Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: نور   آیت:
اِنَّمَا الْمُؤْمِنُوْنَ الَّذِیْنَ اٰمَنُوْا بِاللّٰهِ وَرَسُوْلِهٖ وَاِذَا كَانُوْا مَعَهٗ عَلٰۤی اَمْرٍ جَامِعٍ لَّمْ یَذْهَبُوْا حَتّٰی یَسْتَاْذِنُوْهُ ؕ— اِنَّ الَّذِیْنَ یَسْتَاْذِنُوْنَكَ اُولٰٓىِٕكَ الَّذِیْنَ یُؤْمِنُوْنَ بِاللّٰهِ وَرَسُوْلِهٖ ۚ— فَاِذَا اسْتَاْذَنُوْكَ لِبَعْضِ شَاْنِهِمْ فَاْذَنْ لِّمَنْ شِئْتَ مِنْهُمْ وَاسْتَغْفِرْ لَهُمُ اللّٰهَ ؕ— اِنَّ اللّٰهَ غَفُوْرٌ رَّحِیْمٌ ۟
ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿರಿಸಿದವರೇ ಸತ್ಯವಿಶ್ವಾಸಿಗಳಾಗಿರುತ್ತಾರೆ. ಅವರು ಯಾವುದಾದರೂ ಸಾಮೂಹಿಕ ಕಾರ್ಯದಲ್ಲಿ ಪೈಗಂಬರರ ಜೊತೆಯಲ್ಲಿದ್ದರೆ ತಮ್ಮಿಂದ ಅನುಮತಿ ಪಡೆಯದೆ ಅವರು ಹೊರ ಹೋಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಿಮ್ಮಿಂದ ಅನುಮತಿ ಪಡೆಯುವವರೇ ಅಲ್ಲಾಹನಲ್ಲೂ, ಅವರ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿದವರಾಗಿದ್ದಾರೆ. ಹಾಗೆಯೇ ಇವರು ತಮ್ಮ ಯಾವುದಾದರೂ ಕಾರ್ಯಕ್ಕೆ ನಿಮ್ಮಿಂದ ಅನುಮತಿಯನ್ನು ಕೇಳಿದರೆ ಅವರ ಪೈಕಿ ತಾನಿಚ್ಛಿಸಿದವರಿಗೆ ಅನುಮತಿ ನೀಡಿರಿ ಮತ್ತು ಅವರಿಗಾಗಿ ಅಲ್ಲಾಹನಲ್ಲಿ ಕ್ಷಮೆ ಯಾಚಿಸಿರಿ. ನಿಸ್ಸಂಶಯವಾಗಿಯೂ ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
عربی تفاسیر:
لَا تَجْعَلُوْا دُعَآءَ الرَّسُوْلِ بَیْنَكُمْ كَدُعَآءِ بَعْضِكُمْ بَعْضًا ؕ— قَدْ یَعْلَمُ اللّٰهُ الَّذِیْنَ یَتَسَلَّلُوْنَ مِنْكُمْ لِوَاذًا ۚ— فَلْیَحْذَرِ الَّذِیْنَ یُخَالِفُوْنَ عَنْ اَمْرِهٖۤ اَنْ تُصِیْبَهُمْ فِتْنَةٌ اَوْ یُصِیْبَهُمْ عَذَابٌ اَلِیْمٌ ۟
(ಓ ಸತ್ಯವಿಶ್ವಾಸಿಗಳೇ) ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ಅಲ್ಲಾಹನ ಪೈಗಂಬರರನ್ನು ಕರೆಯಬೇಡಿರಿ. ಅಲ್ಲಾಹನು ನಿಮ್ಮ ಪೈಕಿ ಕಣ್ಣು ತಪ್ಪಿಸಿಕೊಂಡು ರಹಸ್ಯವಾಗಿ ಹೊರಗೋಗುವವರನ್ನು ಅರಿಯುತ್ತಾನೆ. ಯಾರು ಸಂದೇಶವಾಹಕರ ಆದೇಶವನ್ನು ಧಿಕ್ಕರಿಸುತ್ತಾರೋ ಅವರಿಗೆ ಯಾವುದಾದರೂ ಮಹಾ ವಿಪತ್ತು ಬಂದರೆಗಬಹುದು ಅಥವಾ ಅವರಿಗೆ ವೇದನಾಜನಕ ಯಾತನೆಯು ತಲುಪಬಹುದು ಎಂಬ ಎಚ್ಚರವಿರಿಲಿ.
عربی تفاسیر:
اَلَاۤ اِنَّ لِلّٰهِ مَا فِی السَّمٰوٰتِ وَالْاَرْضِ ؕ— قَدْ یَعْلَمُ مَاۤ اَنْتُمْ عَلَیْهِ ؕ— وَیَوْمَ یُرْجَعُوْنَ اِلَیْهِ فَیُنَبِّئُهُمْ بِمَا عَمِلُوْا ؕ— وَاللّٰهُ بِكُلِّ شَیْءٍ عَلِیْمٌ ۟۠
ತಿಳಿದುಕೊಳ್ಳಿರಿ! ಭೂಮಿ ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದೇ ಆಗಿದೆ. ನೀವು ಯಾವ ಸ್ಥಿತಿಯಲ್ಲಿ ಇರುವಿರೆಂಬುದನ್ನು ಅಲ್ಲಾಹನು ಚೆನ್ನಾಗಿ ಅರಿತಿದ್ದಾನೆ ಮತ್ತು ಅವರೆಲ್ಲರನ್ನೂ ಅವನೆಡೆಗೆ ಮರಳಿಸಲಾಗುವ ದಿನದಂದು ಅವನು ಅವರು ಮಾಡುತ್ತಿದ್ದುದನ್ನು ಅವರಿಗೆ ತಿಳಿಸಿಕೊಡುವನು. ಮತ್ತು ಅಲ್ಲಾಹನು ಸಕಲ ಸಂಗತಿಗಳ ಜ್ಞಾನವುಳ್ಳವನಾಗಿದ್ದಾನೆ.
عربی تفاسیر:
 
معانی کا ترجمہ سورت: نور
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں