للإطلاع على الموقع بحلته الجديدة

ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: البقرة   آية:
لَیْسَ الْبِرَّ اَنْ تُوَلُّوْا وُجُوْهَكُمْ قِبَلَ الْمَشْرِقِ وَالْمَغْرِبِ وَلٰكِنَّ الْبِرَّ مَنْ اٰمَنَ بِاللّٰهِ وَالْیَوْمِ الْاٰخِرِ وَالْمَلٰٓىِٕكَةِ وَالْكِتٰبِ وَالنَّبِیّٖنَ ۚ— وَاٰتَی الْمَالَ عَلٰی حُبِّهٖ ذَوِی الْقُرْبٰی وَالْیَتٰمٰی وَالْمَسٰكِیْنَ وَابْنَ السَّبِیْلِ ۙ— وَالسَّآىِٕلِیْنَ وَفِی الرِّقَابِ ۚ— وَاَقَامَ الصَّلٰوةَ وَاٰتَی الزَّكٰوةَ ۚ— وَالْمُوْفُوْنَ بِعَهْدِهِمْ اِذَا عٰهَدُوْا ۚ— وَالصّٰبِرِیْنَ فِی الْبَاْسَآءِ وَالضَّرَّآءِ وَحِیْنَ الْبَاْسِ ؕ— اُولٰٓىِٕكَ الَّذِیْنَ صَدَقُوْا ؕ— وَاُولٰٓىِٕكَ هُمُ الْمُتَّقُوْنَ ۟
ಪುಣ್ಯವು ನೀವು ನಿಮ್ಮ ಮುಖಗಳನ್ನು ಪೂರ್ವ ಹಾಗೂ ಪಶ್ಚಿಮಗಳ ದಿಕ್ಕುಗಳಿಗೆ ತಿರುಗಿಸುವುದರಲಿಲ್ಲ. ಆದರೆ ವಾಸ್ತವದಲ್ಲಿ ಪುಣ್ಯವು ಒಬ್ಬ ವ್ಯಕ್ತಿಯು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ, ದೇವದೂತರಲ್ಲೂ, ಗ್ರಂಥಗಳಲ್ಲೂ ವಿಶ್ವಾಸವಿರಿಸಿ ತನಗೆ ಪ್ರಿಯವಾದ ಸಂಪತ್ತನ್ನು ಆಪ್ತ ಸಂಬAಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ, ಪ್ರಯಾಣಿಕರಿಗೂ, ಬೇಡಿ ಬರುವವರಿಗೂ ನೀಡುವವನು, ಹಾಗೂ ಗುಲಾಮರನ್ನು ವಿಮೋಚಿಸಲಿಕ್ಕಾಗಿ ನೀಡುವವನು ಮತ್ತು ನಮಾಝ್ ಸಂಸ್ಥಾಪಿಸುವವನು, ಝಕಾತ್ ಪಾವತಿಸುವವನು, ವಚನ ಪಾಲಕನು ಮತ್ತು ದಟ್ಟದಾರಿದ್ರö್ಯದಲ್ಲೂ ರೋಗರುಜಿನಗಳಲ್ಲೂ, ಯುದ್ಧ ಸಂದರ್ಭದಲ್ಲೂ ಸಹನೆಯನ್ನು ಪಾಲಿಸುವವನು ಅವರೇ ಸತ್ಯಸಂಧರು ಹಾಗೂ ಅವರೇ ಭಯಭಕ್ತಿ ಹೊಂದಿದವರಾಗಿದ್ದಾರೆ.
التفاسير العربية:
یٰۤاَیُّهَا الَّذِیْنَ اٰمَنُوْا كُتِبَ عَلَیْكُمُ الْقِصَاصُ فِی الْقَتْلٰی ؕ— اَلْحُرُّ بِالْحُرِّ وَالْعَبْدُ بِالْعَبْدِ وَالْاُ بِالْاُ ؕ— فَمَنْ عُفِیَ لَهٗ مِنْ اَخِیْهِ شَیْءٌ فَاتِّبَاعٌ بِالْمَعْرُوْفِ وَاَدَآءٌ اِلَیْهِ بِاِحْسَانٍ ؕ— ذٰلِكَ تَخْفِیْفٌ مِّنْ رَّبِّكُمْ وَرَحْمَةٌ ؕ— فَمَنِ اعْتَدٰی بَعْدَ ذٰلِكَ فَلَهٗ عَذَابٌ اَلِیْمٌ ۟ۚ
ಓ ಸತ್ಯವಿಶ್ವಾಸಿಗಳೇ, (ಕೊಲೆ ಮುಕದ್ದಮೆಗಳಲ್ಲಿ ಅನ್ಯಾಯವಾಗಿ) ಕೊಲೆಗೀಡಾದವರ ಪ್ರತಿಕಾರ ಪಡೆಯುವುದನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಲಾಗಿದೆ ಕೊಲೆಗಾರನು ಸ್ವತಂತ್ರ ವ್ಯಕ್ತಿಯಾಗಿದ್ದರೆ, ಆ ಸ್ವತಂತ್ರ ವ್ಯಕ್ತಿಯನ್ನೇ ಕೊಲೆಗಾರನು ಗುಲಾಮನಾಗಿದ್ದರೆ ಆ ಗುಲಾಮನನ್ನೇ ಕೊಲೆಗಾರ, ಸ್ತಿçà ಆಗಿದ್ದರೆ ಆ ಸ್ತಿçÃಯನ್ನೇ, ಕೊಲ್ಲಲಾಗುವುದು. ಕೊಲೆಗೀಡಾದವರ ಸಹೋದರ (ವಾರಿಸುದಾರ) ನಿಂದ ಎನಾದರೂ ಕ್ಷಮೆ ನೀಡಲಾದರೆ ಅವನು ಸದಾಚಾರದೊಂದಿಗೆ ಅನುಸರಿಸಬೇಕು. ಮತ್ತು ಅವನಿಗೆ ರಕ್ತ ಪರಿಹಾರಧನವನ್ನು ನೀಡಬೇಕು. ಇದು ನಿಮ್ಮ ಪ್ರಭುವಿನ ಕಡೆಯ ಒಂದು ವಿನಾಯಿತಿ ಮತ್ತು ಕಾರುಣ್ಯವಾಗಿದೆ. ಇದಾದ ನಂತರವೂ ಯಾರು ಅತಿಕ್ರಮ ತೋರುತ್ತಾನೋ ಅವನಿಗೆ ವೇದನಾಜನಕ ಯಾತನೆಯಿರುವುದು.
التفاسير العربية:
وَلَكُمْ فِی الْقِصَاصِ حَیٰوةٌ یّٰۤاُولِی الْاَلْبَابِ لَعَلَّكُمْ تَتَّقُوْنَ ۟
ಓ ಬುದ್ದಿ ಜೀವಿಗಳೇ ನಿಮಗೆ ಪ್ರತಿಕಾರ ಕ್ರಮದಲ್ಲಿ ಜೀವನವಿದೆ ಇದರಿಂದ ನೀವು (ಅನ್ಯಾಯ ಕೊಲೆಯಿಂದ) ಸುರಕ್ಷಿತವಾಗಿರುವಿರಿ.
التفاسير العربية:
كُتِبَ عَلَیْكُمْ اِذَا حَضَرَ اَحَدَكُمُ الْمَوْتُ اِنْ تَرَكَ خَیْرَا ۖۚ— ١لْوَصِیَّةُ لِلْوَالِدَیْنِ وَالْاَقْرَبِیْنَ بِالْمَعْرُوْفِ ۚ— حَقًّا عَلَی الْمُتَّقِیْنَ ۟ؕ
ನಿಮ್ಮಲ್ಲಿ ಯಾರಿಗಾದರೂ ಮರಣಾಸನ್ನವಾದಾಗ ಅವನು ಸಂಪತ್ತು ಬಿಟ್ಟು ಹೋಗುವುದಾದರೆ ಮಾತಾಪಿತರಿಗೂ, ಆಪ್ತ ಸಂಬAಧಿಕರಿಗೂ ಸದಾಚಾರದೊಂದಿಗೆ ಉಯಿಲು ಮಾಡುವುದನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಲಾಗಿದೆ. ಇದು ಭಯಭಕ್ತಿಯುಳ್ಳವರ ಮೇಲೆ ಬಾಧ್ಯತೆಯಾಗಿದೆ.
التفاسير العربية:
فَمَنْ بَدَّلَهٗ بَعْدَ مَا سَمِعَهٗ فَاِنَّمَاۤ اِثْمُهٗ عَلَی الَّذِیْنَ یُبَدِّلُوْنَهٗ ؕ— اِنَّ اللّٰهَ سَمِیْعٌ عَلِیْمٌ ۟ؕ
ಅದನ್ನು ಆಲಿಸಿದ ನಂತರವೂ ಯಾರಾದರೂ ಅದನ್ನು ಬದಲಾಯಿಸಿದರೆ ಅದರ ಪಾಪವು ಅದನ್ನು ಬದಲಾಯಿಸಿದವನ ಮೇಲೆ ಮಾತ್ರ ಇರುವುದು. ವಾಸ್ತವದಲ್ಲಿ ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿದ್ದಾನೆ.
التفاسير العربية:
 
ترجمة معاني سورة: البقرة
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمها الشيخ بشير ميسوري. تم تطويرها بإشراف مركز رواد الترجمة.

إغلاق