Check out the new design

قرآن کریم کے معانی کا ترجمہ - کنڑ ترجمہ - بشیر ميسوری * - ترجمے کی لسٹ


معانی کا ترجمہ سورت: آل عمران   آیت:
وَلِیُمَحِّصَ اللّٰهُ الَّذِیْنَ اٰمَنُوْا وَیَمْحَقَ الْكٰفِرِیْنَ ۟
ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಶುದ್ಧೀಕರಿಸಲಿಕ್ಕೂ ಮತ್ತು ಸತ್ಯನಿಷೇಧಿಗಳನ್ನು ನಿರ್ನಾಮಗೊಳಿಸಲಿಕ್ಕೂ ಆಗಿತ್ತು.
عربی تفاسیر:
اَمْ حَسِبْتُمْ اَنْ تَدْخُلُوا الْجَنَّةَ وَلَمَّا یَعْلَمِ اللّٰهُ الَّذِیْنَ جٰهَدُوْا مِنْكُمْ وَیَعْلَمَ الصّٰبِرِیْنَ ۟
ನೀವು ನಿರಾಯಾಸವಾಗಿ ಸ್ವರ್ಗವನ್ನು ಪ್ರವೇಶಿಸುವಿರೆಂದು ಭಾವಿಸಿರುವಿರಾ? ವಸ್ತುತಃ ನಿಮ್ಮಲ್ಲಿ ಯಾರೆಲ್ಲ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವವರೂ ಅದಕ್ಕಾಗಿ ಸಹನೆ ಪಡುವವರಿದ್ದಾರೆಂದು ಅವನು ಇನ್ನೂ ಕಾಣಲೇ ಇಲ್ಲ.
عربی تفاسیر:
وَلَقَدْ كُنْتُمْ تَمَنَّوْنَ الْمَوْتَ مِنْ قَبْلِ اَنْ تَلْقَوْهُ ۪— فَقَدْ رَاَیْتُمُوْهُ وَاَنْتُمْ تَنْظُرُوْنَ ۟۠
ನೀವು ಯುದ್ಧಕ್ಕೆ ಮೊದಲು ಹುತಾತ್ಮತೆಯ ಹಂಬಲದಲ್ಲಿದ್ದೀರಿ. ಇದೀಗ ನೀವು ಅದನ್ನು ನಿಮ್ಮ ಕಣ್ಣೆದುರೇ ಕಾಣುತ್ತಿರುವಿರಿ.
عربی تفاسیر:
وَمَا مُحَمَّدٌ اِلَّا رَسُوْلٌ ۚ— قَدْ خَلَتْ مِنْ قَبْلِهِ الرُّسُلُ ؕ— اَفَاۡىِٕنْ مَّاتَ اَوْ قُتِلَ انْقَلَبْتُمْ عَلٰۤی اَعْقَابِكُمْ ؕ— وَمَنْ یَّنْقَلِبْ عَلٰی عَقِبَیْهِ فَلَنْ یَّضُرَّ اللّٰهَ شَیْـًٔا ؕ— وَسَیَجْزِی اللّٰهُ الشّٰكِرِیْنَ ۟
ಮುಹಮ್ಮದ್(ಸ) ಓರ್ವ ಸಂದೇಶವಾಹಕರು ಮಾತ್ರ ಅವರಿಗಿಂತ ಮುಂಚೆ ಅನೇಕ ಸಂದೇಶವಾಹಕರು ಗತಿಸಿದ್ದಾರೆ. ಅವರು ಮೃತಪಟ್ಟರೆ ಅಥವಾ ಹುತಾತ್ಮರಾದರೆ ನೀವು ಇಸ್ಲಾಮಿನಿಂದ ಮರಳಿ ಹೋಗುವಿರಾ? ಮತ್ತು ಯಾರಾದರೂ ಹಿಂದಕ್ಕೆ ಮರಳಿ ಹೋಗುವುದಾದರೆ ಅವನು ಅಲ್ಲಾಹನಿಗೆ ಯಾವ ಹಾನಿಯನ್ನು ಮಾಡಲಾರನು. ಸಧ್ಯದಲ್ಲೇ ಕೃತಜ್ಞತೆ ತೋರುವವರಿಗೆ ಅಲ್ಲಾಹನು ಉತ್ತಮ ಪ್ರತಿಫಲವನ್ನು ನೀಡಲಿದ್ದಾನೆ.
عربی تفاسیر:
وَمَا كَانَ لِنَفْسٍ اَنْ تَمُوْتَ اِلَّا بِاِذْنِ اللّٰهِ كِتٰبًا مُّؤَجَّلًا ؕ— وَمَنْ یُّرِدْ ثَوَابَ الدُّنْیَا نُؤْتِهٖ مِنْهَا ۚ— وَمَنْ یُّرِدْ ثَوَابَ الْاٰخِرَةِ نُؤْتِهٖ مِنْهَا ؕ— وَسَنَجْزِی الشّٰكِرِیْنَ ۟
ಅಲ್ಲಾಹನ ಅಪ್ಪಣೆಯಿಲ್ಲದೆ ಯಾವ ಜೀವಿಯು ಮರಣಹೊಂದಲಾರದು. ಅದು ನಿರ್ಧರಿತ ಅವಧಿಯಾಗಿದೆ. ಐಹಿಕ ಪ್ರತಿಫಲವನ್ನು ಬಯಸುವವರಿಗೆ ನಾವು ಅದರಿಂದ ಅಲ್ಪವನ್ನು ನೀಡುತ್ತೇವೆ ಮತ್ತು ಪರಲೋಕದ ಪ್ರತಿಫಲವನ್ನು ಬಯಸುವವರಿಗೆ ನಾವು ಅದನ್ನು ನೀಡುತ್ತೇವೆ. ಕೃತಜ್ಞತೆ ತೋರುವವರಿಗೆ ನಾವು ಶೀಘ್ರವಾಗಿ ಉತ್ತಮ ಪ್ರತಿಫಲವನ್ನು ಕರುಣಿಸಲಿದ್ದೇವೆ.
عربی تفاسیر:
وَكَاَیِّنْ مِّنْ نَّبِیٍّ قٰتَلَ ۙ— مَعَهٗ رِبِّیُّوْنَ كَثِیْرٌ ۚ— فَمَا وَهَنُوْا لِمَاۤ اَصَابَهُمْ فِیْ سَبِیْلِ اللّٰهِ وَمَا ضَعُفُوْا وَمَا اسْتَكَانُوْا ؕ— وَاللّٰهُ یُحِبُّ الصّٰبِرِیْنَ ۟
(ಇದಕ್ಕಿಂತ ಮುಂಚೆ) ಅದೆಷ್ಟೂ ಪೈಗಂಬರರು (ಗತಿಸಿಹೋಗಿದ್ದಾರೆ) ಅಲ್ಲಾಹನ ಅದೆಷ್ಟೂ ಭಕ್ತರು ಯುದ್ಧ ಮಾಡಿದ್ದಾರೆ! ಅವರಿಗೆ ಅಲ್ಲಾಹನ ಮಾರ್ಗದಲ್ಲಿ ಸಾಕಷ್ಟು ಬವಣೆಗಳನ್ನು ಎದುರಿಸಬೇಕಾಯಿತು. ಆದರೆ ಅವರು ಎದೆಗುಂದಲಿಲ್ಲ, ಮತ್ತು ಬಲಹೀನರಾಗಲಿಲ್ಲ ಹಾಗೂ ಕೀಳರಿಮೆ ತೋರಲಿಲ್ಲ ಮತ್ತು ಅಲ್ಲಾಹನು ಸಹನಾಶೀಲರನ್ನು ಪ್ರೀತಿಸುತ್ತಾನೆ.
عربی تفاسیر:
وَمَا كَانَ قَوْلَهُمْ اِلَّاۤ اَنْ قَالُوْا رَبَّنَا اغْفِرْ لَنَا ذُنُوْبَنَا وَاِسْرَافَنَا فِیْۤ اَمْرِنَا وَثَبِّتْ اَقْدَامَنَا وَانْصُرْنَا عَلَی الْقَوْمِ الْكٰفِرِیْنَ ۟
(ಆ ಸತ್ಯವಿಶ್ವಾಸಿಗಳು) ಓ ನಮ್ಮ ಪ್ರಭೂ, ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ಕಾರ್ಯಗಳಲ್ಲಿ ಉಂಟಾದAತಹ ಅತಿಕ್ರಮಗಳನ್ನು ಮನ್ನಿಸು ಮತ್ತು ನಮ್ಮ ಪಾದಗಳನ್ನು ನೆಲಯೂರಿಸು ಮತ್ತು ನಮಗೆ ಸತ್ಯ ನಿಷೇಧಿ ಜನತೆಯ ವಿರುದ್ಧ ಸಹಾಯವನ್ನು ನೀಡು ಎಂದೇ ಅವರು ಪ್ರಾರ್ಥಿಸುತ್ತಿದ್ದರು.
عربی تفاسیر:
فَاٰتٰىهُمُ اللّٰهُ ثَوَابَ الدُّنْیَا وَحُسْنَ ثَوَابِ الْاٰخِرَةِ ؕ— وَاللّٰهُ یُحِبُّ الْمُحْسِنِیْنَ ۟۠
ಆದ್ದರಿಂದ ಅಲ್ಲಾಹನು ಅವರಿಗೆ ಇಹಲೋಕದ ಪ್ರತಿಫಲವನ್ನೂ ನೀಡಿದನು. ಮತ್ತು ಶ್ರೇಷ್ಠವಾದ ಪರಲೋಕದ ಪ್ರತಿಫಲವನ್ನು ದಯಪಾಲಿಸಿದನು. ಅಲ್ಲಾಹನು ಸಜ್ಜನರನ್ನು ಪ್ರೀತಿಸುತ್ತಾನೆ.
عربی تفاسیر:
 
معانی کا ترجمہ سورت: آل عمران
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - بشیر ميسوری - ترجمے کی لسٹ

شیخ بشیر میسوری نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں