Check out the new design

قرآن کریم کے معانی کا ترجمہ - کنڑ ترجمہ - حمزہ بتور * - ترجمے کی لسٹ

PDF XML CSV Excel API
Please review the Terms and Policies

معانی کا ترجمہ سورت: محمد   آیت:
اِنَّ اللّٰهَ یُدْخِلُ الَّذِیْنَ اٰمَنُوْا وَعَمِلُوا الصّٰلِحٰتِ جَنّٰتٍ تَجْرِیْ مِنْ تَحْتِهَا الْاَنْهٰرُ ؕ— وَالَّذِیْنَ كَفَرُوْا یَتَمَتَّعُوْنَ وَیَاْكُلُوْنَ كَمَا تَاْكُلُ الْاَنْعَامُ وَالنَّارُ مَثْوًی لَّهُمْ ۟
ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವನು. ಸತ್ಯನಿಷೇಧಿಗಳು (ಇಹಲೋಕದಲ್ಲಿ) ಆನಂದಿಸುತ್ತಾರೆ ಮತ್ತು ಜಾನುವಾರುಗಳು ತಿನ್ನುವಂತೆ ತಿನ್ನುತ್ತಾರೆ. ನರಕವು ಅವರ ವಾಸಸ್ಥಳವಾಗಿದೆ.
عربی تفاسیر:
وَكَاَیِّنْ مِّنْ قَرْیَةٍ هِیَ اَشَدُّ قُوَّةً مِّنْ قَرْیَتِكَ الَّتِیْۤ اَخْرَجَتْكَ ۚ— اَهْلَكْنٰهُمْ فَلَا نَاصِرَ لَهُمْ ۟
ನಿಮ್ಮನ್ನು ಹೊರಹಾಕಿದ ಈ ಊರಿಗಿಂತಲೂ (ಮಕ್ಕಾ) ಬಲಿಷ್ಠವಾದ ಎಷ್ಟು ಊರುಗಳಿವೆ! ಅವರನ್ನು ನಾವು ನಾಶ ಮಾಡಿದೆವು. ಅವರಿಗೆ ಯಾವುದೇ ಸಹಾಯಕರು ಇರಲಿಲ್ಲ.
عربی تفاسیر:
اَفَمَنْ كَانَ عَلٰی بَیِّنَةٍ مِّنْ رَّبِّهٖ كَمَنْ زُیِّنَ لَهٗ سُوْٓءُ عَمَلِهٖ وَاتَّبَعُوْۤا اَهْوَآءَهُمْ ۟
ತನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಸ್ಪಷ್ಟ ಸಾಕ್ಷ್ಯದ ಮೇಲೆ ನಿಂತಿರುವ ವ್ಯಕ್ತಿ ದುಷ್ಕರ್ಮಗಳನ್ನು ಆಕರ್ಷಕವಾಗಿ ತೋರಿಸಲಾದ ಮತ್ತು ಸ್ವೇಚ್ಛೆಗಳ ಹಿಂಬಾಲಕನಾದ ವ್ಯಕ್ತಿಯಂತಾಗುವನೇ?
عربی تفاسیر:
مَثَلُ الْجَنَّةِ الَّتِیْ وُعِدَ الْمُتَّقُوْنَ ؕ— فِیْهَاۤ اَنْهٰرٌ مِّنْ مَّآءٍ غَیْرِ اٰسِنٍ ۚ— وَاَنْهٰرٌ مِّنْ لَّبَنٍ لَّمْ یَتَغَیَّرْ طَعْمُهٗ ۚ— وَاَنْهٰرٌ مِّنْ خَمْرٍ لَّذَّةٍ لِّلشّٰرِبِیْنَ ۚ۬— وَاَنْهٰرٌ مِّنْ عَسَلٍ مُّصَفًّی ؕ— وَلَهُمْ فِیْهَا مِنْ كُلِّ الثَّمَرٰتِ وَمَغْفِرَةٌ مِّنْ رَّبِّهِمْ ؕ— كَمَنْ هُوَ خَالِدٌ فِی النَّارِ وَسُقُوْا مَآءً حَمِیْمًا فَقَطَّعَ اَمْعَآءَهُمْ ۟
ದೇವಭಯವುಳ್ಳವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗವು ಹೇಗಿದೆಯೆಂದರೆ ಅದರಲ್ಲಿ ವಾಸನೆ ಬದಲಾಗದ ನೀರಿನ ಹೊಳೆಗಳಿವೆ, ರುಚಿ ಬದಲಾಗದ ಹಾಲಿನ ಹೊಳೆಗಳಿವೆ, ಕುಡಿಯುವವರಿಗೆ ಆಹ್ಲಾದಕರವಾದ ಶರಾಬಿನ ನದಿಗಳಿವೆ ಮತ್ತು ಶುದ್ಧವಾದ ಜೇನಿನ ನದಿಗಳಿವೆ. ಅಲ್ಲಿ ಅವರಿಗೆ ಎಲ್ಲಾ ತರಹದ ಹಣ್ಣು-ಹಂಪಲುಗಳಿವೆ. ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಕ್ಷಮೆಯೂ ಇದೆ. (ಇವರ ಸ್ಥಿತಿಯು) ನರಕದಲ್ಲಿ ಶಾಶ್ವತವಾಗಿ ವಾಸಿಸುವವನಂತೆಯೇ? ಅವರಿಗೆ ಕುಡಿಯಲು ನೀಡಲಾಗುವ ಕುದಿಯುವ ನೀರು ಅವರ ಕರುಳುಗಳನ್ನು ತುಂಡು ತುಂಡಾಗಿ ಕತ್ತರಿಸುತ್ತದೆ.
عربی تفاسیر:
وَمِنْهُمْ مَّنْ یَّسْتَمِعُ اِلَیْكَ ۚ— حَتّٰۤی اِذَا خَرَجُوْا مِنْ عِنْدِكَ قَالُوْا لِلَّذِیْنَ اُوْتُوا الْعِلْمَ مَاذَا قَالَ اٰنِفًا ۫— اُولٰٓىِٕكَ الَّذِیْنَ طَبَعَ اللّٰهُ عَلٰی قُلُوْبِهِمْ وَاتَّبَعُوْۤا اَهْوَآءَهُمْ ۟
ಅವರಲ್ಲಿ ಕೆಲವರು ನೀವು ಹೇಳುವುದನ್ನು ಕಿವಿಗೊಟ್ಟು ಕೇಳುತ್ತಾರೆ. ಎಲ್ಲಿಯವರೆಗೆಂದರೆ, ಅವರು ನಿಮ್ಮ ಬಳಿಯಿಂದ ಹೊರಟರೆ ಜ್ಞಾನಿಗಳೊಂದಿಗೆ (ಸಹಾಬಿಗಳೊಂದಿಗೆ) ಕೇಳುತ್ತಾರೆ: “ಅವರು ಈಗ ಹೇಳಿದ್ದೇನು?” ಅವರ ಹೃದಯಗಳ ಮೇಲೆ ಅಲ್ಲಾಹು ಮೊಹರು ಹಾಕಿದ್ದಾನೆ ಮತ್ತು ಅವರು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾರೆ.
عربی تفاسیر:
وَالَّذِیْنَ اهْتَدَوْا زَادَهُمْ هُدًی وَّاٰتٰىهُمْ تَقْوٰىهُمْ ۟
ಸನ್ಮಾರ್ಗ ಪಡೆದವರು ಯಾರೋ ಅವರಿಗೆ ಅಲ್ಲಾಹು ಇನ್ನೂ ಹೆಚ್ಚು ಸನ್ಮಾರ್ಗವನ್ನು ದಯಪಾಲಿಸುತ್ತಾನೆ ಮತ್ತು ಅವರಿಗೆ ಅವರ ದೇವಭಯವನ್ನು ನೀಡುತ್ತಾನೆ.
عربی تفاسیر:
فَهَلْ یَنْظُرُوْنَ اِلَّا السَّاعَةَ اَنْ تَاْتِیَهُمْ بَغْتَةً ۚ— فَقَدْ جَآءَ اَشْرَاطُهَا ۚ— فَاَنّٰی لَهُمْ اِذَا جَآءَتْهُمْ ذِكْرٰىهُمْ ۟
ಅಂತ್ಯಸಮಯವು ಅವರ ಬಳಿಗೆ ಹಠಾತ್ತನೆ ಬರುವುದನ್ನಲ್ಲದೆ ಬೇರೆ ಏನನ್ನು ಅವರು ಕಾಯುತ್ತಿದ್ದಾರೆ? ಅದರ ಕೆಲವು ಚಿಹ್ನೆಗಳು ಈಗಾಗಲೇ ಬಂದಿವೆ. ನಂತರ ಅವರ ಬಳಿಗೆ ಅಂತ್ಯಸಮಯವು ಬಂದಾಗ ಅವರಿಗೆ ಉಪದೇಶವು ಪ್ರಯೋಜನಪಡುವುದಾದರೂ ಹೇಗೆ?
عربی تفاسیر:
فَاعْلَمْ اَنَّهٗ لَاۤ اِلٰهَ اِلَّا اللّٰهُ وَاسْتَغْفِرْ لِذَنْۢبِكَ وَلِلْمُؤْمِنِیْنَ وَالْمُؤْمِنٰتِ ؕ— وَاللّٰهُ یَعْلَمُ مُتَقَلَّبَكُمْ وَمَثْوٰىكُمْ ۟۠
ತಿಳಿಯಿರಿ! ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ನಿಮ್ಮ ಪಾಪಕ್ಕೆ ಕ್ಷಮೆಯಾಚಿಸಿರಿ. ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಕ್ಷಮೆಯಾಚಿಸಿರಿ. ಅಲ್ಲಾಹು ನಿಮ್ಮ ಚಲನವಲನಗಳನ್ನು ಮತ್ತು ವಾಸಸ್ಥಳವನ್ನು ತಿಳಿದಿದ್ದಾನೆ.
عربی تفاسیر:
 
معانی کا ترجمہ سورت: محمد
سورتوں کی لسٹ صفحہ نمبر
 
قرآن کریم کے معانی کا ترجمہ - کنڑ ترجمہ - حمزہ بتور - ترجمے کی لسٹ

محمد حمزہ بتور نے ترجمہ کیا۔ مرکز رواد الترجمہ کے زیر اشراف اسے اپڈیٹ کیا گیا ہے۔

بند کریں