Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አል-ማኢዳህ   አንቀጽ:
وَالَّذِیْنَ كَفَرُوْا وَكَذَّبُوْا بِاٰیٰتِنَاۤ اُولٰٓىِٕكَ اَصْحٰبُ الْجَحِیْمِ ۟
ಯಾರು ಸತ್ಯವನ್ನು ನಿರಾಕರಿಸಿ ಮತ್ತು ನಮ್ಮ ನಿಯಮಗಳನ್ನು ಸುಳ್ಳಾಗಿಸುತ್ತಾರೋ ಅವರೇ ನರಕವಾಸಿಗಳಾಗಿದ್ದಾರೆ.
የአረብኛ ቁርኣን ማብራሪያ:
یٰۤاَیُّهَا الَّذِیْنَ اٰمَنُوا اذْكُرُوْا نِعْمَتَ اللّٰهِ عَلَیْكُمْ اِذْ هَمَّ قَوْمٌ اَنْ یَّبْسُطُوْۤا اِلَیْكُمْ اَیْدِیَهُمْ فَكَفَّ اَیْدِیَهُمْ عَنْكُمْ ۚ— وَاتَّقُوا اللّٰهَ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟۠
ಓ ಸತ್ಯವಿಶ್ವಾಸಿಗಳೇ, ಒಂದು ಜನತೆ ನಿಮ್ಮ ಮೇಲೆ ಕೈ ಮಾಡಲು ಮುಂದಾದಾಗ ಅವರ ಕೈಗಳು ನಿಮ್ಮ ಮೇಲೆ ಎರಗದಂತೆ ತಡೆಯುವ ಮೂಲಕ ಅಲ್ಲಾಹನು ನಿಮ್ಮ ಮೇಲೆ ಮಾಡಿದ ಅನುಗ್ರಹವನ್ನು ಸ್ಮರಿಸಿರಿ. ನೀವು ಅಲ್ಲಾಹನನ್ನು ಭಯಪಡುತ್ತಿರಿ. ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆ ಭರವಸೆಯನ್ನಿಡಲಿ.
የአረብኛ ቁርኣን ማብራሪያ:
وَلَقَدْ اَخَذَ اللّٰهُ مِیْثَاقَ بَنِیْۤ اِسْرَآءِیْلَ ۚ— وَبَعَثْنَا مِنْهُمُ اثْنَیْ عَشَرَ نَقِیْبًا ؕ— وَقَالَ اللّٰهُ اِنِّیْ مَعَكُمْ ؕ— لَىِٕنْ اَقَمْتُمُ الصَّلٰوةَ وَاٰتَیْتُمُ الزَّكٰوةَ وَاٰمَنْتُمْ بِرُسُلِیْ وَعَزَّرْتُمُوْهُمْ وَاَقْرَضْتُمُ اللّٰهَ قَرْضًا حَسَنًا لَّاُكَفِّرَنَّ عَنْكُمْ سَیِّاٰتِكُمْ وَلَاُدْخِلَنَّكُمْ جَنّٰتٍ تَجْرِیْ مِنْ تَحْتِهَا الْاَنْهٰرُ ۚ— فَمَنْ كَفَرَ بَعْدَ ذٰلِكَ مِنْكُمْ فَقَدْ ضَلَّ سَوَآءَ السَّبِیْلِ ۟
ಮತ್ತು ಅಲ್ಲಾಹನು ಇಸ್ರಾಯೀಲ್ ಸಂತತಿಗಳೊAದಿಗೆ ದೃಢ ಕರಾರು ಪಡೆದನು ಮತ್ತು ಅವರಿಂದಲೇ ಹನ್ನೆರಡು ಜನರನ್ನು ನಾಯಕರನ್ನಾಗಿ ನಿಯೋಗಿಸಿದನು ಮತ್ತು ಅಲ್ಲಾಹನು ಹೇಳಿದನು: ಖಂಡಿತವಾಗಿಯು ನಾನು ನಿಮ್ಮೊಂದಿಗಿದ್ದೇನೆ. ನೀವು ನಮಾಝನ್ನು ಸಂಸ್ಥಾಪಿಸುತ್ತಿದ್ದರೆ, ಝಕಾತನ್ನು ನೀಡುತ್ತಿದ್ದರೆ, ನನ್ನ ಸಂದೇಶವಾಹಕರಲ್ಲಿ ವಿಶ್ವಾಸವಿಡುತ್ತಿದ್ದರೆ, ಅವರಿಗೆ ಸಹಕಾರ ನೀಡುತ್ತಿದ್ದರೆ ಮತ್ತು ಅಲ್ಲಾಹನಿಗೆ ಉತ್ತಮವಾದ ಸಾಲವನ್ನು ನೀಡುತ್ತಿದ್ದರೆ ಖಂಡಿತವಾಗಿಯು ನಾನು ನಿಮ್ಮ ಪಾಪಗಳನ್ನು ಅಳಿಸುವೆನು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುವ ಸ್ವರ್ಗೋದ್ಯಾನಗಳೆಡೆಗೆ ನಿಮ್ಮನ್ನು ಕೊಂಡೊಯ್ಯುವೆನು. ಇನ್ನು ಈ ಕರಾರಿನ ನಂತರವೂ ನಿಮ್ಮ ಪೈಕಿ ಯಾರು ಧರ್ಮಧಿಕ್ಕಾರಿಯಾಗುತ್ತಾನೋ ಅವನು ನೇರ ಮಾರ್ಗದಿಂದ ವ್ಯತಿಚಲಿಸಿದವನಾಗಿದ್ದಾನೆ.
የአረብኛ ቁርኣን ማብራሪያ:
فَبِمَا نَقْضِهِمْ مِّیْثَاقَهُمْ لَعَنّٰهُمْ وَجَعَلْنَا قُلُوْبَهُمْ قٰسِیَةً ۚ— یُحَرِّفُوْنَ الْكَلِمَ عَنْ مَّوَاضِعِهٖ ۙ— وَنَسُوْا حَظًّا مِّمَّا ذُكِّرُوْا بِهٖ ۚ— وَلَا تَزَالُ تَطَّلِعُ عَلٰی خَآىِٕنَةٍ مِّنْهُمْ اِلَّا قَلِیْلًا مِّنْهُمْ فَاعْفُ عَنْهُمْ وَاصْفَحْ ؕ— اِنَّ اللّٰهَ یُحِبُّ الْمُحْسِنِیْنَ ۟
ತರುವಾಯ ಅವರ ಕರಾರು ಉಲ್ಲಂಘನೆಯ ನಿಮಿತ್ತ ನಾವು ಅವರ ಮೇಲೆ ನಮ್ಮ ಶಾಪವನ್ನು ಎರಗಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ಗ್ರಂಥ ವಾಕ್ಯಗಳನ್ನು ಅವುಗಳ ಸ್ಥಾನದಿಂದ ಬದಲಾಯಿಸುತ್ತಾರೆ. ಮತ್ತು ಅವರು ತಮಗೆ ಉಪದೇಶ ನೀಡಲಾದುದರಲ್ಲಿ ದೊಡ್ಡ ಅಂಶವನ್ನು ಮರೆತುಬಿಟ್ಟರು. ಅವರ ಪೈಕಿ ಕೆಲವರ ಹೊರತು ಒಂದಲ್ಲ ಒಂದು ವಂಚನೆಯ ಸುದ್ದಿಯು ನಿಮಗೆ ಲಭಿಸುತ್ತಲೇ ಇರುತ್ತದೆ. ನೀವು ಅವರನ್ನು ಕ್ಷಮಿಸಿರಿ ಮತ್ತು ಅವರನ್ನು ಮನ್ನಿಸಿರಿ. ಖಂಡಿತವಾಗಿಯು ಅಲ್ಲಾಹನು ಸದಾಚಾರವೆಸಗುವವರನ್ನು ಮೆಚ್ಚುತ್ತಾನೆ.
የአረብኛ ቁርኣን ማብራሪያ:
 
የይዘት ትርጉም ምዕራፍ: አል-ማኢዳህ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተርጓሚ ሸይኽ በሺር መይሶሪ ፤ በሩዋድ የትርጉም ማዕከል ተቆጣጣሪነት ማሻሻያ ተደርጎበታል።

መዝጋት