ಯಾರು (ಬಾಹ್ಯವಾಗಿ) ವಿಶ್ವಾಸವಿಟ್ಟಿರುವರೋ ಯಹೂದರು, ಕ್ರೆöÊಸ್ತರು, ಸಾಬಿಯರು ಯಾರೇ ಆಗಿರಲಿ (ಅವರು ವಾಸ್ತವದಲ್ಲಿ) ಅಲ್ಲಾಹನಲ್ಲೂ ಅಂತ್ಯ ದಿನದಲ್ಲೂ ವಿಶ್ವಾಸವಿಟ್ಟು ಸತ್ಕರ್ಮವನ್ನು ಕೈಗೊಂಡರೆ ನಿಶ್ಚಯವಾಗಿಯೂ ಅವರಿಗೆ ಅವರ ಪ್ರತಿಫಲವು ಅವರ ಪ್ರಭುವಿನ ಬಳಿ ಇದೆ. ಮತ್ತು ಅವರ ಮೇಲೆ ಭಯವಾಗಲಿ ಮತ್ತು ಅವರಿಗೆ ವ್ಯಥೆಯಾಗಲಿ ಬಾದಿಸದು.
ನಾವು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿ ಹಿಡಿದು ನಿಮ್ಮಿಂದ (ಯಹೂದರಿಂದ) ಸಧೃಢ ಕರಾರನ್ನು ಪಡೆದುಕೊಂಡ ಸಂಧರ್ಭವನ್ನು ಸ್ಮರಿಸಿರಿ. ಆಗ ನಾವು ಹೇಳಿದೆವು ನಿಮಗೆ ದಯಪಾಲಿಸಿದ (ತೌರಾತ್ ಗ್ರಂಥವನ್ನು) ಸಧೃಢತೆಯಿಂದ ಹಿಡಿದುಕೊಳ್ಳಿರಿ. ಅದರಲ್ಲಿರುವ ವಿಷಯಗಳನ್ನು ಸ್ಮರಿಸಿರಿ. ನೀವು ರಕ್ಷಣೆ ಹೊಂದಬಹುದು.
ಮೂಸ (ಅ) ತನ್ನ ಜನರೊಡನೆ ಅಲ್ಲಾಹನು ಒಂದು ಹಸುವನ್ನು ಬಲಿ ನೀಡಬೇಕೆಂದು ನಿಮಗೆ ಆದೇಶಿಸುತ್ತಿದ್ದಾನೆ ಎಂದು ಹೇಳಿದ ಸಂಧರ್ಭವನ್ನು ಸ್ಮರಿಸಿರಿ. ಅವರು ಹೇಳಿದರು ನೀವು ನಮ್ಮೊಂದಿಗೆ ತಮಾಷೆಯನ್ನು ಮಾಡುತ್ತಿರುವಿರಾ? ಮೂಸಾ(ಅ) ಹೇಳಿದರು; ನಾನು ಅಂತಹ ಅವಿವೇಕಿಯಾಗುವುದರಿಂದ ಅಲ್ಲಾಹನಲ್ಲಿ ಅಭಯ ಯಾಚಿಸುತ್ತೇನೆ.
ಅವರು ಹೇಳಿದರು ಓ ಮೂಸಾ(ಅ) ನೀವು ನಿಮ್ಮ ಪ್ರಭುವಿನೊಡನೆ ನಮಗಾಗಿ ಪ್ರಾರ್ಥಿಸಿರಿ; ಅವನು ನಮಗೆ ಅದು ಹೇಗಿರಬೇಕೆಂದು ವಿವರಿಸಿ ಕೊಡಲಿ. ಅವರು ಹೇಳಿದರು; ಆ ಹಸುವು ಮುದಿಯಾಗದಿರಲಿ, ತೀರ ಎಳೆಯದ್ದಾಗಲಿ ಆಗಿರದೆ ಅವುಗಳೆರಡರ ನಡು ವಯಸ್ಸಿನ ಹದಿ ಹರೆಯದ್ದಾಗಿರಬೇಕು ಎಂದು ಹೇಳುತ್ತಾನೆ. ಇನ್ನು ನಿಮಗೆ ಆದೇಶ ನೀಡಲಾಗುತ್ತಿರುವುದನ್ನು ಮಾಡಿರಿ.
ಅವರು ಹೇಳಿದರು ಅದು ಯಾವ ಬಣ್ಣದ್ದಾಗಿರಬೇಕೆಂದು ತಿಳಿಸಲು ನೀವು ನಿಮ್ಮ ಪ್ರಭವಿನೊಡನೆ ಪ್ರಾರ್ಥಿಸಿರಿ ಎಂದರು. ಅವರು ಹೇಳಿದರು; ಆ ಹಸುವು ಹೊಂಬಣ್ಣದ್ದಾಗಿದ್ದು, ಪ್ರೇಕ್ಷಕರಿಗೆ ಮುದಗೊಳಿಸುವುದಂತಹದ್ದು ಆಗಿರಬೇಕೆಂದು ಅವನು ಹೇಳುತ್ತಾನೆ.