Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አል-በቀራህ   አንቀጽ:
اِنَّ الَّذِیْنَ اٰمَنُوْا وَالَّذِیْنَ هَادُوْا وَالنَّصٰرٰی وَالصّٰبِـِٕیْنَ مَنْ اٰمَنَ بِاللّٰهِ وَالْیَوْمِ الْاٰخِرِ وَعَمِلَ صَالِحًا فَلَهُمْ اَجْرُهُمْ عِنْدَ رَبِّهِمْ ۪ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟
ಯಾರು (ಬಾಹ್ಯವಾಗಿ) ವಿಶ್ವಾಸವಿಟ್ಟಿರುವರೋ ಯಹೂದರು, ಕ್ರೆöÊಸ್ತರು, ಸಾಬಿಯರು ಯಾರೇ ಆಗಿರಲಿ (ಅವರು ವಾಸ್ತವದಲ್ಲಿ) ಅಲ್ಲಾಹನಲ್ಲೂ ಅಂತ್ಯ ದಿನದಲ್ಲೂ ವಿಶ್ವಾಸವಿಟ್ಟು ಸತ್ಕರ್ಮವನ್ನು ಕೈಗೊಂಡರೆ ನಿಶ್ಚಯವಾಗಿಯೂ ಅವರಿಗೆ ಅವರ ಪ್ರತಿಫಲವು ಅವರ ಪ್ರಭುವಿನ ಬಳಿ ಇದೆ. ಮತ್ತು ಅವರ ಮೇಲೆ ಭಯವಾಗಲಿ ಮತ್ತು ಅವರಿಗೆ ವ್ಯಥೆಯಾಗಲಿ ಬಾದಿಸದು.
የአረብኛ ቁርኣን ማብራሪያ:
وَاِذْ اَخَذْنَا مِیْثَاقَكُمْ وَرَفَعْنَا فَوْقَكُمُ الطُّوْرَ ؕ— خُذُوْا مَاۤ اٰتَیْنٰكُمْ بِقُوَّةٍ وَّاذْكُرُوْا مَا فِیْهِ لَعَلَّكُمْ تَتَّقُوْنَ ۟
ನಾವು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿ ಹಿಡಿದು ನಿಮ್ಮಿಂದ (ಯಹೂದರಿಂದ) ಸಧೃಢ ಕರಾರನ್ನು ಪಡೆದುಕೊಂಡ ಸಂಧರ್ಭವನ್ನು ಸ್ಮರಿಸಿರಿ. ಆಗ ನಾವು ಹೇಳಿದೆವು ನಿಮಗೆ ದಯಪಾಲಿಸಿದ (ತೌರಾತ್ ಗ್ರಂಥವನ್ನು) ಸಧೃಢತೆಯಿಂದ ಹಿಡಿದುಕೊಳ್ಳಿರಿ. ಅದರಲ್ಲಿರುವ ವಿಷಯಗಳನ್ನು ಸ್ಮರಿಸಿರಿ. ನೀವು ರಕ್ಷಣೆ ಹೊಂದಬಹುದು.
የአረብኛ ቁርኣን ማብራሪያ:
ثُمَّ تَوَلَّیْتُمْ مِّنْ بَعْدِ ذٰلِكَ ۚ— فَلَوْلَا فَضْلُ اللّٰهِ عَلَیْكُمْ وَرَحْمَتُهٗ لَكُنْتُمْ مِّنَ الْخٰسِرِیْنَ ۟
ಆದರೆ ನೀವು ಅದರ ಬಳಿಕವು ವಿಮುಖರಾಗಿಬಿಟ್ಟಿರಿ, ನಂತರ ಅಲ್ಲಾಹನ ಅನುಗ್ರಹವು ಅವನ ಕಾರುಣ್ಯವು ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ನೀವು ನಷ್ಟ ಹೊಂದಿದವರಲ್ಲಿ ಆಗಿರುತ್ತಿದ್ದಿರಿ.
የአረብኛ ቁርኣን ማብራሪያ:
وَلَقَدْ عَلِمْتُمُ الَّذِیْنَ اعْتَدَوْا مِنْكُمْ فِی السَّبْتِ فَقُلْنَا لَهُمْ كُوْنُوْا قِرَدَةً خٰسِـِٕیْنَ ۟ۚ
ನಿಸ್ಸಂಶಯವಾಗಿಯು ನಿಮಗೆ ನಿಮ್ಮ ಪೈಕಿ ಶನಿವಾರದ ವಿಚಾರದಲ್ಲಿ ಮಿತಿ ಮೀರಿದವರ ಅರಿವಿದೆ ಮತ್ತು ನಾವು ಸಹ ಅವರಿಗೆ “ನೀವು ನಿಂದ್ಯ ಕೋತಿಗಳಾಗಿಬಿಡಿರಿ” ಎಂದು ಹೇಳಿದೆವು
የአረብኛ ቁርኣን ማብራሪያ:
فَجَعَلْنٰهَا نَكَالًا لِّمَا بَیْنَ یَدَیْهَا وَمَا خَلْفَهَا وَمَوْعِظَةً لِّلْمُتَّقِیْنَ ۟
ಹೀಗೆ ನಾವು ಅದನ್ನು ಗತಕಾಲದವರಿಗೂ, ನಂತರದ ಕಾಲದವರಿಗೂ ಒಂದು ಪಾಠವನ್ನಾಗಿಯೂ ಭಯ ಭಕ್ತಿಯುಳ್ಳವರಿಗೆ ಹಿತೋಪದೇಶವನ್ನಾಗಿಯೂ ಮಾಡಿ ಬಿಟ್ಟೆವು.
የአረብኛ ቁርኣን ማብራሪያ:
وَاِذْ قَالَ مُوْسٰی لِقَوْمِهٖۤ اِنَّ اللّٰهَ یَاْمُرُكُمْ اَنْ تَذْبَحُوْا بَقَرَةً ؕ— قَالُوْۤا اَتَتَّخِذُنَا هُزُوًا ؕ— قَالَ اَعُوْذُ بِاللّٰهِ اَنْ اَكُوْنَ مِنَ الْجٰهِلِیْنَ ۟
ಮೂಸ (ಅ) ತನ್ನ ಜನರೊಡನೆ ಅಲ್ಲಾಹನು ಒಂದು ಹಸುವನ್ನು ಬಲಿ ನೀಡಬೇಕೆಂದು ನಿಮಗೆ ಆದೇಶಿಸುತ್ತಿದ್ದಾನೆ ಎಂದು ಹೇಳಿದ ಸಂಧರ್ಭವನ್ನು ಸ್ಮರಿಸಿರಿ. ಅವರು ಹೇಳಿದರು ನೀವು ನಮ್ಮೊಂದಿಗೆ ತಮಾಷೆಯನ್ನು ಮಾಡುತ್ತಿರುವಿರಾ? ಮೂಸಾ(ಅ) ಹೇಳಿದರು; ನಾನು ಅಂತಹ ಅವಿವೇಕಿಯಾಗುವುದರಿಂದ ಅಲ್ಲಾಹನಲ್ಲಿ ಅಭಯ ಯಾಚಿಸುತ್ತೇನೆ.
የአረብኛ ቁርኣን ማብራሪያ:
قَالُوا ادْعُ لَنَا رَبَّكَ یُبَیِّنْ لَّنَا مَا هِیَ ؕ— قَالَ اِنَّهٗ یَقُوْلُ اِنَّهَا بَقَرَةٌ لَّا فَارِضٌ وَّلَا بِكْرٌ ؕ— عَوَانٌ بَیْنَ ذٰلِكَ ؕ— فَافْعَلُوْا مَا تُؤْمَرُوْنَ ۟
ಅವರು ಹೇಳಿದರು ಓ ಮೂಸಾ(ಅ) ನೀವು ನಿಮ್ಮ ಪ್ರಭುವಿನೊಡನೆ ನಮಗಾಗಿ ಪ್ರಾರ್ಥಿಸಿರಿ; ಅವನು ನಮಗೆ ಅದು ಹೇಗಿರಬೇಕೆಂದು ವಿವರಿಸಿ ಕೊಡಲಿ. ಅವರು ಹೇಳಿದರು; ಆ ಹಸುವು ಮುದಿಯಾಗದಿರಲಿ, ತೀರ ಎಳೆಯದ್ದಾಗಲಿ ಆಗಿರದೆ ಅವುಗಳೆರಡರ ನಡು ವಯಸ್ಸಿನ ಹದಿ ಹರೆಯದ್ದಾಗಿರಬೇಕು ಎಂದು ಹೇಳುತ್ತಾನೆ. ಇನ್ನು ನಿಮಗೆ ಆದೇಶ ನೀಡಲಾಗುತ್ತಿರುವುದನ್ನು ಮಾಡಿರಿ.
የአረብኛ ቁርኣን ማብራሪያ:
قَالُوا ادْعُ لَنَا رَبَّكَ یُبَیِّنْ لَّنَا مَا لَوْنُهَا ؕ— قَالَ اِنَّهٗ یَقُوْلُ اِنَّهَا بَقَرَةٌ صَفْرَآءُ ۙ— فَاقِعٌ لَّوْنُهَا تَسُرُّ النّٰظِرِیْنَ ۟
ಅವರು ಹೇಳಿದರು ಅದು ಯಾವ ಬಣ್ಣದ್ದಾಗಿರಬೇಕೆಂದು ತಿಳಿಸಲು ನೀವು ನಿಮ್ಮ ಪ್ರಭವಿನೊಡನೆ ಪ್ರಾರ್ಥಿಸಿರಿ ಎಂದರು. ಅವರು ಹೇಳಿದರು; ಆ ಹಸುವು ಹೊಂಬಣ್ಣದ್ದಾಗಿದ್ದು, ಪ್ರೇಕ್ಷಕರಿಗೆ ಮುದಗೊಳಿಸುವುದಂತಹದ್ದು ಆಗಿರಬೇಕೆಂದು ಅವನು ಹೇಳುತ್ತಾನೆ.
የአረብኛ ቁርኣን ማብራሪያ:
 
የይዘት ትርጉም ምዕራፍ: አል-በቀራህ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት