Check out the new design

அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி * - மொழிபெயர்ப்பு அட்டவணை


மொழிபெயர்ப்பு அத்தியாயம்: அல்அஹ்ஸாப்   வசனம்:
وَاِذْ اَخَذْنَا مِنَ النَّبِیّٖنَ مِیْثَاقَهُمْ وَمِنْكَ وَمِنْ نُّوْحٍ وَّاِبْرٰهِیْمَ وَمُوْسٰی وَعِیْسَی ابْنِ مَرْیَمَ ۪— وَاَخَذْنَا مِنْهُمْ مِّیْثَاقًا غَلِیْظًا ۟ۙ
ನಾವು ಸಕಲ ಪೈಗಂಬರರಿAದಲೂ ಕರಾರನ್ನು ಪಡೆದುಕೊಂಡ ಸಂದರ್ಭವನ್ನು ಸ್ಮರಿಸಿರಿ ನಿಮ್ಮಿಂದಲೂ ನೂರ್, ಇಬ್ರಾಹೀಮ್, ಮೂಸಾ, ಮರ್ಯಮಳ ಪುತ್ರ ಈಸಾರವರಿಂದಲೂ ನಾವು ಸದೃಢ ಕರಾರನ್ನು ಪಡೆದುಕೊಂಡೆವು.
அரபு விரிவுரைகள்:
لِّیَسْـَٔلَ الصّٰدِقِیْنَ عَنْ صِدْقِهِمْ ۚ— وَاَعَدَّ لِلْكٰفِرِیْنَ عَذَابًا اَلِیْمًا ۟۠
ಇದು ಅಲ್ಲಾಹನು (ಪುನರುತ್ಥಾನದ ದಿನ) ಸತ್ಯವಂತರಲ್ಲಿ ಅವರ ಸತ್ಯತೆಯ ಕುರಿತು ವಿಚಾರಿಸಲೆಂದಾಗಿದೆ ಮತ್ತು ನಾವು ಸತ್ಯನಿಷೇಧಿಗಳಿಗೆ ವೇದನಾಜನಕ ಯಾತನೆಯನ್ನು ಸಿದ್ಧಗೊಳಿಸಿದ್ದೇವೆ.
அரபு விரிவுரைகள்:
یٰۤاَیُّهَا الَّذِیْنَ اٰمَنُوا اذْكُرُوْا نِعْمَةَ اللّٰهِ عَلَیْكُمْ اِذْ جَآءَتْكُمْ جُنُوْدٌ فَاَرْسَلْنَا عَلَیْهِمْ رِیْحًا وَّجُنُوْدًا لَّمْ تَرَوْهَا ؕ— وَكَانَ اللّٰهُ بِمَا تَعْمَلُوْنَ بَصِیْرًا ۟ۚ
ಓ ಸತ್ಯವಿಶ್ವಾಸಿಗಳೇ ನಿಮ್ಮ ವಿರುದ್ಧ ಸೈನ್ಯಗಳು ಬಂದಾಗ ನಾವು ಅವರ ಮೇಲೆ ಬಿರುಗಾಳಿಯನ್ನೂ, ಮತ್ತು ನಿಮಗೆ ಕಾಣಿಸದಂತಹ ಸೈನ್ಯಗಳನ್ನೂ ಕಳುಹಿಸಿದ ಸಂದರ್ಭವನ್ನು ಸ್ಮರಿಸರಿ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದೆಲ್ಲವನ್ನು ನೋಡುತ್ತಿದ್ದಾನೆ.
அரபு விரிவுரைகள்:
اِذْ جَآءُوْكُمْ مِّنْ فَوْقِكُمْ وَمِنْ اَسْفَلَ مِنْكُمْ وَاِذْ زَاغَتِ الْاَبْصَارُ وَبَلَغَتِ الْقُلُوْبُ الْحَنَاجِرَ وَتَظُنُّوْنَ بِاللّٰهِ الظُّنُوْنَا ۟ؕ
(ಶತ್ರುಗಳು) ನಿಮ್ಮ ಮೇಲ್ಗಡೆಯಿಂದಲೂ, ನಿಮ್ಮ ಕೆಳಗಡೆಯಿಂದಲೂ ನಿಮ್ಮಲ್ಲಿಗೆ ಬಂದ ಸಂದರ್ಭದಲ್ಲಿ ಮತ್ತು ನಿಮ್ಮ ಕಣ್ಣುಗಳು ದಿಟ್ಟಿಸತೊಡಗಿದಾಗ ಮತ್ತು ಹೃದಯಗಳು ಗಂಟಲುಗಳಿಗೆ ತಲುಪಿದಾಗ ನೀವು ಅಲ್ಲಾಹನ ಬಗ್ಗೆ ವಿಧವಿಧವಾಗಿ ಸಂದೇಹ ಪಡಲಾರಂಭಿಸಿದಿರಿ.
அரபு விரிவுரைகள்:
هُنَالِكَ ابْتُلِیَ الْمُؤْمِنُوْنَ وَزُلْزِلُوْا زِلْزَالًا شَدِیْدًا ۟
ಆಗ ಸತ್ಯವಿಶ್ವಾಸಿಗಳು ಪರೀಕ್ಷೆಗೊಳಗಾದರು ಹಾಗೂ ತೀವ್ರವಾಗಿ ಕಂಪಿಸಲ್ಪಟ್ಟರು.
அரபு விரிவுரைகள்:
وَاِذْ یَقُوْلُ الْمُنٰفِقُوْنَ وَالَّذِیْنَ فِیْ قُلُوْبِهِمْ مَّرَضٌ مَّا وَعَدَنَا اللّٰهُ وَرَسُوْلُهٗۤ اِلَّا غُرُوْرًا ۟
ಮತ್ತು ಕಪಟವಿಶ್ವಾಸಿಗಳು ಹಾಗು ಹೃದಯಗಳಲ್ಲಿ ರೋಗವಿದ್ದವರು: ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಕೇವಲ ವಂಚನೆಯ ವಾಗ್ದಾನವನ್ನೇ ಮಾಡಿದ್ದಾರೆಂದು ಹೇಳತೊಡಗಿದ ಸಂದರ್ಭವನ್ನು ಸ್ಮರಿಸಿರಿ.
அரபு விரிவுரைகள்:
وَاِذْ قَالَتْ طَّآىِٕفَةٌ مِّنْهُمْ یٰۤاَهْلَ یَثْرِبَ لَا مُقَامَ لَكُمْ فَارْجِعُوْا ۚ— وَیَسْتَاْذِنُ فَرِیْقٌ مِّنْهُمُ النَّبِیَّ یَقُوْلُوْنَ اِنَّ بُیُوْتَنَا عَوْرَةٌ ۛؕ— وَمَا هِیَ بِعَوْرَةٍ ۛۚ— اِنْ یُّرِیْدُوْنَ اِلَّا فِرَارًا ۟
ಅವರ ಪೈಕಿಯ ಜನಕೂಟವೊಂದು ಗುಲ್ಲೆಬ್ಬಿಸಿತು: ಓ ಮದೀನವಾಸಿಗಳೇ, ನಿಮಗೆ ನೆಲೆಯಿಲ್ಲ. ನೀವು ಮರಳಿ ಹೋಗಿರಿ ಹಾಗೂ ಅವರ ಇನ್ನೊಂದು ಗುಂಪು ನಮ್ಮ ಮನೆಗಳು ಅಭದ್ರ ಸ್ಥಿತಿಯಲ್ಲಿವೆ ಎನ್ನುತ್ತಾ ಪೈಗಂಬರರೊAದಿಗೆ ಅನುಮತಿ ಕೇಳುತ್ತಿತ್ತು. ವಸ್ತುತಃ ಅವು ಅಭದ್ರ ಸ್ಥಿತಿಯಲ್ಲಿರಲಿಲ್ಲ. ಆದರೆ ಅವರು ಪಲಾಯನಗೈಯ್ಯಲು ಬಯಸಿದರು.
அரபு விரிவுரைகள்:
وَلَوْ دُخِلَتْ عَلَیْهِمْ مِّنْ اَقْطَارِهَا ثُمَّ سُىِٕلُوا الْفِتْنَةَ لَاٰتَوْهَا وَمَا تَلَبَّثُوْا بِهَاۤ اِلَّا یَسِیْرًا ۟
ಮತ್ತು ಮದೀನಾದ ಎಲ್ಲಾ ಗಡಿಗಳಿಂದ ಶತ್ರುಗಳು ನುಗ್ಗಿ ಬಂದು ಬಳಿಕ (ಮುಸ್ಲಿಮರ ವಿರುದ್ಧ) ಕ್ಷೆÆÃಭೆ ಹರಡಲು ಅವರಲ್ಲಿ ಕೇಳಿದ್ದರೆ ಖಂಡಿತ ಅವರದನ್ನು ಮಾಡುತ್ತಿದ್ದರು ಮತ್ತು ಅವರು(ಅದರಲ್ಲಿ) ಸ್ವಲ್ಪ ಸಮಯದ ಹೊರತು ಹೆಚ್ಚು ತಡ ಮಾಡುತ್ತಿರಲಿಲ್ಲ.
அரபு விரிவுரைகள்:
وَلَقَدْ كَانُوْا عَاهَدُوا اللّٰهَ مِنْ قَبْلُ لَا یُوَلُّوْنَ الْاَدْبَارَ ؕ— وَكَانَ عَهْدُ اللّٰهِ مَسْـُٔوْلًا ۟
ತಾವು (ರಣರಂಗದಿAದ) ಬೆನ್ನು ತಿರುಗಿಸಿ ಓಡುವುದಿಲ್ಲವೆಂದು ಅವರು ಇದಕ್ಕೆ ಮೊದಲು ಅಲ್ಲಾಹನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಮತ್ತು ಅಲ್ಲಾಹನೊಂದಿಗೆ ಮಾಡಲಾದ ಒಪ್ಪಂದದ ವಿಚಾರಣೆಯು ಖಂಡಿತ ನಡೆಯಲಿರುವುದು.
அரபு விரிவுரைகள்:
 
மொழிபெயர்ப்பு அத்தியாயம்: அல்அஹ்ஸாப்
அத்தியாயங்களின் அட்டவணை பக்க எண்
 
அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி - மொழிபெயர்ப்பு அட்டவணை

அதை மொழிபெயர்த்தவர் ஷேக் பஷீர் மைசூரி. மொழிபெயர்ப்பு முன்னோடிகள் மையத்தின் கண்காணிப்பில் உருவாக்கப்பட்டது.

மூடுக