Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: بقرہ   آیت:
مَثَلُهُمْ كَمَثَلِ الَّذِی اسْتَوْقَدَ نَارًا ۚ— فَلَمَّاۤ اَضَآءَتْ مَا حَوْلَهٗ ذَهَبَ اللّٰهُ بِنُوْرِهِمْ وَتَرَكَهُمْ فِیْ ظُلُمٰتٍ لَّا یُبْصِرُوْنَ ۟
ಅವರ ಉಪಮೆಯು ಒಬ್ಬ ಬೆಂಕಿಯುರಿಸಿದವನAತಿದೆ. ಅದು ಅವನ ಸುತ್ತಮುತ್ತಲಿರುವುದನ್ನು ಬೆಳಗಿದಾಗ, ಅಲ್ಲಾಹನು ಅವರ ಪ್ರಕಾಶವನ್ನು ಕಸಿದುಕೊಂಡನು. ಹಾಗೂ ಅವರನ್ನು ಅಂಧಕಾರಗಳಲ್ಲಿ ಬಿಟ್ಟುಬಿಟ್ಟನು. ಅವರು ದೃಷ್ಟಿ ಹೊಂದಿದವರಾಗಿರಲಿಲ್ಲ.
عربی تفاسیر:
صُمٌّۢ بُكْمٌ عُمْیٌ فَهُمْ لَا یَرْجِعُوْنَ ۟ۙ
ಅವರು ಕಿವುಡರು, ಮೂಕರು, ಅಂಧರಾಗಿದ್ದಾರೆ. ಆದ್ದರಿಂದ ಅವರು (ಸತ್ಯದೆಡೆಗೆ) ಮರಳಲಾರರು.
عربی تفاسیر:
اَوْ كَصَیِّبٍ مِّنَ السَّمَآءِ فِیْهِ ظُلُمٰتٌ وَّرَعْدٌ وَّبَرْقٌ ۚ— یَجْعَلُوْنَ اَصَابِعَهُمْ فِیْۤ اٰذَانِهِمْ مِّنَ الصَّوَاعِقِ حَذَرَ الْمَوْتِ ؕ— وَاللّٰهُ مُحِیْطٌ بِالْكٰفِرِیْنَ ۟
ಅಥವಾ ಅವರ ಇನ್ನೊಂದು ಉಪಮೆಯು ಆಕಾಶದಿಂದ ಸುರಿಯುವ ಭಾರೀ ಮಳೆಯಂತಿದೆ. ಅದರಲ್ಲಿ ಅಂಧಕಾರಗಳೂ, ಗುಡುಗೂ, ಮಿಂಚೂ ಇವೆ. ಸಿಡಿಲಿನ ಆರ್ಭಟದ ನಿಮಿತ್ತ ಮರಣವನ್ನು ಭಯಗೊಂಡು ಅವರು ತಮ್ಮ ಬೆರಳುಗಳನ್ನು ಕಿವಿಯೊಳಗೆ ತೂರಿಸಿಕೊಳ್ಳುತ್ತಾರೆ. ಮತ್ತು ಅಲ್ಲಾಹನು ಸತ್ಯ ನಿಷೇಧಿಗಳನ್ನು ಆವರಿಸಿರುತ್ತಾನೆ.
عربی تفاسیر:
یَكَادُ الْبَرْقُ یَخْطَفُ اَبْصَارَهُمْ ؕ— كُلَّمَاۤ اَضَآءَ لَهُمْ مَّشَوْا فِیْهِ ۙۗ— وَاِذَاۤ اَظْلَمَ عَلَیْهِمْ قَامُوْا ؕ— وَلَوْ شَآءَ اللّٰهُ لَذَهَبَ بِسَمْعِهِمْ وَاَبْصَارِهِمْ ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟۠
ಸದ್ಯದಲ್ಲೇ ಮಿಂಚು ಅವರ ಕಣ್ಣುಗಳನ್ನು ಕಸಿದುಕೊಳ್ಳುವಂತಿದೆ. ಅವರಿಗೆ ಬೆಳಕಾದಾಗಲೆಲ್ಲಾ ಅದರಲ್ಲಿ ನಡೆಯುತ್ತಾರೆ. ಹಾಗೂ ಅವರ ಮೇಲೆ ಕತ್ತಲಾವರಿಸಿದಾಗ ನಿಂತುಬಿಡುತ್ತಾರೆ. ಅಲ್ಲಾಹನು ಇಚ್ಛಿಸಿರುತ್ತಿದ್ದರೆ. ಅವರ ಕಿವಿಯನ್ನು ಮತ್ತು ಅವರ ಕಣ್ಣುಗಳನ್ನು ವ್ಯರ್ಥಗೊಳಿಸುತ್ತಿದ್ದನು. ವಾಸ್ತವದಲ್ಲಿ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
عربی تفاسیر:
یٰۤاَیُّهَا النَّاسُ اعْبُدُوْا رَبَّكُمُ الَّذِیْ خَلَقَكُمْ وَالَّذِیْنَ مِنْ قَبْلِكُمْ لَعَلَّكُمْ تَتَّقُوْنَ ۟ۙ
ಓ ಜನರೇ, ನೀವು ನಿಮ್ಮನ್ನೂ, ನಿಮಗಿಂತ ಮುಂಚಿನ ಜನರನ್ನೂ ಸೃಷ್ಟಿಸಿದ ನಿಮ್ಮ ಪಾಲಕ ಪ್ರಭುವನ್ನು ಆರಾಧಿಸಿರಿ. ನೀವು (ಅಲ್ಲಾಹನ ಯಾತನೆಯಿಂದ) ರಕ್ಷಣೆಹೊಂದಬಹುದು.
عربی تفاسیر:
الَّذِیْ جَعَلَ لَكُمُ الْاَرْضَ فِرَاشًا وَّالسَّمَآءَ بِنَآءً ۪— وَّاَنْزَلَ مِنَ السَّمَآءِ مَآءً فَاَخْرَجَ بِهٖ مِنَ الثَّمَرٰتِ رِزْقًا لَّكُمْ ۚ— فَلَا تَجْعَلُوْا لِلّٰهِ اَنْدَادًا وَّاَنْتُمْ تَعْلَمُوْنَ ۟
ಅವನೆ ನಿಮಗಾಗಿ ಭೂಮಿಯನ್ನು ಹಾಸನ್ನಾಗಿಯು, ಆಕಾಶವನ್ನು ಮೇಲ್ಛಾವಣಿಯನ್ನಾಗಿಯು ಮಾಡಿರುವನು ಮತ್ತು ಆಕಾಶದಿಂದ ನೀರನ್ನು ಸುರಿಸಿ ಅದರ ಮೂಲಕ ಫಲ ಬೆಳೆಗಳನ್ನು ಹೊರತಂದು ನಿಮಗೆ ಅನ್ನಾಧಾರವನ್ನು ನೀಡಿದನು. ಜಾಗೃತೆ! ನೀವು (ಈ ಸತ್ಯವನ್ನು) ಅರಿತವರಾಗಿದ್ದೂ ಅಲ್ಲಾಹನಿಗೆ ಸರಿಸಮಾನರನ್ನು (ಉಪದೇವರುಗಳನ್ನು) ಮಾಡದಿರಿ.
عربی تفاسیر:
وَاِنْ كُنْتُمْ فِیْ رَیْبٍ مِّمَّا نَزَّلْنَا عَلٰی عَبْدِنَا فَاْتُوْا بِسُوْرَةٍ مِّنْ مِّثْلِهٖ ۪— وَادْعُوْا شُهَدَآءَكُمْ مِّنْ دُوْنِ اللّٰهِ اِنْ كُنْتُمْ صٰدِقِیْنَ ۟
ನಾವು ನಮ್ಮ ದಾಸನ (ಮುಹಮ್ಮದ್(ಸ) ರವರ) ಮೇಲೆ ಅವತೀರ್ಣಗೊಳಿಸಿದ ಗ್ರಂಥದಲ್ಲಿ (ಕುರ್‌ಆನ್) ನಿಮಗೆ ಸಂದೇಹವಿದ್ದರೆ ನೀವು ಅದರಂತಹ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ. ಮತ್ತು ಅಲ್ಲಾಹನ ಹೊರತು ನಿಮ್ಮ ಸಹಾಯಕರನ್ನೂ ಕರೆದುಕೊಳ್ಳಿರಿ ನೀವು ಸತ್ಯವಂತರಾಗಿದ್ದರೆ.
عربی تفاسیر:
فَاِنْ لَّمْ تَفْعَلُوْا وَلَنْ تَفْعَلُوْا فَاتَّقُوا النَّارَ الَّتِیْ وَقُوْدُهَا النَّاسُ وَالْحِجَارَةُ ۖۚ— اُعِدَّتْ لِلْكٰفِرِیْنَ ۟
ಇನ್ನು ನೀವು ಹಾಗೆ ಮಾಡದಿದ್ದಲ್ಲಿ ಮತ್ತು ಖಂಡಿತ ನೀವು ಹಾಗೆಂದಿಗೂ ಮಾಡಲಾರಿರಿ. ಆದ್ದರಿಂದ ನೀವು ಮನುಷ್ಯರನ್ನು ಮತ್ತು ಶಿಲೆಗಳÀನ್ನು ಇಂಧನವಾಗಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗೆ ಸಿದ್ಧsಗೊಳಿಸಲಾಗಿದೆ.
عربی تفاسیر:
 
معانی کا ترجمہ سورت: بقرہ
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں