Check out the new design

Қуръони Карим маъноларининг таржимаси - Каннадача таржима - Башир Майсури * - Таржималар мундарижаси


Маънолар таржимаси Сура: Аъроф   Оят:
قَالُوْۤا اٰمَنَّا بِرَبِّ الْعٰلَمِیْنَ ۟ۙ
ಅವರು ಹೇಳಿದರು: ನಾವು ಸರ್ವಲೋಕಗಳ ಪ್ರಭುವಿನಲ್ಲಿ ವಿಶ್ವಾಸವಿಟ್ಟೆವು.
Арабча тафсирлар:
رَبِّ مُوْسٰی وَهٰرُوْنَ ۟
ಅವನು ಮೂಸಾ ಮತ್ತು ಹಾರೂನರ ಪ್ರಭು.
Арабча тафсирлар:
قَالَ فِرْعَوْنُ اٰمَنْتُمْ بِهٖ قَبْلَ اَنْ اٰذَنَ لَكُمْ ۚ— اِنَّ هٰذَا لَمَكْرٌ مَّكَرْتُمُوْهُ فِی الْمَدِیْنَةِ لِتُخْرِجُوْا مِنْهَاۤ اَهْلَهَا ۚ— فَسَوْفَ تَعْلَمُوْنَ ۟
ಫಿರ್‌ಔನ್ ಹೇಳಿದನು: ನಾನು ನಿಮಗೆ ಅನುಮತಿ ನೀಡುವುದಕ್ಕೆ ಮುಂಚೆಯೇ ನೀವು ವಿಶ್ವಾಸವಿಟ್ಟಿರಾ? ನಿಸ್ಸಂಶಯವಾಗಿಯು ಇದು ಈ ನಗರದ ವಾಸಿಗಳನ್ನು ಇಲ್ಲಿಂದ ಹೊರಗಟ್ಟಲು ನೀವು ಮಾಡಿದ ಒಳ ಸಂಚಾಗಿದೆ. ಇನ್ನು ಇದರ ಪರಿಣಾಮವು ನಿಮಗೆ ಸದ್ಯವೇ ಗೊತ್ತಾಗಲಿದೆ.
Арабча тафсирлар:
لَاُقَطِّعَنَّ اَیْدِیَكُمْ وَاَرْجُلَكُمْ مِّنْ خِلَافٍ ثُمَّ لَاُصَلِّبَنَّكُمْ اَجْمَعِیْنَ ۟
ಖಂಡಿತವಾಗಿಯು ನಾನು ನಿಮ್ಮ ಕೈಗಳನ್ನೂ ಮತ್ತು ಕಾಲುಗಳನ್ನೂ ವಿರುದ್ಧ ದಿಕ್ಕಿನಿಂದ ಕತ್ತರಿಸಿ ಅನಂತರ ನಿಮ್ಮೆಲ್ಲರನ್ನು ಶಿಲುಬೆಗೇರಿಸುವೆನು.
Арабча тафсирлар:
قَالُوْۤا اِنَّاۤ اِلٰی رَبِّنَا مُنْقَلِبُوْنَ ۟ۚ
ಅವರು ಉತ್ತರಿಸಿದರು: ನಾವಂತು ನಮ್ಮ ಪ್ರಭುವಿನ ಬಳಿಗೇ ಮರಳಲಿದ್ದೇವೆ.
Арабча тафсирлар:
وَمَا تَنْقِمُ مِنَّاۤ اِلَّاۤ اَنْ اٰمَنَّا بِاٰیٰتِ رَبِّنَا لَمَّا جَآءَتْنَا ؕ— رَبَّنَاۤ اَفْرِغْ عَلَیْنَا صَبْرًا وَّتَوَفَّنَا مُسْلِمِیْنَ ۟۠
ಮತ್ತು ನಮ್ಮ ಪ್ರಭುವಿನ ದೃಷ್ಟಾಂತಗಳು ನಮ್ಮ ಬಳಿಗೆ ಬಂದಾಗ ನಾವು ಅವುಗಳ ಮೇಲೆ ವಿಶ್ವಾಸವಿರಿಸಿದೆವು ಎಂಬುದನ್ನು ಬಿಟ್ಟರೆ ಇನ್ನಾವ ಕಾರಣಕ್ಕೂ ನೀನು ನಮ್ಮನ್ನು ಶಿಕ್ಷಿಸುತ್ತಿಲ್ಲ. ಓ ನಮ್ಮ ಪ್ರಭೂ, ನಮ್ಮ ಮೇಲೆ ನೀನು ಸಹನೆಯನ್ನು ಸುರಿಸು ಮತ್ತು ನಮ್ಮ ಜೀವವನ್ನು ಶರಣರಾಗಿರುವ ಸ್ಥಿತಿಯಲ್ಲಿ ವಶಪಡಿಸು.
Арабча тафсирлар:
وَقَالَ الْمَلَاُ مِنْ قَوْمِ فِرْعَوْنَ اَتَذَرُ مُوْسٰی وَقَوْمَهٗ لِیُفْسِدُوْا فِی الْاَرْضِ وَیَذَرَكَ وَاٰلِهَتَكَ ؕ— قَالَ سَنُقَتِّلُ اَبْنَآءَهُمْ وَنَسْتَحْیٖ نِسَآءَهُمْ ۚ— وَاِنَّا فَوْقَهُمْ قٰهِرُوْنَ ۟
ಫಿರ್‌ಔನ್‌ನ ಜನತೆಯ ಪ್ರಮುಖರು ಹೇಳಿದರು: ಭೂಮಿಯಲ್ಲಿ ಕ್ಷೆÆÃಭೆಯನ್ನುಂಟುಮಾಡುತ್ತಾ ಇರಲು, ನಿನ್ನನ್ನು ಹಾಗೂ ನಿನ್ನ ಆರಾಧ್ಯರನ್ನು ತೊರೆದು ಬಿಡಲು ನೀನು ಮೂಸಾ ಮತ್ತು ಅವರ ಜನರನ್ನು ಬಿಟ್ಟು ಬಿಡುವೆಯಾ? ಫಿರ್‌ಔನ್ ಹೇಳಿದನು: ನಾವು ಅವರ ಗಂಡು ಮಕ್ಕಳನ್ನು ಕೊಲ್ಲುವೆವು ಮತ್ತು ಅವರ ಸ್ತಿçÃಯರನ್ನು ಜೀವಂತವಾಗಿ ಬಿಟ್ಟುಬಿಡುವೆವು. ಮತ್ತು ಖಂಡಿತವಾಗಿಯು ನಾವು ಅವರ ಮೇಲೆ ಸರ್ವಾಧಿಕಾರವುಳ್ಳವರಾಗಿದ್ದೇವೆ.
Арабча тафсирлар:
قَالَ مُوْسٰی لِقَوْمِهِ اسْتَعِیْنُوْا بِاللّٰهِ وَاصْبِرُوْا ۚ— اِنَّ الْاَرْضَ لِلّٰهِ ۙ۫— یُوْرِثُهَا مَنْ یَّشَآءُ مِنْ عِبَادِهٖ ؕ— وَالْعَاقِبَةُ لِلْمُتَّقِیْنَ ۟
ಮೂಸಾ ತಮ್ಮ ಜನರೊಂದಿಗೆ ಹೇಳಿದರು: ನೀವು ಅಲ್ಲಾಹನೊಂದಿಗೆ ಸಹಾಯ ಬೇಡಿರಿ ಮತ್ತು ಸಹನೆಯನ್ನು ಪಾಲಿಸಿರಿ. ಖಂಡಿತವಾಗಿ ಭೂಮಿ ಅಲ್ಲಾಹನದ್ದಾಗಿದೆ. ಅವನು ತನ್ನ ದಾಸರ ಪೈಕಿ ತಾನಿಚ್ಛಿಸುವವರನ್ನು ಅದರ ವಾರಸುದಾರರನ್ನಾಗಿ ಮಾಡುವನು ಮತ್ತು ಅಂತಿಮ ಯಶಸ್ಸು ಅಲ್ಲಾಹನಲ್ಲಿ ಭಯಭಕ್ತಿ ಹೊಂದಿರುವ ಜನರಿಗಾಗಿರುತ್ತದೆ.
Арабча тафсирлар:
قَالُوْۤا اُوْذِیْنَا مِنْ قَبْلِ اَنْ تَاْتِیَنَا وَمِنْ بَعْدِ مَا جِئْتَنَا ؕ— قَالَ عَسٰی رَبُّكُمْ اَنْ یُّهْلِكَ عَدُوَّكُمْ وَیَسْتَخْلِفَكُمْ فِی الْاَرْضِ فَیَنْظُرَ كَیْفَ تَعْمَلُوْنَ ۟۠
ಅವರ ಜನಾಂಗದವರು ಹೇಳಿದರು: ನಿಮ್ಮ ಅಗಮನಕ್ಕೆ ಮೊದಲೂ ಹಾಗೂ ನಿಮ್ಮ ಆಗಮನದ ನಂತರವೂ ನಾವು ಹಿಂಸೆಗೊಳಗಾದೆವು. ಮೂಸಾ ಹೇಳಿದರು: ಅಲ್ಲಾಹನು ಶೀಘ್ರವೇ ನಿಮ್ಮ ಶತ್ರುವನ್ನು ನಾಶಗೊಳಿಸುವನು ಮತ್ತು ನಿಮ್ಮನ್ನು ಅವನು ಈ ಭೂಮಿಯ ಉತ್ತರಾಧಿಕಾರಿಗಳನ್ನಾಗಿ ಮಾಡುವನು. ಅನಂತರ ಅವನು ನಿಮ್ಮ ಕಾರ್ಯ ವೈಖರಿಯನ್ನು ನೋಡುವನು.
Арабча тафсирлар:
وَلَقَدْ اَخَذْنَاۤ اٰلَ فِرْعَوْنَ بِالسِّنِیْنَ وَنَقْصٍ مِّنَ الثَّمَرٰتِ لَعَلَّهُمْ یَذَّكَّرُوْنَ ۟
ಮತ್ತು ನಾವು ಫಿರ್‌ಔನನ ಜನರನ್ನು ಬರಗಾಲದಿಂದಲೂ, ಫಲಬೆಳೆಗಳ ಕೊರತೆಯಿಂದಲೂ ಪರೀಕ್ಷಿಸಿದೆವು; ಇದು ಅವರು ಉಪದೇಶ ಸ್ವೀಕರಿಸಲೆಂದಾಗಿತ್ತು.
Арабча тафсирлар:
 
Маънолар таржимаси Сура: Аъроф
Суралар мундарижаси Бет рақами
 
Қуръони Карим маъноларининг таржимаси - Каннадача таржима - Башир Майсури - Таржималар мундарижаси

Шайх Башир Майсури томонидан таржима қилинган. Руввадут Таржама маркази назорати остида ишлаб чиқилган.

Ёпиш