Check out the new design

የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ * - የትርጉሞች ማዉጫ


የይዘት ትርጉም ምዕራፍ: አል-ማኢዳህ   አንቀጽ:
قَالُوْا یٰمُوْسٰۤی اِنَّا لَنْ نَّدْخُلَهَاۤ اَبَدًا مَّا دَامُوْا فِیْهَا فَاذْهَبْ اَنْتَ وَرَبُّكَ فَقَاتِلَاۤ اِنَّا هٰهُنَا قٰعِدُوْنَ ۟
ಆಗ ಅವರು ಹೇಳಿದರು: ಓ ಮೂಸಾ, ಅವರು ಅಲ್ಲಿರುವವರೆಗೆ ನಾವು ಎಂದೂ ಅದನ್ನು ಪ್ರವೇಶಿಸುವುದಿಲ್ಲ. ಆದ್ದರಿಂದ ನೀವು ಮತ್ತು ನಿಮ್ಮ ಪ್ರಭು ಹೋಗಿ ಯುದ್ಧ ಮಾಡಿರಿ. ನಾವು ಇಲ್ಲೆ ಕುಳಿತುಕೊಂಡಿರುತ್ತೇವೆ.
የአረብኛ ቁርኣን ማብራሪያ:
قَالَ رَبِّ اِنِّیْ لَاۤ اَمْلِكُ اِلَّا نَفْسِیْ وَاَخِیْ فَافْرُقْ بَیْنَنَا وَبَیْنَ الْقَوْمِ الْفٰسِقِیْنَ ۟
ಆಗ ಅವರು (ಮೂಸಾ) ಪ್ರಾರ್ಥಿಸಿದರು: ಓ ನನ್ನ ಪ್ರಭು, ನನ್ನ ಮತ್ತು ನನ್ನ ಸಹೋದರನ (ಹಾರೂನ್) ಹೊರತು ಇನ್ನಾರ ಮೇಲೂ ನನಗೆ ನಿಯಂತ್ರಣವಿಲ್ಲ. ಆದ್ದರಿಂದ ನಮ್ಮನ್ನು ಮತ್ತು ಈ ಧಿಕ್ಕಾರಿಗಳಾದ ಜನರನ್ನು ಪರಸ್ಪರ ಬೇರ್ಪಡಿಸು.
የአረብኛ ቁርኣን ማብራሪያ:
قَالَ فَاِنَّهَا مُحَرَّمَةٌ عَلَیْهِمْ اَرْبَعِیْنَ سَنَةً ۚ— یَتِیْهُوْنَ فِی الْاَرْضِ ؕ— فَلَا تَاْسَ عَلَی الْقَوْمِ الْفٰسِقِیْنَ ۟۠
ಅಲ್ಲಾಹನು ಹೇಳಿದನು: ಹಾಗಾದರೆ ಆ ಭೂಮಿ ನಲ್ವತ್ತು ವರ್ಷಗಳ ಕಾಲ ಅವರಿಗೆ ನಿಷೇಧಿಸಲ್ಪಟ್ಟಿದೆ. ಅವರು ಭೂಮಿಯಲ್ಲಿ ಅತ್ತಿಂದಿತ್ತ ಅಲೆದಾಡುತ್ತಿರುವರು. ಆದ್ದರಿಂದ ಆ ಧಿಕ್ಕಾರಿಗಳಾದ ಜನರ ಕುರಿತು ನೀವು ದುಃಖಿಸಬೇಡಿರಿ.
የአረብኛ ቁርኣን ማብራሪያ:
وَاتْلُ عَلَیْهِمْ نَبَاَ ابْنَیْ اٰدَمَ بِالْحَقِّ ۘ— اِذْ قَرَّبَا قُرْبَانًا فَتُقُبِّلَ مِنْ اَحَدِهِمَا وَلَمْ یُتَقَبَّلْ مِنَ الْاٰخَرِ ؕ— قَالَ لَاَقْتُلَنَّكَ ؕ— قَالَ اِنَّمَا یَتَقَبَّلُ اللّٰهُ مِنَ الْمُتَّقِیْنَ ۟
(ಓ ಪೈಗಂಬರರೇ) ನೀವು ಅವರಿಗೆ ಆದಮನ ಇಬ್ಬರು ಮಕ್ಕಳ (ಹಾಬಿಲ್, ಖಾಬಿಲ್) ವೃತ್ತಾಂತವನ್ನು ಸತ್ಯದೊಂದಿಗೆ ಓದಿ ತಿಳಿಸಿರಿ. ಅವರಿಬ್ಬರೂ ಒಂದೊAದು ಹರಕೆಯನ್ನು ಸಮರ್ಪಿಸಿದ ಸಂದರ್ಭ. ಒಬ್ಬನಿಂದ ಹರಕೆಯು ಸ್ವೀಕರಿಸಲ್ಪಟ್ಟಿತು, ಇನ್ನೊಬ್ಬನಿಂದ ಸ್ವೀಕರಿಸಲ್ಪಡಲಿಲ್ಲ. ಆಗ ಅವನು (ಖಾಬಿಲ್) ಹೇಳಿದನು: ನಾನು ನಿನ್ನನ್ನು ಕೊಂದು ಬಿಡುವೆನು. ಇನ್ನೊಬ್ಬನು (ಹಾಬಿಲ್) ಹೇಳಿದನು: ಭಯಭಕ್ತಿಯುಳ್ಳವರಿಂದ ಮಾತ್ರವೇ ಅಲ್ಲಾಹನು ಸ್ವೀಕರಿಸುವನು.
የአረብኛ ቁርኣን ማብራሪያ:
لَىِٕنْۢ بَسَطْتَّ اِلَیَّ یَدَكَ لِتَقْتُلَنِیْ مَاۤ اَنَا بِبَاسِطٍ یَّدِیَ اِلَیْكَ لِاَقْتُلَكَ ۚ— اِنِّیْۤ اَخَافُ اللّٰهَ رَبَّ الْعٰلَمِیْنَ ۟
(ಹಾಬಿಲ್ ಹೇಳುವನು) ನನ್ನನ್ನು ಕೊಲ್ಲುವುದಕ್ಕಾಗಿ ನೀನು ನನ್ನೆಡಗೆ ಕೈಚಾಚಿದರೂ ನಿನ್ನನ್ನು ಕೊಲ್ಲುವುದಕ್ಕಾಗಿ ನಾನು ನಿನ್ನೆಡೆಗೆ ಕೈಚಾಚಲಾರೆನು ನಿಶ್ಚಯವಾಗಿಯೂ ನಾನು ಸರ್ವ ಲೋಕಗಳ ಪ್ರಭುವಾದ ಅಲ್ಲಾಹುನನ್ನು ಭಯಪಡುತ್ತೇನೆ.
የአረብኛ ቁርኣን ማብራሪያ:
اِنِّیْۤ اُرِیْدُ اَنْ تَبُوَْاَ بِاِثْمِیْ وَاِثْمِكَ فَتَكُوْنَ مِنْ اَصْحٰبِ النَّارِ ۚ— وَذٰلِكَ جَزٰٓؤُا الظّٰلِمِیْنَ ۟ۚ
ನನ್ನ ಪಾಪವನ್ನು ನಿನ್ನ ಪಾಪವನ್ನು ನೀನೇ ಹೊಣೆಗಾರನಾಗಿ ಹೊತ್ತುಕೋ, ನೀನು ನರಕವಾಸಿಗಳಲ್ಲಿ ಸೇರಿಬಿಡು ಎಂದು ನಾನು ಬಯಸುತ್ತೇನೆ. ಅಕ್ರಮಿಗಳಿಗಿರುವ ಪ್ರತಿಫಲ ಅದುವೇ ಆಗಿದೆ.
የአረብኛ ቁርኣን ማብራሪያ:
فَطَوَّعَتْ لَهٗ نَفْسُهٗ قَتْلَ اَخِیْهِ فَقَتَلَهٗ فَاَصْبَحَ مِنَ الْخٰسِرِیْنَ ۟
ಕೊನೆಗೆ (ಖಾಬಿಲನಿಗೆ) ತನ್ನ ಸಹೋದರನನ್ನು (ಹಾಬೀಲನನ್ನು) ಕೊಲ್ಲಲು ಆತನ ಮನಸ್ಸು ಪ್ರೇರೇಪಿಸಿತು ಮತ್ತು ಅವನು ಅವನನ್ನು ಕೊಂದು ನಷ್ಟ ಹೊಂದಿದವರಲ್ಲಿ ಸೇರಿದವನಾದನು.
የአረብኛ ቁርኣን ማብራሪያ:
فَبَعَثَ اللّٰهُ غُرَابًا یَّبْحَثُ فِی الْاَرْضِ لِیُرِیَهٗ كَیْفَ یُوَارِیْ سَوْءَةَ اَخِیْهِ ؕ— قَالَ یٰوَیْلَتٰۤی اَعَجَزْتُ اَنْ اَكُوْنَ مِثْلَ هٰذَا الْغُرَابِ فَاُوَارِیَ سَوْءَةَ اَخِیْ ۚ— فَاَصْبَحَ مِنَ النّٰدِمِیْنَ ۟
ಅ ಬಳಿಕ ತನ್ನ ಸಹೋದರನ ಮೃತದೇಹವನ್ನು ಮರೆಮಾಚುವುದು ಹೇಗೆಂದು ಅವನಿಗೆ ತೋರಿಸಿಕೊಡುವುದಕ್ಕಾಗಿ ನೆಲವನ್ನು ಅಗೆಯುವ ಒಂದು ಕಾಗೆಯನ್ನು ಅಲ್ಲಾಹನು ಕಳುಹಿಸಿದನು. ಅವನು ಹೇಳಿದನು: ನನ್ನ ನಾಶವೇ, ನಾನು ನನ್ನ ಸಹೋದರನ ಮೃತದೇಹವನ್ನು ದಫನ ಮಾಡಲು ಅಸಮರ್ಥನಾಗಿ ಈ ಕಾಗೆಗಿಂಲೂ ಹೀನನಾಗಿ ಬಿಟ್ಟೇನಲ್ಲ! ಅನಂತರ ಅವನು (ತುಂಬಾ) ವಿಷಾಧಿಸುವವರಲ್ಲಾದನು.
የአረብኛ ቁርኣን ማብራሪያ:
 
የይዘት ትርጉም ምዕራፍ: አል-ማኢዳህ
የምዕራፎች ማውጫ የገፅ ቁጥር
 
የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ - የትርጉሞች ማዉጫ

ተረጎመዋል በሸይኽ ባሺር ሜሶሪ። ዝግጅቱ የተጠናቀቀው በረዋድ የትርጉም ማዕከል ቁጥጥር ስር ነው።

መዝጋት