತನೆಯ ವಾಗ್ದಾನವು ಯಾವಾಗ ಈಡೇರುವುದು? ಎಂದು ಅವರು (ಮಕ್ಕಾದ ಬಹುದೇವಾರಾಧಕರು) ಕೇಳುತ್ತಾರೆ.
அரபு விரிவுரைகள்:
قُلْ عَسٰۤی اَنْ یَّكُوْنَ رَدِفَ لَكُمْ بَعْضُ الَّذِیْ تَسْتَعْجِلُوْنَ ۟
ಉತ್ತರಿಸಿರಿ: ನೀವು ಆತುರಪಡುತ್ತಿರುವ ಕಾರ್ಯಗಳ ಪೈಕಿ ಕೆಲವು ನಿಮ್ಮ ಸಮೀಪವಾಗಿರಲೂಬಹುದು.
அரபு விரிவுரைகள்:
وَاِنَّ رَبَّكَ لَذُوْ فَضْلٍ عَلَی النَّاسِ وَلٰكِنَّ اَكْثَرَهُمْ لَا یَشْكُرُوْنَ ۟
ನಿಶ್ಚಯವಾಗಿಯು ನಿಮ್ಮ ಪ್ರಭುವು ಜನರ ಮೇಲೆ ಮಹಾ ಅನುಗ್ರಹದಾತನಾಗಿದ್ದಾನೆ. ಆದರೆ ಅವರಲ್ಲಿ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ.
அரபு விரிவுரைகள்:
وَاِنَّ رَبَّكَ لَیَعْلَمُ مَا تُكِنُّ صُدُوْرُهُمْ وَمَا یُعْلِنُوْنَ ۟
. ನಿಸ್ಸಂಶಯವಾಗಿಯು ನಿಮ್ಮ ಪ್ರಭುವು ಅವರ ಹೃದಯಗಳು ಅಡಗಿಸುತ್ತಿರುವ ಮತ್ತು ಪ್ರಕಟಗೊಳಿಸುತ್ತಿವುದನ್ನು ಚೆನ್ನಾಗಿ ಬಲ್ಲನು
அரபு விரிவுரைகள்:
وَمَا مِنْ غَآىِٕبَةٍ فِی السَّمَآءِ وَالْاَرْضِ اِلَّا فِیْ كِتٰبٍ مُّبِیْنٍ ۟
ಆಕಾಶ ಮತ್ತು ಭೂಮಿಯ ಯಾವ ರಹಸ್ಯ ವಸ್ತುವೂ ಒಂದು ಸುಸ್ಪಷ್ಟ ಗ್ರಂಥದಲ್ಲಿ ದಾಖಲಿಸಲ್ಪಪಡದೇ ಇಲ್ಲ.
அரபு விரிவுரைகள்:
اِنَّ هٰذَا الْقُرْاٰنَ یَقُصُّ عَلٰی بَنِیْۤ اِسْرَآءِیْلَ اَكْثَرَ الَّذِیْ هُمْ فِیْهِ یَخْتَلِفُوْنَ ۟
ವಾಸ್ತವದಲ್ಲಿ ಇಸ್ರಾಯೀಲ್ ಸಂತತಿಗಳಿಗೆ ಅವರು ಭಿನ್ನತೆ ಹೊಂದಿರುವ ಹೆಚ್ಚಿನ ವಿಷಯಗಳ ವಸ್ತುಸ್ಥಿತಿಯನ್ನು ಈ ಕುರ್‌ಆನ್ ವಿವರಿಸಿಕೊಡುತ್ತದೆ.
அரபு விரிவுரைகள்:
 
மொழிபெயர்ப்பு அத்தியாயம்: அந்நம்ல்
அத்தியாயங்களின் அட்டவணை பக்க எண்
 
அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி - மொழிபெயர்ப்பு அட்டவணை

அதை மொழிபெயர்த்தவர் ஷேக் பஷீர் மைசூரி. மொழிபெயர்ப்பு முன்னோடிகள் மையத்தின் கண்காணிப்பில் உருவாக்கப்பட்டது.

மூடுக