Check out the new design

அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி * - மொழிபெயர்ப்பு அட்டவணை


மொழிபெயர்ப்பு அத்தியாயம்: அல்அன்ஆம்   வசனம்:
فَاِنْ كَذَّبُوْكَ فَقُلْ رَّبُّكُمْ ذُوْ رَحْمَةٍ وَّاسِعَةٍ ۚ— وَلَا یُرَدُّ بَاْسُهٗ عَنِ الْقَوْمِ الْمُجْرِمِیْنَ ۟
ಇನ್ನು ಅವರು ನಿಮ್ಮನ್ನು ನಿರಾಕರಿಸುವುದಾದರೆ ಹೇಳಿರಿ: ನಿಮ್ಮ ಪ್ರಭು ವಿಶಾಲವಾದ ಕರುಣೆಯುಳ್ಳವನಾಗಿದ್ದಾನೆ ಮತ್ತು ಅವನ ಶಿಕ್ಷೆಯನ್ನು ಅಕ್ರಮಿಗಳಾದ ಜನರಿಂದ ಸರಿಸಲಾಗದು.
அரபு விரிவுரைகள்:
سَیَقُوْلُ الَّذِیْنَ اَشْرَكُوْا لَوْ شَآءَ اللّٰهُ مَاۤ اَشْرَكْنَا وَلَاۤ اٰبَآؤُنَا وَلَا حَرَّمْنَا مِنْ شَیْءٍ ؕ— كَذٰلِكَ كَذَّبَ الَّذِیْنَ مِنْ قَبْلِهِمْ حَتّٰی ذَاقُوْا بَاْسَنَا ؕ— قُلْ هَلْ عِنْدَكُمْ مِّنْ عِلْمٍ فَتُخْرِجُوْهُ لَنَا ؕ— اِنْ تَتَّبِعُوْنَ اِلَّا الظَّنَّ وَاِنْ اَنْتُمْ اِلَّا تَخْرُصُوْنَ ۟
ಬಹುದೇವಾರಾಧಕರು ಹೇಳುವರು: ಅಲ್ಲಾಹನು ಇಚ್ಛಿಸುತ್ತಿದ್ದರೆ ನಾವಾಗಲೀ, ನಮ್ಮ ಪೂರ್ವಿಕರಾಗಲೀ ದೇವಸಹಭಾಗಿತ್ವ ಮಾಡುತ್ತಿರಲಿಲ್ಲ ಮತ್ತು ನಾವು ಯಾವ ವಸ್ತುವನ್ನು ನಿಷಿದ್ಧವೆಂದು ಹೇಳುತ್ತಿರಲಿಲ್ಲ. ಇದೇ ರೀತಿ ಇವರ ಮುಂಚಿನವರು ನಿರಾಕಸಿದ್ದರು ಹಾಗೆಯೇ ನಮ್ಮ ಶಿಕ್ಷೆಯನ್ನು ಅವರು ಆಸ್ಪಾದಿಸಿಕೊಂಡರು. ಹೇಳಿರಿ: ನಿಮ್ಮ ಬಳಿ ಯಾವುದಾದರೂ ಪುರಾವೆಯಿದೆಯೇ? ಹಾಗಿದ್ದರೆ ಅದನ್ನು ನಮ್ಮೆದುರಿಗೆ ಪ್ರಕಟಗೊಳಿಸಿರಿ. ನೀವು ಊಹಾಪೋಹಗಳನ್ನು ಮಾತ್ರ ಅನುಸರಿಸುತ್ತಿರುವಿರಿ ಮತ್ತು ಸುಳ್ಳು ಹೇಳುತ್ತಿರುವಿರಿ.
அரபு விரிவுரைகள்:
قُلْ فَلِلّٰهِ الْحُجَّةُ الْبَالِغَةُ ۚ— فَلَوْ شَآءَ لَهَدٰىكُمْ اَجْمَعِیْنَ ۟
ಹೇಳಿರಿ: ನಿಮ್ಮ ನೆಪಗಳ ಎದುರು ಪರಿಪೂರ್ಣ ಪುರಾವೆಯು ಅಲ್ಲಾಹನದ್ದಾಗಿದೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಸನ್ಮಾರ್ಗಕ್ಕೆ ಸೇರಿಸುತ್ತಿದ್ದನು (ಇದು ಅವನ ಯುಕ್ತಿಗೆ ವಿರುದ್ಧವಾಗಿದೆ).
அரபு விரிவுரைகள்:
قُلْ هَلُمَّ شُهَدَآءَكُمُ الَّذِیْنَ یَشْهَدُوْنَ اَنَّ اللّٰهَ حَرَّمَ هٰذَا ۚ— فَاِنْ شَهِدُوْا فَلَا تَشْهَدْ مَعَهُمْ ۚ— وَلَا تَتَّبِعْ اَهْوَآءَ الَّذِیْنَ كَذَّبُوْا بِاٰیٰتِنَا وَالَّذِیْنَ لَا یُؤْمِنُوْنَ بِالْاٰخِرَةِ وَهُمْ بِرَبِّهِمْ یَعْدِلُوْنَ ۟۠
ಹೇಳಿರಿ: ಅಲ್ಲಾಹನು ಇವೆಲ್ಲವನ್ನು ನಿಷಿದ್ಧಗೊಳಿಸಿದ್ದಾನೆ ಎಂಬುದಕ್ಕೆ ಸಾಕ್ಷö್ಯವಹಿಸುವ ನಿಮ್ಮ ಸಾಕ್ಷಿಗಳನ್ನು ತನ್ನಿರಿ. ಇನ್ನು ಅವರು ಸಾಕ್ಷö್ಯವಹಿಸಿದರೆ ನೀವು ಅವರೊಂದಿಗೆ ಸಾಕ್ಷö್ಯವನ್ನು ನೀಡಬೇಡಿರಿ ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುವ ಪರಲೋಕದಲ್ಲಿ ವಿಶ್ವಾಸವಿಡದವರ ಮತ್ತು ನಿಮ್ಮ ಪ್ರಭುವಿನೊಂದಿಗೆ ಇತರರನ್ನು ಸಮಾನರನ್ನಾಗಿ ನಿಶ್ಚಯಿಸುವವರ ಸ್ವೇಚ್ಛೆಗಳನ್ನು ಅನುಸರಿಸಬೇಡಿರಿ.
அரபு விரிவுரைகள்:
قُلْ تَعَالَوْا اَتْلُ مَا حَرَّمَ رَبُّكُمْ عَلَیْكُمْ اَلَّا تُشْرِكُوْا بِهٖ شَیْـًٔا وَّبِالْوَالِدَیْنِ اِحْسَانًا ۚ— وَلَا تَقْتُلُوْۤا اَوْلَادَكُمْ مِّنْ اِمْلَاقٍ ؕ— نَحْنُ نَرْزُقُكُمْ وَاِیَّاهُمْ ۚ— وَلَا تَقْرَبُوا الْفَوَاحِشَ مَا ظَهَرَ مِنْهَا وَمَا بَطَنَ ۚ— وَلَا تَقْتُلُوا النَّفْسَ الَّتِیْ حَرَّمَ اللّٰهُ اِلَّا بِالْحَقِّ ؕ— ذٰلِكُمْ وَصّٰىكُمْ بِهٖ لَعَلَّكُمْ تَعْقِلُوْنَ ۟
ಹೇಳಿರಿ ಬನ್ನಿರಿ ನಿಮ್ಮ ಪ್ರಭು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದನ್ನು ನಾನು ನಿಮಗೆ ಓದಿ ತಿಳಿಸುತ್ತೇನೆ. ನೀವು ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಬಾರದು, ಮಾತಾಪಿತರೊಂದಿಗೆ ಸದ್ವರ್ತನೆ ತೋರಬೇಕು. ದಾರಿದ್ರö್ಯದಿಂದಾಗಿ ನಿಮ್ಮ ಮಕ್ಕಳನ್ನು ಕೊಲ್ಲಬಾರದು. ನಿಮಗೂ, ಅವರಿಗೂ ಆಹಾರ ನೀಡುವವರು ನಾವಾಗಿದ್ದೇವೆ ಮತ್ತು ಪ್ರತ್ಯಕ್ಷವಾದ, ಪರೋಕ್ಷವಾದ ನಿರ್ಲಜ್ಜೆಯ ಕೃತ್ಯಗಳ ಬಳಿ ಸುಳಿಯಬೇಡಿರಿ. ಅಲ್ಲಾಹನು ಕೊಲ್ಲುವುದನ್ನು ನಿಷಿದ್ಧಗೊಳಿಸಿರುವ ಜೀವವನ್ನು ನ್ಯಾಯಬದ್ಧವಾಗಿಯಲ್ಲದೇ ಕೊಲ್ಲಬೇಡಿರಿ. ಅವನು ನಿಮಗೆ ನೀವು ಅರಿತುಕೊಳ್ಳಲೆಂದು ಈ ಆದೇಶವನ್ನು ನೀಡಿದ್ದಾನೆ.
அரபு விரிவுரைகள்:
 
மொழிபெயர்ப்பு அத்தியாயம்: அல்அன்ஆம்
அத்தியாயங்களின் அட்டவணை பக்க எண்
 
அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி - மொழிபெயர்ப்பு அட்டவணை

அதை மொழிபெயர்த்தவர் ஷேக் பஷீர் மைசூரி. மொழிபெயர்ப்பு முன்னோடிகள் மையத்தின் கண்காணிப்பில் உருவாக்கப்பட்டது.

மூடுக