Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: اِسراء   آیت:

ಅಲ್ -ಇಸ್ರಾಅ್

سُبْحٰنَ الَّذِیْۤ اَسْرٰی بِعَبْدِهٖ لَیْلًا مِّنَ الْمَسْجِدِ الْحَرَامِ اِلَی الْمَسْجِدِ الْاَقْصَا الَّذِیْ بٰرَكْنَا حَوْلَهٗ لِنُرِیَهٗ مِنْ اٰیٰتِنَا ؕ— اِنَّهٗ هُوَ السَّمِیْعُ الْبَصِیْرُ ۟
ನಾವು ನಮ್ಮ ಕೆಲವು ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದು ತನ್ನ ದಾಸನನ್ನು (ಮುಹಮ್ಮದ್) ರಾತ್ರೋ ರಾತ್ರಿ ಮಸ್ಜಿದುಲ್ ಹರಾಮ್‌ನಿಂದ ನಾವು ಅದರ ಪರಿಸರವನ್ನು ಸಮೃದ್ಧಗೊಳಿಸಿರುವಂತಹ ಮಸ್ಜಿದುಲ್ ಅಕ್ಸಾದೆಡೆಗೆ ಕರೆದುಕೊಂಡು ಹೋದವನು (ಅಲ್ಲಾಹ್), ಪರಮ ಪಾವನನು ನಿಶ್ಚಯವಾಗಿಯೂ ಅಲ್ಲಾಹನು ಚೆನ್ನಾಗಿ ಆಲಿಸುವವನು, ಚೆನ್ನಾಗಿ ಹೇಳುವವನು ಆಗಿದ್ದಾನೆ.
عربی تفاسیر:
وَاٰتَیْنَا مُوْسَی الْكِتٰبَ وَجَعَلْنٰهُ هُدًی لِّبَنِیْۤ اِسْرَآءِیْلَ اَلَّا تَتَّخِذُوْا مِنْ دُوْنِیْ وَكِیْلًا ۟ؕ
ನಾವು ಮೂಸಾರಿಗೆ ಗ್ರಂಥವನ್ನು ದಯಪಾಲಿಸಿದೆವು ಮತ್ತು ನನ್ನ ಹೊರತು ಯಾರನ್ನೂ ಕಾರ್ಯಸಾಧಕನನ್ನಾಗಿ ಮಾಡಬಾರದೆಂಬ ಆಜ್ಞೆಯೊಂದಿಗೆ ನಾವು ಅದನ್ನು ಇಸ್ರಾಯೀಲ್ ಸಂತತಿಗಳೆಡೆಗೆ ಮಾರ್ಗದರ್ಶನವನ್ನಾಗಿ ಮಾಡಿದೆವು.
عربی تفاسیر:
ذُرِّیَّةَ مَنْ حَمَلْنَا مَعَ نُوْحٍ ؕ— اِنَّهٗ كَانَ عَبْدًا شَكُوْرًا ۟
(ಓ ಜನರೇ) ನೀವು ನೂಹ್‌ರವರ ಜೊತೆ ಹಡಗಿನಲ್ಲಿ ನಾವು ಸವಾರಿಗೊಳಿಸಿದವರ ಸಂತತಿಗಳಾಗಿದ್ದೀರಿ. ನಿಜಕ್ಕೂ ಅವರು ಓರ್ವ ಕೃತಜ್ಞ ದಾಸರಾಗಿದ್ದರು.
عربی تفاسیر:
وَقَضَیْنَاۤ اِلٰی بَنِیْۤ اِسْرَآءِیْلَ فِی الْكِتٰبِ لَتُفْسِدُنَّ فِی الْاَرْضِ مَرَّتَیْنِ وَلَتَعْلُنَّ عُلُوًّا كَبِیْرًا ۟
ನಾವು ಇಸ್ರಾಯೀಲ್ ಸಂತತಿಗಳಿಗೆ (ತೌರಾತ್)ಗ್ರಂಥದಲ್ಲಿ. ನೀವು ಭೂಮಿಯಲ್ಲಿ ಎರಡು ಬಾರಿ ಕ್ಷೆÆÃಭೆ ಹರಡಲಿದ್ದೀರಿ ಮತ್ತು ಮಹಾ ಅತಿಕ್ರಮಗಳನ್ನು ಎಸಗುವಿರಿ ಎಂದು ವಿಧಿಸಿದ್ದೇವು. (ಎಚ್ಚರಿಸಿದ್ದೆವು)
عربی تفاسیر:
فَاِذَا جَآءَ وَعْدُ اُوْلٰىهُمَا بَعَثْنَا عَلَیْكُمْ عِبَادًا لَّنَاۤ اُولِیْ بَاْسٍ شَدِیْدٍ فَجَاسُوْا خِلٰلَ الدِّیَارِ وَكَانَ وَعْدًا مَّفْعُوْلًا ۟
ಅವೆರಡು ವಾಗ್ದಾನಗಳ ಪೈಕಿ ಮೊದಲನೆಯದು ಬರುತ್ತಲೇ ನಾವು ನಿಮ್ಮ ವಿರುದ್ಧ ಮಹಾ ರಣಶೂರರಾದ ನಮ್ಮ ದಾಸರನ್ನು ಕಳುಹಿಸಿದೆವು. ಅವರು ನಿಮ್ಮ ಮನೆಗಳೊಳಗೆ ನುಗ್ಗಿದರು ಮತ್ತು ಅಲ್ಲಾಹನ ಈ ವಾಗ್ದಾನವು ಪೂರ್ತಿಯಾಗಲೇ ಬೇಕಿತ್ತು.
عربی تفاسیر:
ثُمَّ رَدَدْنَا لَكُمُ الْكَرَّةَ عَلَیْهِمْ وَاَمْدَدْنٰكُمْ بِاَمْوَالٍ وَّبَنِیْنَ وَجَعَلْنٰكُمْ اَكْثَرَ نَفِیْرًا ۟
ಅನಂತರ ನಾವು ನಿಮಗೆ ಅವರ ಮೇಲೆ ಪ್ರಾಬಲ್ಯದ ಸರದಿಯನ್ನು ಮರುಕಳಿಸಿಕೊಟ್ಟೆವು ಮತ್ತು ಸಂಪತ್ತು, ಸಂತಾನಗಳ ಮೂಲಕ ನಿಮಗೆ ಸಹಾಯವನ್ನು ನೀಡಿದೆವು ಹಾಗೂ ನಾವು ನಿಮ್ಮನ್ನು ಸಂಖ್ಯಾ ಬಲವುಳ್ಳವರನ್ನಾಗಿ ಮಾಡಿದೆವು.
عربی تفاسیر:
اِنْ اَحْسَنْتُمْ اَحْسَنْتُمْ لِاَنْفُسِكُمْ ۫— وَاِنْ اَسَاْتُمْ فَلَهَا ؕ— فَاِذَا جَآءَ وَعْدُ الْاٰخِرَةِ لِیَسُوْٓءٗا وُجُوْهَكُمْ وَلِیَدْخُلُوا الْمَسْجِدَ كَمَا دَخَلُوْهُ اَوَّلَ مَرَّةٍ وَّلِیُتَبِّرُوْا مَا عَلَوْا تَتْبِیْرًا ۟
ನೀವು ಒಳಿತು ಮಾಡುವುದಾದರೆ ಸ್ವತಃ ನಿಮಗಾಗಿಯೇ ಒಳಿತು ಮಾಡುವಿರಿ ಮತ್ತು ನೀವು ಕೆಡುಕು ಮಾಡುವುದಾದರೆ ಸ್ವತಃ ಅದು ನಿಮಗಾಗಿಯೇ ಇರುವುದು. ಅನಂತರ ಮತ್ತೊಂದು ವಾಗ್ದಾನದ ಸಮಯ ಬಂದಾಗ ನಿಮ್ಮ ಮುಖಗಳನ್ನು ವಿರೂಪಗೊಳಿಸಲೆಂದೂ, ಮೊದಲ ಬಾರಿಯಂತೆಯೇ ಪುನಃ ಆ ಮಸೀದಿಗೆ ನುಗ್ಗಲೆಂದೂ ಹಾಗೂ ಅವರು ನಿಯಂತ್ರಣ ಸಾಧಿಸಿದೆಲ್ಲವನ್ನು, ಮೂಲೋತ್ಪಾಟನೆ ಮಾಡಲೆಂದೂ (ನಾವು ಬೇರೆ ದಾಸರನ್ನು) ಕಳುಹಿಸಿದೆವು.
عربی تفاسیر:
 
معانی کا ترجمہ سورت: اِسراء
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں