Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: طٰہ   آیت:
وَاَنَا اخْتَرْتُكَ فَاسْتَمِعْ لِمَا یُوْحٰی ۟
ಮತ್ತು ನಾನು ನಿಮ್ಮನ್ನು (ದೌತ್ಯ ಕಾರ್ಯಕ್ಕೆ) ಆಯ್ಕೆ ಮಾಡಿದ್ದೇನೆ. ಆದ್ದರಿಂದ ನಿಮಗೆ ನೀಡಲಾಗುತ್ತಿರುವ ದಿವ್ಯವಾಣಿಯನ್ನು ಗಮನ ಕೊಟ್ಟು ಆಲಿಸಿರಿ.
عربی تفاسیر:
اِنَّنِیْۤ اَنَا اللّٰهُ لَاۤ اِلٰهَ اِلَّاۤ اَنَا فَاعْبُدْنِیْ ۙ— وَاَقِمِ الصَّلٰوةَ لِذِكْرِیْ ۟
ನಿಸ್ಸಂದೇಹವಾಗಿಯು ನಾನು ಅಲ್ಲಾಹನಾಗಿದ್ದೇನೆ. ನನ್ನ ಹೊರತು ಇನ್ನಾವ ಆರಾಧ್ಯನಿಲ್ಲ. ಆದ್ದರಿಂದ ನೀವು ನನ್ನನ್ನೇ ಆರಾಧಿಸಿರಿ. ಮತ್ತು ನನ್ನ ಸ್ಮರಣೆಗಾಗಿ ನಮಾಝ್ ಸಂಸ್ಥಾಪಿಸಿರಿ.
عربی تفاسیر:
اِنَّ السَّاعَةَ اٰتِیَةٌ اَكَادُ اُخْفِیْهَا لِتُجْزٰی كُلُّ نَفْسٍ بِمَا تَسْعٰی ۟
ಖಂಡಿತವಾಗಿಯೂ ಪ್ರಳಯ ದಿನವು ಬರಲಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಗಳ ಪ್ರತಿಫಲ ಪಡೆಯಲೆಂದು ನಾನು ಅದನ್ನು ರಹಸ್ಯವಾಗಿಡಲು ಇಚ್ಛಿಸುತ್ತೇನೆ.
عربی تفاسیر:
فَلَا یَصُدَّنَّكَ عَنْهَا مَنْ لَّا یُؤْمِنُ بِهَا وَاتَّبَعَ هَوٰىهُ فَتَرْدٰی ۟
ಆದುದರಿಂದ ಅದರಲ್ಲಿ ವಿಶ್ವಾಸವಿಡದವನು ಮತ್ತು ತನ್ನ ಸ್ವೇಚ್ಛೆಯನ್ನು ಹಿಂಬಾಲಿಸುವನು ಅದರ ವಿಶ್ವಾಸದಿಂದ ನಿಮ್ಮನ್ನು ತಡೆಯದಿರಲಿ. ಹಾಗೇನಾದರೂ ಆದರೆ ನೀವು ನಾಶವಾಗುವಿರಿ.
عربی تفاسیر:
وَمَا تِلْكَ بِیَمِیْنِكَ یٰمُوْسٰی ۟
ಓ ಮೂಸಾ, ನಿಮ್ಮ ಬಲಗೈಯಲ್ಲಿರುವುದು ಏನು?
عربی تفاسیر:
قَالَ هِیَ عَصَایَ ۚ— اَتَوَكَّؤُا عَلَیْهَا وَاَهُشُّ بِهَا عَلٰی غَنَمِیْ وَلِیَ فِیْهَا مَاٰرِبُ اُخْرٰی ۟
ಅವರು ಉತ್ತರಿಸಿದರು: ಇದು ನನ್ನ ಕೋಲು, ಇದನ್ನು ನಾನು ಊರಿ ನಡೆಯುತ್ತೇನೆ ಮತ್ತು ಇದರಿಂದ ನನ್ನ ಆಡುಗಳಿಗೆ ಎಲೆಗಳನ್ನು ಉದುರಿಸುತ್ತೇನೆ. ಮತ್ತು ನನಗೆ ಇನ್ನೂ ಹಲವು ಪ್ರಯೋಜನಗಳು ಇದರಲ್ಲಿವೆ.
عربی تفاسیر:
قَالَ اَلْقِهَا یٰمُوْسٰی ۟
ಆಗ ಅಲ್ಲಾಹನು 'ಓ ಮೂಸಾ; ಅದನ್ನು ಕೆಳಗೆ ಹಾಕಿರಿ' ಎಂದನು.
عربی تفاسیر:
فَاَلْقٰىهَا فَاِذَا هِیَ حَیَّةٌ تَسْعٰی ۟
ಅವರು ಅದನ್ನು ಹಾಕಿದರು, ಕೂಡಲೇ ಅದೊಂದು ತೆವಳುವ ಸರ್ಪವಾಯಿತು.
عربی تفاسیر:
قَالَ خُذْهَا وَلَا تَخَفْ ۫— سَنُعِیْدُهَا سِیْرَتَهَا الْاُوْلٰی ۟
ಅಲ್ಲಾಹನು ಹೇಳಿದನು: ಭಯಪಡದೆ ನೀವು ಅದನ್ನು ಹಿಡಿದುಕೊಳ್ಳಿರಿ. ನಾವದನ್ನು ಪೂರ್ವ ಸ್ಥಿತಿಗೆ ಮರಳಿಸಲಿದ್ದೇವೆ.
عربی تفاسیر:
وَاضْمُمْ یَدَكَ اِلٰی جَنَاحِكَ تَخْرُجْ بَیْضَآءَ مِنْ غَیْرِ سُوْٓءٍ اٰیَةً اُخْرٰی ۟ۙ
ಮತ್ತು ನಿಮ್ಮ ಅಂಗೈಯನ್ನು ನಿಮ್ಮ ಕಂಕುಳಕ್ಕೆ ಸೇರಿಸಿರಿ.ಆಗ ಅದು ಯಾವುದೇ ದೋಷವಿಲ್ಲದೆ ಬೆಳ್ಳಗೆ ಮಿಂಚುತ್ತಿರುವ ಸ್ಥಿತಿಯಲ್ಲಿ ಹೊರ ಬರುವುದು. ಇದು ಎರಡನೆಯ ಪವಾಡವಾಗಿದೆ.
عربی تفاسیر:
لِنُرِیَكَ مِنْ اٰیٰتِنَا الْكُبْرٰی ۟ۚ
ಇದೇಕೆಂದರೆ ನಾವು ನಿಮಗೆ ನಮ್ಮ ಕೆಲವು ಮಹಾ ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದಾಗಿದೆ.
عربی تفاسیر:
اِذْهَبْ اِلٰی فِرْعَوْنَ اِنَّهٗ طَغٰی ۟۠
ಇನ್ನು ನೀವು ಫಿರ್‌ಔನನ ಕಡೆಗೆ ಹೋಗಿರಿ. ನಿಶ್ಚಯವಾಗಿಯು ಅವನು ಮಿತಿಮೀರಿ ಹೋಗಿದ್ದಾನೆ.
عربی تفاسیر:
قَالَ رَبِّ اشْرَحْ لِیْ صَدْرِیْ ۟ۙ
ಮೂಸ ಪ್ರಾರ್ಥಿಸಿದರು: ಓ ನನ್ನ ಪ್ರಭು, ನೀನು ನನಗಾಗಿ ನನ್ನ ಹೃದಯವನ್ನು ವಿಶಾಲಗೊಳಿಸು.
عربی تفاسیر:
وَیَسِّرْ لِیْۤ اَمْرِیْ ۟ۙ
ಮತ್ತು ನನ್ನ (ದೌತ್ಯ) ಕಾರ್ಯವನ್ನು ನನಗಾಗಿ ಸುಲಭಗೊಳಿಸು
عربی تفاسیر:
وَاحْلُلْ عُقْدَةً مِّنْ لِّسَانِیْ ۟ۙ
ಮತ್ತು ನನ್ನ ನಾಲಗೆಯ ತೊಡಕನ್ನು ಬಿಡಿಸು.
عربی تفاسیر:
یَفْقَهُوْا قَوْلِیْ ۪۟
ಇದು ಜನರು ನನ್ನ ಮಾತನ್ನು ಗ್ರಹಿಸಿಕೊಳ್ಳಲೆಂದಾಗಿದೆ.
عربی تفاسیر:
وَاجْعَلْ لِّیْ وَزِیْرًا مِّنْ اَهْلِیْ ۟ۙ
ನನಗಾಗಿ ನನ್ನ ಕುಟುಂಬದಿAದ ಒಬ್ಬ ಸಹಾಯಕನನ್ನು ನೇಮಿಸು.
عربی تفاسیر:
هٰرُوْنَ اَخِی ۟ۙ
ನನ್ನ ಸಹೋದರ ಹಾರೂನರನ್ನು.
عربی تفاسیر:
اشْدُدْ بِهٖۤ اَزْرِیْ ۟ۙ
ಅವರ ಮೂಲಕ ನನ್ನನ್ನು ಬಲಪಡಿಸು.
عربی تفاسیر:
وَاَشْرِكْهُ فِیْۤ اَمْرِیْ ۟ۙ
ಮತ್ತು ಅವರನ್ನು ನೀನು ನನ್ನ ಕೆಲಸದಲ್ಲಿ ಸಹಭಾಗಿಯನ್ನಾಗಿಸು.
عربی تفاسیر:
كَیْ نُسَبِّحَكَ كَثِیْرًا ۟ۙ
ಇದು ನಾವು ಅತಿ ಹೆಚ್ಚಾಗಿ ನಿನ್ನ ಪಾವಿತ್ರö್ಯವನ್ನು ಸ್ತುತಿಸಲೆಂದು.
عربی تفاسیر:
وَّنَذْكُرَكَ كَثِیْرًا ۟ؕ
ಮತ್ತು ನಿನ್ನನ್ನು ತುಂಬಾ ಸ್ಮರಿಸಲೆಂದಾಗಿದೆ.
عربی تفاسیر:
اِنَّكَ كُنْتَ بِنَا بَصِیْرًا ۟
ನಿಸ್ಸಂಶಯವಾಗಿಯು ನೀನು ನಮ್ಮನ್ನು ಚೆನ್ನಾಗಿ ನೋಡುವವನಾಗಿರುವೆ.
عربی تفاسیر:
قَالَ قَدْ اُوْتِیْتَ سُؤْلَكَ یٰمُوْسٰی ۟
ಆಗ ಅಲ್ಲಾಹನು ಉತ್ತರಿಸಿದನು: ಓ ಮೂಸಾ, ನಿನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದೆ.
عربی تفاسیر:
وَلَقَدْ مَنَنَّا عَلَیْكَ مَرَّةً اُخْرٰۤی ۟ۙ
ನಾವು ನಿಮ್ಮ ಮೇಲೆ ಇನ್ನೊಂದು ಸಲವೂ ಉಪಕಾರವನ್ನು ಮಾಡಿದ್ದೇವು.
عربی تفاسیر:
 
معانی کا ترجمہ سورت: طٰہ
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں