قرآن کریم کے معانی کا ترجمہ - الترجمة الكنادية - بشير ميسوري * - ترجمے کی لسٹ


معانی کا ترجمہ سورت: سورۂ نبأ   آیت:

ಸೂರ ಅನ್ನಬಅ್

عَمَّ یَتَسَآءَلُوْنَ ۟ۚ
ಸತ್ಯನಿಷೇಧಿಗಳು ಯಾವುದರ ಬಗ್ಗೆ ಪರಸ್ಪರ ವಿಚಾರಿಸುತ್ತಿದ್ದಾರೆ ?
عربی تفاسیر:
عَنِ النَّبَاِ الْعَظِیْمِ ۟ۙ
(ಪ್ರಳಯದ) ಆ ಮಹಾ ವರ‍್ತೆಯ ಬಗ್ಗೆ,
عربی تفاسیر:
الَّذِیْ هُمْ فِیْهِ مُخْتَلِفُوْنَ ۟ؕ
ಅವರು ಅದರ ಕುರಿತು ಭಿನ್ನಾಭಿಪ್ರಾಯ ತೋರುತ್ತಿದ್ದಾರೆ,
عربی تفاسیر:
كَلَّا سَیَعْلَمُوْنَ ۟ۙ
ಸಂದೇಹವಿಲ್ಲ ಅವರು ಸದ್ಯದಲ್ಲೇ (ಅದರ ವಾಸ್ತವಿಕತೆಯನ್ನು) ಅರಿತುಕೊಳ್ಳುವರು.
عربی تفاسیر:
ثُمَّ كَلَّا سَیَعْلَمُوْنَ ۟
ಪುನಃ ಖಂಡಿತವಾಗಿಯೂ ಅವರು ಸದ್ಯದಲ್ಲೇ ಅರಿತುಕೊಳ್ಳುವರು.
عربی تفاسیر:
اَلَمْ نَجْعَلِ الْاَرْضَ مِهٰدًا ۟ۙ
ನಾವು ಭೂಮಿಯನ್ನು ಹಾಸನ್ನಾಗಿ ಮಾಡಲಿಲ್ಲವೇ ?
عربی تفاسیر:
وَّالْجِبَالَ اَوْتَادًا ۟ۙ
ನಾವು ರ‍್ವತಗಳನ್ನು (ಭೂಮಿಯ ಸ್ಥಿರತೆಗೆ) ಮೊಳೆಗಳನ್ನಾಗಿಯು (ಮಾಡಲಿಲ್ಲವೇ)?
عربی تفاسیر:
وَّخَلَقْنٰكُمْ اَزْوَاجًا ۟ۙ
ನಾವು ನಿಮ್ಮನ್ನು ಜೋಡಿಗಳಾಗಿ ಸೃಷ್ಟಿಸಿದ್ದೇವೆ.
عربی تفاسیر:
وَّجَعَلْنَا نَوْمَكُمْ سُبَاتًا ۟ۙ
ನಾವು ನಿಮ್ಮ ನಿದ್ದೆಯನ್ನು ವಿಶ್ರಾಂತಿಯ ಸಾಧನವನ್ನಾಗಿ ಮಾಡಿದ್ದೇವೆ.
عربی تفاسیر:
وَّجَعَلْنَا الَّیْلَ لِبَاسًا ۟ۙ
ರಾತ್ರಿಯನ್ನು ನಾವು ತೆರೆಯನ್ನಾಗಿ ಮಾಡಿದ್ದೇವೆ.
عربی تفاسیر:
وَّجَعَلْنَا النَّهَارَ مَعَاشًا ۟ۚ
ಹಗಲನ್ನು ನಾವು ಜೀವನೋಪಾಯ ವೇಳೆಯನ್ನಾಗಿ ಮಾಡಿದ್ದೇವೆ.
عربی تفاسیر:
وَبَنَیْنَا فَوْقَكُمْ سَبْعًا شِدَادًا ۟ۙ
ನಿಮ್ಮ ಮೇಲ್ಭಾಗದಲ್ಲಿ ನಾವು ಬಲಿಷ್ಠವಾದ ಏಳು ಆಕಾಶಗಳನ್ನು ನರ‍್ಮಿಸಿದ್ದೇವೆ.
عربی تفاسیر:
وَّجَعَلْنَا سِرَاجًا وَّهَّاجًا ۟ۙ
ಪ್ರಕಾಶಮಾನವಾದ ಒಂದು ದೀಪ(ಸರ‍್ಯ)ವನ್ನು ಉಂಟು ಮಾಡಿದ್ದೇವೆ.
عربی تفاسیر:
وَّاَنْزَلْنَا مِنَ الْمُعْصِرٰتِ مَآءً ثَجَّاجًا ۟ۙ
ನಾವು ಕರ‍್ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸುತ್ತೇವೆ.
عربی تفاسیر:
لِّنُخْرِجَ بِهٖ حَبًّا وَّنَبَاتًا ۟ۙ
ತನ್ಮೂಲಕ ಧಾನ್ಯ ಮತ್ತು ಸಸ್ಯವನ್ನು ಹೊರತರಲೆಂದು.
عربی تفاسیر:
وَّجَنّٰتٍ اَلْفَافًا ۟ؕ
ಮತ್ತು ದಟ್ಟವಾಗಿ ಬೆಳೆದ ತೋಟಗಳನ್ನೂ ಸಹ.
عربی تفاسیر:
اِنَّ یَوْمَ الْفَصْلِ كَانَ مِیْقَاتًا ۟ۙ
ನಿಸ್ಸಂದೇಹವಾಗಿಯೂ ತರ‍್ಪಿನ ದಿನವು ನಿಶ್ಚಿತವಾಗಿದೆ.
عربی تفاسیر:
یَّوْمَ یُنْفَخُ فِی الصُّوْرِ فَتَاْتُوْنَ اَفْوَاجًا ۟ۙ
ಕಹಳೆ ಮೊಳಗುವಂದು ನೀವು ಗುಂಪು ಗುಂಪುಗಳಾಗಿ ಬರುವಿರಿ.
عربی تفاسیر:
وَّفُتِحَتِ السَّمَآءُ فَكَانَتْ اَبْوَابًا ۟ۙ
ಆಕಾಶವು ತೆರೆಯಲ್ಪಟ್ಟು ಅದು ದ್ವಾರಗಳೇ ದ್ವಾರಗಳಾಗಿ ಬಿಡುವುದು.
عربی تفاسیر:
وَّسُیِّرَتِ الْجِبَالُ فَكَانَتْ سَرَابًا ۟ؕ
ರ‍್ವತಗಳು ಚಲಿಸಲ್ಪಡುವುವು. ಆಗ ಅವು ಮರೀಚಿಕೆಯಂತೆ ಆಗಿಬಿಡುವುವು.
عربی تفاسیر:
اِنَّ جَهَنَّمَ كَانَتْ مِرْصَادًا ۟ۙ
ನಿಸ್ಸಂದೇಹವಾಗಿಯೂ ನರಕಾಗ್ನಿಯು ಹೊಂಚಿನಲ್ಲಿದೆ.
عربی تفاسیر:
لِّلطَّاغِیْنَ مَاٰبًا ۟ۙ
ಅದು ವಿದ್ರೋಹಿಗಳ ವಾಸಸ್ಥಾನವಾಗಿದೆ.
عربی تفاسیر:
لّٰبِثِیْنَ فِیْهَاۤ اَحْقَابًا ۟ۚ
ಅವರು ಅದರಲ್ಲಿ ಯುಗಾನುಯುಗ ಬಿದ್ದಿರುವರು.
عربی تفاسیر:
لَا یَذُوْقُوْنَ فِیْهَا بَرْدًا وَّلَا شَرَابًا ۟ۙ
ಅಲ್ಲಿ ಅವರು ತಂಪನ್ನಾಗಲಿ, ಪಾನೀಯವನ್ನಾಗಲಿ, ಸವಿಯಲಾರರು.
عربی تفاسیر:
اِلَّا حَمِیْمًا وَّغَسَّاقًا ۟ۙ
ಕುದಿಯುವ ನೀರು ಮತ್ತು ಕೀವಿನ ಹೊರತು.
عربی تفاسیر:
جَزَآءً وِّفَاقًا ۟ؕ
ಅವರ ದುಷ್ರ‍್ಮಗಳಿಗೆ ತಕ್ಕದಾದ ಪ್ರತಿಫಲ ಲಭಿಸುವುದು.
عربی تفاسیر:
اِنَّهُمْ كَانُوْا لَا یَرْجُوْنَ حِسَابًا ۟ۙ
ಖಂಡಿತವಾಗಿಯೂ ಅವರು ಲೆಕ್ಕ ವಿಚಾರಣೆಯನ್ನು ನಿರೀಕ್ಷಿಸುತ್ತಿರಲಿಲ್ಲ.
عربی تفاسیر:
وَّكَذَّبُوْا بِاٰیٰتِنَا كِذَّابًا ۟ؕ
ಅವರು ನಮ್ಮ ಸೂಕ್ತಿಗಳನ್ನು ಸಂಪರ‍್ಣವಾಗಿ ಸುಳ್ಳಾಗಿಸಿದರು.
عربی تفاسیر:
وَكُلَّ شَیْءٍ اَحْصَیْنٰهُ كِتٰبًا ۟ۙ
ನಾವು ಸಕಲ ವಿಷಯಗಳನ್ನೂ ಎಣಿಸಿ ಒಂದು ಗ್ರಂಥದಲ್ಲಿ ದಾಖಲಿಸಿಟ್ಟಿರುವೆವು.
عربی تفاسیر:
فَذُوْقُوْا فَلَنْ نَّزِیْدَكُمْ اِلَّا عَذَابًا ۟۠
ಇನ್ನು ನೀವು ರುಚಿಯನ್ನು ಸವಿಯಿರಿ, ನಾವು ನಿಮ್ಮ ಶಿಕ್ಷೆಯ ಹೊರತು ಇನ್ನೇನನ್ನೂ ಹೆಚ್ಚಿಸಲಾರೆವು.
عربی تفاسیر:
اِنَّ لِلْمُتَّقِیْنَ مَفَازًا ۟ۙ
ಖಂಡಿತವಾಗಿಯೂ ಭಯಭಕ್ತಿಯುಳ್ಳವರಿಗೆ ಯಶಸ್ಸು ಇದೆ.
عربی تفاسیر:
حَدَآىِٕقَ وَاَعْنَابًا ۟ۙ
ತೋಟಗಳು ಮತ್ತು ದ್ರಾಕ್ಷಿಗಳಿವೆ.
عربی تفاسیر:
وَّكَوَاعِبَ اَتْرَابًا ۟ۙ
ಸಮವಯಸ್ಕರಾದ ತರುಣಿಯರಿರುವರು.
عربی تفاسیر:
وَّكَاْسًا دِهَاقًا ۟ؕ
ತುಂಬಿತುಳುಕುವ ಪಾನಪಾತ್ರೆಗಳಿರುವುವು.
عربی تفاسیر:
لَا یَسْمَعُوْنَ فِیْهَا لَغْوًا وَّلَا كِذّٰبًا ۟ۚۖ
ಅವರು (ಸ್ರ‍್ಗವಾಸಿಗಳು) ಅಲ್ಲಿ ಅನಗತ್ಯವಾದ ಮಾತನ್ನಾಗಲಿ ಅಥವಾ ಸುಳ್ಳು ಮಾತನ್ನಾಗಲಿ ಆಲಿಸಲಾರರು.
عربی تفاسیر:
جَزَآءً مِّنْ رَّبِّكَ عَطَآءً حِسَابًا ۟ۙ
(ಇದು) ನಿಮ್ಮ ಪ್ರಭುವಿನ ವತಿಯಿಂದ (ನಿಮ್ಮ ಪುಣ್ಯರ‍್ಮಗಳ) ಪ್ರತಿಫಲ ಮತ್ತು ಸಾಕಷ್ಟು ಪುರಸ್ಕಾರವಿರುವುದು.
عربی تفاسیر:
رَّبِّ السَّمٰوٰتِ وَالْاَرْضِ وَمَا بَیْنَهُمَا الرَّحْمٰنِ لَا یَمْلِكُوْنَ مِنْهُ خِطَابًا ۟ۚ
ಭೂಮಿ ಆಕಾಶಗಳ ಮತ್ತು ಅವುಗಳೆರಡರ ನಡುವೆ ಇರುವ ಸಕಲ ವಸ್ತುಗಳ ಪ್ರಭುವಾಗಿರುವ ಪರಮದಯಾಮಯನವತಿಯಿಂದ ಅವನೊಡನೆ ಮಾತನಾಡುವ ಸಾರ‍್ಥ್ಯ ಯಾರಿಗೂ ಇರದು.
عربی تفاسیر:
یَوْمَ یَقُوْمُ الرُّوْحُ وَالْمَلٰٓىِٕكَةُ صَفًّا ۙۗؕ— لَّا یَتَكَلَّمُوْنَ اِلَّا مَنْ اَذِنَ لَهُ الرَّحْمٰنُ وَقَالَ صَوَابًا ۟
ಅಂದು ರೂಹ್(ಜಿಬ್ರೀಲ್) ಮತ್ತು ದೂತರು ಸಾಲುಗಟ್ಟಿ ನಿಲ್ಲುವರು, ಪರಮ ದಯಾಮಯನಾದ ಅಲ್ಲಾಹನ ಅನುಮತಿ ಪಡೆದ ಮತ್ತು ಸರಿಯಾದ ಮಾತನ್ನೇ ಆಡುವ ವ್ಯಕ್ತಿಯ ಹೊರತು ಇನ್ನಾರೂ ಅವನೊಡನೆ ಮಾತನಾಡಲಾರರು.
عربی تفاسیر:
ذٰلِكَ الْیَوْمُ الْحَقُّ ۚ— فَمَنْ شَآءَ اتَّخَذَ اِلٰی رَبِّهٖ مَاٰبًا ۟
ಆ ದಿನವು ಸತ್ಯವಾಗಿದೆ, ಇನ್ನು ಇಚ್ಛಿಸುವವನು ತನ್ನ ಪ್ರಭುವಿನ ಕಡೆಯ ಮರ‍್ಗವನ್ನು ಹಿಡಿಯಲಿ.
عربی تفاسیر:
اِنَّاۤ اَنْذَرْنٰكُمْ عَذَابًا قَرِیْبًا ۖۚ۬— یَّوْمَ یَنْظُرُ الْمَرْءُ مَا قَدَّمَتْ یَدٰهُ وَیَقُوْلُ الْكٰفِرُ یٰلَیْتَنِیْ كُنْتُ تُرٰبًا ۟۠
ಖಂಡಿತವಾಗಿಯೂ ನಾವು ನಿಮಗೆ ಸದ್ಯದಲ್ಲೇ ಬರಲಿರುವ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಿಬಿಟ್ಟಿದ್ದೇವೆ, ಅಂದು ಮನುಷ್ಯನು ತನ್ನ ಕೈಗಳು ಹಿಂದೆ ಮಾಡಿಟ್ಟಿರುವುದನ್ನು ಕಾಣುವನು ಮತ್ತು ಸತ್ಯನಿಷೇಧಿಯು ಹೇಳುವನು; 'ಅಯ್ಯೋ ನಾನು ಮಣ್ಣಾಗಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು'.
عربی تفاسیر:
 
معانی کا ترجمہ سورت: سورۂ نبأ
سورتوں کی لسٹ صفحہ نمبر
 
قرآن کریم کے معانی کا ترجمہ - الترجمة الكنادية - بشير ميسوري - ترجمے کی لسٹ

ترجمة معاني القرآن الكريم إلى اللغة الكنادية ترجمها بشير ميسوري.

بند کریں