للإطلاع على الموقع بحلته الجديدة

ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: البقرة   آية:
سَیَقُوْلُ السُّفَهَآءُ مِنَ النَّاسِ مَا وَلّٰىهُمْ عَنْ قِبْلَتِهِمُ الَّتِیْ كَانُوْا عَلَیْهَا ؕ— قُلْ لِّلّٰهِ الْمَشْرِقُ وَالْمَغْرِبُ ؕ— یَهْدِیْ مَنْ یَّشَآءُ اِلٰی صِرَاطٍ مُّسْتَقِیْمٍ ۟
ಸದ್ಯದಲ್ಲೇ ಜನರ ಪೈಕಿ ಮೂರ್ಖರು ಕೇಳುವರು; ಇವರು ಈ ಮೊದಲು ನಮಾಜಿನಲ್ಲಿ ಲಕ್ಷವಾಗಿರಿಸಿದ್ದ ಕಿಬ್ಲಾ ದಿಕ್ಕಿನಿಂದ ಇವರನ್ನು ಬೇರೆ ದಿಕ್ಕಿಗೆ ತಿರುಗಿಸಿರುವುದರ ಕಾರಣವೇನು? ಹೇಳಿರಿ ಪೂರ್ವ ಹಾಗೂ ಪಶ್ಚಿಮಗಳ ಒಡೆಯ ಅಲ್ಲಾಹನಾಗಿದ್ದಾನೆ. ಅವನು ತಾನಿಚ್ಛಿಸಿದವರನ್ನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
التفاسير العربية:
وَكَذٰلِكَ جَعَلْنٰكُمْ اُمَّةً وَّسَطًا لِّتَكُوْنُوْا شُهَدَآءَ عَلَی النَّاسِ وَیَكُوْنَ الرَّسُوْلُ عَلَیْكُمْ شَهِیْدًا ؕ— وَمَا جَعَلْنَا الْقِبْلَةَ الَّتِیْ كُنْتَ عَلَیْهَاۤ اِلَّا لِنَعْلَمَ مَنْ یَّتَّبِعُ الرَّسُوْلَ مِمَّنْ یَّنْقَلِبُ عَلٰی عَقِبَیْهِ ؕ— وَاِنْ كَانَتْ لَكَبِیْرَةً اِلَّا عَلَی الَّذِیْنَ هَدَی اللّٰهُ ؕ— وَمَا كَانَ اللّٰهُ لِیُضِیْعَ اِیْمَانَكُمْ ؕ— اِنَّ اللّٰهَ بِالنَّاسِ لَرَءُوْفٌ رَّحِیْمٌ ۟
ಹೀಗೆ ನಾವು ನಿಮ್ಮನ್ನು ಒಂದು ಸುಮಧ್ಯ (ಉತ್ತಮ) ಸಮುದಾಯವನ್ನಾಗಿ ಮಾಡಿದೆವು. ನೀವು ಜನರ ಮೇಲೆ ಸಾಕ್ಷಿಗಳಾಗುವ ಸಲುವಾಗಿ ಮತ್ತು ಸಂದೇಶವಾಹಕರು (ನಿಮ್ಮ ಮೇಲೆ ಸಾಕ್ಷಿಯಾಗುವ ಸಲುವಾಗಿ. ನೀವು ಈ ಮುಂಚೆ ಇದ್ದ ಕಿಬ್ಲಾ (ಕಾಬಃ) ದಿಕ್ಕನ್ನು ನಾವು ನಿಶ್ಚಯಿಸಿಕೊಟ್ಟಿರುವುದು (ಕಿಬ್ಲಾಃದ ಬದಲಾವಣೆಯು) ಸಂದೇಶವಾಹಕರನ್ನು ಅನುಸರಿಸುವವರು ಯಾರು ಮತ್ತು ವಿಮುಖರಾಗುವವರು ಯಾರೆಂದು ನಾವು ತಿಳಿಯುವ ಸಲುವಾಗಿದೆ. ಇದು ಕ್ಲಿಷ್ಟಕರ ಸಂಗತಿಯಾಗಿದೆ. ಆದರೆ ಇದು ಅಲ್ಲಾಹನು ಯಾರಿಗೆ ಸನ್ಮಾರ್ಗ ದಯಪಾಲಿಸುತ್ತಾನೋ ಅವರಿಗೆ ಕ್ಲಿಷ್ಟಕರವಲ್ಲ. ಅಲ್ಲಾಹನು ನಿಮ್ಮ ಸತ್ಯವಿಶ್ವಾಸವನ್ನು ವ್ಯರ್ಥಗೊಳಿಸುವುದಿಲ್ಲ. ಅವನು ಜನರೊಂದಿಗೆ ಕೃಪಾಳುವೂ, ಕರುಣಾನಿಧಿಯು ಆಗಿದ್ದಾನೆ.
التفاسير العربية:
قَدْ نَرٰی تَقَلُّبَ وَجْهِكَ فِی السَّمَآءِ ۚ— فَلَنُوَلِّیَنَّكَ قِبْلَةً تَرْضٰىهَا ۪— فَوَلِّ وَجْهَكَ شَطْرَ الْمَسْجِدِ الْحَرَامِ ؕ— وَحَیْثُ مَا كُنْتُمْ فَوَلُّوْا وُجُوْهَكُمْ شَطْرَهٗ ؕ— وَاِنَّ الَّذِیْنَ اُوْتُوا الْكِتٰبَ لَیَعْلَمُوْنَ اَنَّهُ الْحَقُّ مِنْ رَّبِّهِمْ ؕ— وَمَا اللّٰهُ بِغَافِلٍ عَمَّا یَعْمَلُوْنَ ۟
ಓ ಸಂದೇಶವಾಹಕರೇ, ನಿಮ್ಮ ಮುಖವು ಆಗಾಗ ಅಕಾಶದೆಡೆಗೆ ಹೊರಳುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಈಗ ಖಂಡಿತವಾಗಿಯೂ ನೀವು ಸಂತೃಪ್ತಿ ಪಡುವಂತಹ ಕಿಬ್ಲಾ ದಿಕ್ಕಿಗೆ ನಾವು ನಿಮ್ಮನ್ನು ತಿರುಗಿಸುತ್ತೇವೆ. ನೀವು ತಮ್ಮ ಮುಖವನ್ನು ಮಸ್ಜಿದುಲ್ ಹರಾಮ್‌ನ ದಿಕ್ಕಿಗೆ ತಿರುಗಿಸಿರಿ ಮತ್ತು ನೀವು ಎಲ್ಲೇ ಇದ್ದರೂ ಅದರ ದಿಕ್ಕಿಗೆ ನಿಮ್ಮ ಮುಖಗಳನ್ನು ತಿರುಗಿಸಿರಿ ಮತ್ತು ಗ್ರಂಥ ನೀಡಲಾದವರು. ಇದು ಕಿಬ್ಲಾಃದ ಬದಲಾವಣೆ ಅಲ್ಲಾಹನ ಕಡೆಯಿಂದ ಸತ್ಯವೆಂದು ಖಚಿತವಾಗಿ ತಿಳಿಯುತ್ತಾರೆ. ಮತ್ತು ಅವರು (ಸತ್ಯನಿಷೇಧಿಗಳು) ಮಾಡುತ್ತಿರುವ ಕೃತ್ಯಗಳ ಕುರಿತು ಅಲ್ಲಾಹನು ಅಲಕ್ಷö್ಯನಲ್ಲ.
التفاسير العربية:
وَلَىِٕنْ اَتَیْتَ الَّذِیْنَ اُوْتُوا الْكِتٰبَ بِكُلِّ اٰیَةٍ مَّا تَبِعُوْا قِبْلَتَكَ ۚ— وَمَاۤ اَنْتَ بِتَابِعٍ قِبْلَتَهُمْ ۚ— وَمَا بَعْضُهُمْ بِتَابِعٍ قِبْلَةَ بَعْضٍ ؕ— وَلَىِٕنِ اتَّبَعْتَ اَهْوَآءَهُمْ مِّنْ بَعْدِ مَا جَآءَكَ مِنَ الْعِلْمِ ۙ— اِنَّكَ اِذًا لَّمِنَ الظّٰلِمِیْنَ ۟ۘ
ನೀವೇನಾದರೂ ಸಕಲ ದೃಷ್ಟಾಂತವನ್ನು ಗ್ರಂಥ ನೀಡಲಾದವರಿಗೆ ನೀಡಿದರೂ ಅವರು ನಿಮ್ಮ ಕಿಬ್ಲಾಃ ದಿಕ್ಕನ್ನು ಅನುಸರಿಸಲಾರರು ಮತ್ತು ಈಗ ನಿಮಗೂ ಸಹ ಅವರ ಕಿಬ್ಲಾಃ ದಿಕ್ಕನ್ನು ಅನುಸರಿಸುವುದು ಯೋಗ್ಯವಲ್ಲ ಮತ್ತು ಯಹೂದಿಯರು ಮತ್ತು ಕ್ರೆöÊಸ್ತರು ಸಹ ಪರಸ್ಪರರ ಕಿಬ್ಲಾಃವನ್ನು ಅನುಸರಿಸುವವರಲ್ಲ ಮತ್ತು ನೀವೇನಾದರೂ ನಿಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ಅವರ ಸ್ವೇಚ್ಛೆಗಳನ್ನು ಅನುಸರಿಸಿದರೆ ನಿಜವಾಗಿಯು ನೀವು ಅಕ್ರಮಿಗಳಲ್ಲಾಗುವಿರಿ.
التفاسير العربية:
 
ترجمة معاني سورة: البقرة
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمها الشيخ بشير ميسوري. تم تطويرها بإشراف مركز رواد الترجمة.

إغلاق