Check out the new design

Қуръони Карим маъноларининг таржимаси - Каннадача таржима - Башир Майсури * - Таржималар мундарижаси


Маънолар таржимаси Сура: Наҳл   Оят:
وَقَالَ الَّذِیْنَ اَشْرَكُوْا لَوْ شَآءَ اللّٰهُ مَا عَبَدْنَا مِنْ دُوْنِهٖ مِنْ شَیْءٍ نَّحْنُ وَلَاۤ اٰبَآؤُنَا وَلَا حَرَّمْنَا مِنْ دُوْنِهٖ مِنْ شَیْءٍ ؕ— كَذٰلِكَ فَعَلَ الَّذِیْنَ مِنْ قَبْلِهِمْ ۚ— فَهَلْ عَلَی الرُّسُلِ اِلَّا الْبَلٰغُ الْمُبِیْنُ ۟
ಬಹುದೇವಾರಾಧಕರು ಹೇಳುತ್ತಾರೆ: ಅಲ್ಲಾಹನು ಇಚ್ಛಿಸಿರುತ್ತಿದ್ದರೆ ನಾವಾಗಲಿ, ನಮ್ಮ ಪೂರ್ವಜರಾಗಲಿ ಅವನ ಹೊರತು ಬೇರಾವುದನ್ನೂ ಆರಾಧಿಸುತ್ತಿರಲಿಲ್ಲ ಮತ್ತು ಅವನ ಆಜ್ಞೆಯ ಹೊರತು ನಾವೇನನ್ನೂ ನಿಷಿದ್ಧ ಮಾಡುತ್ತಿರಲಿಲ್ಲ. ಇವರ ಮುಂಚಿನವರೂ ಹೀಗೆ ಮಾಡಿದ್ದರು. ಸಂದೇಶವಾಹಕರ ಮೇಲಂತೂ ಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊರತು ಬೇರೇನಾದರೂ ಹೊಣೆಗಾರಿಕೆ ಇದೆಯೇ?
Арабча тафсирлар:
وَلَقَدْ بَعَثْنَا فِیْ كُلِّ اُمَّةٍ رَّسُوْلًا اَنِ اعْبُدُوا اللّٰهَ وَاجْتَنِبُوا الطَّاغُوْتَ ۚ— فَمِنْهُمْ مَّنْ هَدَی اللّٰهُ وَمِنْهُمْ مَّنْ حَقَّتْ عَلَیْهِ الضَّلٰلَةُ ؕ— فَسِیْرُوْا فِی الْاَرْضِ فَانْظُرُوْا كَیْفَ كَانَ عَاقِبَةُ الْمُكَذِّبِیْنَ ۟
ಪ್ರತಿಯೊಂದು ಸಮುದಾಯದಲ್ಲೂ ನಾವು ಓರ್ವ ಸಂದೇಶವಾಹಕನನ್ನು ಕಳುಹಿಸಿದ್ದೇವೆ: ಜನರೇ ಅಲ್ಲಾಹನ ಆರಾಧನೆಯನ್ನು ಮಾಡಿರಿ ಮತ್ತು ತಾಗೂತ್ (ಮಿಥ್ಯದೇವರು)ಗಳಿಂದ ದೂರವಿರಿ ಎಂದು(ಎAಬ ಸಂದೇಶದೊAದಿಗೆ) ಅವರಲ್ಲಿ ಕೆಲವರಿಗಂತು ಅಲ್ಲಾಹನು ಸನ್ಮಾರ್ಗ ತೋರಿದನು ಮತ್ತು ಇನ್ನು ಕೆಲವರ ಮೇಲೆ ಮಾರ್ಗ ಭ್ರಷ್ಟತೆಯು ಖಚಿತವಾಗಿಬಿಟ್ಟಿತು. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ ಸುಳ್ಳಾಗಿಸಿದವರ ಗತಿ ಏನಾಯಿತೆಂದು ನೋಡಿರಿ.
Арабча тафсирлар:
اِنْ تَحْرِصْ عَلٰی هُدٰىهُمْ فَاِنَّ اللّٰهَ لَا یَهْدِیْ مَنْ یُّضِلُّ وَمَا لَهُمْ مِّنْ نّٰصِرِیْنَ ۟
(ಓ ಪೈಗಂಬರರೇ) ನೀವು ಅವರ ಸನ್ಮಾಮಾರ್ಗಕ್ಕಾಗಿ ಎಷ್ಟೇ ಹಂಬಲಿಸಿದರೂ ಅಲ್ಲಾಹನು ತಾನು ಮಾರ್ಗ ಭ್ರಷ್ಟಗೊಳಿಸಿದವರಿಗೆ ಸನ್ಮಾರ್ಗ ತೋರುವುದಿಲ್ಲ ಮತ್ತು ಅವರ ಸಹಾಯಕರಾರು ಇರಲಾರರು.
Арабча тафсирлар:
وَاَقْسَمُوْا بِاللّٰهِ جَهْدَ اَیْمَانِهِمْ ۙ— لَا یَبْعَثُ اللّٰهُ مَنْ یَّمُوْتُ ؕ— بَلٰی وَعْدًا عَلَیْهِ حَقًّا وَّلٰكِنَّ اَكْثَرَ النَّاسِ لَا یَعْلَمُوْنَ ۟ۙ
ಮರಣ ಹೊಂದಿದವರನ್ನು ಅಲ್ಲಾಹನು ಜೀವಂತಗೊಳಿಸಿ ಎಬ್ಬಿಸುವುದಿಲ್ಲವೆಂದು ಅವರು ದೃಢ ಆಣೆ ಹಾಕಿ ಹೇಳುತ್ತಾರೆ. ಏಕಿಲ್ಲಾ; ಖಂಡಿತ ಇದಂತು ಅಲ್ಲಾಹನು ತನ್ನ ಮೇಲೆ ನಿರ್ಭಂಧಗೊಳಿಸಿದ ಒಂದು ವಾಗ್ದಾನವಾಗಿದೆ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
Арабча тафсирлар:
لِیُبَیِّنَ لَهُمُ الَّذِیْ یَخْتَلِفُوْنَ فِیْهِ وَلِیَعْلَمَ الَّذِیْنَ كَفَرُوْۤا اَنَّهُمْ كَانُوْا كٰذِبِیْنَ ۟
(ಪುನಃ ಜೀವಂತಗೊಳಿಸುವ) ಯಾವ ವಿಷಯದಲ್ಲಿ ಅವರು ವಿಭಿನ್ನತೆ ಹೊಂದಿರುವರೋ ಅದನ್ನು ಅಲ್ಲಾಹನು ಅವರಿಗೆ ಸ್ಪಷ್ಟಪಡಿಸಲಿಕ್ಕಾಗಿ ಮತ್ತು ಸತ್ಯನಿಷೇಧಿಗಳು ತಾವು ಸುಳ್ಳರಾಗಿದ್ದೇವೆಂಬುದನ್ನು ಅರಿಯಲಿಕ್ಕಾಗಿದೆ.
Арабча тафсирлар:
اِنَّمَا قَوْلُنَا لِشَیْءٍ اِذَاۤ اَرَدْنٰهُ اَنْ نَّقُوْلَ لَهٗ كُنْ فَیَكُوْنُ ۟۠
ನಾವು ಯಾವುದಾದರೂ ವಸ್ತುವನ್ನು ಬಯಸಿದರೆ ಅದಕ್ಕೆ 'ಆಗು' ಎಂದು ಮಾತ್ರ ಹೇಳುತ್ತೇವೆ. ಆಗಲೇ ಅದು ಆಗಿಬಿಡುತ್ತದೆ.
Арабча тафсирлар:
وَالَّذِیْنَ هَاجَرُوْا فِی اللّٰهِ مِنْ بَعْدِ مَا ظُلِمُوْا لَنُبَوِّئَنَّهُمْ فِی الدُّنْیَا حَسَنَةً ؕ— وَلَاَجْرُ الْاٰخِرَةِ اَكْبَرُ ۘ— لَوْ كَانُوْا یَعْلَمُوْنَ ۟ۙ
ಅಕ್ರಮಕ್ಕೊಳಗಾದ ನಂತರ ಯಾರು ಅಲ್ಲಾಹನ ಮಾರ್ಗದಲ್ಲಿ ನಾಡನ್ನು ತ್ಯಜಿಸಿರುವರೋ ನಾವು ಅವರಿಗೆ ಇಹಲೋಕದಲ್ಲಿ ಅತ್ಯುತ್ತಮವಾದ ನೆಲೆಯನ್ನು ದಯಪಾಲಿಸುವೆವು ಮತ್ತು ವಾಸ್ತವದಲ್ಲಿ ಪರಲೋಕದ ಪ್ರತಿಫಲವು ಅತ್ಯಂತ ದೊಡ್ಡದಾಗಿದೆ. ಅವರು ಅರಿಯುತ್ತಿದ್ದರೆ!
Арабча тафсирлар:
الَّذِیْنَ صَبَرُوْا وَعَلٰی رَبِّهِمْ یَتَوَكَّلُوْنَ ۟
ಅವರಾದರೂ ಸಹನೆ ವಹಿಸಿದವರು ಮತ್ತು ತಮ್ಮ ಪ್ರಭುವಿನ ಮೇಲೆಯೇ ಭರವಸೆ ಯನ್ನಿಸಿರಿದವರಾಗಿದ್ದಾರೆ.
Арабча тафсирлар:
 
Маънолар таржимаси Сура: Наҳл
Суралар мундарижаси Бет рақами
 
Қуръони Карим маъноларининг таржимаси - Каннадача таржима - Башир Майсури - Таржималар мундарижаси

Шайх Башир Майсури томонидан таржима қилинган. Руввадут Таржама маркази назорати остида ишлаб чиқилган.

Ёпиш