Check out the new design

Қуръони Карим маъноларининг таржимаси - Каннадача таржима - Башир Майсури * - Таржималар мундарижаси


Маънолар таржимаси Сура: Қасас   Оят:
وَلَمَّا تَوَجَّهَ تِلْقَآءَ مَدْیَنَ قَالَ عَسٰی رَبِّیْۤ اَنْ یَّهْدِیَنِیْ سَوَآءَ السَّبِیْلِ ۟
ಮತ್ತು ಅವರು ಮದ್‌ಯನ್ ಕಡೆಗೆ ತಿರುಗಿದಾಗ ಹೇಳಿದರು: ನನ್ನ ಪ್ರಭುವು ನನಗೆ ಋಜುವಾದ ಮಾರ್ಗವನ್ನು ತೋರಿಸುವನೆಂದು ನಾನು ನಿರೀಕ್ಷಿಸುತ್ತೇನೆ.
Арабча тафсирлар:
وَلَمَّا وَرَدَ مَآءَ مَدْیَنَ وَجَدَ عَلَیْهِ اُمَّةً مِّنَ النَّاسِ یَسْقُوْنَ ؗ۬— وَوَجَدَ مِنْ دُوْنِهِمُ امْرَاَتَیْنِ تَذُوْدٰنِ ۚ— قَالَ مَا خَطْبُكُمَا ؕ— قَالَتَا لَا نَسْقِیْ حَتّٰی یُصْدِرَ الرِّعَآءُ ٚ— وَاَبُوْنَا شَیْخٌ كَبِیْرٌ ۟
ಅವರು ಮದ್‌ಯನ್‌ನ ಬಾವಿಯ ಹತ್ತಿರ ತಲುಪಿದಾಗ ಜನರಲ್ಲಿನ ಒಂದು ಕೂಟವು ಅಲ್ಲಿ ನೀರು ಕುಡಿಸುತ್ತಿರುವುದಾಗಿ ಕಂಡರು ಮತ್ತು ಇಬ್ಬರು ಸ್ತಿçÃಯರು ದೂರ ನಿಂತು (ತಮ್ಮ ಜಾನುವಾರುಗಳನ್ನು) ತಡೆದು ನಿಲ್ಲಿಸುತ್ತಿರುವುದನ್ನು ಕಂಡರು ಅವರು (ಮೂಸಾ) ಅವರೊಡನೆ ಕೇಳಿದರು: ಈ ಕುರುಬರು ಮರಳಿಹೋಗುವ ತನಕ ನಾವು ನೀರು ಕುಡಿಸಲಾರೆವು ಮತ್ತು ನಮ್ಮ ತಂದೆಯು ಹಿರಿಯ ವಯಸ್ಸಿನ ವೃದ್ಧರಾಗಿರುವರು.
Арабча тафсирлар:
فَسَقٰی لَهُمَا ثُمَّ تَوَلّٰۤی اِلَی الظِّلِّ فَقَالَ رَبِّ اِنِّیْ لِمَاۤ اَنْزَلْتَ اِلَیَّ مِنْ خَیْرٍ فَقِیْرٌ ۟
ಆಗ ಅವರು ಅವರಿಗಾಗಿ ನೀರು ಕುಡಿಸಿದರು. ಅನಂತರ ಒಂದು ನೆರಳಿನ ಕಡೆಗೆ ಸರಿದು ನಿಂತರು ಮತ್ತು ಹೇಳಿದರು: ನನ್ನ ಪ್ರಭುವೇ, ನೀನು ನನ್ನೆಡೆಗೆ ಯಾವುದೇ ಒಳಿತನ್ನು ಇಳಿಸಿದರೂ ನಾನು ಅದರ ಅಪೇಕ್ಷಕನಾಗಿದ್ದೇನೆ.
Арабча тафсирлар:
فَجَآءَتْهُ اِحْدٰىهُمَا تَمْشِیْ عَلَی اسْتِحْیَآءٍ ؗ— قَالَتْ اِنَّ اَبِیْ یَدْعُوْكَ لِیَجْزِیَكَ اَجْرَ مَا سَقَیْتَ لَنَا ؕ— فَلَمَّا جَآءَهٗ وَقَصَّ عَلَیْهِ الْقَصَصَ ۙ— قَالَ لَا تَخَفْ ۫— نَجَوْتَ مِنَ الْقَوْمِ الظّٰلِمِیْنَ ۟
ಅವರಿಬ್ಬರ ಪೈಕಿ ಒಬ್ಬಳು ನಾಚುತ್ತಾ ಅವರೆಡೆಗೆ ನಡೆದು ಬಂದು ಹೇಳಿದಳು: ನೀವು ನಮಗಾಗಿ ನೀರು ಕುಡಿಸಿರುವುದರ ಪ್ರತಿಫಲವನ್ನು ನಿಮಗೆ ನೀಡಲೆಂದು ನನ್ನ ತಂದೆಯು ನಿಮ್ಮನ್ನು ಕರೆಯುತ್ತಿದ್ದಾರೆ. ಮೂಸಾ ಅವರಲ್ಲಿಗೆ ಹೋದರು ಮತ್ತು ತನ್ನ ವೃತ್ತಾಂತವನ್ನೆಲ್ಲಾ ಅವರ ಮುಂದೆ ವಿವರಿಸಿದರು. ಆಗ ಅವರು ಹೇಳಿದರು: ನೀವು ಹೆದರಬೇಡಿ, ಅಕ್ರಮಿ ಜನಾಂಗದಿAದ ನೀವು ರಕ್ಷಣೆ ಹೊಂದಿರುವಿರಿ.
Арабча тафсирлар:
قَالَتْ اِحْدٰىهُمَا یٰۤاَبَتِ اسْتَاْجِرْهُ ؗ— اِنَّ خَیْرَ مَنِ اسْتَاْجَرْتَ الْقَوِیُّ الْاَمِیْنُ ۟
ಅವರಿಬ್ಬರಲ್ಲಿ ಒಬ್ಬಳು ಹೇಳಿದಳು: ಅಪ್ಪಾಜಿ, ನೀವು ಅವರನ್ನು ನೌಕರನಾಗಿ ಇರಿಸಿಕೊಳ್ಳಿರಿ. ನೀವು ನೌಕರನಾಗಿ ಇರಿಸಿಕೊಳ್ಳುವವರಲ್ಲಿ ಅತ್ಯುತ್ತಮನು, ಬಲಿಷ್ಠನು, ಪ್ರಮಾಣಿಕನು ಆಗಿರಬೇಕು.
Арабча тафсирлар:
قَالَ اِنِّیْۤ اُرِیْدُ اَنْ اُنْكِحَكَ اِحْدَی ابْنَتَیَّ هٰتَیْنِ عَلٰۤی اَنْ تَاْجُرَنِیْ ثَمٰنِیَ حِجَجٍ ۚ— فَاِنْ اَتْمَمْتَ عَشْرًا فَمِنْ عِنْدِكَ ۚ— وَمَاۤ اُرِیْدُ اَنْ اَشُقَّ عَلَیْكَ ؕ— سَتَجِدُنِیْۤ اِنْ شَآءَ اللّٰهُ مِنَ الصّٰلِحِیْنَ ۟
ಆ ವೃದ್ಧ ವ್ಯಕ್ತಿ ಹೇಳಿದರು: ನಾನು ಎಂಟು ವರ್ಷಗಳ ಕಾಲ ನನ್ನ ಬಳಿ ನೌಕರಿ ಮಾಡುವ ಷರತ್ತಿನ ಮೇಲೆ ಈ ನನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ನಿಮಗೆ ಮದುವೆ ಮಾಡಿಕೊಡಲು ಇಚ್ಛಿಸುತ್ತಿದ್ದೇನೆ. ಇನ್ನು ನೀವು ಹತ್ತು ವರ್ಷಗಳನ್ನು ಪೂರ್ತಿ ಮಾಡಿದರೆ ಅದು ನಿಮ್ಮ ಕಡೆಯಿಂದ ಉಪಕಾರವಾಗಿರುತ್ತದೆ ಮತ್ತು ನಾನು ನಿಮ್ಮನ್ನು ಸಂಕಷ್ಟದಲ್ಲಿ ಬೀಳಿಸಲು ಎಂದಿಗೂ ಬಯಸಲಾರೆನು. ಅಲ್ಲಾಹನಿಚ್ಛಿಸಿದರೆ ನೀವು ನನ್ನನ್ನು ಸಜ್ಜನರಲ್ಲಿ ಕಾಣುವಿರಿ.
Арабча тафсирлар:
قَالَ ذٰلِكَ بَیْنِیْ وَبَیْنَكَ ؕ— اَیَّمَا الْاَجَلَیْنِ قَضَیْتُ فَلَا عُدْوَانَ عَلَیَّ ؕ— وَاللّٰهُ عَلٰی مَا نَقُوْلُ وَكِیْلٌ ۟۠
ಮೂಸಾ ಹೇಳಿದರು: ಇದು ನನ್ನ ಮತ್ತು ನಿಮ್ಮ ನಡುವೆ ಇರುವ ಒಪ್ಪಂದವಾಗಿದೆ. ಇವೆರಡರಲ್ಲಿ ಯಾವ ಕಾಲಾವಧಿಯನ್ನು ನಾನು ಪೂರ್ತಿಗೊಳಿಸಿದರೂ ನನ್ನ ಮೇಲೆ ಅತಿರೇಕ ನಡೆಯಬಾರದು.ನಾವು ಹೇಳುತ್ತಿರುವುದರ ಮೇಲೆ ಅಲ್ಲಾಹನು (ಸಾಕ್ಷಿಯಾಗಿ) ಕಾರ್ಯ ಸಾಧಕನಾಗಿದ್ದಾನೆ.
Арабча тафсирлар:
 
Маънолар таржимаси Сура: Қасас
Суралар мундарижаси Бет рақами
 
Қуръони Карим маъноларининг таржимаси - Каннадача таржима - Башир Майсури - Таржималар мундарижаси

Шайх Башир Майсури томонидан таржима қилинган. Руввадут Таржама маркази назорати остида ишлаб чиқилган.

Ёпиш