Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: کہف   آیت:
وَاِذِ اعْتَزَلْتُمُوْهُمْ وَمَا یَعْبُدُوْنَ اِلَّا اللّٰهَ فَاْوٗۤا اِلَی الْكَهْفِ یَنْشُرْ لَكُمْ رَبُّكُمْ مِّنْ رَّحْمَتِهٖ وَیُهَیِّئْ لَكُمْ مِّنْ اَمْرِكُمْ مِّرْفَقًا ۟
ಅವರನ್ನೂ, ಮತ್ತು ಅವರು ಅಲ್ಲಾಹನ ಹೊರತು ಆರಾಧಿಸುತ್ತಿರುವ ವಸ್ತಗಳನ್ನೂ ನೀವು ತೊರೆದಿರುವುದರಿಂದ ಇನ್ನು ಆ ಗುಹೆಯೊಳಗೆ ಆಶ್ರಯ ಪಡೆಯಿರಿ. ನಿಮ್ಮ ಪ್ರಭುವು ನಿಮ್ಮ ಮೇಲೆ ತನ್ನ ಕಾರಣ್ಯವನ್ನು ವಿಸ್ತಾರಗೊಳಿಸುವನು ಮತ್ತು ನಿಮ್ಮ ಕಾರ್ಯದಲ್ಲಿ ಅನುಕೂಲತೆಯನ್ನು ಒದಗಿಸಿಕೊಡುವನು.
عربی تفاسیر:
وَتَرَی الشَّمْسَ اِذَا طَلَعَتْ تَّزٰوَرُ عَنْ كَهْفِهِمْ ذَاتَ الْیَمِیْنِ وَاِذَا غَرَبَتْ تَّقْرِضُهُمْ ذَاتَ الشِّمَالِ وَهُمْ فِیْ فَجْوَةٍ مِّنْهُ ؕ— ذٰلِكَ مِنْ اٰیٰتِ اللّٰهِ ؕ— مَنْ یَّهْدِ اللّٰهُ فَهُوَ الْمُهْتَدِ ۚ— وَمَنْ یُّضْلِلْ فَلَنْ تَجِدَ لَهٗ وَلِیًّا مُّرْشِدًا ۟۠
ಸೂರ್ಯ ಉದಯಿಸುವಾಗ ಅವರ ಗುಹೆಯಿಂದ ಬಲ ಪಾರ್ಶ್ವಕ್ಕೆ ಸರಿಯುತ್ತಿರುವುದಾಗಿ ಮತ್ತು ಅಸ್ತಮಿಸುವಾಗ ಅದು ಅವರ ಎಡಪಾರ್ಶ್ವಕ್ಕೆ ಹಾದು ಹೋಗುತ್ತಿರುವುದಾಗಿಯೂ ನೀವು ಕಾಣುವಿರಿ ಮತ್ತು ಅವರು ಆ ಗುಹೆಯ ವಿಶಾಲ ಜಾಗದಲ್ಲಿದ್ದರು. ಇದು ಅಲ್ಲಾಹನ ದೃಷ್ಟಾಂತಗಳಲ್ಲೊAದು. ಅಲ್ಲಾಹನು ಯಾರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೋ ಅವನೇ ಸನ್ಮಾರ್ಗದಲ್ಲಿರುವನು ಮತ್ತು ಅವನು ಯಾರನ್ನು ದಾರಿಗೆಡಿಸುತ್ತನೋ ಅವನಿಗೆ ಯಾವುದೇ ಮಾರ್ಗದರ್ಶಕ ಮತ್ತು ಆಪ್ತಮಿತ್ರನನ್ನು ನೀವು ಕಾಣಲಾರಿರಿ.
عربی تفاسیر:
وَتَحْسَبُهُمْ اَیْقَاظًا وَّهُمْ رُقُوْدٌ ۖۗ— وَّنُقَلِّبُهُمْ ذَاتَ الْیَمِیْنِ وَذَاتَ الشِّمَالِ ۖۗ— وَكَلْبُهُمْ بَاسِطٌ ذِرَاعَیْهِ بِالْوَصِیْدِ ؕ— لَوِ اطَّلَعْتَ عَلَیْهِمْ لَوَلَّیْتَ مِنْهُمْ فِرَارًا وَّلَمُلِئْتَ مِنْهُمْ رُعْبًا ۟
ನೀವು ಅವರನ್ನು ಎಚ್ಚರವಿದ್ದಾರೆಂದು ಭಾವಿಸುವಿರಿ. ವಸ್ತುತಃ ಅವರು ನಿದ್ರೆಯಲ್ಲಿದ್ದರು. ಸ್ವತಃ ನಾವೇ ಅವರನ್ನು ಬಲಪಾರ್ಶ್ವಕ್ಕೂ ಎಡಪಾರ್ಶ್ವಕ್ಕೂ ಹೊರಳಿಸುತ್ತಿದ್ದೆವು. ಅವರ ನಾಯಿಯು ಸಹ ಹೊಸ್ತಿಲಲ್ಲಿ ತನ್ನೆರಡು ಮುಂಗಾಲುಗಳನ್ನು ಚಾಚಿ ಕುಳಿತಿತ್ತು. ಇನ್ನು ನೀವೇನಾದರು ಅವರನ್ನು ಇಣುಕಿ ನೋಡಲು ಬಯಸುತ್ತಿದ್ದರೆ ಖಂಡಿತ ಅವರಿಂದ ತಿರುಗಿ ಓಟಕ್ಕಿಳಿಯುತ್ತಿದ್ದಿರಿ ಮತ್ತು ಅವರ ಭಯದಿಂದ ನಿಮ್ಮಲ್ಲಿ ಭೀತಿ ತುಂಬಿ ಬಿಡುತ್ತಿತ್ತು.
عربی تفاسیر:
وَكَذٰلِكَ بَعَثْنٰهُمْ لِیَتَسَآءَلُوْا بَیْنَهُمْ ؕ— قَالَ قَآىِٕلٌ مِّنْهُمْ كَمْ لَبِثْتُمْ ؕ— قَالُوْا لَبِثْنَا یَوْمًا اَوْ بَعْضَ یَوْمٍ ؕ— قَالُوْا رَبُّكُمْ اَعْلَمُ بِمَا لَبِثْتُمْ ؕ— فَابْعَثُوْۤا اَحَدَكُمْ بِوَرِقِكُمْ هٰذِهٖۤ اِلَی الْمَدِیْنَةِ فَلْیَنْظُرْ اَیُّهَاۤ اَزْكٰی طَعَامًا فَلْیَاْتِكُمْ بِرِزْقٍ مِّنْهُ  وَلَا یُشْعِرَنَّ بِكُمْ اَحَدًا ۟
(ಹೇಗೆ ಮಲಗಿಸಿದ್ದೆವೊ) ಅದೇ ಪ್ರಕಾರ ಅವರು ಪರಸ್ಪರ ವಿಚಾರಿಸಿಕೊಳ್ಳಲೆಂದು ನಾವು ಅವರನ್ನು ನಿದ್ರೆಯಿಂದ ಎಬ್ಬಿಸಿದೆವು. ಹೇಳುವವನೊಬ್ಬನು ಹೇಳಿದನು: ನೀವು ಎಷ್ಟು ಹೊತ್ತು ತಂಗಿದ್ದಿರಿ? ಅವರು ಉತ್ತರಿಸಿದರು: ನಾವು ಒಂದು ದಿನ ಅಥವಾ ದಿನದ ಒಂದು ಅಂಶ. ಇನ್ನು ಕೆಲವರು ಹೇಳಿದರು. ನೀವು ತಂಗಿದ್ದ ಕಾಲಾವಧಿಯ ಕುರಿತು ನಿಮ್ಮ ಪ್ರಭುವೇ ಚೆನ್ನಾಗಿ ಬಲ್ಲನು. ಇನ್ನು ನಿಮ್ಮಲ್ಲೊಬ್ಬನನ್ನು ಈ ಬೆಳ್ಳಿ ನಾಣ್ಯದೊಂದಿಗೆ ಪಟ್ಟಣದೆಡೆಗೆ ಕಳುಹಿಸಿರಿ. ಅವನು ಯಾವ ಆಹಾರವು ಶುದ್ಧವೆಂಬುದನ್ನು ಪರಿಶೋಧಿಸಿ ಅನಂತರ ಅವನು ಅದರಿಂದಲೇ ನಿಮಗೆ ಆಹಾರವನ್ನು ತರಲಿ ಮತ್ತು ಜಾಗ್ರತೆ, ಸ್ವಲ್ಪ ಸೌಮ್ಯತೆಯನ್ನುಪಾಲಿಸಲಿ ಮತ್ತು ಅವನು ಯಾರಿಗೂ ನಿಮ್ಮ ಸುಳಿವನ್ನು ನೀಡದಿರಲಿ.
عربی تفاسیر:
اِنَّهُمْ اِنْ یَّظْهَرُوْا عَلَیْكُمْ یَرْجُمُوْكُمْ اَوْ یُعِیْدُوْكُمْ فِیْ مِلَّتِهِمْ وَلَنْ تُفْلِحُوْۤا اِذًا اَبَدًا ۟
ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸಿದರೆ ನಿಮ್ಮನ್ನು ಕಲ್ಲೆಸೆದು ಕೊಲ್ಲುವರು ಇಲ್ಲವೇ ನಿಮ್ಮನ್ನು ತಮ್ಮ ಧರ್ಮಕ್ಕೆ (ಬಲವಂತವಾಗಿ) ಮರಳಿಸುವರು ಹಾಗೇನಾದರೂ ಆದರೆ ನೀವೆಂದಿಗೂ ಯಶಸ್ಸು ಪಡೆಯಲಾರಿರಿ.
عربی تفاسیر:
 
معانی کا ترجمہ سورت: کہف
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں