Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: بقرہ   آیت:
اِنَّ الَّذِیْنَ كَفَرُوْا سَوَآءٌ عَلَیْهِمْ ءَاَنْذَرْتَهُمْ اَمْ لَمْ تُنْذِرْهُمْ لَا یُؤْمِنُوْنَ ۟
ನಿಶ್ಚಯವಾಗಿಯೂ ಸತ್ಯನಿಷೇಧಿಗಳಿಗೆ ನೀವು (ಅಲ್ಲಾಹನ ಯಾತನೆಯ) ಮುನ್ನೆಚ್ಚರಿಕೆ ನೀಡಿದರೂ, ನೀಡದಿದ್ದರೂ ಅವರ ಪಾಲಿಗೆ ಸಮಾನಾವಾಗಿದೆ, ಅವರು ವಿಶ್ವಾಸವಿಡುವುದಿಲ್ಲ.
عربی تفاسیر:
خَتَمَ اللّٰهُ عَلٰی قُلُوْبِهِمْ وَعَلٰی سَمْعِهِمْ ؕ— وَعَلٰۤی اَبْصَارِهِمْ غِشَاوَةٌ ؗ— وَّلَهُمْ عَذَابٌ عَظِیْمٌ ۟۠
ಅಲ್ಲಾಹನು ಅವರ ಹೃದಯಗಳ ಮೇಲೆ ಮತ್ತು ಕಿವಿಗಳ ಮೇಲೆ ಮುದ್ರೆಯೊತ್ತಿರುತ್ತಾನೆ ಮತ್ತು ಅವರ ಕಣ್ಣುಗಳ ಮೇಲೆ ಪರದೆ ಇದೆ ಹಾಗೂ ಅವರಿಗೆ ಘೋರ ಯಾತನೆಯಿದೆ.
عربی تفاسیر:
وَمِنَ النَّاسِ مَنْ یَّقُوْلُ اٰمَنَّا بِاللّٰهِ وَبِالْیَوْمِ الْاٰخِرِ وَمَا هُمْ بِمُؤْمِنِیْنَ ۟ۘ
ಕೆಲವು ಜನರು (ಕಪಟವಿಶ್ವಾಸಿಗಳು) ನಾವು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸವಿರಿಸಿದ್ದೇವೆ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ಅವರು ವಿಶ್ವಾಸಿಗಳಲ್ಲ.
عربی تفاسیر:
یُخٰدِعُوْنَ اللّٰهَ وَالَّذِیْنَ اٰمَنُوْا ۚ— وَمَا یَخْدَعُوْنَ اِلَّاۤ اَنْفُسَهُمْ وَمَا یَشْعُرُوْنَ ۟ؕ
ಅವರು (ತಮ್ಮ ಭ್ರಮೆಯಲ್ಲಿ) ಅಲ್ಲಾಹನನ್ನು ಮತ್ತು ಸತ್ಯವಿಶ್ವಾಸಿಗಳನ್ನು ವಂಚಿಸಲು ಪ್ರಯತ್ನಿಸುತ್ತಾರೆ. ವಾಸ್ತವದಲ್ಲಿ ಅವರು ಸ್ವತಃ ತಮ್ಮನ್ನೇ ವಂಚಿಸಿಕೊಳ್ಳುತ್ತಿದ್ದಾರೆ, ಆದರೆ ಅವರು ಗ್ರಹಿಸುವುದಿಲ್ಲ.
عربی تفاسیر:
فِیْ قُلُوْبِهِمْ مَّرَضٌ ۙ— فَزَادَهُمُ اللّٰهُ مَرَضًا ۚ— وَلَهُمْ عَذَابٌ اَلِیْمٌ ۙ۬۟ — بِمَا كَانُوْا یَكْذِبُوْنَ ۟
ಅವರ ಹೃದಯಗಳಲ್ಲಿ (ಕಪಟದ) ರೋಗವಿದೆ. ಅಲ್ಲಾಹನು ಅವರ ರೋಗವನ್ನು ಇನ್ನಷ್ಟು ಹೆಚ್ಚಿಸಿದನು ಮತ್ತು ಅವರ ಸುಳ್ಳಿನ ನಿಮಿತ್ತ ಅವರಿಗೆ ವೇದನಾಜನಕ ಯಾತನೆಯಿದೆ.
عربی تفاسیر:
وَاِذَا قِیْلَ لَهُمْ لَا تُفْسِدُوْا فِی الْاَرْضِ ۙ— قَالُوْۤا اِنَّمَا نَحْنُ مُصْلِحُوْنَ ۟
ನೀವು ಭೂಮಿಯಲ್ಲಿ ಕ್ಷೋಭೆಯನ್ನು ಹರಡದಿರಿ ಎಂದು ಅವರೊಡನೆ ಹೇಳಲಾದರೆ, ನಾವು ಸುಧಾರಕರು ಮಾತ್ರ ಆಗಿದ್ದೇವೆ ಎಂದು ಅವರು ಹೇಳುತ್ತಾರೆ.
عربی تفاسیر:
اَلَاۤ اِنَّهُمْ هُمُ الْمُفْسِدُوْنَ وَلٰكِنْ لَّا یَشْعُرُوْنَ ۟
(ವಿಶ್ವಾಸಿಗಳೆ) ಜಾಗೃತೆ ! ವಾಸ್ತವದಲ್ಲಿ ಅವರೇ ಕ್ಷೋಭೆ ಹರಡುವರು, ಆದರೆ ಅವರಿಗೆ ತಿಳುವಳಿಕೆ ಇರುವುದಿಲ್ಲ.
عربی تفاسیر:
وَاِذَا قِیْلَ لَهُمْ اٰمِنُوْا كَمَاۤ اٰمَنَ النَّاسُ قَالُوْۤا اَنُؤْمِنُ كَمَاۤ اٰمَنَ السُّفَهَآءُ ؕ— اَلَاۤ اِنَّهُمْ هُمُ السُّفَهَآءُ وَلٰكِنْ لَّا یَعْلَمُوْنَ ۟
ಇತರ ಜನರು (ಪೈಗಂಬರರ ಅನುಚರರು) ವಿಶ್ವಾಸವಿರಿಸಿದ ಹಾಗೆ ನೀವು ವಿಶ್ವಾಸವಿಸಿರಿ ಎಂದು ಅವರೊಡನೆ ಹೇಳಲಾದರೆ, ಏನು? ಮೂರ್ಖರು ವಿಶ್ವಾಸವಿರಿಸಿದ ಹಾಗೆ ನಾವು ವಿಶ್ವಾಸವಿರಿಸಬೇಕೆ? ಎಂದು ಅವರು ಹೇಳುತ್ತಾರೆ. ಜಾಗೃತೆ! ನಿಜವಾಗಿಯು ಅವರೇ ಮೂರ್ಖರಾಗಿದ್ದಾರೆ. ಆದರೆ ಅವರು ಅರಿಯುವುದಿಲ್ಲ.
عربی تفاسیر:
وَاِذَا لَقُوا الَّذِیْنَ اٰمَنُوْا قَالُوْۤا اٰمَنَّا ۖۚ— وَاِذَا خَلَوْا اِلٰی شَیٰطِیْنِهِمْ ۙ— قَالُوْۤا اِنَّا مَعَكُمْ ۙ— اِنَّمَا نَحْنُ مُسْتَهْزِءُوْنَ ۟
ಅವರು ವಿಶ್ವಾಸಿಗಳನ್ನು ಭೇಟಿಯಾದಾಗ ನಾವು ವಿಶ್ವಾಸಿಗಳಾಗಿದ್ದೇವೆ ಎಂದು ಹೇಳುತ್ತಾರೆ. ಹಾಗೂ ಅವರು ತಮ್ಮ (ಒಡನಾಡಿಗಳಾದ) ಶೈತಾನರನ್ನು ಏಕಾಂತದಲ್ಲಿ ಭೇಟಿಯಾದಾಗ, ನಾವು ನಿಮ್ಮೊಂದಿಗಿದ್ದೇವೆ ಎನ್ನುತ್ತಾರೆ. ನಾವಂತು ಅವರನ್ನು (ವಿಶ್ವಾಸಿಗಳನ್ನು) ಗೇಲಿ ಮಾಡುವವರಾಗಿದ್ದೇವೆ (ಎನ್ನುತ್ತಾರೆ).
عربی تفاسیر:
اَللّٰهُ یَسْتَهْزِئُ بِهِمْ وَیَمُدُّهُمْ فِیْ طُغْیَانِهِمْ یَعْمَهُوْنَ ۟
ಅಲ್ಲಾಹನು ಅವರನ್ನು ಗೇಲಿ ಮಾಡುತ್ತಿದ್ದಾನೆ. ಹಾಗೂ ಅವನು ಅವರನ್ನು ಅತಿಕ್ರಮದಲ್ಲಿ ಅಲೆದಾಡುತ್ತಿರಲು ಸಡಿಲ ಬಿಡುತ್ತಾನೆ.
عربی تفاسیر:
اُولٰٓىِٕكَ الَّذِیْنَ اشْتَرَوُا الضَّلٰلَةَ بِالْهُدٰی ۪— فَمَا رَبِحَتْ تِّجَارَتُهُمْ وَمَا كَانُوْا مُهْتَدِیْنَ ۟
ಇವರೇ ಸನ್ಮಾರ್ಗದ ಬದಲಿಗೆ ದುರ್ಮಾರ್ಗವನ್ನು ಖರೀದಿಸಿದವರಾಗಿದ್ದಾರೆ. ಅವರ ವ್ಯಾಪಾರವು ಲಾಭ ನೀಡಲಿಲ್ಲ ಮತ್ತು ಅವರು ಸನ್ಮಾರ್ಗ ಹೊಂದುವವರಾಗಿರಲಿಲ್ಲ.
عربی تفاسیر:
 
معانی کا ترجمہ سورت: بقرہ
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں