Check out the new design

《古兰经》译解 - 卡纳达语翻译 - 巴希尔·梅苏里。 * - 译解目录


含义的翻译 章: 呼德   段:
اَمْ یَقُوْلُوْنَ افْتَرٰىهُ ؕ— قُلْ فَاْتُوْا بِعَشْرِ سُوَرٍ مِّثْلِهٖ مُفْتَرَیٰتٍ وَّادْعُوْا مَنِ اسْتَطَعْتُمْ مِّنْ دُوْنِ اللّٰهِ اِنْ كُنْتُمْ صٰدِقِیْنَ ۟
ಅಥವಾ ಈ ಸತ್ಯನಿಷೇಧಿಗಳು ಕುರ್‌ಆನನ್ನು ಸ್ವತಃ ಪೈಗಂಬರರು ರಚಿಸಿರುತ್ತಾರೆ ಎಂದು ಆರೋಪಿಸುವರೇ ? ನೀವು ಉತ್ತರಿಸಿರಿ : ಹಾಗಿದ್ದರೆ ನೀವು ಅದರಲ್ಲಿರುವಂತಹ ಹತ್ತು ಅಧ್ಯಾಯಗಳನ್ನು ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತು ನಿಮಗೆ ಸಹಾಯಕ್ಕಾಗಿ ಕರೆಯಲು ಸಾಧ್ಯವಿದ್ದವರನೆಲ್ಲ ಕರೆದುಕೊಳ್ಳಿರಿ, ನೀವು ಸತ್ಯವಂತರಾಗಿದ್ದರೆ.
阿拉伯语经注:
فَاِلَّمْ یَسْتَجِیْبُوْا لَكُمْ فَاعْلَمُوْۤا اَنَّمَاۤ اُنْزِلَ بِعِلْمِ اللّٰهِ وَاَنْ لَّاۤ اِلٰهَ اِلَّا هُوَ ۚ— فَهَلْ اَنْتُمْ مُّسْلِمُوْنَ ۟
ಇನ್ನು ಅವರು ನಿಮಗೆ ಉತ್ತರ ನೀಡದಿದ್ದರೆ ಖಂಡಿತವಾಗಿಯೂ ಈ ಕುರ್‌ಆನ್ ಅಲ್ಲಾಹನ ಜ್ಞಾನದಿಂದಲೇ ಅವತೀರ್ಣವಾಗಿದೆಯೆಂದು ಮತ್ತು ಅಲ್ಲಾಹನ ಹೊರತು ಇನ್ಯಾರು ಆರಾಧ್ಯರಿಲ್ಲವೆಂದು ನೀವು ಅರಿತುಕೊಳ್ಳಿರಿ. ಇನ್ನಾದರೂ ನೀವು ಅಲ್ಲಾಹನಿಗೆ ಶರಣಾಗತರಾಗುವಿರಾ ?
阿拉伯语经注:
مَنْ كَانَ یُرِیْدُ الْحَیٰوةَ الدُّنْیَا وَزِیْنَتَهَا نُوَفِّ اِلَیْهِمْ اَعْمَالَهُمْ فِیْهَا وَهُمْ فِیْهَا لَا یُبْخَسُوْنَ ۟
ಯಾರು ಐಹಿಕ ಜೀವನ ಮತ್ತು ಅದರ ವೈಭವವನ್ನು ಬಯಸುತ್ತಾರೋ ನಾವು ಅವರ ಕರ್ಮಗಳ ಪ್ರತಿಫಲವನ್ನು ಇಲ್ಲೇ ಸಂಪೂರ್ಣವಾಗಿ ನೀಡುವೆವು ಮತ್ತು ಅವರಿಗೆ ಅದರಲ್ಲಿ ಸ್ವಲ್ಪವೂ ಕಡಿಮೆ ಮಾಡಲಾಗುವುದಿಲ್ಲ.
阿拉伯语经注:
اُولٰٓىِٕكَ الَّذِیْنَ لَیْسَ لَهُمْ فِی الْاٰخِرَةِ اِلَّا النَّارُ ۖؗ— وَحَبِطَ مَا صَنَعُوْا فِیْهَا وَبٰطِلٌ مَّا كَانُوْا یَعْمَلُوْنَ ۟
ಇಂಥವರಿಗೆ ಪರಲೋಕದಲ್ಲಿ ನರಕವಲ್ಲದೆ ಇನ್ನೇನೂ ಇಲ್ಲ . ಇವರು (ಸತ್ಯನಿಷೇಧಿಗಳು) ಇಲ್ಲಿ ಮಾಡಿದ್ದೆಲ್ಲವೂ ವ್ಯರ್ಥವಾಗಿಬಿಟ್ಟಿತ್ತು. ಮತ್ತು ಅವರ ಕರ್ಮಗಳೆಲ್ಲವೂ ನಿರರ್ಥಕವಾದವು.
阿拉伯语经注:
اَفَمَنْ كَانَ عَلٰی بَیِّنَةٍ مِّنْ رَّبِّهٖ وَیَتْلُوْهُ شَاهِدٌ مِّنْهُ وَمِنْ قَبْلِهٖ كِتٰبُ مُوْسٰۤی اِمَامًا وَّرَحْمَةً ؕ— اُولٰٓىِٕكَ یُؤْمِنُوْنَ بِهٖ ؕ— وَمَنْ یَّكْفُرْ بِهٖ مِنَ الْاَحْزَابِ فَالنَّارُ مَوْعِدُهٗ ۚ— فَلَا تَكُ فِیْ مِرْیَةٍ مِّنْهُ ۗ— اِنَّهُ الْحَقُّ مِنْ رَّبِّكَ وَلٰكِنَّ اَكْثَرَ النَّاسِ لَا یُؤْمِنُوْنَ ۟
ಒಬ್ಬ ವ್ಯಕ್ತಿಯು ತನ್ನ ಪ್ರಭುವಿನ ಕಡೆಯಿಂದ ಒಂದು ಸ್ಪಷ್ಟ ಆಧಾರದೊಂದಿಗೆ ಇದ್ದು ಅವನ ಜೊತೆಗೆ ಅಲ್ಲಾಹನ ಕಡೆಯ ಒಂದು ಸಾಕ್ಷಿಯೂ ಬಂದಿದ್ದು ಮತ್ತು ಇದಕ್ಕೆ ಮುಂಚೆ ಮೂಸಾರವರ ಗ್ರಂಥ ಮಾರ್ಗದರ್ಶಕವಾಗಿಯೂ, ಕೃಪೆಯಾಗಿಯೂ ಆಗಿರುವಾಗ (ಇಂತಹ ವ್ಯಕ್ತಿ ಮಿಥ್ಯವಾದಿಯಾಗಲು ಸಾಧ್ಯವೇ ?) ಇವರೇ ಇದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಆ ಗುಂಪುಗಳ ಪೈಕಿ ಇದರಲ್ಲಿ ನಿಷೇಧ ತಾಳುವ ಯಾರೇ ಆಗಲಿ ಅವರ ಅಂತಿಮ ವಾಗ್ದತ್ತ ನೆಲೆಯು ನರಕವಾಗಿರುತ್ತದೆ. ಇನ್ನು ನೀವು ಇದರಲ್ಲಿ (ಕುರ್‌ಆನಿನಲ್ಲಿ) ಯಾವುದೇ ಸಂದೇಹಕ್ಕೆ ಒಳಗಾಗದಿರಿ. ನಿಶ್ಚಯವಾಗಿಯೂ ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವಾಗಿದೆ. ಆದರೆ ಹೆಚ್ಚಿನ ಜನರು ವಿಶ್ವಾಸವಿರಿಸುವುದಿಲ್ಲ.
阿拉伯语经注:
وَمَنْ اَظْلَمُ مِمَّنِ افْتَرٰی عَلَی اللّٰهِ كَذِبًا ؕ— اُولٰٓىِٕكَ یُعْرَضُوْنَ عَلٰی رَبِّهِمْ وَیَقُوْلُ الْاَشْهَادُ هٰۤؤُلَآءِ الَّذِیْنَ كَذَبُوْا عَلٰی رَبِّهِمْ ۚ— اَلَا لَعْنَةُ اللّٰهِ عَلَی الظّٰلِمِیْنَ ۟ۙ
ಮತ್ತು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವರಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅವರು ತಮ್ಮ ಪ್ರಭುವಿನ ಮುಂದೆ ಹಾಜರುಪಡಿಸಲಾಗುವರು ಮತ್ತು ಸಾಕ್ಷಿಗಳು (ದೂತರು) ಹೇಳುವರು, ಇವರೇ ತಮ್ಮ ಪ್ರಭುವಿನ ಮೇಲೆ ಸುಳ್ಳು ಹೇಳಿದವರು. ಜಾಗ್ರತೆ! ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ.
阿拉伯语经注:
الَّذِیْنَ یَصُدُّوْنَ عَنْ سَبِیْلِ اللّٰهِ وَیَبْغُوْنَهَا عِوَجًا ؕ— وَهُمْ بِالْاٰخِرَةِ هُمْ كٰفِرُوْنَ ۟
ಇಂತಹವರೇ ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುತ್ತಾರೆ. ಇವರೇ ಪರಲೋಕದ ನಿಷೇಧಿಗಳಾಗಿದ್ದಾರೆ.
阿拉伯语经注:
 
含义的翻译 章: 呼德
章节目录 页码
 
《古兰经》译解 - 卡纳达语翻译 - 巴希尔·梅苏里。 - 译解目录

由巴希尔·梅苏里谢赫翻译。在立瓦德翻译中心的监督之下已完成开发。

关闭