قرآن کریم کے معانی کا ترجمہ - الترجمة الكنادية * - ترجمے کی لسٹ

XML CSV Excel API
Please review the Terms and Policies

معانی کا ترجمہ سورت: سورۂ شوریٰ   آیت:

ಸೂರ ಅಶ್ಶೂರಾ

حٰمٓ ۟ۚ
ಹಾ-ಮೀಮ್.
عربی تفاسیر:
عٓسٓقٓ ۟
ಐನ್-ಸೀನ್-ಕ್ವಾಫ್.
عربی تفاسیر:
كَذٰلِكَ یُوْحِیْۤ اِلَیْكَ وَاِلَی الَّذِیْنَ مِنْ قَبْلِكَ ۙ— اللّٰهُ الْعَزِیْزُ الْحَكِیْمُ ۟
ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹು ನಿಮಗೆ ಮತ್ತು ನಿಮಗಿಂತ ಮೊದಲಿನವರಿಗೆ ಈ ರೀತಿ ದೇವವಾಣಿಯನ್ನು ನೀಡುತ್ತಾನೆ.
عربی تفاسیر:
لَهٗ مَا فِی السَّمٰوٰتِ وَمَا فِی الْاَرْضِ ؕ— وَهُوَ الْعَلِیُّ الْعَظِیْمُ ۟
ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಅವನು ಅತ್ಯುನ್ನತನು ಮತ್ತು ಮಹಾಮಹಿಮನಾಗಿದ್ದಾನೆ.
عربی تفاسیر:
تَكَادُ السَّمٰوٰتُ یَتَفَطَّرْنَ مِنْ فَوْقِهِنَّ وَالْمَلٰٓىِٕكَةُ یُسَبِّحُوْنَ بِحَمْدِ رَبِّهِمْ وَیَسْتَغْفِرُوْنَ لِمَنْ فِی الْاَرْضِ ؕ— اَلَاۤ اِنَّ اللّٰهَ هُوَ الْغَفُوْرُ الرَّحِیْمُ ۟
ಆಕಾಶಗಳು ಅವುಗಳ ಮೇಲ್ಭಾಗದಿಂದ ಇನ್ನೇನು ಒಡೆದು ಚೂರಾಗುವಂತಿದೆ. ದೇವದೂತರು‍ಗಳು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ ಮತ್ತು ಭೂಮಿಯಲ್ಲಿರುವವರಿಗಾಗಿ ಕ್ಷಮೆಯಾಚಿಸುತ್ತಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
عربی تفاسیر:
وَالَّذِیْنَ اتَّخَذُوْا مِنْ دُوْنِهٖۤ اَوْلِیَآءَ اللّٰهُ حَفِیْظٌ عَلَیْهِمْ ۖؗ— وَمَاۤ اَنْتَ عَلَیْهِمْ بِوَكِیْلٍ ۟
ತನ್ನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಸ್ವೀಕರಿಸಿದವರನ್ನು ಅಲ್ಲಾಹು ಗಮನಿಸುತ್ತಿದ್ದಾನೆ.[1] ಅವರ ವಿಷಯದಲ್ಲಿ ನಿಮಗೆ ಯಾವುದೇ ಹೊಣೆಗಾರಿಕೆಯಿಲ್ಲ.
[1] ಅಂದರೆ ಅಲ್ಲಾಹು ಅವರ ಎಲ್ಲಾ ಕರ್ಮಗಳನ್ನು ಅದರ ಆಧಾರದಲ್ಲಿ ಅವರಿಗೆ ಪ್ರತಿಫಲವನ್ನು ನೀಡಲು ಸುರಕ್ಷಿತವಾಗಿ ಸಂರಕ್ಷಿಸಿಡುತ್ತಾನೆ.
عربی تفاسیر:
وَكَذٰلِكَ اَوْحَیْنَاۤ اِلَیْكَ قُرْاٰنًا عَرَبِیًّا لِّتُنْذِرَ اُمَّ الْقُرٰی وَمَنْ حَوْلَهَا وَتُنْذِرَ یَوْمَ الْجَمْعِ لَا رَیْبَ فِیْهِ ؕ— فَرِیْقٌ فِی الْجَنَّةِ وَفَرِیْقٌ فِی السَّعِیْرِ ۟
ಈ ರೀತಿ ನಾವು ನಿಮಗೆ ಅರಬ್ಬಿ ಭಾಷೆಯಲ್ಲಿರುವ ಕುರ್‌ಆನನ್ನು ದೇವವಾಣಿಯಾಗಿ ನೀಡಿದೆವು. ಉಮ್ಮುಲ್ ಕುರಾ (ಮಕ್ಕಾ) ಮತ್ತು ಅದರ ಆಸುಪಾಸಿನಲ್ಲಿರುವವರಿಗೆ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ. ಒಟ್ಟುಗೂಡಿಸುವ ದಿನದ ಬಗ್ಗೆಯೂ ನೀವು ಎಚ್ಚರಿಕೆ ನೀಡುವುದಕ್ಕಾಗಿ. ಆ ದಿನ ಬರುವುದರಲ್ಲಿ ಸಂದೇಹವೇ ಇಲ್ಲ. ಅಂದು ಒಂದು ಗುಂಪು ಸ್ವರ್ಗದಲ್ಲಿ ಮತ್ತು ಇನ್ನೊಂದು ಗುಂಪು ಜ್ವಲಿಸುವ ನರಕದಲ್ಲಿರುವುದು.
عربی تفاسیر:
وَلَوْ شَآءَ اللّٰهُ لَجَعَلَهُمْ اُمَّةً وَّاحِدَةً وَّلٰكِنْ یُّدْخِلُ مَنْ یَّشَآءُ فِیْ رَحْمَتِهٖ ؕ— وَالظّٰلِمُوْنَ مَا لَهُمْ مِّنْ وَّلِیٍّ وَّلَا نَصِیْرٍ ۟
ಅಲ್ಲಾಹು ಇಚ್ಛಿಸುತ್ತಿದ್ದರೆ ಅವರನ್ನು (ಮನುಷ್ಯರನ್ನು) ಏಕೈಕ ಸಮುದಾಯವಾಗಿ ಮಾಡುತ್ತಿದ್ದನು. ಆದರೆ ಅವನು ಇಚ್ಛಿಸುವವರನ್ನು ತನ್ನ ದಯೆಯಲ್ಲಿ ಪ್ರವೇಶ ಮಾಡಿಸುತ್ತಾನೆ. ಅಕ್ರಮಿಗಳಿಗೆ ಯಾವುದೇ ರಕ್ಷಕರು ಅಥವಾ ಸಹಾಯಕರು ಇರುವುದಿಲ್ಲ.
عربی تفاسیر:
اَمِ اتَّخَذُوْا مِنْ دُوْنِهٖۤ اَوْلِیَآءَ ۚ— فَاللّٰهُ هُوَ الْوَلِیُّ وَهُوَ یُحْیِ الْمَوْتٰی ؗ— وَهُوَ عَلٰی كُلِّ شَیْءٍ قَدِیْرٌ ۟۠
ಅವರು ಅವನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಸ್ವೀಕರಿಸಿದ್ದಾರೆಯೇ? ಆದರೆ ಅಲ್ಲಾಹು ಮಾತ್ರ ರಕ್ಷಕನು. ಅವನು ಮೃತರಿಗೆ ಜೀವ ನೀಡುತ್ತಾನೆ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
عربی تفاسیر:
وَمَا اخْتَلَفْتُمْ فِیْهِ مِنْ شَیْءٍ فَحُكْمُهٗۤ اِلَی اللّٰهِ ؕ— ذٰلِكُمُ اللّٰهُ رَبِّیْ عَلَیْهِ تَوَكَّلْتُ ۖۗ— وَاِلَیْهِ اُنِیْبُ ۟
ನೀವು ಯಾವುದೇ ವಿಷಯದಲ್ಲಿ ಭಿನ್ನಮತ ತಳೆದಿದ್ದರೂ ಆ ವಿಷಯದಲ್ಲಿ ತೀರ್ಪು ನೀಡುವ ಅಧಿಕಾರವಿರುವುದು ಅಲ್ಲಾಹನಿಗೆ ಮಾತ್ರ. (ಹೇಳಿರಿ): “ಅವನೇ ನನ್ನ ಪರಿಪಾಲಕನಾದ ಅಲ್ಲಾಹು. ನಾನು ಅವನಲ್ಲಿಯೇ ಭರವಸೆಯಿಟ್ಟಿದ್ದೇನೆ ಮತ್ತು ಅವನ ಬಳಿಗೆ ವಿನಮ್ರತೆಯಿಂದ ಮರಳುತ್ತೇನೆ.”
عربی تفاسیر:
فَاطِرُ السَّمٰوٰتِ وَالْاَرْضِ ؕ— جَعَلَ لَكُمْ مِّنْ اَنْفُسِكُمْ اَزْوَاجًا وَّمِنَ الْاَنْعَامِ اَزْوَاجًا ۚ— یَذْرَؤُكُمْ فِیْهِ ؕ— لَیْسَ كَمِثْلِهٖ شَیْءٌ ۚ— وَهُوَ السَّمِیْعُ الْبَصِیْرُ ۟
ಅವನು ಭೂಮ್ಯಾಕಾಶಗಳ ಸೃಷ್ಟಿಕರ್ತನು. ಅವನು ನಿಮ್ಮಿಂದಲೇ ನಿಮಗೆ ಜೋಡಿಗಳನ್ನು ಮಾಡಿದನು. ಅವನು ಜಾನುವಾರುಗಳಿಂದಲೂ ಜೋಡಿಗಳನ್ನು ಮಾಡಿದನು. ಅದರ ಮೂಲಕ ಅವನು ನಿಮ್ಮನ್ನು ಹಬ್ಬಿಸುತ್ತಾನೆ. ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.
عربی تفاسیر:
لَهٗ مَقَالِیْدُ السَّمٰوٰتِ وَالْاَرْضِ ۚ— یَبْسُطُ الرِّزْقَ لِمَنْ یَّشَآءُ وَیَقْدِرُ ؕ— اِنَّهٗ بِكُلِّ شَیْءٍ عَلِیْمٌ ۟
ಭೂಮ್ಯಾಕಾಶಗಳ ಕೀಲಿಗಳು ಅವನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಅವನು ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಅದನ್ನು ಇಕ್ಕಟ್ಟುಗೊಳಿಸುತ್ತಾನೆ. ನಿಶ್ಚಯವಾಗಿಯೂ ಅವನು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.
عربی تفاسیر:
شَرَعَ لَكُمْ مِّنَ الدِّیْنِ مَا وَصّٰی بِهٖ نُوْحًا وَّالَّذِیْۤ اَوْحَیْنَاۤ اِلَیْكَ وَمَا وَصَّیْنَا بِهٖۤ اِبْرٰهِیْمَ وَمُوْسٰی وَعِیْسٰۤی اَنْ اَقِیْمُوا الدِّیْنَ وَلَا تَتَفَرَّقُوْا فِیْهِ ؕ— كَبُرَ عَلَی الْمُشْرِكِیْنَ مَا تَدْعُوْهُمْ اِلَیْهِ ؕ— اَللّٰهُ یَجْتَبِیْۤ اِلَیْهِ مَنْ یَّشَآءُ وَیَهْدِیْۤ اِلَیْهِ مَنْ یُّنِیْبُ ۟ؕ
ಅಲ್ಲಾಹು ನೂಹರಿಗೆ ಸಂಸ್ಥಾಪಿಸಬೇಕೆಂದು ಆದೇಶಿಸಿದ, ನಿಮಗೆ ದೇವವಾಣಿಯ ಮೂಲಕ ಕಳುಹಿಸಿದ ಮತ್ತು ಇಬ್ರಾಹೀಮ್, ಮೂಸಾ, ಈಸಾ ಮುಂತಾದವರಿಗೆ ಆದೇಶಿಸಿದ ಅದೇ ಧರ್ಮವನ್ನು ನಾವು ನಿಮಗೆ ನಿಶ್ಚಯಿಸಿದ್ದೇವೆ. ಅಂದರೆ ನೀವು ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಅದರಲ್ಲಿ ಭಿನ್ನರಾಗಬೇಡಿ. ನೀವು ಆ ಬಹುದೇವವಿಶ್ವಾಸಿಗಳನ್ನು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಅವರಿಗೆ ಸಂಬಂಧಿಸಿದಂತೆ ಭಾರವಾಗಿದೆ. ಅಲ್ಲಾಹು ಅವನು ಇಚ್ಛಿಸುವವರನ್ನು ಅವನು ಆರಿಸಿಕೊಂಡವರಲ್ಲಿ ಸೇರಿಸುತ್ತಾನೆ ಮತ್ತು ಅವನ ಕಡೆಗೆ ತಿರುಗುವವರನ್ನು ಸರಿಯಾದ ಮಾರ್ಗದಲ್ಲಿ ಸೇರಿಸುತ್ತಾನೆ.
عربی تفاسیر:
وَمَا تَفَرَّقُوْۤا اِلَّا مِنْ بَعْدِ مَا جَآءَهُمُ الْعِلْمُ بَغْیًا بَیْنَهُمْ ؕ— وَلَوْلَا كَلِمَةٌ سَبَقَتْ مِنْ رَّبِّكَ اِلٰۤی اَجَلٍ مُّسَمًّی لَّقُضِیَ بَیْنَهُمْ ؕ— وَاِنَّ الَّذِیْنَ اُوْرِثُوا الْكِتٰبَ مِنْ بَعْدِهِمْ لَفِیْ شَكٍّ مِّنْهُ مُرِیْبٍ ۟
ಅವರ ಬಳಿಗೆ ಜ್ಞಾನವು ಬಂದ ಬಳಿಕವೇ ಅವರು ಭಿನ್ನರಾದರು. (ಅದೂ ಕೂಡ) ಅವರು ಪರಸ್ಪರ ಹೊಂದಿದ್ದ ವಿರೋಧದಿಂದಾಗಿ. ಒಂದು ನಿಶ್ಚಿತ ಅವಧಿಯವರೆಗೆ ಮುಂದೂಡುತ್ತೇನೆ ಎಂಬ ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಮೊದಲೇ ಇಲ್ಲದಿರುತ್ತಿದ್ದರೆ ಅವರ ನಡುವೆ (ತಕ್ಷಣ) ತೀರ್ಪು ನೀಡಲಾಗುತ್ತಿತ್ತು. ಅವರ ನಂತರ ಗ್ರಂಥದ ವಾರಸುದಾರರಾದವರು ಯಾರೋ ನಿಶ್ಚಯವಾಗಿಯೂ ಅವರು ಅದರ ಬಗ್ಗೆ ಗೊಂದಲಪೂರ್ಣ ಸಂಶಯದಲ್ಲಿದ್ದಾರೆ.
عربی تفاسیر:
فَلِذٰلِكَ فَادْعُ ۚ— وَاسْتَقِمْ كَمَاۤ اُمِرْتَ ۚ— وَلَا تَتَّبِعْ اَهْوَآءَهُمْ ۚ— وَقُلْ اٰمَنْتُ بِمَاۤ اَنْزَلَ اللّٰهُ مِنْ كِتٰبٍ ۚ— وَاُمِرْتُ لِاَعْدِلَ بَیْنَكُمْ ؕ— اَللّٰهُ رَبُّنَا وَرَبُّكُمْ ؕ— لَنَاۤ اَعْمَالُنَا وَلَكُمْ اَعْمَالُكُمْ ؕ— لَا حُجَّةَ بَیْنَنَا وَبَیْنَكُمْ ؕ— اَللّٰهُ یَجْمَعُ بَیْنَنَا ۚ— وَاِلَیْهِ الْمَصِیْرُ ۟ؕ
ನೀವು ಇದೇ ರೀತಿ ಜನರನ್ನು ಕರೆಯುತ್ತಿರಿ. ನಿಮಗೆ ಏನು ಆಜ್ಞಾಪಿಸಲಾಗಿದೆಯೋ ಅದರಲ್ಲಿ ದೃಢವಾಗಿ ನಿಲ್ಲಿರಿ. ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಹೇಳಿರಿ: “ಅಲ್ಲಾಹು ಅವತೀರ್ಣಗೊಳಿಸಿದ ಎಲ್ಲಾ ಗ್ರಂಥಗಳಲ್ಲೂ ನಾನು ವಿಶ್ವಾಸವಿಟ್ಟಿದ್ದೇನೆ. ನಿಮ್ಮ ನಡುವೆ ನ್ಯಾಯದಿಂದ ವರ್ತಿಸಲು ನನಗೆ ಆಜ್ಞಾಪಿಸಲಾಗಿದೆ. ಅಲ್ಲಾಹನೇ ನಮ್ಮ ಮತ್ತು ನಿಮ್ಮ ಪರಿಪಾಲಕ. ನಮಗೆ ನಮ್ಮ ಕರ್ಮಗಳು ಮತ್ತು ನಿಮಗೆ ನಿಮ್ಮ ಕರ್ಮಗಳು. ನಮ್ಮ ಮತ್ತು ನಿಮ್ಮ ಮಧ್ಯೆ ಯಾವುದೇ ತರ್ಕವಿಲ್ಲ. ಅಲ್ಲಾಹು ನಮ್ಮನ್ನು ಪರಸ್ಪರ ಒಟ್ಟುಗೂಡಿಸುವನು. ಗಮ್ಯಸ್ಥಾನವು ಅವನ ಬಳಿಗೇ ಆಗಿದೆ.”
عربی تفاسیر:
وَالَّذِیْنَ یُحَآجُّوْنَ فِی اللّٰهِ مِنْ بَعْدِ مَا اسْتُجِیْبَ لَهٗ حُجَّتُهُمْ دَاحِضَةٌ عِنْدَ رَبِّهِمْ وَعَلَیْهِمْ غَضَبٌ وَّلَهُمْ عَذَابٌ شَدِیْدٌ ۟
ಜನರು ಅಲ್ಲಾಹನ ಮಾತನ್ನು ಅಂಗೀಕರಿಸಿದ[1] ಬಳಿಕ ಅಲ್ಲಾಹನ ವಿಷಯದಲ್ಲಿ ತರ್ಕಿಸುವವರು ಯಾರೋ ಅವರ ತರ್ಕವು ಅಲ್ಲಾಹನ ದೃಷ್ಟಿಯಲ್ಲಿ ನಿರರ್ಥಕವಾಗಿದೆ. ಅವರ ಮೇಲೆ ಕೋಪವಿದೆ ಮತ್ತು ಅವರಿಗೆ ಕಠೋರ ಶಿಕ್ಷೆಯಿದೆ.
[1] ಅಂದರೆ ಸತ್ಯವಿಶ್ವಾಸಿಗಳು ಅಲ್ಲಾಹನ ಮತ್ತು ಪ್ರವಾದಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತನ್ನು ಅಂಗೀಕರಿಸಿ ಅವರಲ್ಲಿ ವಿಶ್ವಾಸವಿಟ್ಟಿದ್ದಾರೆ. ಸತ್ಯನಿಷೇಧಿಗಳು ಅವರೊಡನೆ ತರ್ಕಿಸುತ್ತಾ, ಜಗಳವಾಡುತ್ತಾ ಅವರನ್ನು ಪುನಃ ಹಿಂದಿನ ಧರ್ಮಕ್ಕೆ ಮರಳಿಸಲು ಪ್ರಯತ್ನಿಸುತ್ತಾರೆ.
عربی تفاسیر:
اَللّٰهُ الَّذِیْۤ اَنْزَلَ الْكِتٰبَ بِالْحَقِّ وَالْمِیْزَانَ ؕ— وَمَا یُدْرِیْكَ لَعَلَّ السَّاعَةَ قَرِیْبٌ ۟
ಅಲ್ಲಾಹು ಸತ್ಯದೊಂದಿಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ ಮತ್ತು ತಕ್ಕಡಿಯನ್ನು (ಕೂಡ ಇಳಿಸಿಕೊಟ್ಟಿದ್ದಾನೆ). ನಿಮಗೇನು ಗೊತ್ತು? ಅಂತ್ಯಸಮಯವು ಸಮೀಪದಲ್ಲೇ ಇರಬಹುದು.
عربی تفاسیر:
یَسْتَعْجِلُ بِهَا الَّذِیْنَ لَا یُؤْمِنُوْنَ بِهَا ۚ— وَالَّذِیْنَ اٰمَنُوْا مُشْفِقُوْنَ مِنْهَا ۙ— وَیَعْلَمُوْنَ اَنَّهَا الْحَقُّ ؕ— اَلَاۤ اِنَّ الَّذِیْنَ یُمَارُوْنَ فِی السَّاعَةِ لَفِیْ ضَلٰلٍۢ بَعِیْدٍ ۟
ಅದರಲ್ಲಿ ವಿಶ್ವಾಸವಿಡದವರು ಅದಕ್ಕಾಗಿ (ಅಂತ್ಯಸಮಯಕ್ಕಾಗಿ) ಆತುರಪಡುತ್ತಾರೆ. ಆದರೆ ಸತ್ಯವಿಶ್ವಾಸಿಗಳು ಅದರ ಬಗ್ಗೆ ಭಯಭೀತರಾಗಿದ್ದಾರೆ. ಅವರು ಅದು ಸತ್ಯವೆಂದು ತಿಳಿದಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅಂತ್ಯಸಮಯದ ವಿಷಯದಲ್ಲಿ ತರ್ಕಿಸುವವರು ಯಾರೋ ಅವರು ವಿದೂರ ದುರ್ಮಾರ್ಗದಲ್ಲಿದ್ದಾರೆ.
عربی تفاسیر:
اَللّٰهُ لَطِیْفٌ بِعِبَادِهٖ یَرْزُقُ مَنْ یَّشَآءُ ۚ— وَهُوَ الْقَوِیُّ الْعَزِیْزُ ۟۠
ಅಲ್ಲಾಹು ಅವನ ದಾಸರ ಮೇಲೆ ದಯೆಯನ್ನು ಹೊಂದಿದ್ದಾನೆ. ಅವನು ಇಚ್ಛಿಸುವವರಿಗೆ ಅವನು ಉಪಜೀವನವನ್ನು ಒದಗಿಸುತ್ತಾನೆ. ಅವನು ಮಹಾ ಶಕ್ತಿಶಾಲಿ ಮತ್ತು ಪ್ರಬಲನಾಗಿದ್ದಾನೆ.
عربی تفاسیر:
مَنْ كَانَ یُرِیْدُ حَرْثَ الْاٰخِرَةِ نَزِدْ لَهٗ فِیْ حَرْثِهٖ ۚ— وَمَنْ كَانَ یُرِیْدُ حَرْثَ الدُّنْیَا نُؤْتِهٖ مِنْهَا ۙ— وَمَا لَهٗ فِی الْاٰخِرَةِ مِنْ نَّصِیْبٍ ۟
ಯಾರು ಪರಲೋಕದ ಬೆಳೆಯನ್ನು ಬಯಸುತ್ತಾನೋ ಅವನ ಬೆಳೆಯಲ್ಲಿ ನಾವು ಅಭಿವೃದ್ಧಿಯನ್ನು ನೀಡುವೆವು. ಯಾರು ಇಹಲೋಕದ ಬೆಳೆಯನ್ನು ಬಯಸುತ್ತಾನೋ ಅವನಿಗೆ ನಾವು ಇಹಲೋಕದಿಂದ ನೀಡುವೆವು. ಪರಲೋಕದಲ್ಲಿ ಅವನಿಗೆ ಯಾವುದೇ ಪಾಲು ಇರುವುದಿಲ್ಲ.
عربی تفاسیر:
اَمْ لَهُمْ شُرَكٰٓؤُا شَرَعُوْا لَهُمْ مِّنَ الدِّیْنِ مَا لَمْ یَاْذَنْ بِهِ اللّٰهُ ؕ— وَلَوْلَا كَلِمَةُ الْفَصْلِ لَقُضِیَ بَیْنَهُمْ ؕ— وَاِنَّ الظّٰلِمِیْنَ لَهُمْ عَذَابٌ اَلِیْمٌ ۟
ಅಲ್ಲಾಹು ಆಜ್ಞಾಪಿಸದ ವಿಷಯಗಳನ್ನು ಅವರಿಗೆ ಧರ್ಮವನ್ನಾಗಿ ಮಾಡಿಕೊಟ್ಟ ಯಾರಾದರೂ ದೇವ-ಸಹಭಾಗಿಗಳು ಅವರಿಗಿದ್ದಾರೆಯೇ? ತೀರ್ಪು ನೀಡುವ ದಿನದ ಕುರಿತಾದ ವಾಗ್ದಾನವು ಇಲ್ಲದಿರುತ್ತಿದ್ದರೆ ಅವರ ನಡುವೆ ಈಗಾಗಲೇ ತೀರ್ಪು ನೀಡಲಾಗುತ್ತಿತ್ತು. ನಿಶ್ಚಯವಾಗಿಯೂ ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿದೆ.
عربی تفاسیر:
تَرَی الظّٰلِمِیْنَ مُشْفِقِیْنَ مِمَّا كَسَبُوْا وَهُوَ وَاقِعٌ بِهِمْ ؕ— وَالَّذِیْنَ اٰمَنُوْا وَعَمِلُوا الصّٰلِحٰتِ فِیْ رَوْضٰتِ الْجَنّٰتِ ۚ— لَهُمْ مَّا یَشَآءُوْنَ عِنْدَ رَبِّهِمْ ؕ— ذٰلِكَ هُوَ الْفَضْلُ الْكَبِیْرُ ۟
ಆ ಅಕ್ರಮಿಗಳು (ಪರಲೋಕದಲ್ಲಿ) ಅವರ ಕರ್ಮಗಳ ಬಗ್ಗೆ ಭಯಪಡುವುದನ್ನು ನೀವು ನೋಡುವಿರಿ. ಅದರ ದುಷ್ಫಲವು ಅವರ ಮೇಲೆ ಸಂಭವಿಸಿಯೇ ತೀರುತ್ತದೆ. ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಸ್ವರ್ಗದ ಉದ್ಯಾನಗಳಲ್ಲಿರುವರು. ಅವರು ಇಚ್ಛಿಸುವುದೆಲ್ಲವೂ ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಇರುವುದು. ಅದೇ ಮಹಾ ಔದಾರ್ಯ.
عربی تفاسیر:
ذٰلِكَ الَّذِیْ یُبَشِّرُ اللّٰهُ عِبَادَهُ الَّذِیْنَ اٰمَنُوْا وَعَمِلُوا الصّٰلِحٰتِ ؕ— قُلْ لَّاۤ اَسْـَٔلُكُمْ عَلَیْهِ اَجْرًا اِلَّا الْمَوَدَّةَ فِی الْقُرْبٰی ؕ— وَمَنْ یَّقْتَرِفْ حَسَنَةً نَّزِدْ لَهٗ فِیْهَا حُسْنًا ؕ— اِنَّ اللّٰهَ غَفُوْرٌ شَكُوْرٌ ۟
ಅದು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮವೆಸಗಿದ ತನ್ನ ದಾಸರಿಗೆ ಅಲ್ಲಾಹು ನೀಡುವ ಸುವಾರ್ತೆಯಾಗಿದೆ. ಹೇಳಿರಿ: “ಅದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ಆದರೆ ಹತ್ತಿರದ ಸಂಬಂಧಿಕರಲ್ಲಿರುವ ಪ್ರೀತಿಯ ಹೊರತು.”[1] ಯಾರು ಒಳಿತು ಮಾಡುತ್ತಾನೋ ಅವನಿಗೆ ನಾವು ಅದರಿಂದಾಗಿ ಒಳಿತನ್ನು ಹೆಚ್ಚಿಸಿಕೊಡುವೆವು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕೃತಜ್ಞನಾಗಿದ್ದಾನೆ.
[1] ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಮತ್ತು ಕುರೈಶರ ನಡುವೆ ಕುಟುಂಬ ಸಂಬಂಧವಿತ್ತು. ಈ ವಚನದ ಅರ್ಥವೇನೆಂದರೆ, ಈ ಸಂದೇಶವನ್ನು ನಿಮಗೆ ತಲುಪಿಸಿ ನಿಮಗೆ ಉಪದೇಶ ನೀಡಿದ್ದಕ್ಕೆ ನಾನು ನಿಮ್ಮಿಂದ ಯಾವುದೇ ಉಪಕಾರ ಬಯಸುವುದಿಲ್ಲ. ನೀವು ನನ್ನ ಸಂದೇಶ ಸ್ವೀಕರಿಸದಿದ್ದರೂ ಪರವಾಗಿಲ್ಲ. ಆದರೆ ನನ್ನ ಮತ್ತು ನಿಮ್ಮ ನಡುವೆ ಕುಟುಂಬ ಸಂಬಂಧವಿದೆ. ಕನಿಷ್ಠ ಅದನ್ನಾದರೂ ಗೌರವಿಸಿ ನನ್ನನ್ನು ಅವಮಾನಿಸುವುದು, ನನಗೆ ಕಿರುಕುಳ ಮತ್ತು ಹಿಂಸೆ ಕೊಡುವುದನ್ನು ನಿಲ್ಲಿಸಿ. ನನ್ನ ಕರ್ತವ್ಯವನ್ನು ನಿರ್ವಹಿಸಲು ನನ್ನನ್ನು ಬಿಟ್ಟುಬಿಡಿ.
عربی تفاسیر:
اَمْ یَقُوْلُوْنَ افْتَرٰی عَلَی اللّٰهِ كَذِبًا ۚ— فَاِنْ یَّشَاِ اللّٰهُ یَخْتِمْ عَلٰی قَلْبِكَ ؕ— وَیَمْحُ اللّٰهُ الْبَاطِلَ وَیُحِقُّ الْحَقَّ بِكَلِمٰتِهٖ ؕ— اِنَّهٗ عَلِیْمٌۢ بِذَاتِ الصُّدُوْرِ ۟
ಅವರು (ಪ್ರವಾದಿ) ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿದ್ದಾರೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲಾಹು ಇಚ್ಛಿಸಿದರೆ ನಿಮ್ಮ ಹೃದಯಕ್ಕೆ ಮೊಹರು ಹಾಕುವನು. ಅಲ್ಲಾಹು ತನ್ನ ವಚನಗಳ ಮೂಲಕ ಅಸತ್ಯವನ್ನು ಅಳಿಸುತ್ತಾನೆ ಮತ್ತು ಸತ್ಯವನ್ನು ಸ್ಥಿರಗೊಳಿಸುತ್ತಾನೆ. ನಿಶ್ಚಯವಾಗಿಯೂ ಅವನು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.
عربی تفاسیر:
وَهُوَ الَّذِیْ یَقْبَلُ التَّوْبَةَ عَنْ عِبَادِهٖ وَیَعْفُوْا عَنِ السَّیِّاٰتِ وَیَعْلَمُ مَا تَفْعَلُوْنَ ۟ۙ
ಅವನು ತನ್ನ ದಾಸರಿಂದ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರ ತಪ್ಪುಗಳನ್ನು ಮನ್ನಿಸುತ್ತಾನೆ. ನೀವು ಮಾಡುತ್ತಿರುವುದೆಲ್ಲವನ್ನೂ ಅವನು ತಿಳಿಯುತ್ತಾನೆ.
عربی تفاسیر:
وَیَسْتَجِیْبُ الَّذِیْنَ اٰمَنُوْا وَعَمِلُوا الصّٰلِحٰتِ وَیَزِیْدُهُمْ مِّنْ فَضْلِهٖ ؕ— وَالْكٰفِرُوْنَ لَهُمْ عَذَابٌ شَدِیْدٌ ۟
ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮವೆಸಗಿದವರಿಗೆ (ಅವರ ಪ್ರಾರ್ಥನೆಗಳಿಗೆ) ಅವನು ಉತ್ತರ ನೀಡುತ್ತಾನೆ ಮತ್ತು ತನ್ನ ಔದಾರ್ಯವನ್ನು ಅವರಿಗೆ ಹೆಚ್ಚಿಸಿಕೊಡುತ್ತಾನೆ. ಸತ್ಯನಿಷೇಧಿಗಳಿಗೆ ಕಠೋರ ಶಿಕ್ಷೆಯಿದೆ.
عربی تفاسیر:
وَلَوْ بَسَطَ اللّٰهُ الرِّزْقَ لِعِبَادِهٖ لَبَغَوْا فِی الْاَرْضِ وَلٰكِنْ یُّنَزِّلُ بِقَدَرٍ مَّا یَشَآءُ ؕ— اِنَّهٗ بِعِبَادِهٖ خَبِیْرٌ بَصِیْرٌ ۟
ಅಲ್ಲಾಹು ಅವನ ದಾಸರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಿದ್ದರೆ ಅವರು ಭೂಮಿಯಲ್ಲಿ ಅತಿರೇಕವೆಸಗುತ್ತಿದ್ದರು. ಆದರೆ ಅವನು ಇಚ್ಛಿಸುವ ಒಂದು ನಿರ್ಣಯಕ್ಕೆ ಅನುಗುಣವಾಗಿಯೇ ಅವನು ಇಳಿಸಿಕೊಡುತ್ತಾನೆ. ನಿಶ್ಚಯವಾಗಿಯೂ ಅವನು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ತಿಳಿದವನು ಮತ್ತು ನೋಡುವವನಾಗಿದ್ದಾನೆ.
عربی تفاسیر:
وَهُوَ الَّذِیْ یُنَزِّلُ الْغَیْثَ مِنْ بَعْدِ مَا قَنَطُوْا وَیَنْشُرُ رَحْمَتَهٗ ؕ— وَهُوَ الْوَلِیُّ الْحَمِیْدُ ۟
ಅವನೇ ಮನುಷ್ಯರು ನಿರಾಶರಾದ ಬಳಿಕ ಮಳೆಯನ್ನು ಸುರಿಸುವವನು ಮತ್ತು ತನ್ನ ದಯೆಯನ್ನು ಹಬ್ಬಿಸುವವನು. ಅವನು ರಕ್ಷಕನು ಮತ್ತು ಸ್ತುತ್ಯರ್ಹನಾಗಿದ್ದಾನೆ.
عربی تفاسیر:
وَمِنْ اٰیٰتِهٖ خَلْقُ السَّمٰوٰتِ وَالْاَرْضِ وَمَا بَثَّ فِیْهِمَا مِنْ دَآبَّةٍ ؕ— وَهُوَ عَلٰی جَمْعِهِمْ اِذَا یَشَآءُ قَدِیْرٌ ۟۠
ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಹಾಗೂ ಅವುಗಳಲ್ಲಿ ಜೀವಿಗಳನ್ನು ಹಬ್ಬಿಸಿದ್ದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ. ಅವನು ಇಚ್ಛಿಸುವಾಗ ಅವರೆಲ್ಲರನ್ನು ಒಟ್ಟುಗೂಡಿಸುವ ಸಾಮರ್ಥ್ಯ ಅವನಿಗಿದೆ.
عربی تفاسیر:
وَمَاۤ اَصَابَكُمْ مِّنْ مُّصِیْبَةٍ فَبِمَا كَسَبَتْ اَیْدِیْكُمْ وَیَعْفُوْا عَنْ كَثِیْرٍ ۟ؕ
ನಿಮಗೇನಾದರೂ ವಿಪತ್ತು ಸಂಭವಿಸಿದರೆ ಅದು ನಿಮ್ಮ ಕೈಗಳು ಮಾಡಿದ ಕರ್ಮಗಳ ಪ್ರತಿಫಲವಾಗಿದೆ. ಹೆಚ್ಚಿನವುಗಳನ್ನು ಅವನು ಮನ್ನಿಸುತ್ತಾನೆ.
عربی تفاسیر:
وَمَاۤ اَنْتُمْ بِمُعْجِزِیْنَ فِی الْاَرْضِ ۖۚ— وَمَا لَكُمْ مِّنْ دُوْنِ اللّٰهِ مِنْ وَّلِیٍّ وَّلَا نَصِیْرٍ ۟
ಭೂಮಿಯಲ್ಲಿ (ಅಲ್ಲಾಹನನ್ನು) ಸೋಲಿಸಲು ನಿಮಗೆ ಸಾಧ್ಯವಿಲ್ಲ. ಅಲ್ಲಾಹನ ಹೊರತು ನಿಮಗೆ ಬೇರೆ ರಕ್ಷಕರು ಅಥವಾ ಸಹಾಯಕರಿಲ್ಲ.
عربی تفاسیر:
وَمِنْ اٰیٰتِهِ الْجَوَارِ فِی الْبَحْرِ كَالْاَعْلَامِ ۟ؕ
ಸಮುದ್ರಗಳಲ್ಲಿ ಚಲಿಸುವ ಬೆಟ್ಟಗಳಂತಹ ಹಡಗುಗಳು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ.
عربی تفاسیر:
اِنْ یَّشَاْ یُسْكِنِ الرِّیْحَ فَیَظْلَلْنَ رَوَاكِدَ عَلٰی ظَهْرِهٖ ؕ— اِنَّ فِیْ ذٰلِكَ لَاٰیٰتٍ لِّكُلِّ صَبَّارٍ شَكُوْرٍ ۟ۙ
ಅವನು ಇಚ್ಛಿಸಿದರೆ ಗಾಳಿಯನ್ನು ಸ್ತಬ್ದಗೊಳಿಸುವನು. ಆಗ ಅವು ಸಮುದ್ರಗಳಲ್ಲಿ ನಿಶ್ಚಲವಾಗಿ ನಿಲ್ಲುವುವು. ನಿಶ್ಚಯವಾಗಿಯೂ ತಾಳ್ಮೆಯಿರುವ ಮತ್ತು ಕೃತಜ್ಞರಾಗಿರುವ ಎಲ್ಲರಿಗೂ ಅದರಲ್ಲಿ ದೃಷ್ಟಾಂತಗಳಿವೆ.
عربی تفاسیر:
اَوْ یُوْبِقْهُنَّ بِمَا كَسَبُوْا وَیَعْفُ عَنْ كَثِیْرٍ ۟ۙ
ಅಥವಾ ಅವರು ಮಾಡಿದ ಕರ್ಮಗಳ ಫಲವಾಗಿ ಅವನು ಅವುಗಳನ್ನು (ಹಡಗುಗಳನ್ನು) ನಾಶ ಮಾಡುವನು. ಹೆಚ್ಚಿನವುಗಳನ್ನು ಅವನು ಮನ್ನಿಸುತ್ತಾನೆ.
عربی تفاسیر:
وَّیَعْلَمَ الَّذِیْنَ یُجَادِلُوْنَ فِیْۤ اٰیٰتِنَا ؕ— مَا لَهُمْ مِّنْ مَّحِیْصٍ ۟
ನಮ್ಮ ವಚನಗಳ ವಿಷಯದಲ್ಲಿ ತರ್ಕಿಸುವವರು ಯಾರೋ ಅವರಿಗೆ ತಪ್ಪಿಸಿಕೊಳ್ಳಲು ಯಾವುದೇ ಸ್ಥಳವಿಲ್ಲವೆಂದು ತಿಳಿದಿರಲಿ!
عربی تفاسیر:
فَمَاۤ اُوْتِیْتُمْ مِّنْ شَیْءٍ فَمَتَاعُ الْحَیٰوةِ الدُّنْیَا ۚ— وَمَا عِنْدَ اللّٰهِ خَیْرٌ وَّاَبْقٰی لِلَّذِیْنَ اٰمَنُوْا وَعَلٰی رَبِّهِمْ یَتَوَكَّلُوْنَ ۟ۚ
ನಿಮಗೇನಾದರೂ ನೀಡಲಾಗಿದ್ದರೆ ಅದು ಇಹಲೋಕ ಜೀವನದ (ತಾತ್ಕಾಲಿಕ) ಸವಲತ್ತುಗಳು ಮಾತ್ರ. ಅಲ್ಲಾಹನ ಬಳಿಯಿರುವುದು ಅತ್ಯುತ್ತಮ ಮತ್ತು ಆತಿಹೆಚ್ಚು ಬಾಳಿಕೆಯುಳ್ಳದ್ದಾಗಿದ್ದು, ಅದು ಸತ್ಯವಿಶ್ವಾಸಿಗಳಿಗೆ ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಟ್ಟವರಿಗೆ ದೊರೆಯುತ್ತದೆ.
عربی تفاسیر:
وَالَّذِیْنَ یَجْتَنِبُوْنَ كَبٰٓىِٕرَ الْاِثْمِ وَالْفَوَاحِشَ وَاِذَا مَا غَضِبُوْا هُمْ یَغْفِرُوْنَ ۟ۚ
ಅವರು ಮಹಾಪಾಪಗಳು ಮತ್ತು ಅಶ್ಲೀಲಕೃತ್ಯಗಳಿಂದ ದೂರವಾಗುತ್ತಾರೆ ಮತ್ತು ಕೋಪ ಬರುವಾಗ ಕ್ಷಮಿಸುತ್ತಾರೆ.
عربی تفاسیر:
وَالَّذِیْنَ اسْتَجَابُوْا لِرَبِّهِمْ وَاَقَامُوا الصَّلٰوةَ ۪— وَاَمْرُهُمْ شُوْرٰی بَیْنَهُمْ ۪— وَمِمَّا رَزَقْنٰهُمْ یُنْفِقُوْنَ ۟ۚ
ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಕರೆಗೆ ಉತ್ತರಿಸುತ್ತಾರೆ, ನಮಾಝ್ ಸಂಸ್ಥಾಪಿಸುತ್ತಾರೆ, ತಮ್ಮ ಕೆಲಸಕಾರ್ಯಗಳನ್ನು ಪರಸ್ಪರ ಸಮಾಲೋಚನೆಯಿಂದ ತೀರ್ಮಾನಿಸುತ್ತಾರೆ ಮತ್ತು ನಾವು ಒದಗಿಸಿದ (ಧನದಿಂದ) ಖರ್ಚು ಮಾಡುತ್ತಾರೆ.
عربی تفاسیر:
وَالَّذِیْنَ اِذَاۤ اَصَابَهُمُ الْبَغْیُ هُمْ یَنْتَصِرُوْنَ ۟
ಅವರ ಮೇಲೆ ಯಾವುದಾದರೂ ದೌರ್ಜನ್ಯವುಂಟಾದರೆ ಅವರು ಪ್ರತೀಕಾರ ಮಾತ್ರ ತೆಗೆದುಕೊಳ್ಳುತ್ತಾರೆ.[1]
[1] ದೌರ್ಜನ್ಯಕ್ಕೆ ಗುರಿಯಾದವರು ಪ್ರತೀಕಾರ ಪಡೆಯುವುದಕ್ಕೆ ಅನುಮತಿಯಿದೆ. ಆದರೆ ಅದು ನ್ಯಾಯಯುತವಾಗಿರಬೇಕು. ಪ್ರತೀಕಾರ ಪಡೆಯದೆ ಕ್ಷಮಿಸಿ ಬಿಟ್ಟುಬಿಡುವುದಾದರೆ ಅದು ಶ್ರೇಷ್ಠವಾಗಿದೆ.
عربی تفاسیر:
وَجَزٰٓؤُا سَیِّئَةٍ سَیِّئَةٌ مِّثْلُهَا ۚ— فَمَنْ عَفَا وَاَصْلَحَ فَاَجْرُهٗ عَلَی اللّٰهِ ؕ— اِنَّهٗ لَا یُحِبُّ الظّٰلِمِیْنَ ۟
ಕೆಡುಕಿನ ಪ್ರತಿಫಲವು ಅದರಂತಿರುವ ಕೆಡುಕಾಗಿದೆ. ಆದರೆ ಯಾರಾದರೂ ಮನ್ನಿಸಿದರೆ ಮತ್ತು ಸಂಧಾನ ಮಾಡಿಕೊಂಡರೆ ಅವನಿಗೆ ಪ್ರತಿಫಲ ನೀಡುವುದು ಅಲ್ಲಾಹನ ಹೊಣೆಗಾರಿಕೆಯಾಗಿದೆ. ನಿಶ್ಚಯವಾಗಿಯೂ ಅವನು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ.
عربی تفاسیر:
وَلَمَنِ انْتَصَرَ بَعْدَ ظُلْمِهٖ فَاُولٰٓىِٕكَ مَا عَلَیْهِمْ مِّنْ سَبِیْلٍ ۟ؕ
ದೌರ್ಜನ್ಯಕ್ಕೆ ಗುರಿಯಾದ ನಂತರ ಯಾರಾದರೂ (ಅದಕ್ಕೆ ಸಮಾನವಾದ) ಪ್ರತೀಕಾರ ಕೈಗೊಂಡರೆ ಅಂತಹ ಜನರ ಮೇಲೆ (ತಪ್ಪು ಹೊರಿಸಲು) ಯಾವುದೇ ಮಾರ್ಗವಿಲ್ಲ.
عربی تفاسیر:
اِنَّمَا السَّبِیْلُ عَلَی الَّذِیْنَ یَظْلِمُوْنَ النَّاسَ وَیَبْغُوْنَ فِی الْاَرْضِ بِغَیْرِ الْحَقِّ ؕ— اُولٰٓىِٕكَ لَهُمْ عَذَابٌ اَلِیْمٌ ۟
ಮಾರ್ಗವಿರುವುದು ಜನರಿಗೆ ಅನ್ಯಾಯವೆಸಗುವ ಮತ್ತು ಭೂಮಿಯಲ್ಲಿ ಅನ್ಯಾಯವಾಗಿ ಅತಿರೇಕವೆಸಗುವವರ ಮೇಲೆ ಮಾತ್ರವಾಗಿದೆ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
عربی تفاسیر:
وَلَمَنْ صَبَرَ وَغَفَرَ اِنَّ ذٰلِكَ لَمِنْ عَزْمِ الْاُمُوْرِ ۟۠
ಯಾರಾದರೂ ತಾಳ್ಮೆ ವಹಿಸಿದರೆ ಮತ್ತು ಕ್ಷಮಿಸಿದರೆ ನಿಶ್ಚಯವಾಗಿಯೂ ಅದು ಮಹಾ ಸ್ಥೈರ್ಯದ ವಿಷಯಗಳಲ್ಲಿ ಸೇರಿದ್ದಾಗಿದೆ.
عربی تفاسیر:
وَمَنْ یُّضْلِلِ اللّٰهُ فَمَا لَهٗ مِنْ وَّلِیٍّ مِّنْ بَعْدِهٖ ؕ— وَتَرَی الظّٰلِمِیْنَ لَمَّا رَاَوُا الْعَذَابَ یَقُوْلُوْنَ هَلْ اِلٰی مَرَدٍّ مِّنْ سَبِیْلٍ ۟ۚ
ಅಲ್ಲಾಹು ಯಾರನ್ನಾದರೂ ದಾರಿತಪ್ಪಿಸಿದರೆ, ನಂತರ ಅವನಿಗೆ ಯಾವುದೇ ರಕ್ಷಕನಿರುವುದಿಲ್ಲ. ಅಕ್ರಮಿಗಳು ಶಿಕ್ಷೆಯನ್ನು ನೇರವಾಗಿ ನೋಡುವಾಗ ಮರಳಿ (ಭೂಮಿಗೆ) ಹೋಗಲು ಯಾವುದಾದರೂ ದಾರಿಯಿದೆಯೇ ಎಂದು ಕೇಳುವುದನ್ನು ನಿಮಗೆ ಕಾಣಬಹುದು.
عربی تفاسیر:
وَتَرٰىهُمْ یُعْرَضُوْنَ عَلَیْهَا خٰشِعِیْنَ مِنَ الذُّلِّ یَنْظُرُوْنَ مِنْ طَرْفٍ خَفِیٍّ ؕ— وَقَالَ الَّذِیْنَ اٰمَنُوْۤا اِنَّ الْخٰسِرِیْنَ الَّذِیْنَ خَسِرُوْۤا اَنْفُسَهُمْ وَاَهْلِیْهِمْ یَوْمَ الْقِیٰمَةِ ؕ— اَلَاۤ اِنَّ الظّٰلِمِیْنَ فِیْ عَذَابٍ مُّقِیْمٍ ۟
ಅವಮಾನದಿಂದ ಶರಣಾಗತರಾದ ಸ್ಥಿತಿಯಲ್ಲಿ ಅವರನ್ನು ಅದರ (ನರಕಾಗ್ನಿಯ) ಮುಂದೆ ಪ್ರದರ್ಶಿಸಲಾಗುವುದನ್ನು ನೀವು ನೋಡುವಿರಿ. ಅವರು ಕುಡಿನೋಟದಿಂದ ನೋಡುತ್ತಿರುವರು. ಸತ್ಯವಿಶ್ವಾಸಿಗಳು ಹೇಳುವರು: “ಪುನರುತ್ಥಾನ ದಿನದಂದು ಯಾರು ತಮ್ಮನ್ನು ಮತ್ತು ತಮ್ಮ ಸಂಬಂಧಿಕರನ್ನು ಕಳೆದುಕೊಳ್ಳುತ್ತಾರೋ ಅವರೇ ನಷ್ಟ ಹೊಂದಿದವರು. ತಿಳಿಯಿರಿ! ನಿಶ್ಚಯವಾಗಿಯೂ ಅಕ್ರಮಿಗಳು ಶಾಶ್ವತ ಶಿಕ್ಷೆಯಲ್ಲಿದ್ದಾರೆ.”
عربی تفاسیر:
وَمَا كَانَ لَهُمْ مِّنْ اَوْلِیَآءَ یَنْصُرُوْنَهُمْ مِّنْ دُوْنِ اللّٰهِ ؕ— وَمَنْ یُّضْلِلِ اللّٰهُ فَمَا لَهٗ مِنْ سَبِیْلٍ ۟ؕ
ಅಲ್ಲಾಹನ ಹೊರತು ಅವರಿಗೆ ಸಹಾಯ ಮಾಡುವ ಬೇರೆ ಯಾವ ರಕ್ಷಕರೂ ಅವರಿಗಿಲ್ಲ. ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯಿಲ್ಲ.
عربی تفاسیر:
اِسْتَجِیْبُوْا لِرَبِّكُمْ مِّنْ قَبْلِ اَنْ یَّاْتِیَ یَوْمٌ لَّا مَرَدَّ لَهٗ مِنَ اللّٰهِ ؕ— مَا لَكُمْ مِّنْ مَّلْجَاٍ یَّوْمَىِٕذٍ وَّمَا لَكُمْ مِّنْ نَّكِیْرٍ ۟
ಅಲ್ಲಾಹನ ಕಡೆಯ ಒಂದು ದಿನವು ಬರುವುದಕ್ಕೆ ಮೊದಲೇ ನಿಮ್ಮ ಪರಿಪಾಲಕನ (ಅಲ್ಲಾಹನ) ಕರೆಗೆ ಉತ್ತರ ನೀಡಿರಿ. ಆ ದಿನವನ್ನು ದೂರೀಕರಿಸಲು ಯಾರಿಗೂ ಸಾಧ್ಯವಿಲ್ಲ. ಅಂದು ನಿಮಗೆ ಯಾವುದೇ ಆಶ್ರಯತಾಣವಿಲ್ಲ ಮತ್ತು ಅಡಗಿ ಕುಳಿತು ಆಜ್ಞಾತರಾಗಲೂ ನಿಮಗೆ ಸಾಧ್ಯವಿಲ್ಲ.
عربی تفاسیر:
فَاِنْ اَعْرَضُوْا فَمَاۤ اَرْسَلْنٰكَ عَلَیْهِمْ حَفِیْظًا ؕ— اِنْ عَلَیْكَ اِلَّا الْبَلٰغُ ؕ— وَاِنَّاۤ اِذَاۤ اَذَقْنَا الْاِنْسَانَ مِنَّا رَحْمَةً فَرِحَ بِهَا ۚ— وَاِنْ تُصِبْهُمْ سَیِّئَةٌ بِمَا قَدَّمَتْ اَیْدِیْهِمْ فَاِنَّ الْاِنْسَانَ كَفُوْرٌ ۟
ಅವರೇನಾದರೂ ವಿಮುಖರಾದರೆ ನಾವು ನಿಮ್ಮನ್ನು ಅವರ ಮೇಲೆ ಕಾವಲುಗಾರರಾಗಿ ಕಳುಹಿಸಿಲ್ಲ. ನಿಮ್ಮ ಕರ್ತವ್ಯವು ಸಂದೇಶವನ್ನು ತಲುಪಿಸುವುದು ಮಾತ್ರವಾಗಿದೆ. ನಿಶ್ಚಯವಾಗಿಯೂ ನಾವು ಮನುಷ್ಯನಿಗೆ ನಮ್ಮ ಕಡೆಯ ದಯೆಯ ರುಚಿಯನ್ನು ತೋರಿಸಿದರೆ ಅವನು ಸಂತೋಷಪಡುತ್ತಾನೆ. ಅವರ ಕೈಗಳು ಮುಂದಕ್ಕೆ ಕಳುಹಿಸಿರುವ ಕರ್ಮಗಳ ಪ್ರತಿಫಲವಾಗಿ ಅವರಿಗೆ ಏನಾದರೂ ವಿಪತ್ತು ಸಂಭವಿಸಿದರೆ ನಿಶ್ಚಯವಾಗಿಯೂ ಮನುಷ್ಯನು ಕೃತಘ್ನನಾಗಿ ಬಿಡುತ್ತಾನೆ.
عربی تفاسیر:
لِلّٰهِ مُلْكُ السَّمٰوٰتِ وَالْاَرْضِ ؕ— یَخْلُقُ مَا یَشَآءُ ؕ— یَهَبُ لِمَنْ یَّشَآءُ اِنَاثًا وَّیَهَبُ لِمَنْ یَّشَآءُ الذُّكُوْرَ ۟ۙ
ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅವನು ಇಚ್ಛಿಸುವವರಿಗೆ ಹೆಣ್ಣು ಮಕ್ಕಳನ್ನು ಕರುಣಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಗಂಡು ಮಕ್ಕಳನ್ನು ಕರುಣಿಸುತ್ತಾನೆ.
عربی تفاسیر:
اَوْ یُزَوِّجُهُمْ ذُكْرَانًا وَّاِنَاثًا ۚ— وَیَجْعَلُ مَنْ یَّشَآءُ عَقِیْمًا ؕ— اِنَّهٗ عَلِیْمٌ قَدِیْرٌ ۟
ಅಥವಾ ಅವರಿಗೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಜೊತೆಯಾಗಿ ಕರುಣಿಸುತ್ತಾನೆ. ಅವನು ಇಚ್ಛಿಸುವವರನ್ನು ಬಂಜೆಯಾಗಿ ಮಾಡುತ್ತಾನೆ. ನಿಶ್ಚಯವಾಗಿಯೂ ಅವನು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ.
عربی تفاسیر:
وَمَا كَانَ لِبَشَرٍ اَنْ یُّكَلِّمَهُ اللّٰهُ اِلَّا وَحْیًا اَوْ مِنْ وَّرَآئِ حِجَابٍ اَوْ یُرْسِلَ رَسُوْلًا فَیُوْحِیَ بِاِذْنِهٖ مَا یَشَآءُ ؕ— اِنَّهٗ عَلِیٌّ حَكِیْمٌ ۟
ಅಲ್ಲಾಹು ಒಬ್ಬ ಮನುಷ್ಯನೊಡನೆ ನೇರವಾಗಿ ಮಾತನಾಡುವುದು ಅಸಂಭವ್ಯವಾಗಿದೆ. ದೇವವಾಣಿಯ ಮೂಲಕ, ಅಥವಾ ಒಂದು ಪರದೆಯ ಹಿಂದಿನಿಂದ, ಅಥವಾ ಒಬ್ಬ ದೇವದೂತನನ್ನು ಕಳುಹಿಸಿ, ಆ ದೇವದೂತನು ಅಲ್ಲಾಹನ ಆಜ್ಞೆಯಂತೆ ಅಲ್ಲಾಹು ಇಚ್ಛಿಸುವುದನ್ನು ಸಂದೇಶವಾಗಿ ನೀಡುವ ಹೊರತು. ನಿಶ್ಚಯವಾಗಿಯೂ ಅಲ್ಲಾಹು ಅತ್ಯುನ್ನತನು ಮತ್ತು ವಿವೇಕಪೂರ್ಣನಾಗಿದ್ದಾನೆ.
عربی تفاسیر:
وَكَذٰلِكَ اَوْحَیْنَاۤ اِلَیْكَ رُوْحًا مِّنْ اَمْرِنَا ؕ— مَا كُنْتَ تَدْرِیْ مَا الْكِتٰبُ وَلَا الْاِیْمَانُ وَلٰكِنْ جَعَلْنٰهُ نُوْرًا نَّهْدِیْ بِهٖ مَنْ نَّشَآءُ مِنْ عِبَادِنَا ؕ— وَاِنَّكَ لَتَهْدِیْۤ اِلٰی صِرَاطٍ مُّسْتَقِیْمٍ ۟ۙ
ಈ ರೀತಿ ನಾವು ನಮ್ಮ ಆಜ್ಞೆಯಿಂದ ನಿಮಗೆ ಒಂದು ಆತ್ಮವನ್ನು (ಕುರ್‌ಆನನ್ನು) ಇಳಿಸಿಕೊಟ್ಟಿದ್ದೇವೆ. ಗ್ರಂಥವೆಂದರೆ ಏನು ಮತ್ತು ಸತ್ಯವಿಶ್ವಾಸವೆಂದರೆ ಏನು ಮುಂತಾದ ಯಾವುದೂ ನಿಮಗೆ ತಿಳಿದಿರಲಿಲ್ಲ. ಆದರೆ ನಾವು ಅದನ್ನು ಒಂದು ಬೆಳಕಿನಂತೆ ಮಾಡಿದೆವು. ಅದರ ಮೂಲಕ ನಮ್ಮ ದಾಸರಲ್ಲಿ ನಾವು ಇಚ್ಛಿಸಿದವರಿಗೆ ನಾವು ಸನ್ಮಾರ್ಗವನ್ನು ತೋರಿಸುತ್ತೇವೆ. ನಿಶ್ಚಯವಾಗಿಯೂ ನೀವು ನೇರವಾದ ಮಾರ್ಗಕ್ಕೆ ಮಾರ್ಗದರ್ಶನ ಮಾಡುತ್ತಿದ್ದೀರಿ.
عربی تفاسیر:
صِرَاطِ اللّٰهِ الَّذِیْ لَهٗ مَا فِی السَّمٰوٰتِ وَمَا فِی الْاَرْضِ ؕ— اَلَاۤ اِلَی اللّٰهِ تَصِیْرُ الْاُمُوْرُ ۟۠
ಭೂಮ್ಯಾಕಾಶಗಳಲ್ಲಿರುವುದು ಯಾರದ್ದೋ ಆ ಅಲ್ಲಾಹನ ಮಾರ್ಗಕ್ಕೆ. ತಿಳಿಯಿರಿ! ಎಲ್ಲಾ ವಿಷಯಗಳೂ ಅಲ್ಲಾಹನ ಬಳಿಗೇ ಮರಳುತ್ತವೆ.
عربی تفاسیر:
 
معانی کا ترجمہ سورت: سورۂ شوریٰ
سورتوں کی لسٹ صفحہ نمبر
 
قرآن کریم کے معانی کا ترجمہ - الترجمة الكنادية - ترجمے کی لسٹ

ترجمة معاني القرآن الكريم إلى اللغة الكنادية ترجمها محمد حمزة بتور.

بند کریں