قرآن کریم کے معانی کا ترجمہ - الترجمة الكنادية * - ترجمے کی لسٹ

XML CSV Excel API
Please review the Terms and Policies

معانی کا ترجمہ سورت: سورۂ طور   آیت:

ಸೂರ ಅತ್ತೂರ್

وَالطُّوْرِ ۟ۙ
ತೂರ್ ಪರ್ವತದ ಮೇಲಾಣೆ!
عربی تفاسیر:
وَكِتٰبٍ مَّسْطُوْرٍ ۟ۙ
ಲಿಖಿತಗೊಳಿಸಿದ ಗ್ರಂಥದ ಮೇಲಾಣೆ!
عربی تفاسیر:
فِیْ رَقٍّ مَّنْشُوْرٍ ۟ۙ
ತೆರೆದಿಟ್ಟ ತೊಗಲಿನ ಹಾಳೆಗಳಲ್ಲಿ.
عربی تفاسیر:
وَّالْبَیْتِ الْمَعْمُوْرِ ۟ۙ
ಬೈತುಲ್ ಮಅ‌ಮೂರ್‌ನ ಮೇಲಾಣೆ![1]
[1] ಇದು ಏಳನೇ ಆಕಾಶದಲ್ಲಿರುವ ಆರಾಧನಾಲಯವಾಗಿದ್ದು ದೇವದೂತರುಗಳು ಇಲ್ಲಿ ಆರಾಧನೆ ಮಾಡುತ್ತಾರೆ. ಇದು ದೇವದೂತರುಗಳಿಂದ ತುಂಬಿ ತುಳುಕುತ್ತಿರುತ್ತದೆ. ದಿನನಿತ್ಯ ಎಪ್ಪತ್ತು ಸಾವಿರ ದೇವದೂತರು ಇಲ್ಲಿಗೆ ಭೇಟಿ ನೀಡಿ ಆರಾಧನೆ ಮಾಡುತ್ತಾರೆ. ಇದರ ವಿಶೇಷತೆ ಏನೆಂದರೆ, ಒಮ್ಮೆ ಇಲ್ಲಿ ಆರಾಧನೆ ಮಾಡಿದ ದೇವದೂತರು ಪುನಃ ಇಲ್ಲಿಗೆ ಆರಾಧನೆ ಮಾಡಲು ಬರುವುದಿಲ್ಲ.
عربی تفاسیر:
وَالسَّقْفِ الْمَرْفُوْعِ ۟ۙ
ಎತ್ತರದ ಛಾವಣಿಯ (ಆಕಾಶದ) ಮೇಲಾಣೆ!
عربی تفاسیر:
وَالْبَحْرِ الْمَسْجُوْرِ ۟ۙ
ಹೊತ್ತಿ ಉರಿಸಲಾದ ಸಮುದ್ರದ ಮೇಲಾಣೆ!
عربی تفاسیر:
اِنَّ عَذَابَ رَبِّكَ لَوَاقِعٌ ۟ۙ
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಸಂಭವಿಸಿಯೇ ತೀರುತ್ತದೆ.
عربی تفاسیر:
مَّا لَهٗ مِنْ دَافِعٍ ۟ۙ
ಅದನ್ನು ತಡೆಯುವವರು ಯಾರೂ ಇಲ್ಲ.
عربی تفاسیر:
یَّوْمَ تَمُوْرُ السَّمَآءُ مَوْرًا ۟
ಆಕಾಶವು ಪ್ರಬಲವಾಗಿ ಓಲಾಡುವ ದಿನ.
عربی تفاسیر:
وَّتَسِیْرُ الْجِبَالُ سَیْرًا ۟ؕ
ಪರ್ವತಗಳು ಚಲಿಸತೊಡಗುವ ದಿನ.
عربی تفاسیر:
فَوَیْلٌ یَّوْمَىِٕذٍ لِّلْمُكَذِّبِیْنَ ۟ۙ
ಅಂದು ಸತ್ಯನಿಷೇಧಿಗಳಿಗೆ ವಿನಾಶವಿದೆ.
عربی تفاسیر:
الَّذِیْنَ هُمْ فِیْ خَوْضٍ یَّلْعَبُوْنَ ۟ۘ
ಅವರು ಯಾರೆಂದರೆ, ವ್ಯರ್ಥ ಮಾತುಗಳಲ್ಲಿ ಮಗ್ನವಾಗಿ ಆಟವಾಡುವವರು.
عربی تفاسیر:
یَوْمَ یُدَعُّوْنَ اِلٰی نَارِ جَهَنَّمَ دَعًّا ۟ؕ
ಅವರನ್ನು ಬಲವಾಗಿ ನರಕಾಗ್ನಿಗೆ ತಳ್ಳಲಾಗುವ ದಿನ!
عربی تفاسیر:
هٰذِهِ النَّارُ الَّتِیْ كُنْتُمْ بِهَا تُكَذِّبُوْنَ ۟
(ಅವರೊಂದಿಗೆ ಹೇಳಲಾಗುವುದು): “ಇದೇ ನೀವು ನಿಷೇಧಿಸುತ್ತಿದ್ದ ನರಕ.
عربی تفاسیر:
اَفَسِحْرٌ هٰذَاۤ اَمْ اَنْتُمْ لَا تُبْصِرُوْنَ ۟
ಇದೇನು ಮಾಟಗಾರಿಕೆಯೇ? ಅಥವಾ ನಿಮಗೆ ನೋಡಲು ಸಾಧ್ಯವಾಗುವುದಿಲ್ಲವೇ?
عربی تفاسیر:
اِصْلَوْهَا فَاصْبِرُوْۤا اَوْ لَا تَصْبِرُوْا ۚ— سَوَآءٌ عَلَیْكُمْ ؕ— اِنَّمَا تُجْزَوْنَ مَا كُنْتُمْ تَعْمَلُوْنَ ۟
ಅದನ್ನು ಪ್ರವೇಶಿಸಿರಿ. ಅದರಲ್ಲಿ ನೀವು ತಾಳ್ಮೆಯಿಂದಿದ್ದರೂ ಅಥವಾ ತಾಳ್ಮೆಗೆಟ್ಟರೂ ಪರಿಣಾಮ ಒಂದೇ. ನೀವು ಮಾಡಿದ ಕರ್ಮಗಳಿಗಾಗಿ ಮಾತ್ರ ನಿಮಗೆ ಪ್ರತಿಫಲ ನೀಡಲಾಗುವುದು.”
عربی تفاسیر:
اِنَّ الْمُتَّقِیْنَ فِیْ جَنّٰتٍ وَّنَعِیْمٍ ۟ۙ
ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ಅನುಗ್ರಹಗಳಲ್ಲಿರುವರು.
عربی تفاسیر:
فٰكِهِیْنَ بِمَاۤ اٰتٰىهُمْ رَبُّهُمْ ۚ— وَوَقٰىهُمْ رَبُّهُمْ عَذَابَ الْجَحِیْمِ ۟
ಅವರಿಗೆ ಅವರ ಪರಿಪಾಲಕನು (ಅಲ್ಲಾಹು) ನೀಡಿದ್ದರಲ್ಲಿ ಅವರು ಸಂತೋಷವಾಗಿರುವರು. ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಜ್ವಲಿಸುವ ನರಕ ಶಿಕ್ಷೆಯಿಂದ ಪಾರು ಮಾಡಿದ್ದಾನೆ.
عربی تفاسیر:
كُلُوْا وَاشْرَبُوْا هَنِیْٓـًٔا بِمَا كُنْتُمْ تَعْمَلُوْنَ ۟ۙ
(ಅವರೊಂದಿಗೆ ಹೇಳಲಾಗುವುದು): “ನೀವು ಮಾಡಿದ ಕರ್ಮಗಳ ಪ್ರತಿಫಲವಾಗಿ ನೀವು ಸಂತೃಪ್ತಿಯಿಂದ ತಿನ್ನಿರಿ ಮತ್ತು ಕುಡಿಯಿರಿ.”
عربی تفاسیر:
مُتَّكِـِٕیْنَ عَلٰی سُرُرٍ مَّصْفُوْفَةٍ ۚ— وَزَوَّجْنٰهُمْ بِحُوْرٍ عِیْنٍ ۟
ಅವರು ಸಾಲಾಗಿ ಜೋಡಿಸಿ ಮಂಚಗಳಲ್ಲಿ ಒರಗಿ ಕುಳಿತಿರುವರು. ನಾವು ಅವರಿಗೆ ಅರಳಿದ ಕಣ್ಣುಗಳುಳ್ಳ ಬೆಳ್ಳಗಿನ ತರುಣಿಯರನ್ನು ವಿವಾಹ ಮಾಡಿಕೊಡುವೆವು.
عربی تفاسیر:
وَالَّذِیْنَ اٰمَنُوْا وَاتَّبَعَتْهُمْ ذُرِّیَّتُهُمْ بِاِیْمَانٍ اَلْحَقْنَا بِهِمْ ذُرِّیَّتَهُمْ وَمَاۤ اَلَتْنٰهُمْ مِّنْ عَمَلِهِمْ مِّنْ شَیْءٍ ؕ— كُلُّ امْرِىۢ بِمَا كَسَبَ رَهِیْنٌ ۟
ಸತ್ಯವಿಶ್ವಾಸಿಗಳಾದವರು ಮತ್ತು ಸತ್ಯವಿಶ್ವಾಸದಲ್ಲಿ ಅವರನ್ನು ಹಿಂಬಾಲಿಸಿದ ಅವರ ಮಕ್ಕಳು—ನಾವು ಅವರ ಮಕ್ಕಳನ್ನು ಅವರ ಜೊತೆಗೆ ಸೇರಿಸುವೆವು. ನಾವು ಅವರ ಕರ್ಮಫಲಗಳಲ್ಲಿ ಏನೂ ಕಡಿಮೆ ಮಾಡುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಅವನು ಮಾಡಿದ ಕರ್ಮಗಳಿಗೆ ಅಡಮಾನವಾಗಿದ್ದಾನೆ.
عربی تفاسیر:
وَاَمْدَدْنٰهُمْ بِفَاكِهَةٍ وَّلَحْمٍ مِّمَّا یَشْتَهُوْنَ ۟
ನಾವು ಅವರಿಗೆ ಹಣ್ಣು-ಹಂಪಲುಗಳನ್ನು ಮತ್ತು ಅವರು ಬಯಸುವ ಮಾಂಸವನ್ನು ಯಥೇಷ್ಟವಾಗಿ ನೀಡುವೆವು.
عربی تفاسیر:
یَتَنَازَعُوْنَ فِیْهَا كَاْسًا لَّا لَغْوٌ فِیْهَا وَلَا تَاْثِیْمٌ ۟
ಅವರು ಪರಸ್ಪರ (ಸಂತೋಷದಿಂದ) ಒಬ್ಬರು ಇನ್ನೊಬ್ಬರ (ಶರಾಬಿನ) ಲೋಟವನ್ನು ಕಸಿಯುವರು. ಆ ಶರಾಬು ಕುಡಿಯುವುದರಿಂದ ವ್ಯರ್ಥ ಮಾತುಗಳಾಗಲಿ, ಅಪರಾಧಕೃತ್ಯಗಳಾಗಲಿ ಉಂಟಾಗುವುದಿಲ್ಲ.
عربی تفاسیر:
وَیَطُوْفُ عَلَیْهِمْ غِلْمَانٌ لَّهُمْ كَاَنَّهُمْ لُؤْلُؤٌ مَّكْنُوْنٌ ۟
ಅವರ ಸುತ್ತಮುತ್ತಲು ಅವರ ಪರಿಚಾರಕರಾದ ಹುಡುಗರು ಸುತ್ತುತ್ತಿರುವರು. ಅವರು ಜೋಪಾನವಾಗಿ ತೆಗೆದಿಡಲಾದ ಮುತ್ತುಗಳಂತಿರುವರು.
عربی تفاسیر:
وَاَقْبَلَ بَعْضُهُمْ عَلٰی بَعْضٍ یَّتَسَآءَلُوْنَ ۟
ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು.
عربی تفاسیر:
قَالُوْۤا اِنَّا كُنَّا قَبْلُ فِیْۤ اَهْلِنَا مُشْفِقِیْنَ ۟
ಅವರು ಹೇಳುವರು: “ನಿಶ್ಚಯವಾಗಿಯೂ ಇದಕ್ಕೆ ಮೊದಲು ನಾವು ನಮ್ಮ ಕುಟುಂಬದವರೊಡನೆ ಇದ್ದಾಗ ಭಯಪಡುತ್ತಿದ್ದೆವು.
عربی تفاسیر:
فَمَنَّ اللّٰهُ عَلَیْنَا وَوَقٰىنَا عَذَابَ السَّمُوْمِ ۟
ಅಲ್ಲಾಹು ನಮಗೆ ಬಹಳ ದೊಡ್ಡ ಉಪಕಾರವನ್ನು ಮಾಡಿದನು. ಅವನು ನಮ್ಮನ್ನು ತೀಕ್ಷ್ಣವಾಗಿ ಜ್ವಲಿಸುವ ನರಕ ಶಿಕ್ಷೆಯಿಂದ ಪಾರು ಮಾಡಿದನು.
عربی تفاسیر:
اِنَّا كُنَّا مِنْ قَبْلُ نَدْعُوْهُ ؕ— اِنَّهٗ هُوَ الْبَرُّ الرَّحِیْمُ ۟۠
ನಿಶ್ಚಯವಾಗಿಯೂ ಇದಕ್ಕೆ ಮೊದಲು ನಾವು ಅವನನ್ನು ಕರೆದು ಪ್ರಾರ್ಥಿಸುತ್ತಿದ್ದೆವು. ನಿಶ್ಚಯವಾಗಿಯೂ ಅವನು ಅತ್ಯಂತ ಉಪಕಾರ ಮಾಡುವವನು ಮತ್ತು ದಯೆ ತೋರುವವನಾಗಿದ್ದಾನೆ.”
عربی تفاسیر:
فَذَكِّرْ فَمَاۤ اَنْتَ بِنِعْمَتِ رَبِّكَ بِكَاهِنٍ وَّلَا مَجْنُوْنٍ ۟ؕ
(ಪ್ರವಾದಿಯವರೇ) ನೀವು ಉಪದೇಶ ನೀಡಿರಿ. ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹದಿಂದ ನೀವು ಜ್ಯೋತಿಷಿಯೋ ಮಾನಸಿಕ ಅಸ್ವಸ್ಥರೋ ಅಲ್ಲ.
عربی تفاسیر:
اَمْ یَقُوْلُوْنَ شَاعِرٌ نَّتَرَبَّصُ بِهٖ رَیْبَ الْمَنُوْنِ ۟
“ಇವನೊಬ್ಬ ಕವಿಯಾಗಿದ್ದಾನೆ. ಇವನಿಗೆ ಕೇಡುಗಾಲ (ಸಾವು) ಬರುವುದನ್ನು ನಾವು ಕಾಯುತ್ತಿದ್ದೇವೆ” ಎಂದು ಅವರು (ಸತ್ಯನಿಷೇಧಿಗಳು) ಹೇಳುತ್ತಿದ್ದಾರೆಯೇ?
عربی تفاسیر:
قُلْ تَرَبَّصُوْا فَاِنِّیْ مَعَكُمْ مِّنَ الْمُتَرَبِّصِیْنَ ۟ؕ
ಹೇಳಿರಿ: “ನೀವು ಕಾಯಿರಿ! ನಿಶ್ಚಯವಾಗಿಯೂ ನಾನೂ ನಿಮ್ಮೊಂದಿಗೆ ಕಾಯುವವರಲ್ಲಿ ಸೇರುವೆನು.”
عربی تفاسیر:
اَمْ تَاْمُرُهُمْ اَحْلَامُهُمْ بِهٰذَاۤ اَمْ هُمْ قَوْمٌ طَاغُوْنَ ۟ۚ
ಅವರ ಮನಸ್ಸು ಅವರಿಗೆ ಇದನ್ನೇ ಕಲಿಸುತ್ತದೆಯೇ? ಅಥವಾ ಅವರು ಅತಿರೇಕಿಗಳಾದ ಜನರಾಗಿದ್ದಾರೆಯೇ?
عربی تفاسیر:
اَمْ یَقُوْلُوْنَ تَقَوَّلَهٗ ۚ— بَلْ لَّا یُؤْمِنُوْنَ ۟ۚ
“ಅವನು ಇದನ್ನು ಸ್ವಯಂ ರಚಿಸಿದ್ದಾನೆ” ಎಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು ವಿಶ್ವಾಸವಿಡುವುದಿಲ್ಲ.
عربی تفاسیر:
فَلْیَاْتُوْا بِحَدِیْثٍ مِّثْلِهٖۤ اِنْ كَانُوْا صٰدِقِیْنَ ۟ؕ
ಅವರು ಸತ್ಯವನ್ನೇ ಹೇಳುತ್ತಿದ್ದರೆ ಇದರಂತಿರುವ ಒಂದು ವಚನವನ್ನು ಅವರು ರಚಿಸಿ ತರಲಿ.
عربی تفاسیر:
اَمْ خُلِقُوْا مِنْ غَیْرِ شَیْءٍ اَمْ هُمُ الْخٰلِقُوْنَ ۟ؕ
ಅವರು (ಯಾವುದೇ ಸೃಷ್ಟಿಕರ್ತನಿಲ್ಲದೆ) ಸ್ವಯಂ ಅಸ್ತಿತ್ವಕ್ಕೆ ಬಂದರೇ? ಅಥವಾ ಅವರೇ ಅವರ ಸೃಷ್ಟಿಕರ್ತರಾಗಿದ್ದಾರೆಯೇ?
عربی تفاسیر:
اَمْ خَلَقُوا السَّمٰوٰتِ وَالْاَرْضَ ۚ— بَلْ لَّا یُوْقِنُوْنَ ۟ؕ
ಅವರೇ ಭೂಮ್ಯಾಕಾಶಗಳನ್ನು ಸೃಷ್ಟಿಸಿದರೇ? ಅಲ್ಲ, ವಾಸ್ತವವಾಗಿ ಅವರು ದೃಢವಿಶ್ವಾಸವಿಡುವುದಿಲ್ಲ.
عربی تفاسیر:
اَمْ عِنْدَهُمْ خَزَآىِٕنُ رَبِّكَ اَمْ هُمُ الْمُصَۜیْطِرُوْنَ ۟ؕ
ನಿಮ್ಮ ಪರಿಪಾಲಕನ (ಅಲ್ಲಾಹನ) ಬೊಕ್ಕಸಗಳು ಅವರ ಬಳಿಯಲ್ಲಿವೆಯೇ? ಅಥವಾ ಅವರು (ಆ ಬೊಕ್ಕಸಗಳ) ನಿರ್ವಾಹಕರೇ?
عربی تفاسیر:
اَمْ لَهُمْ سُلَّمٌ یَّسْتَمِعُوْنَ فِیْهِ ۚ— فَلْیَاْتِ مُسْتَمِعُهُمْ بِسُلْطٰنٍ مُّبِیْنٍ ۟ؕ
ಅವರ ಬಳಿ ಒಂದು ಏಣಿಯಿದ್ದು ಅವರು ಅದನ್ನು ಏರಿ (ಆಕಾಶದ ಮಾತುಗಳನ್ನು) ಕಿವಿಗೊಟ್ಟು ಕೇಳುತ್ತಾರೆಯೇ? ಹಾಗಿದ್ದರೆ ಅವರಲ್ಲಿ ಕಿವಿಗೊಟ್ಟು ಕೇಳಿದ ವ್ಯಕ್ತಿ ಸ್ಪಷ್ಟ ಆಧಾರವನ್ನು ತರಲಿ.
عربی تفاسیر:
اَمْ لَهُ الْبَنٰتُ وَلَكُمُ الْبَنُوْنَ ۟ؕ
ಅಲ್ಲಾಹನಿಗೆ ಹೆಣ್ಣು ಮಕ್ಕಳು ಮತ್ತು ನಿಮಗೆ ಗಂಡು ಮಕ್ಕಳೇ?
عربی تفاسیر:
اَمْ تَسْـَٔلُهُمْ اَجْرًا فَهُمْ مِّنْ مَّغْرَمٍ مُّثْقَلُوْنَ ۟ؕ
ನೀವು ಅವರೊಡನೆ ಪ್ರತಿಫಲವನ್ನು ಕೇಳಿ ಅವರು (ಅದನ್ನು ನೀಡಲು ಸಾಧ್ಯವಾಗದೆ) ಸಾಲದ ಹೊರೆಯನ್ನು ಹೊರುತ್ತಿದ್ದಾರೆಯೇ?
عربی تفاسیر:
اَمْ عِنْدَهُمُ الْغَیْبُ فَهُمْ یَكْتُبُوْنَ ۟ؕ
ಅವರ ಬಳಿ ಅದೃಶ್ಯ ಜ್ಞಾನವಿದ್ದು ಅವರು ಅದನ್ನು ಬರೆಯುತ್ತಿದ್ದಾರೆಯೇ?
عربی تفاسیر:
اَمْ یُرِیْدُوْنَ كَیْدًا ؕ— فَالَّذِیْنَ كَفَرُوْا هُمُ الْمَكِیْدُوْنَ ۟ؕ
ಅವರು ಏನಾದರೂ ಪಿತೂರಿ ಮಾಡಲು ಬಯಸುತ್ತಿದ್ದಾರೆಯೇ? ಆದರೆ ಪಿತೂರಿಗೆ ಬಲಿಯಾಗುವವರು ಸತ್ಯನಿಷೇಧಿಗಳೇ ಆಗಿದ್ದಾರೆ.
عربی تفاسیر:
اَمْ لَهُمْ اِلٰهٌ غَیْرُ اللّٰهِ ؕ— سُبْحٰنَ اللّٰهِ عَمَّا یُشْرِكُوْنَ ۟
ಅವರಿಗೆ ಅಲ್ಲಾಹನ ಹೊರತು ಬೇರೆ ದೇವರಿದ್ದಾನೆಯೇ? ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.
عربی تفاسیر:
وَاِنْ یَّرَوْا كِسْفًا مِّنَ السَّمَآءِ سَاقِطًا یَّقُوْلُوْا سَحَابٌ مَّرْكُوْمٌ ۟
ಅವರು ಆಕಾಶದಿಂದ ಒಂದು ತುಣುಕು ಉದುರುವುದನ್ನು ಕಂಡರೆ, “ಅದು ಪದರ ಪದರವಾಗಿ ಪೇರಿಸಿಟ್ಟ ಮೋಡ” ಎಂದು ಹೇಳುತ್ತಾರೆ.
عربی تفاسیر:
فَذَرْهُمْ حَتّٰی یُلٰقُوْا یَوْمَهُمُ الَّذِیْ فِیْهِ یُصْعَقُوْنَ ۟ۙ
ಆದ್ದರಿಂದ ಅವರನ್ನು ಸ್ಮೃತಿ ತಪ್ಪುವಂತೆ ಮಾಡುವ ಅವರ ಆ ದಿನವನ್ನು ಭೇಟಿಯಾಗುವ ತನಕ ಅವರನ್ನು (ಅವರ ಪಾಡಿಗೆ) ಬಿಟ್ಟುಬಿಡಿ.
عربی تفاسیر:
یَوْمَ لَا یُغْنِیْ عَنْهُمْ كَیْدُهُمْ شَیْـًٔا وَّلَا هُمْ یُنْصَرُوْنَ ۟ؕ
ಆ ದಿನ ಅವರ ತಂತ್ರಗಾರಿಕೆಗಳು ಅವರಿಗೆ ಉಪಕಾರ ಮಾಡುವುದಿಲ್ಲ. ಅವರಿಗೆ ಸಹಾಯವೂ ದೊರೆಯುವುದಿಲ್ಲ.
عربی تفاسیر:
وَاِنَّ لِلَّذِیْنَ ظَلَمُوْا عَذَابًا دُوْنَ ذٰلِكَ وَلٰكِنَّ اَكْثَرَهُمْ لَا یَعْلَمُوْنَ ۟
ನಿಶ್ಚಯವಾಗಿಯೂ ಅಕ್ರಮಿಗಳಿಗೆ ಇದರ ಹೊರತಾಗಿ ಬೇರೆ ಶಿಕ್ಷೆಯೂ ಇದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
عربی تفاسیر:
وَاصْبِرْ لِحُكْمِ رَبِّكَ فَاِنَّكَ بِاَعْیُنِنَا وَسَبِّحْ بِحَمْدِ رَبِّكَ حِیْنَ تَقُوْمُ ۟ۙ
ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ತೀರ್ಮಾನವನ್ನು ತಾಳ್ಮೆಯಿಂದ ಕಾಯಿರಿ. ನಿಶ್ಚಯವಾಗಿಯೂ ನೀವು ನಮ್ಮ ಕಣ್ಣುಗಳ ಮುಂಭಾಗದಲ್ಲಿದ್ದೀರಿ. ನೀವು (ಬೆಳಗ್ಗೆ) ಎದ್ದೇಳುವಾಗ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ.
عربی تفاسیر:
وَمِنَ الَّیْلِ فَسَبِّحْهُ وَاِدْبَارَ النُّجُوْمِ ۟۠
ರಾತ್ರಿಯಲ್ಲೂ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ನಕ್ಷತ್ರಗಳು ಮರೆಯಾಗುವ ಸಮಯದಲ್ಲೂ ಸಹ.
عربی تفاسیر:
 
معانی کا ترجمہ سورت: سورۂ طور
سورتوں کی لسٹ صفحہ نمبر
 
قرآن کریم کے معانی کا ترجمہ - الترجمة الكنادية - ترجمے کی لسٹ

ترجمة معاني القرآن الكريم إلى اللغة الكنادية ترجمها محمد حمزة بتور.

بند کریں