Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አል-በቀራህ   አንቀጽ:
فَمَنْ خَافَ مِنْ مُّوْصٍ جَنَفًا اَوْ اِثْمًا فَاَصْلَحَ بَیْنَهُمْ فَلَاۤ اِثْمَ عَلَیْهِ ؕ— اِنَّ اللّٰهَ غَفُوْرٌ رَّحِیْمٌ ۟۠
ಇನ್ನು ಉಯಿಲುಗಾರನಿಂದ ಪಕ್ಷಪಾತ ಅಥವಾ ಪಾಪದ ನಿಮಿತ್ತ ಭಯಪಟ್ಟು ಯಾರಾದರೂ ಅವರ ನಡುವೆ ಸುಧಾರಣೆ ಮಾಡಿದರೆ ಅವನ ಮೇಲೆ ಯಾವುದೇ ದೋಷವಿರುವುದಿಲ್ಲ. ನಿಜವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
የአረብኛ ቁርኣን ማብራሪያ:
یٰۤاَیُّهَا الَّذِیْنَ اٰمَنُوْا كُتِبَ عَلَیْكُمُ الصِّیَامُ كَمَا كُتِبَ عَلَی الَّذِیْنَ مِنْ قَبْلِكُمْ لَعَلَّكُمْ تَتَّقُوْنَ ۟ۙ
ಓ ಸತ್ಯವಿಶ್ವಾಸಿಗಳೇ, ಉಪವಾಸ ವ್ರತವನ್ನು ನಿಮ್ಮ ಹಿಂದಿನವರ ಮೇಲೆ ಕಡ್ಡಾಯಗೊಳಿಸಲಾದಂತೆ ನಿಮ್ಮ ಮೇಲೂ ಕಡ್ಡಾಯಗೊಳಿಸಲಾಗಿದೆ. ನೀವು ಭಯಭಕ್ತಿ ಹೊಂದಲೆAದು.
የአረብኛ ቁርኣን ማብራሪያ:
اَیَّامًا مَّعْدُوْدٰتٍ ؕ— فَمَنْ كَانَ مِنْكُمْ مَّرِیْضًا اَوْ عَلٰی سَفَرٍ فَعِدَّةٌ مِّنْ اَیَّامٍ اُخَرَ ؕ— وَعَلَی الَّذِیْنَ یُطِیْقُوْنَهٗ فِدْیَةٌ طَعَامُ مِسْكِیْنٍ ؕ— فَمَنْ تَطَوَّعَ خَیْرًا فَهُوَ خَیْرٌ لَّهٗ ؕ— وَاَنْ تَصُوْمُوْا خَیْرٌ لَّكُمْ اِنْ كُنْتُمْ تَعْلَمُوْنَ ۟
ಬೆರಳೆಣಿಕೆಯ ಕೆಲವು ದಿನಗಳು ಮಾತ್ರವಾಗಿದೆ. ಇನ್ನು ನಿಮ್ಮಲ್ಲಿ ಯಾರಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅವನು ಇತರ ದಿನಗಳಲ್ಲಿ ಆ ಸಂಖ್ಯೆಯನ್ನು ಪೂರ್ತಿಗೊಳಿಸಲಿ ಮತ್ತು ಸಾಮರ್ಥ್ಯವಿಲ್ಲದೆ ಉಪವಾಸವಿರದವರೂ ಪ್ರಾಯಶ್ಚಿತವಾಗಿ ಒಬ್ಬ ನಿರ್ಗತಿಕನಿಗೆ ಆಹಾರವನ್ನು ನೀಡಲಿ. ಇನ್ನು ಯಾರು ಸ್ವಇಚ್ಛೆಯಿಂದ ಒಳಿತಿನಲ್ಲಿ ಮುಂದೆ ಸಾಗುತ್ತಾನೋ ಅದು ಅವನ ಪಾಲಿಗೆ ಉತ್ತಮವಾಗಿರುವುದು. ನೀವು ಪ್ರಯಾಸಪಟ್ಟಾದರೂ- ಉಪವಾಸ ಆಚರಿಸುವುದೇ ನಿಮಗೆ ಅತ್ಯುತ್ತಮವಾಗಿರುತ್ತದೆ. ನೀವು ಅರಿಯುಳ್ಳವರಾಗಿದ್ದರೆ.
የአረብኛ ቁርኣን ማብራሪያ:
شَهْرُ رَمَضَانَ الَّذِیْۤ اُنْزِلَ فِیْهِ الْقُرْاٰنُ هُدًی لِّلنَّاسِ وَبَیِّنٰتٍ مِّنَ الْهُدٰی وَالْفُرْقَانِ ۚ— فَمَنْ شَهِدَ مِنْكُمُ الشَّهْرَ فَلْیَصُمْهُ ؕ— وَمَنْ كَانَ مَرِیْضًا اَوْ عَلٰی سَفَرٍ فَعِدَّةٌ مِّنْ اَیَّامٍ اُخَرَ ؕ— یُرِیْدُ اللّٰهُ بِكُمُ الْیُسْرَ وَلَا یُرِیْدُ بِكُمُ الْعُسْرَ ؗ— وَلِتُكْمِلُوا الْعِدَّةَ وَلِتُكَبِّرُوا اللّٰهَ عَلٰی مَا هَدٰىكُمْ وَلَعَلَّكُمْ تَشْكُرُوْنَ ۟
ರಮe಼Áನ್ ತಿಂಗಳಲ್ಲೇ ಕುರ್‌ಆನ್ ಅವತೀರ್ಣಗೊಳಿಸಲಾಗಿದೆ. ಅದು ಸಕಲ ಜನರಿಗೆ ಮಾರ್ಗದರ್ಶನವಾಗಿಯೂ ಸನ್ಮಾರ್ಗ ಹಾಗೂ ಸತ್ಯಾಸತ್ಯತೆಗಳನ್ನು ಬೇರ್ಪಡಿಸುವ ಸುಸ್ಪಷ್ಟ ಆಧಾರ ಪ್ರಮಾಣದ ಮಾನದಂಡವಾಗಿದೆ. ಇನ್ನು ನಿಮ್ಮ ಪೈಕಿ ಯಾರು ಈ ತಿಂಗಳನ್ನು ಪಡೆಯುತ್ತಾನೋ ಅವನು ಉಪವಾಸ ಆಚರಿಸಲಿ. ಇನ್ನು ಯಾರಾದರೂ ರೋಗಿಯಾಗಿದ್ದರೆ ಇಲ್ಲವೇ ಪ್ರಯಾಣದಲ್ಲಿದ್ದರೇ ಅವನು ಬೇರೆ ದಿನಗಳಲ್ಲಿ ಉಪವಾಸದ ಸಂಖ್ಯೆಯನ್ನು ಪೂರ್ತಿಗೊಳಿಸಲಿ. ಅಲ್ಲಾಹನು ನಿಮಗೆ ಅನುಕೂಲತೆಯನ್ನು ಬಯಸುತ್ತಾನೆ ಹೊರತು ಕ್ಲಿಷ್ಟತೆಯನ್ನಲ್ಲ ಮತ್ತು ನೀವು ಸಂಖ್ಯೆಯನ್ನು ಪೂರ್ತಿಗೊಳಿಸಲ್ಲಿಕ್ಕಾಗಿ ಅಲ್ಲಾಹನು ನಿಮಗೆ ಸನ್ಮಾರ್ಗವನ್ನು ತೋರಿಸಿಕೊಟ್ಟ ಸಲುವಾಗಿ ನೀವು ಅವನ ಘನತೆಯನ್ನು ಘೋಷಿಸಲಿಕ್ಕಾಗಿ ಮತ್ತು ಕೃತಜ್ಞತೆ ಸಲ್ಲಿಸಲಿಕ್ಕಾಗಿ (ನಿಮಗೆ ಆದೇಶಿಸಲಾಗಿದೆ.) ಅವನು ಬಯಸುತ್ತಾನೆ.
የአረብኛ ቁርኣን ማብራሪያ:
وَاِذَا سَاَلَكَ عِبَادِیْ عَنِّیْ فَاِنِّیْ قَرِیْبٌ ؕ— اُجِیْبُ دَعْوَةَ الدَّاعِ اِذَا دَعَانِ فَلْیَسْتَجِیْبُوْا لِیْ وَلْیُؤْمِنُوْا بِیْ لَعَلَّهُمْ یَرْشُدُوْنَ ۟
ಓ ಪೈಗಂಬರರೇ ನನ್ನ ಬಗ್ಗೆ ನನ್ನ ದಾಸನು ನಿಮ್ಮೊಡನೆ ಕೇಳಿದರೆ ಹೇಳಿರಿ; ನಿಸ್ಸಂಶಯವಾಗಿಯೂ ನಾನು ಸಮೀಪದಲ್ಲಿದ್ದೇನೆ. ನನ್ನನ್ನು ಪ್ರಾರ್ಥಿಸುವಾಗ ಪ್ರಾರ್ಥಿಸುವವನ ಪ್ರಾರ್ಥನೆಗೆ ನಾನು ಓಗೊಡುತ್ತೇನೆ. ಆದ್ದರಿಂದ ಅವರು ನನ್ನ ಆದೇಶಗಳಿಗೆ ಓಗೂಡಲಿ ಹಾಗೂ ನನ್ನಲ್ಲಿ ವಿಶ್ವಾಸವಿರಿಸಲಿ. ಪ್ರಾಯಶಃ ಅವರು ಸನ್ಮಾರ್ಗ ಪಡೆಯಬಹುದು.
የአረብኛ ቁርኣን ማብራሪያ:
 
የይዘት ትርጉም ምዕራፍ: አል-በቀራህ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት