Check out the new design

Қуръони Карим маъноларининг таржимаси - Каннадача таржима - Башир Майсури * - Таржималар мундарижаси


Маънолар таржимаси Сура: Бақара   Оят:
وَاِنْ كُنْتُمْ عَلٰی سَفَرٍ وَّلَمْ تَجِدُوْا كَاتِبًا فَرِهٰنٌ مَّقْبُوْضَةٌ ؕ— فَاِنْ اَمِنَ بَعْضُكُمْ بَعْضًا فَلْیُؤَدِّ الَّذِی اؤْتُمِنَ اَمَانَتَهٗ وَلْیَتَّقِ اللّٰهَ رَبَّهٗ ؕ— وَلَا تَكْتُمُوا الشَّهَادَةَ ؕ— وَمَنْ یَّكْتُمْهَا فَاِنَّهٗۤ اٰثِمٌ قَلْبُهٗ ؕ— وَاللّٰهُ بِمَا تَعْمَلُوْنَ عَلِیْمٌ ۟۠
ನೀವು ಪ್ರಯಾಣದಲ್ಲಿದ್ದು ಬರಹಗಾರನು ನಿಮಗೆ ಸಿಗದಿದ್ದರೆ, ಏನಾದರೂ ಒತ್ತೆಯಿಟ್ಟುಕೊಳ್ಳಿರಿ. ಇನ್ನು ನಿಮ್ಮ ಪೈಕಿ ಒಬ್ಬನು ಇನ್ನೊಬ್ಬನ ಮೇಲೆ ನಂಬಿಕೆಯಿಟ್ಟು ವ್ಯವಹಾರ ಮಾಡಿದರೆ ಬೇರೆ ವಿಚಾರ. ಆದರೆ ಸಾಲಗಾರನು ಸಾಲವನ್ನು ಸಕಾಲಕ್ಕೆ ಮರಳಿಸಬೇಕಾಗಿದೆ. ಮತ್ತು ಅವನು ತನ್ನ ಪ್ರಭುವಾದ ಅಲ್ಲಾಹನನ್ನು ಭಯಪಡಲಿ ಮತ್ತು ಸಾಕ್ಷö್ಯವನ್ನು ಬಚ್ಚಿಡದಿರಲಿ. ಯಾರು ಅದನ್ನು ಬಚ್ಚಿಡುತ್ತಾನೋ ಅವನ ಹೃದಯವು ಪಾಪಗ್ರಸ್ತವಾಗುತ್ತದೆ. ಮತ್ತು ಅವನು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು.
Арабча тафсирлар:
لِلّٰهِ مَا فِی السَّمٰوٰتِ وَمَا فِی الْاَرْضِ ؕ— وَاِنْ تُبْدُوْا مَا فِیْۤ اَنْفُسِكُمْ اَوْ تُخْفُوْهُ یُحَاسِبْكُمْ بِهِ اللّٰهُ ؕ— فَیَغْفِرُ لِمَنْ یَّشَآءُ وَیُعَذِّبُ مَنْ یَّشَآءُ ؕ— وَاللّٰهُ عَلٰی كُلِّ شَیْءٍ قَدِیْرٌ ۟
ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ಸಕಲ ವಸ್ತುಗಳು ಅಲ್ಲಾಹನ ಒಡೆತನದಲ್ಲಿವೆ. ನಿಮ್ಮ ಮನಸ್ಸಿನಲ್ಲಿರುವುದನ್ನು ನೀವು ಬಹಿರಂಗಗೊಳಿಸಿದರೂ ಅಥವಾ ಬಚ್ಚಿಟ್ಟರೂ ಅಲ್ಲಾಹನು ಅದರ ಬಗ್ಗೆ ನಿಮ್ಮ ವಿಚಾರಣೆ ನಡೆಸುವನು. ಅನಂತರ ತಾನಿಚ್ಛಿಸುವವರನ್ನು ಅವನು ಕ್ಷಮಿಸುವನು ಮತ್ತು ತಾನಿಚ್ಛಿಸುವವರನ್ನು ಶಿಕ್ಷಿಸುವನು. ಅಲ್ಲಾಹನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
Арабча тафсирлар:
اٰمَنَ الرَّسُوْلُ بِمَاۤ اُنْزِلَ اِلَیْهِ مِنْ رَّبِّهٖ وَالْمُؤْمِنُوْنَ ؕ— كُلٌّ اٰمَنَ بِاللّٰهِ وَمَلٰٓىِٕكَتِهٖ وَكُتُبِهٖ وَرُسُلِهٖ ۫— لَا نُفَرِّقُ بَیْنَ اَحَدٍ مِّنْ رُّسُلِهٖ ۫— وَقَالُوْا سَمِعْنَا وَاَطَعْنَا غُفْرَانَكَ رَبَّنَا وَاِلَیْكَ الْمَصِیْرُ ۟
ಸಂದೇಶವಾಹಕರು ಅಲ್ಲಾಹನ ಕಡೆಯಿಂದ ತಮ್ಮೆಡೆಗೆ ಅವತೀರ್ಣಗೊಂಡಿರುವುದರಲ್ಲಿ ವಿಶ್ವಾಸವಿಟ್ಟಿರುವರು; ಮತ್ತು ಸತ್ಯವಿಶ್ವಾಸಿಗಳು ಸಹ ಅಲ್ಲಾಹನಲ್ಲೂ, ಅವನ ದೂತರಲ್ಲೂ, ಅವನ ಗ್ರಂಥಗಳಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಟ್ಟಿರುವರು. ಅವನ ಸಂದೇಶವಾಹಕರಲ್ಲಿ ಯಾರ ನಡುವೆಯು ತಾರತಮ್ಯ ತೋರುವುದಿಲ್ಲ; ನಾವು ಆಲಿಸಿದೆವು ಮತ್ತು ಅನುಸರಿಸಿದೆವು, ನಮ್ಮ ಪ್ರಭೂ, ನಾವು ನಿನ್ನಿಂದ ಪಾಪವಿಮೋಚನೆಯನ್ನು ಬೇಡುತ್ತೇವೆ ಮತ್ತು ನಮಗೆ ನಿನ್ನೆಡೆಗೇ ಮರಳಲಿಕ್ಕಿರುವುದು ಎಂದು ಅವರು ಹೇಳುತ್ತಾರೆ.
Арабча тафсирлар:
لَا یُكَلِّفُ اللّٰهُ نَفْسًا اِلَّا وُسْعَهَا ؕ— لَهَا مَا كَسَبَتْ وَعَلَیْهَا مَا اكْتَسَبَتْ ؕ— رَبَّنَا لَا تُؤَاخِذْنَاۤ اِنْ نَّسِیْنَاۤ اَوْ اَخْطَاْنَا ۚ— رَبَّنَا وَلَا تَحْمِلْ عَلَیْنَاۤ اِصْرًا كَمَا حَمَلْتَهٗ عَلَی الَّذِیْنَ مِنْ قَبْلِنَا ۚ— رَبَّنَا وَلَا تُحَمِّلْنَا مَا لَا طَاقَةَ لَنَا بِهٖ ۚ— وَاعْفُ عَنَّا ۥ— وَاغْفِرْ لَنَا ۥ— وَارْحَمْنَا ۥ— اَنْتَ مَوْلٰىنَا فَانْصُرْنَا عَلَی الْقَوْمِ الْكٰفِرِیْنَ ۟۠
ಅಲ್ಲಾಹನು ಯಾವ ವ್ಯಕ್ತಿಗೂ ಅವನ ಶಕ್ತಿಗೆ ಮೀರಿದ ಹೊಣೆಗಾರಿಕೆಯನ್ನು ಹೊರಿಸುವುದಿಲ್ಲ. ಸತ್ಕರ್ಮ ಮಾಡಿದವನ ಪ್ರತಿಫಲವು ಸ್ವತಃ ಅವನಿಗಿದೆ. ಕೆಡುಕನ್ನು ಮಾಡಿದವನ ದುಷ್ಫಲವು ಸ್ವತಃ ಅವನಿಗೇ ಇರುವುದು. ನಮ್ಮ ಪ್ರಭೂ, ನಾವು ಮರೆತಿದ್ದರೆ ಅಥವಾ ಪ್ರಮಾದವೆಸಗಿದ್ದರೆ ನಮ್ಮನ್ನು ಶಿಕ್ಷಿಸಬೇಡ. ನಮ್ಮ ಪ್ರಭೂ ನಮಗಿಂತ ಮುಂಚಿನವರ ಮೇಲೆ ನೀನು ಹೊರಿಸಿದಂತಹ ಭಾರವನ್ನು ನಮ್ಮ ಮೇಲೆ ಹೊರಿಸಬೇಡ. ನಮ್ಮ ಪ್ರಭು, ನಮಗೆ ಸಾಮರ್ಥ್ಯವಿಲ್ಲದಂತಹ ಭಾರವನ್ನು ನಮ್ಮ ಮೇಲೆ ಹೊರಿಸಬೇಡ ಮತ್ತು ನಮ್ಮನ್ನು ಮನ್ನಿಸು ನಮಗೆ ಕ್ಷಮೆ ನೀಡು, ಹಾಗೂ ನಮಗೆ ಕರುಣೆ ತೋರು. ನೀನೆ ನಮ್ಮ ಒಡೆಯನಾಗಿರುವೆ. ಆದ್ದರಿಂದ ಸತ್ಯನಿಷೇಧಿಗಳ ವಿರುದ್ದ ನೀನು ನಮಗೆ ವಿಜಯವನ್ನು ದಯಪಾಲಿಸು.
Арабча тафсирлар:
 
Маънолар таржимаси Сура: Бақара
Суралар мундарижаси Бет рақами
 
Қуръони Карим маъноларининг таржимаси - Каннадача таржима - Башир Майсури - Таржималар мундарижаси

Шайх Башир Майсури томонидан таржима қилинган. Руввадут Таржама маркази назорати остида ишлаб чиқилган.

Ёпиш